ಕರಾವಳಿ

ಕಡಬ: ಮನೆಯಲ್ಲಿ ಅಕ್ರಮ ಮರ ದಾಸ್ತಾನು ➤ ದಾಳಿ ನಡೆಸಿ ಮರ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಅ. 21. ಮರವನ್ನು  ಕಡಿದು ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಇಂದು ನಡೆದಿದೆ. ನೆಟ್ಟಣ ವಾಲ್ತಾಜೆ ಶ್ರೀನಿವಾಸ ಎಂಬವರು ಅಕ್ರಮವಾಗಿ ಮರ ಕಡಿದು ಅವರ ಮಗನ ಮನೆಯಲ್ಲಿ ದಾಸ್ತಾನು ಇರಿಸಿದ್ದು, ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮರದ ಸೈಜುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ […]

ಕಡಬ: ಮನೆಯಲ್ಲಿ ಅಕ್ರಮ ಮರ ದಾಸ್ತಾನು ➤ ದಾಳಿ ನಡೆಸಿ ಮರ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನ ➤ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ವಿಟ್ಲ ಪೊಲೀಸರು

(ನ್ಯೂಸ್ ಕಡಬ) newskadaba.com ವಿಟ್ಲ, ಅ. 21. ಇಲ್ಲಿನ ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನಗೈದ ಆರೋಪಿಯನ್ನು ಕೇವಲ 24 ಗಂಟೆಗಳ ಒಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬಜ್ಪೆ ಆದ್ಯಪಾಡಿ ಕೊಂಚಾರು ನಿವಾಸಿ  ಮೊಹಮ್ಮದ್ ರಫೀಕ್ (32) ಎಂದು ಗುರುತಿಸಲಾಗಿದೆ. ಈತನಲ್ಲಿ ‘ಕರಾವಳಿ ಮಾರುತ’ ಮಾಧ್ಯಮ ಸಂಸ್ಥೆಗೆ ಸೇರಿದ ಗುರುತಿನ ಚೀಟಿಯೊಂದು ಪತ್ತೆಯಾಗಿದ್ದು, ಇದರ ಜೊತೆಗೆ ಪ್ರೆಸ್ ಸ್ಟಿಕರ್ ಅಂಟಿಸಿದ ದ್ವಿಚಕ್ರ ವಾಹನವನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಟ್ಲ ಕಸಬ ಗ್ರಾಮದ ಮಾರ್ಣಮಿಗುಡ್ಡೆಯ ಚರ್ಚ್

ವಿಟ್ಲ: ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನ ➤ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ವಿಟ್ಲ ಪೊಲೀಸರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ದೇವಸ್ಥಾನದಲ್ಲಿ ಕಳವು ಪ್ರಕರಣ – ಆರೋಪಿಯ ಬಂಧನ ➤ 3 ವರ್ಷಗಳಲ್ಲಿಆರೋಪಿಯ ವಿರುದ್ದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 13 ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಅ. 21. ಇಲ್ಲಿನ ದೇವಸ್ಥಾನವೊಂದರಲ್ಲಿ ಒಂದೂವರೆ ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಪುತ್ತೂರು ಮೂಲದ ಮುಡಿಪು ನವಗ್ರಾಮ ನಿವಾಸಿ ಮಹಮ್ಮದ್ ಸಾಧಿಕ್ ಯಾನೆ ಸಾಧಿಕ್ (21 ) ಎಂದು ಹೇಳಲಾಗಿದೆ. ಬಂಧಿತ ಆರೋಪಿಯು ಕುಖ್ಯಾತ ಕಳ್ಳನಾಗಿದ್ದು, ಆತನ ವಿರುದ್ದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ. ಈತ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಕಳ್ಳತನಕ್ಕೆ ಇಳಿದಿದ್ದು, ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಐದು

ವಿಟ್ಲ: ದೇವಸ್ಥಾನದಲ್ಲಿ ಕಳವು ಪ್ರಕರಣ – ಆರೋಪಿಯ ಬಂಧನ ➤ 3 ವರ್ಷಗಳಲ್ಲಿಆರೋಪಿಯ ವಿರುದ್ದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 13 ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಲ್ಪೆ: ಮೀನುಗಾರರ ಬಲೆಗೆ ಬಿತ್ತು ಬರೋಬ್ಬರಿ 750 ಕೆ.ಜಿ ತೂಕದ ಫಿಶ್

