ಕರಾವಳಿ

ನಂಬಿಕೆಯಿಂದ ನಾವು ಕಾರ್ಯ ಸಿದ್ದಿಸಿಕೊಳ್ಳಬಹುದು ➤ ಪ್ರೋ. ಜ್ಞಾನೇಶ್

(ನ್ಯೂಸ್ ಕಡಬ) newskadaba.com ಸುಳ್ಯ, ಅ.22: ಯಾವುದೇ ವಿಷಯದಲ್ಲಿ ನಂಬಿಕೆ ಮುಖ್ಯವಾಗಿದ್ದು ನಂಬಿಕೆಯಿಂದ ಕಾರ್ಯಸಿದ್ದಿಸಿಕೊಳ್ಳಬಹುದು ಎಂದು ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ. ಜ್ಞಾನೇಶ್ ಹೇಳಿದರು. ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ಆಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಗಳ ಕೃತಿ ನಂದಿಸದಿರಿ ನಂದಾದೀಪವನ್ನು ಉದ್ಘಾಟಿಸಿ ಮಾತನಾಡಿದರು.     ದೇವರಲ್ಲಿಯೂ ನಂಬಿಕೆ ಇದ್ದರೆ ಮಾತ್ರ ದೇವರು ಒಲಿಯುತ್ತಾನೆ. ಆಶ್ರಮದ ಸ್ವಾಮಿಗಳ ತ್ಯಾಗಮಯ ಜೀವನ ಎಲ್ಲಾರಿಗೆ ಆದರ್ಶ ಎಂದು ಹೇಳಿದರು. ಶ್ರೀ ಯೋಗೇಶ್ವರಾನಂದ ಸ್ವಾಮಿ […]

ನಂಬಿಕೆಯಿಂದ ನಾವು ಕಾರ್ಯ ಸಿದ್ದಿಸಿಕೊಳ್ಳಬಹುದು ➤ ಪ್ರೋ. ಜ್ಞಾನೇಶ್ Read More »

ಕರಾವಳಿ

ಮಂಗಳೂರು: ಪಣೋಲಿಬೈಲ್ ದೈವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ರಶ್ಮಿ.ಎಸ್.ಆರ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.22: ಬಂಟ್ವಾಳ ತಾಲೂಕಿನ ಧರ್ಮ ದೈವ ಕಾರಣಿಕದ ಕಲ್ಲುರ್ಟಿ ದೈವಸ್ಥಾನ ಪಣೋಲಿಬೈಲ್ ಇದರ ನೂತನ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ.     ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಗಡಿ ಬಂದ್ ಆದಂತಹ ಸಂದರ್ಭದಲ್ಲಿ ಗಡಿ ಪ್ರದೇಶಗಳ ಜನತೆಯನ್ನು ಮನವರಿಕೆ ಮಾಡಿದ್ದು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮ ಹೀಗೆ ಹತ್ತು ಹಲವು ರೀತಿಯಲ್ಲಿ ದಕ್ಷ ಅಧಿಕಾರಿ

ಮಂಗಳೂರು: ಪಣೋಲಿಬೈಲ್ ದೈವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ರಶ್ಮಿ.ಎಸ್.ಆರ್ ನೇಮಕ Read More »

ಕರಾವಳಿ, ಕರ್ನಾಟಕ

ಶೀಘ್ರದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಕಾಮಗಾರಿ ➤ ಶಾಸಕ ಡಾ. ವೈ ಭರತ್ ಶೆಟ್ಟಿ

(ನ್ಯೂಸ್ ಕಡಬ) ಮಂಗಳೂರು, ಅ. 22. ಪ್ರಾಸ್ತಾವಿಕ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಲಾವಿದರ ಸಮಲೋಚನೆ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಉತ್ತರ ವಲಯ ಡಾ. ವೈ ಶಾಸಕ ಭರತ್ ಶೆಟ್ಟಿ, ಕಲಾವಿದರ ಸೂಚನೆ ಸಹಕಾರದೊಂದಿಗೆ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಲಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಈ ಸಂಬಂಧ ಸಂಪೂರ್ಣ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಬಜೆಟ್ ಅನ್ನು ತಯಾರಿಸಲು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಶೀಘ್ರದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಕಾಮಗಾರಿ ➤ ಶಾಸಕ ಡಾ. ವೈ ಭರತ್ ಶೆಟ್ಟಿ Read More »

