ಕರಾವಳಿ

ಬೆಳ್ಳಂಬೆಳಗ್ಗೆ ಕಾವೂರು ಮಾರುಕಟ್ಟೆಗೆ ಮಹಾನಗರ ಮೇಯರ್ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.14: ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ದಿವಾಕರ್ ಪಾಂಡೇಶ್ವರ್ ಅವರು ಕಾವೂರು ಮಾರುಕಟ್ಟೆಗೆ ದಾಳಿ ನಡೆಸಿದ್ದಾರೆ.     ಕಾವೂರಿನಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸದಂತೆ ಹಲವು ಬಾರಿ ಮಂಗಳೂರು ಮಹಾನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದು, ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಲ್ಲೇ ಇದ್ದರು. ಮಹಾನಗರ ಪಾಲಿಕೆಯು ಈ ಹಿಂದೆ ಕಾವೂರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳದಿಂದ ತೆರವುಗೊಳಿಸಿದ್ದು ತಂತಿ ಬೇಲಿ ಅಳವಡಿಸಿದ್ದರು. ಆದರೆ ಪಾಲಿಕೆಯ ಸೂಚನೆಗೆ […]

ಬೆಳ್ಳಂಬೆಳಗ್ಗೆ ಕಾವೂರು ಮಾರುಕಟ್ಟೆಗೆ ಮಹಾನಗರ ಮೇಯರ್ ದಾಳಿ Read More »

ಕರಾವಳಿ

ಮಟನ್‌ ಸ್ಟಾಲ್‌ಗಳಲ್ಲಿ ಇತರೆ ಮಾಂಸ ಬೆರಕೆ ಅರೋಪ ➤ ಮಂಗಳೂರಿನಲ್ಲಿ ಮೇಯರ್‌ ಪರಿಶೀಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.14: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಸಾಯಿ ಖಾನೆಯಲ್ಲಿ ಮಟನ್‌ ಸ್ಟಾಲ್‌ಗಳಲ್ಲಿ ಇತರೆ ಮಾಂಸದೊಂದಿಗೆ ದನದ ಮಾಂಸ ಬೆರಕೆ ಮಾಡುವ ಆರೋಪ ಕೇಳಿಬರುತ್ತಿದ, ಹಿನ್ನಲೆಯಲ್ಲಿ ಮಂಗಳೂರು ನಗರ ಪಾಲಿಕೆ ಮೇಯರ್ ದಾಳಿ ನಡೆಸಿದ್ದಾರೆ.   ಇಂದು ಮಂಗಳೂರು ನಗರ ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ್‌ ಸೇರಿದಂತೆ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಕಸಾಯಿಖಾನೆ, ಮಾರಾಟ ಮಳಿಗೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಅಕ್ರಮ ಮಾರಾಟ ಮತ್ತು ವಧೆಗಳ

ಮಟನ್‌ ಸ್ಟಾಲ್‌ಗಳಲ್ಲಿ ಇತರೆ ಮಾಂಸ ಬೆರಕೆ ಅರೋಪ ➤ ಮಂಗಳೂರಿನಲ್ಲಿ ಮೇಯರ್‌ ಪರಿಶೀಲನೆ Read More »

ಕರಾವಳಿ

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದಲ್ಲಿ ಬಂಡೆ ಕುಸಿತ

(ನ್ಯೂಸ್ ಕಡಬ) newskadaba.com ಬಂಟ್ವಾಳ ಅ. 14: ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ಎಡ ಪಾಶ್ರ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ.     ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸಲಾಗುತ್ತಿತ್ತು. ಆದರೆ ಇದೀಗಾ ಭಾರಿ ಮಳೆಗೆ ಇಂಟರ್ ಲಾಕ್ ಕಿತ್ತುಹೋಗಿದೆ.ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ಯಾವುದೇ ಹಾನಿಯಾಗಿಲ್ಲ, ತಜ್ಞನಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದಲ್ಲಿ ಬಂಡೆ ಕುಸಿತ Read More »

ಕರಾವಳಿ, ಕರ್ನಾಟಕ

ಸುರತ್ಕಲ್: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಆತ್ಯಹತ್ಯೆಗೆ ಶರಣಾದ ಬಾಲಕಿ.!