(ನ್ಯೂಸ್ ಕಡಬ) newskadaba.com ಉಡುಪಿ, ಅ.21: ಉಡುಪಿ ಜಿಲ್ಲೆ ಮಲ್ಪೆಯ ಸರ್ವ ಋತು ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಬಲೆಗೆ ಬೀಳುವುದುಂಟು. ಕೆಲವೊಮ್ಮೆ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದರೆ, ಇನ್ನು ಕೆಲವೊಮ್ಮೆ ಅಪರೂಪದ, ವಿಚಿತ್ರ ಮೀನುಗಳು ಸಿಕ್ಕಿ ಗಮನ ಸೆಳೆಯುತ್ತವೆ.     ಆದರೆ ಮಲ್ಪೆ ಮೀನುಗಾರರಿಗೆ ಇಂದು (ಮಂಗಳವಾರ) ಸಿಕ್ಕ ಮೀನು ಮಾತ್ರ ಬಲು ಅಪರೂಪವಾಗಿದ್ದು ಮಾತ್ರವಲ್ಲ, ಗಾತ್ರದಲ್ಲೂ ದಾಖಲೆ ನಿರ್ಮಿಸಿದೆ. ಈ ಮೀನನ್ನು ಕರಾವಳಿಗರು ತೊರಕೆ ಮೀನು ಎನ್ನುತ್ತಾರೆ. ಬಹಳ ರುಚಿಯಾದ ಮೀನಿದು,

ಮಲ್ಪೆ: ಮೀನುಗಾರರ ಬಲೆಗೆ ಬಿತ್ತು ಬರೋಬ್ಬರಿ 750 ಕೆ.ಜಿ ತೂಕದ ಫಿಶ್ Read More »

ಕರಾವಳಿ

ನಂಜನಗೂಡು: ಕಾಡಾನೆ ದಾಳಿಯಿಂದ ಆದಿವಾಸಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ಅ.21: ಕಾಡಾನೆಯೊಂದು ನಡೆಸಿದ ದಾಳಿಯಿಂದಾಗಿ ಆದಿವಾಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ಸಮೀಪದ ಡೋರನಕಟ್ಟೆ ಕಾಲೋನಿಯ ಸಮೀಪದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ನಂಜನಗೂಡು ಜಿಲ್ಲೆಯಲ್ಲಿನ ವೆಂಕಟಗಿರಿ ಆದಿವಾಸಿ ಕಾಲೋನಿಯ ಗಣೇಶ (25) ಎಂದು ಗುರುತಿಸಲಾಗಿದೆ.     ಈತ ನಿನ್ನೆ ಬಂಕಹಳ್ಳಿ ಗ್ರಾಮದಿಂದ ಕೆಲಸವನ್ನು ಮುಗಿಸಿಕೊಂಡು ತನ್ನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಸಂದರ್ಭದಲ್ಲಿ ವೆಂಕಟಗಿರಿ ಕಾಲೋನಿ ಮತ್ತು ಡೋರನಕಟ್ಟೆ ಕಾಲೋನಿಯ ಮಧ್ಯೆ ಕಾಡಾನೆಯ ತುಳಿತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ನಂಜನಗೂಡು: ಕಾಡಾನೆ ದಾಳಿಯಿಂದ ಆದಿವಾಸಿ ಯುವಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಸರಗೋಡು: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.21: ಬೇಕಲ ಠಾಣಾ ವ್ಯಾಪ್ತಿಯ ತೃಕ್ಕನ್ನಾಡ್ ಎಂಬಲ್ಲಿ ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ತೃಕ್ಕನ್ನಾಡ್ ನ ಪ್ರಸಾದ್ ರಾಘವರವರ ಪುತ್ರ ವಿಘ್ನೇಶ್ ( 13) ಎಂದು ಗುರುತಿಸಲಾಗಿದೆ.   ಕಾಸರಗೋಡಿನಲ್ಲಿರುವ ಅಜ್ಜಿ ಮನೆಯಲ್ಲಿದ್ದ ವಿಘ್ನೇಶ್ ಕೆಲ ದಿನಗಳ ಹಿಂದೆ  ತೃಕ್ಕನ್ನಾಡ್ ನಲ್ಲಿರುವ ಮನೆಗೆ ಬಂದಿದ್ದನು. ಈತ ಏಳನೇ ತರಗತಿ ವಿದ್ಯಾರ್ಥಿ. ಕಳೆದ ದಿನ ತಾಯಿ ಮತ್ತು ಸಹೋದರಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ

ಕಾಸರಗೋಡು: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಷವಿಕ್ಕಿದ ಕೋತಿಗಳನ್ನು ಎಸೆದು ಹೋದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಕಾರ್ಕಳ, ಅ. 21. ಮಾರುತಿ ಓಮ್ನಿ ಕಾರಿನಲ್ಲಿ ಬಂದ ತಂಡವೊಂದು ವಿಷವಿಕ್ಕಿದ ಸುಮಾರು 15 ಮಂಗಗಳನ್ನು ಎಸೆದು ಹೋದ ಘಟನೆ ಕಾಂತಾವರದ ಬಾರಾಡಿಯ ಕಂಬಳ ರಸ್ತೆಯಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ 3 ಮಂಗಗಳು ಮೃತಪಟ್ಟಿದ್ದರೆ, ಉಳಿದ ಮಂಗಗಳು ಅರೆಪ್ರಜ್ಞಾ ಸ್ಥಿತಿಯಲ್ಲಿ ವಿವಿವಿಲನೆ ಹೊರಳಾಡುತ್ತಿದ್ದ ದೃಶ್ಯವು ಮನಕಲಕುವಂತಿತ್ತು. ಯಾವುದೋ ತೋಟದಲ್ಲಿ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಮಂಗಗಳಿಗೆ ವಿಷವಿಟ್ಟು ಅದರ ಸಾವಿಗೆ ಕಾರಣರಾಗಿದ್ದು, ಈ ಮಂಗಗಳನ್ನು ಮಾರುತಿ ಓಮ್ನಿಕಾರಿನಲ್ಲಿ ತುಂಬಿಸಿ ಬಾರಾಡಿ ಕಂಬಳದ ನಿರ್ಜನ ಪ್ರದೇಶದಲ್ಲಿ