ಕರಾವಳಿ, ಕರ್ನಾಟಕ

ಕಡಬ: ಚಾಲಕರಿಗೆ ಮತ್ತು ವರ್ತಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಕಡಬ, ಅ.22: ತಾಲೂಕು ಕೇಂದ್ರವಾದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕಡಬ ತಹಸೀಲ್ದಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಗದಿಯಾಗಿರುವಂತೆ ವಾಹನ ಚಾಲಕರು, ವರ್ತಕರು ಹಾಗೂ ಸಿಬ್ಬಂದಿಗಳು, ಖಾಸಗಿ ಕಛೇರಿಗಳ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ವರದಿಯ ದೃಢಪತ್ರವನ್ನು ತಮ್ಮ ಅಂಗಡಿ ಮತ್ತು ವಾಹನದಲ್ಲಿ ಇಟ್ಟುಕೊಳ್ಳುವಂತೆ ಕಡಬ ಪೋಲಿಸ್, ಕಡಬ ಪಟ್ಟಣ ಪಂಚಾಯತ್ ಜಂಟಿ ಪ್ರಕಟಣೆಯಲ್ಲಿ ತಿಳಿಸೀದೆ.   ಈ ಬಗ್ಗೆ ಈಗಾಗಲೇ ವಾಹನ

ಕಡಬ: ಚಾಲಕರಿಗೆ ಮತ್ತು ವರ್ತಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ Read More »

ಕರಾವಳಿ

ಬೆಳ್ತಂಗಡಿ : ಯಾತ್ರಿಕರ ಕಾರಿನಿಂದ ಬೆಲೆಬಾಳುವ ವಸ್ತುಳನ್ನ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ಅ. 22: ಬೆಂಗಳೂರಿನಿಂದ -ಬೆಳ್ತಂಗಡಿ ಗೆ ಬಂದಿದ್ದ ಯಾತ್ರಿಕರೊಬ್ಬರ ಕಾರಿನಿಂದ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳ್ಳರು ಕಳವು ಗೈದಿದ್ದಾರೆ.   ಬೆಳ್ತಂಗಡಿಯ ಸುರ್ಯ ದೇವಾಸ್ಥನಕ್ಕೆ ಬೆಂಗಳೂರಿನಿಂದ ಬಂದ ಭಕ್ತರೊಬ್ಬರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನಿಂದ ರೂ. 20,000 ಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಖದೀಮರು ಕಳವು ಮಾಡಿದ್ದಾರೆ. ಓಮ್ನಿ ಕಾರಿನಲ್ಲಿ ಬಂದ ಇಬ್ಬರು ದುಷ್ರ್ಕಮಿಗಳು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಈಗಾಗಲೇ ಇಂತಹ ಹಲವಾರು ಪ್ರಕರಣಗಳು

ಬೆಳ್ತಂಗಡಿ : ಯಾತ್ರಿಕರ ಕಾರಿನಿಂದ ಬೆಲೆಬಾಳುವ ವಸ್ತುಳನ್ನ ಎಗರಿಸಿದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಕಳ್ಳ ನೋಟು ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 22. ಹೂವು ಮಾರುವ ವ್ಯಕ್ತಿಯೋರ್ವರಿಗೆ ಯಾರೊ ಒಬ್ಬರು ಕಳ್ಳ ನೋಟು ನೀಡಿರುವ ಬಗ್ಗೆ ಸುಳ್ಯದಲ್ಲಿ ನಡೆದಿದೆ. ಅರಕಲಗೂಡಿನ ಮೂರ್ತಿ ಎಂಬವರು ಸುಳ್ಯ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದು, ಇವರಿಗೆ ಯಾರೋ ಅಪರಿಚಿತರು  ಹೂವನ್ನು ಖರೀದಿಸಿ, 200 ರೂ. ವನ್ನು ಕೊಟ್ಟು ಉಳಿದ 20 ರೂ.ವನ್ನು  ತೆಗೆದುಕೊಂಡು ಹೋಗಿದ್ದರು. ಇದು ಮುಂಜಾನೆಯ ವೇಳೆಗೆ ಆಗಿದ್ದರಿಂದ ಇನ್ನೂರರ ನೋಟನ್ನು ಸರಿಯಾಗಿ ಗಮನಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ಹಣವನ್ನು ಪರಿಶೀಲಿಸಿದಾಗ ಅನುಮಾನ

ಸುಳ್ಯ: ಕಳ್ಳ ನೋಟು ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೆರುವಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.!