(ನ್ಯೂಸ್ ಕಡಬ) newskadaba.com ಸುರತ್ಕಲ್ ಅ. 14: ಬಾಲಕಿಯೊಬ್ಬಲಿಗೆ ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಬುದ್ದಿ ಮಾತು ಹೇಳಿದಕ್ಕೆ ಆಕ್ರೋಶಗೊಂಡ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಸುರತ್ಕಲ್ ಬಳಿಯ ಕುಳಾಯಿಯ ಗೋಕುಲದಲ್ಲಿ ನಡೆದಿದೆ.   ಸುಜೇತಾ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಅತಿಯಾಗಿ ಮೊಬೈಲ್ ಬಳಸುತ್ತಿದ್ದಳು. ಇದರಿಂದ ಆಕೆಯ ತಾಯಿ ಬಾಲಕಿಗೆ ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ಮನನೊಂದ ಸುಜೇತಾ ಮನೆಯ ಕೋಣೆಯಲ್ಲಿ ಫ್ಯಾನಿಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.  

ಸುರತ್ಕಲ್: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಆತ್ಯಹತ್ಯೆಗೆ ಶರಣಾದ ಬಾಲಕಿ.! Read More »

ಕರಾವಳಿ, ಕರ್ನಾಟಕ

ರಾಜ್ಯ ಮಟ್ಟದ ಕೃತಿ ಪರಿಚಯ ಸ್ಪರ್ಧೆ -2020 ➤ ಕಡಬದ ಸಮ್ಯಕ್ತ್ ಜೈನ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಅ. 14. ಕೋವಿಡ್ 19 ನಿಂದಾಗಿ ಸಂಭವಿಸಿದ ಕೆಡುಕಿನ ಪ್ರಮಾಣಕ್ಕಿಂತ ಒಳಿತುಗಳೇ ಹೆಚ್ಚು ಎಂದರೆ ಈ ಸಂದರ್ಭದಲ್ಲಿ ತಪ್ಪಾಗಲಿಕ್ಕಿಲ್ಲ. ಹೌದು, ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಅಂತರ್ ರಾಜ್ಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ಸಮ್ಯಕ್ತ್. ಜೈನ್ ಇದಕ್ಕೆ ಪ್ರತ್ಯಕ್ಷ ಸಾಕ್ಷಿ . ಇದುವರೆಗೆ ಮೂರು ಕವನಸಂಕಲನವನ್ನು ಬರೆದು, ಪ್ರಕಟಗೊಳಿಸಿ ಸಾಹಿತ್ಯಿಕ ಚಟುವಟಿಕೆಯಲ್ಲಿ ತಲ್ಲೀನರಾಗಿರುವ ಸಮ್ಯಕ್ತ್ .ಜೈನ್ ರವರಿಗೆ ಇದೀಗ ಮತ್ತೊಂದು ಸಾಧನೆಯ ಗರಿ ಸೇರ್ಪಡೆಗೊಂಡಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇತ್ತೀಚೆಗೆ

ರಾಜ್ಯ ಮಟ್ಟದ ಕೃತಿ ಪರಿಚಯ ಸ್ಪರ್ಧೆ -2020 ➤ ಕಡಬದ ಸಮ್ಯಕ್ತ್ ಜೈನ್ ಪ್ರಥಮ Read More »

ಕರಾವಳಿ, ಕರ್ನಾಟಕ

ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 23 ಮಂದಿಗೆ ಕೊರೋನಾ ದೃಢ.!