ವಿಷವಿಕ್ಕಿದ ಕೋತಿಗಳನ್ನು ಎಸೆದು ಹೋದ ಕಿಡಿಗೇಡಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಪ್ರಯಾಣಿಕರ ಸೋಗಿನಲ್ಲಿ ಬಂದು ಪರ್ಸ್ ಕಳವುಗೈದ ಮೂವರು ಮಹಿಳೆಯರು

(ನ್ಯೂಸ್ ಕಡಬ) newskadaba.com ಉಡುಪಿ, ಅ. 21. ಪ್ರಯಾಣಿಕರ ಸೋಗಿನಲ್ಲಿ ಬಂದ ಮೂವರು ಕಳ್ಳರು ಮಹಿಳೆಯೋರ್ವರ ಪರ್ಸ್ ಕದ್ದೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಬಂದಿದ್ದ ಅರ್ಚನಾ ರಾವ್ ಎಂಬವರು ಕುಂಜಿಬೆಟ್ಟುವಿಗೆ ಹೋಗಲೆಂದು ಸಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಡಿಯಾಳಿ ಎಂಬಲ್ಲಿ ಮೂವರು ಮಹಿಳೆಯರು ಬಸ್ ಹತ್ತಿದ್ದರು. ಇವರ ಬಳಿಯಲ್ಲಿದ್ದ ಮಗುವನ್ನು ಬಳಿಯಲ್ಲಿದ್ದ ಮಗುವನ್ನು ಅರ್ಚನಾ ರಾವ್ ಅವರು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬಳಿಕ ಬಸ್ಸಿನಿಂದ ಇಳಿದು ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿ ಪರ್ಸ್

ಉಡುಪಿ: ಪ್ರಯಾಣಿಕರ ಸೋಗಿನಲ್ಲಿ ಬಂದು ಪರ್ಸ್ ಕಳವುಗೈದ ಮೂವರು ಮಹಿಳೆಯರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಾಲಿ ಪೊಲೀಲು ಖ್ಯಾತ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 21. ತುಳು ಸಿನಿಮಾ ನಟ ಹಾಗೂ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಮದ್ಯಾಹ್ನ ಬಂಟ್ವಾಳದಲ್ಲಿ ನಡೆದಿದೆ. ಇವರು ತುಳು ಭಾಷೆಯ ಖ್ಯಾತ ಸಿನಿಮಾ ಚಾಲಿ ಪೋಲೀಲು ಸಿನಿಮಾದಲ್ಲಿ ನಟಿಸಿದ್ದರು, ಅಲ್ಲದೇ ಹಲವು ತುಳು ಸಿನಿಮಾ ಹಾಗೂ ಸವರ್ಣ ದೀರ್ಘ ಸಂಧಿ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು. ಬಂಟ್ವಾಳದ ಬಿಸಿ

ಚಾಲಿ ಪೊಲೀಲು ಖ್ಯಾತ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಕೊಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊಳ್ನಾಡು: ಕಾಣಿಕೆ ಡಬ್ಬಿಯಿಂದ ಹಣ ಕಳವು ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಅ.21: ಕೊಳ್ನಾಡು ಗ್ರಾಮದ ಮಾಡರಸು ಕುಡಿಮಡಿತ್ತಾಯ ಬಂಟ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಕಳವುಗೈದು ಪ್ರಕರಣದ ಐವರು ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್‌ ಸಾದಿಕ್‌ ಎಂದು ಗುರುತಿಸಲಾಗಿದೆ.     2019 ರ ಜನವರಿ 2 ರಂದು ರಾತ್ರಿ ಹೊತ್ತು ದೈವಸ್ಥಾನದಲ್ಲಿ ಕಳವು ನಡೆದಿತ್ತು. ಈ ಬಗ್ಗೆ ದೈವಸ್ಥಾನದ ಆಡಳಿತ ಮಂಡಳಿಯವರು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಳ್ನಾಡು: ಕಾಣಿಕೆ ಡಬ್ಬಿಯಿಂದ ಹಣ ಕಳವು ➤ ಆರೋಪಿ ಪೊಲೀಸರ ವಶಕ್ಕೆ Read More »

ಕರಾವಳಿ
Scroll to Top