ಕರಾವಳಿ

ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’

(ನ್ಯೂಸ್‌ ಕಡಬ) newskadaba.com,  ಎ.15  ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು, ಪ್ರಮುಖ ಐಟಿ ಸಂಸ್ಥೆ ‘ಕಾಗ್ನಿಜೆಂಟ್‌’ ತನ್ನ ಪ್ರತಿಷ್ಠಿತ ‘ಟೆಕ್ನೋವರ್ಸ್ ಹ್ಯಾಕಥಾನ್ 2026’ಗೆ ಚಾಲನೆ ನೀಡಿದೆ. ಈ ಹಿಂದೆ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿದ್ದ ಈ ಸ್ಪರ್ಧೆಯು, ತನ್ನ ಮೂರನೇ ಆವೃತ್ತಿಯಲ್ಲಿ ರಾಷ್ಟ್ರೀಯ ಮಟ್ಟಕ್ಕೇರಿದೆ. ಭಾರತದಾದ್ಯಂತ 400ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿಂದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 20,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ […]

ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಜಾತ್ರೆ ಜತೆಗೆ ಬಿಸು ಸಂಭ್ರಮ

(ನ್ಯೂಸ್‌ ಕಡಬ) newskadaba.com,  ಎ.15  ಪುತ್ತೂರು: ತುಳುನಾಡಿನಲ್ಲಿ ಹೊಸ ವರ್ಷವನ್ನು ಸೌರಮಾನ ಯುಗಾದಿ ದಿನದಿಂದ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಉತ್ಸವದೊಂದಿಗೆ ವಿಷು ಕಣಿ ಸಂಭ್ರಮ ಎ.೧೫ ರಂದು ವಿಶೇಷವಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಧಾರ್ಮಿಕ ಆಚರಣೆಗಳು ನಡೆಯಲಿವೆ. ಮಳೆಗಾಗಿಯೂ ಪ್ರಾರ್ಥನೆ ಮೇಷ ಸಂಕ್ರಮಣದ ದಿನ ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಮುಗಿದು, ದೇವಾಲಯದ ಆಡಳಿತದವರು, ಭಕ್ತಾಧಿಗಳು ಸೇರಿ ಕಾಲ ಕಾಲಕ್ಕೆ ಮಳೆ-ಬೆಳೆ ಸಮೃದ್ಧಿಯಾಗಿ ಸುಭಿಕ್ಷೆ ಉಂಟಾಗಲಿ ಎಂದು ದೇವಳದ ತಂತ್ರಿಗಳ ಮೂಲಕ

ಪುತ್ತೂರು: ಜಾತ್ರೆ ಜತೆಗೆ ಬಿಸು ಸಂಭ್ರಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿರಿಂಜ್ ಮರುಬಳಕೆ ದುರಂತ: ಪಾಕಿಸ್ತಾನದಲ್ಲಿ 331 ಮಕ್ಕಳಿಗೆ HIV ಸೋಂಕು

(ನ್ಯೂಸ್‌ ಕಡಬ) newskadaba.com,  ಎ.15:  Pakistanದ Punjab ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಿರಿಂಜ್‌ಗಳ ಮರುಬಳಕೆಯಿಂದ 331 ಮಕ್ಕಳಿಗೆ HIV ಸೋಂಕು ತಗುಲಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತನಿಖಾ ವರದಿಗಳ ಪ್ರಕಾರ, ಅಸುರಕ್ಷಿತ ಇಂಜೆಕ್ಷನ್ ಪದ್ಧತಿ ಹಾಗೂ ಕಲುಷಿತ ಔಷಧ ಬಾಟಲುಗಳ ಬಳಕೆಯೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ. ಮಕ್ಕಳಲ್ಲಿ ಹಠಾತ್ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರು ಪರಿಶೀಲನೆ ನಡೆಸಿದಾಗ ಈ ಗಂಭೀರ ನಿರ್ಲಕ್ಷ್ಯ ಬಹಿರಂಗವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದ್ದು,