(ನ್ಯೂಸ್ ಕಡಬ) newskadaba.com ಕಡಬ ಅ. 13: ಕಡಬ ಮತ್ತು ಪುತ್ತೂರು ಉಭಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 23 ಮಂದಿಗೆ ಕೊರೋನಾ ದೃಢಗೊಂಡಿದೆ.   ನೆಹರೂನಗರದ 54 ವರ್ಷದ ವ್ಯಕ್ತಿ, ದರ್ಬೆ 30 ವರ್ಷದ ವ್ಯಕ್ತಿ, ಸಾಮೆತ್ತಡ್ಕದ ನಿವಾಸಿ 49 ವರ್ಷದ ವ್ಯಕ್ತಿ, ಬೊಳುವಾರು ನಿವಾಸಿ 52 ವರ್ಷದ ವ್ಯಕ್ತಿ, ಪಡುವನ್ನೂರು 55 ವರ್ಷದ ವ್ಯಕ್ತಿ, ಉಪ್ಪಿನಂಗಡಿ 28 ವರ್ಷದ ವ್ಯಕ್ತಿ, 26 ವರ್ಷದ ವ್ಯಕ್ತಿ, ಸರ್ವೆ 43 ವರ್ಷದ ಮಹಿಳೆ, ಬಡಗನ್ನೂರು 70 ವರ್ಷದ

ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 23 ಮಂದಿಗೆ ಕೊರೋನಾ ದೃಢ.! Read More »

ಕರಾವಳಿ, ಕರ್ನಾಟಕ

ದಕ್ಷಿಣಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೊರೊನಾ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 13: ಸಂಕಷ್ಟ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ|ಕೆ.ವಿ. ರಾಜೇಂದ್ರ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.   ಜೊತೆಗೆ ಪತ್ನಿ ಹಾಗೂ ಮಗುವಿಗೂ ಪರೀಕ್ಷೆ ನಡೆಸಿದ ಸಂದರ್ಭ ಅವರ ವರದಿಯಲ್ಲೂ ಸೋಂಕು ದೃಢಪಟ್ಟಿದೆ ಹಾಗಾಗಿ ಅವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.    

ದಕ್ಷಿಣಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೊರೊನಾ ದೃಢ Read More »

ಕರಾವಳಿ, ಕರ್ನಾಟಕ

ಕೋವಿಡ್‌-19 ಸಂಕಷ್ಟ ➤ ಶಾಲೆ ಬಂದ್ ನಿಂದ ಭಾರತಕ್ಕೆ 3 ಲಕ್ಷ ಕೋಟಿ ರೂ ನಷ್ಟ..!!

(ನ್ಯೂಸ್ ಕಡಬ) newskadaba.com ನವದೆಹಲಿ ಅ. 13: ಕೋವಿಡ್‌-19 ಯಿಂದ ಸುದೀರ್ಘಾವಧಿಗೆ ಶಾಲೆಗಳು ಬಂದ್‌ ಆಗಿರುವ ಕಾರಣ ಭವಿಷ್ಯದಲ್ಲಿ ಭಾರತಕ್ಕೆ ಅಂದಾಜು 3 ಲಕ್ಷ ಕೋಟಿ ರು.( 400 ಶತಕೋಟಿ ಡಾಲರ್‌) ಆದಾಯ ನಷ್ಟಉಂಟಾಗುವ ಸಾಧ್ಯತೆಯಿದೆ. ಹಾಗೆಯೇ ಶೈಕ್ಷಣಿಕ ಹಿನ್ನಡೆ ಆಗುವ ಆತಂಕವೂ ಇದೆ ಎಂದು ವಿಶ್ವಬ್ಯಾಂಕ್‌ ವರದಿಯೊಂದು ಕಳವಳ ವ್ಯಕ್ತಪಡಿಸಿದೆ.ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿ ತನ್ನ ಉದ್ಯೋಗದ ಜೀವನದಲ್ಲಿ ಸರಾಸರಿ 3 ಲಕ್ಷ ರು. ನಷ್ಟಅನುಭವಿಸಲಿದ್ದಾರೆ. ಈ ಲೆಕ್ಕಾಚಾರದಲ್ಲಿ ಭಾರತ ಭವಿಷ್ಯದಲ್ಲಿ 3 ಲಕ್ಷ ಕೋಟಿ ರು. ಆದಾಯ

