ಪಂಜಿಮೊಗರು ಬಳಿ ಗುಡ್ಡೆಯ ತಡೆಗೋಡೆ ಕುಸಿತ ➤ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ, ಪರಿಶೀಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.16:  ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಹಾಮಳೆಗೆ ಪಂಜಿಮೊಗರು ವಾರ್ಡಿನ ಉರುಂದಾಡಿ ಗುಡ್ಡೆ ನಿವಾಸಿಯಾದ ಜಯಂತ್ ಅವರ ಮನೆಯ ತಡೆಗೋಡೆ ಕುಸಿದಿದ್ದು, ಬಿ,ಕೆ . ಇಂದಿರಾ ಸುರೇಶ್ ಅವರ ಮನೆಯ ತಡೆಗೋಡೆ ಕುಸಿದಿದೆ.

 

 

ಕುಸಿದ ಪರಿಣಾಮಕ್ಕೆ ಪಕ್ಕದ ಮನೆಗೆ ಹಾನಿಯಾಗಿದ್ದು ಹಾಗೂ ಗುಡ್ಡೆಯಂಗಡಿ ನಿವಾಸಿಯಾದ ಚಂದ್ರ ಅವರ ಮನೆಯ ಹಿಂದಿನ ಗುಡ್ಡೆ ಕುಸಿದು ಮನೆಗೆ ಭಾಗಶಃ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರ ಮನವಿಯನ್ನು ಸ್ವೀಕರಿಸಿದರು.

Scroll to Top