ಸಿರಿಂಜ್ ಮರುಬಳಕೆ ದುರಂತ: ಪಾಕಿಸ್ತಾನದಲ್ಲಿ 331 ಮಕ್ಕಳಿಗೆ HIV ಸೋಂಕು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ಬೆಲೆ ಮತ್ತೆ ಏರಿಕೆ

(ನ್ಯೂಸ್‌ ಕಡಬ) newskadaba.com,  ಎ.15:  ಅಮೆರಿಕ- ಇರಾನ್ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹರ್ಮುಜ್ ನಿರ್ಬಂಧದಿಂದ ತೈಲ ಬೆಲೆಗಳು ಏರಿಕೆ ಆಗಿವೆ. ಹಣದುಬ್ಬರದ ಭೀತಿಯಿಂದ ಜನ ಸುರಕ್ಷತೆಯ ಹೂಡಿಕೆಯತ್ತ ಮುಖ ಮಾಡುತ್ತಿದ್ದು, ಚಿನ್ನ ಬೆಳ್ಳಿ ದರದ ಏರಿಕೆಗೆ ಕಾರಣವಾಗಿದೆ. ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಏಪ್ರಿಲ್ 15, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 1420 ರೂ ಏರಿಕೆ ಆಗಿ,1,55,350 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 142 ರೂ

ಚಿನ್ನದ ಬೆಲೆ ಮತ್ತೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೇ 1 ರಿಂದ ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ- ಇಲ್ಲದಿದ್ದರೆ ಪರವಾನಗಿ ರದ್ದು

(ನ್ಯೂಸ್‌ ಕಡಬ) newskadaba.com,  ಎ.15:   ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಚಾಲಕರು ಕಡ್ಡಾಯವಾಗಿ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು, ಇಲ್ಲದಿದ್ದರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. . ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ನಿಯಮವನ್ನು ಮಹಾರಾಷ್ಟ್ರ ದಿನವಾದ ಮೇ 1 ರಿಂದ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಪುನರುಚ್ಚರಿಸಿದ್ದಾರೆ. ಪ್ರತಾಪ್ ಸರ್ನಾಯಕ್ ಅವರು ಮಾತನಾಡಿ, ಮಹಾರಾಷ್ಟ್ರ ದಿನಾಚರಣೆಯ ಜೊತೆಜೊತೆಗೆ ಮೇ

ಮೇ 1 ರಿಂದ ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ- ಇಲ್ಲದಿದ್ದರೆ ಪರವಾನಗಿ ರದ್ದು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಜೂನ್ 12 ರಿಂದ 14 ರವರೆಗೆ ‘ಕುಡ್ಲ ಪೆಲಕಾಯಿ ಪರ್ಬ

(ನ್ಯೂಸ್‌ ಕಡಬ) newskadaba.com,  ಎ.15:  ಜನಪ್ರಿಯ ‘ಕುಡ್ಲ ಪೆಲಕಾಯಿ ಪರ್ಬ’ (ಮಂಗಳೂರು ಹಲಸಿನ ಹಣ್ಣು ಉತ್ಸವ) ಜೂನ್ 12, 13 ಮತ್ತು 14 ರಂದು ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸೇಂಟ್ ಆಗ್ನೆಸ್ ಕಾಲೇಜು ಬಳಿಯ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಐಎಎಸ್ ಅವರು ಕಾರ್ಯಕ್ರಮದ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಉತ್ಸವದ ಸಂಚಾಲಕ ಅಶ್ವಿನ್ ಸಿಕ್ವೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅವರೊಂದಿಗೆ

ಮಂಗಳೂರು: ಜೂನ್ 12 ರಿಂದ 14 ರವರೆಗೆ ‘ಕುಡ್ಲ ಪೆಲಕಾಯಿ ಪರ್ಬ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ : ಮಗುವಿನ ಚಿನ್ನ ಕಳವು ಪ್ರಕರಣ – ವೈರಲ್ ಫೋಟೋದ ಬಗ್ಗೆ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com,  ಎ.15:  ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಪದವು ಪ್ರದೇಶದಲ್ಲಿ ನಡೆದ ಮಗುವಿನ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರ ಕುರಿತು ಪೊಲೀಸರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ… ಘಟನೆಯ ವಿವರಗಳ ಪ್ರಕಾರ, 7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು, ಕೆ.ಟಿ.ಎಂ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಸಿ ಎಳೆದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026, ಕಲಂ

ವಿಟ್ಲ : ಮಗುವಿನ ಚಿನ್ನ ಕಳವು ಪ್ರಕರಣ – ವೈರಲ್ ಫೋಟೋದ ಬಗ್ಗೆ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕ ಹೈಕೋರ್ಟ್‌ಗೆ ಮೂವರು ಹೊಸ ನ್ಯಾಯಾಧೀಶರ ನೇಮಕ

(ನ್ಯೂಸ್‌ ಕಡಬ) newskadaba.com,  ಎ.15:  ನವದೆಹಲಿ:  ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಪದೋನ್ನತಿ ಮಾಡುವ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಸ್ತು ಎಂದಿದೆ. ಏಪ್ರಿಲ್ ೧೪, ೨೦೨೬ ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೂವರು ಅಧಿಕಾರಿಗಳನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳು: ರಾಜೇಶ್ವರಿ ನಾರಾಯಣ ಹೆಗಡೆ ಕೆದಂಬಾಡಿ ಗಣೇಶ್ ಶಾಂತಿ ಮಹದೇವಪ್ಪ ಬೃಂಗೇಶ್ ರಾಜ್ಯದ ಉನ್ನತ ನ್ಯಾಯಾಲಯದಲ್ಲಿ

ಕರ್ನಾಟಕ ಹೈಕೋರ್ಟ್‌ಗೆ ಮೂವರು ಹೊಸ ನ್ಯಾಯಾಧೀಶರ ನೇಮಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಎ.15:  ಮುಂದಿನ 7 ದಿನಗಳ ಕಾಲ ರಾಜ್ಯಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಇದರ ನಡುವೆ ಸಂಜೆ ವೇಳೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ ಮಾ.17ರವರೆಗೆ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಶೀಘ್ರ ಪ್ರಕಟ: 25 ಲಕ್ಷ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯ; ಚೆಕ್ ಮಾಡುವುದು ಹೇಗೆ?

(ನ್ಯೂಸ್‌ ಕಡಬ) newskadaba.com,  ಎ.14 ​ನವದೆಹಲಿ: 2025-26ನೇ ಸಾಲಿನ ಕೇಂದ್ರ ಪ್ರೌಢಶಿಕ್ಷಣ ಮಂಡಳಿ 10ನೇ ತರಗತಿ ಪರೀಕ್ಷ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕಾತರಕ್ಕೆ ಶೀಘ್ರವೇ ತೆರೆ ಬೀಳಲಿದೆ. ಮಂಡಳಿಯು ಫಲಿತಾಂಶ ಪ್ರಕಟಿಸಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ಸುಮಾರು 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಅಂಕಪಟ್ಟಿ ಕೆಲವೇ ದಿನಗಳಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ​ಕಳೆದ ಫೆಬ್ರವರಿ 15 ರಿಂದ ಮಾರ್ಚ್ ಮಧ್ಯಭಾಗದವರೆಗೆ ನಡೆದಿದ್ದ ಬೋರ್ಡ್ ಪರೀಕ್ಷೆಯ ಫಲಿತಾಂಶಕ್ಕಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಯುತ್ತಿದ್ದಾರೆ. ​ಫಲಿತಾಂಶ ವೀಕ್ಷಿಸುವುದು

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಶೀಘ್ರ ಪ್ರಕಟ: 25 ಲಕ್ಷ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯ; ಚೆಕ್ ಮಾಡುವುದು ಹೇಗೆ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top