ಕೋವಿಡ್‌-19 ಸಂಕಷ್ಟ ➤ ಶಾಲೆ ಬಂದ್ ನಿಂದ ಭಾರತಕ್ಕೆ 3 ಲಕ್ಷ ಕೋಟಿ ರೂ ನಷ್ಟ..!! Read More »

ಕರಾವಳಿ

“ಮೀನಾಡಿ ಎಕ್ಸ್‌ಪ್ರೆಸ್‌’ ಆಗಿ ಬದಲಾದ ಮೀನಾಡಿ ಶಾಲೆ

(ನ್ಯೂಸ್ ಕಡಬ) newskadaba.com ಕಡಬ ಅ. 13: ಮಕ್ಕಳನ್ನ ಶಾಲೆಯತ್ತ ಸೆಳೆಯಲು ಒಂದಲ್ಲಾ ಒಂದು ರೀತಿಯಲ್ಲಿ ಕಸರತ್ತುಗಳನ್ನ ಮಾಡುತ್ತಲೇ ಇರಬೇಕಾಗುತ್ತದೆ. ಮಕ್ಕಳನ್ನ ಶಾಲೆಯತ್ತ ಮುಖ ತಿರುಗಿಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲೊಂದು ಸರ್ಕಾರಿ ಶಾಲೆಯ ಗೋಡೆಗೆ ರೈಲು ಬೋಗಿಯ ಮಾದರಿಯ ಬಣ್ಣ ಬಳಿದು ಆಕರ್ಷಕ ರೀತಿಯಲ್ಲಿ ಶಾಲೆಯನ್ನು ಬದಲಾಯಿಸಲಾಗಿದೆ.   ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾರತೀಯ ರೈಲು ಬೋಗಿಯಾಗಿ ಬದಲಾಗಿದೆ.ಶಾಲಾ ಗೋಡೆಗೆ ಭಾರತೀಯ ರೈಲು ಬೋಗಿಯ

“ಮೀನಾಡಿ ಎಕ್ಸ್‌ಪ್ರೆಸ್‌’ ಆಗಿ ಬದಲಾದ ಮೀನಾಡಿ ಶಾಲೆ Read More »

ಕರಾವಳಿ, ಕರ್ನಾಟಕ

ಎಸ್ಡಿಪಿಐ ಉಪ್ಪಿನಂಗಡಿ ವಲಯ ಪಂಚಾಯತ್ ಚುನಾವಣೆಯ ಪ್ರಥಮ ಹಂತದ ಅಭ್ಯರ್ಥಿಗಳ ಘೋಷಣೆ ಮತ್ತು ಕಾರ್ಯಕರ್ತರ ಸಭೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 13. ಎಸ್ಡಿಪಿಐ ಉಪ್ಪಿನಂಗಡಿ ವಲಯದ ಅಧೀನದಲ್ಲಿರುವ ಗ್ರಾಮ ಪಂಚಾಯತ್ ಗಳಿಗೆ ಪಕ್ಷದ ಮೊದಲ ಹಂತದ ಅಭ್ಯರ್ಥಿಗಳ ಘೋಷಣೆ ಮತ್ತು ಕಾರ್ಯಕರ್ತರ ಸಮಾವೇಶವು ಉಪ್ಪಿನಂಗಡಿ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಎಸ್ಡಿಪಿಐ ಪಕ್ಷದ ಅವಶ್ಯಕತೆ ಮತ್ತು ಪಕ್ಷದ ಪ್ರಾಧಾನ್ಯತೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ತಳ ಮಟ್ಟದಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಎಸ್ಡಿಪಿಐ ಉಪ್ಪಿನಂಗಡಿ ವಲಯ ಪಂಚಾಯತ್ ಚುನಾವಣೆಯ ಪ್ರಥಮ ಹಂತದ ಅಭ್ಯರ್ಥಿಗಳ ಘೋಷಣೆ ಮತ್ತು ಕಾರ್ಯಕರ್ತರ ಸಭೆ Read More »

ಕರಾವಳಿ
Scroll to Top