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.22: ಪೆರುವಾಜೆ ಸವಣೂರು ರಸ್ತೆಯಲ್ಲಿ ಪೆರುವಾಜೆ ಸೇತುವೆ ಸಮೀಪ ಕಾರೋಂದು ಪಲ್ಟಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಕಳೆದ ದಿನ ರಾತ್ರಿ ನಡೆದಿದೆ.   ಎದುರಿನಿಂದ ಬರುತ್ತಿದ್ದ ಕಾರೋಂದಕ್ಕೆ ಸೈಡ್‌ ಕೊಡುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವುದಾಗಿ ತಿಳಿದು ಬಂದಿದೆ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟಾವಶತ್‌  ಪ್ರಾಣಾಯದಿಂದ  ಪಾರಾಗಿದ್ದಾರೆ.  

ಪೆರುವಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.! Read More »

ಕರಾವಳಿ

ಸರ್ಜಾ ಕುಟುಂಬಕ್ಕೆ ಜೂ. ಚಿರು ಎಂಟ್ರಿ ➤ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 22: ಇಂದು ಸರ್ಜಾ ಕುಟುಂಬಕ್ಕೆ ಜೂ. ಚಿರು ಎಂಟ್ರಿಯಾಗಿದೆ. ಇಂದು ಬೆಳ್ಳಗೆ 11:07ಕ್ಕೆ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಚಿರು ಸರ್ಜಾ ಹುಟ್ಟಿದ ತಿಂಗಳಿನಲ್ಲೇ ಮಗುವಿನ ಜನನವಾಗಿದೆ. ಚಿರು ಕುಟುಂಬದಲ್ಲಿ ಇದೀಗಾ ಸಂಭ್ರಮ ಮನೆ ಮಾಡಿದೆ. ಇನ್ನು ಅಭಿಮಾನಿಗಳು ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಕೋನೆಗೂ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಮತ್ತೆ ಚಿರುವನ್ನ ಬರ ಮಾಡಿಕೊಂಡಿದ್ದಾರೆ.    

ಸರ್ಜಾ ಕುಟುಂಬಕ್ಕೆ ಜೂ. ಚಿರು ಎಂಟ್ರಿ ➤ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್ Read More »

ಕರಾವಳಿ, ಕರ್ನಾಟಕ

ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ತಾಲೂಕು ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 22. ದಕ್ಷಿಣಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಕ್ಟೋಬರ್  27, 28, ಮತ್ತು 29 ರಂದು ದ.ಕ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ. ಅಕ್ಟೋಬರ್ 27 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಮೂಡುಬಿದ್ರೆ ಸರ್ಕಾರಿ ನಿರೀಕ್ಷಣಾ ಮಂದಿರ, ಅಕ್ಟೋಬರ್  28 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ಸರ್ಕಾರಿ ನಿರೀಕ್ಷಣಾ ಮಂದಿರದಲ್ಲಿ

ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ತಾಲೂಕು ಭೇಟಿ Read More »

ಕರಾವಳಿ, ಕರ್ನಾಟಕ

ಕರ್ನಾಟಕ ಹಾಗೂ ದೇಶದಲ್ಲಿ ಇರುವ ಕೋವಿಡ್ ಕೇಸ್.!?

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 22: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು,ಆರೋಗ್ಯ ಇಲಾಖೆಯ (ಅ.21) ವರದಿಯಂತೆ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 55,838 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 77,06,946ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 5,872 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 702

ಕರ್ನಾಟಕ ಹಾಗೂ ದೇಶದಲ್ಲಿ ಇರುವ ಕೋವಿಡ್ ಕೇಸ್.!? Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top