ಕರಾವಳಿ

ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ ಅ. 28: ಕಾರ್ಕಳದಲ್ಲಿ ಕ್ವಾಲೀಸ್ ವಾಹನದ ಟಯರ್ ಸಿಡಿದು ಯುವಕ ಸಾವನ್ಬಪ್ಪಿದ ಘಟನೆ ಕುತ್ಲೂರು ಸಮೀಪದ ಕುಕ್ಕೆಜೆಯಲ್ಲಿ ನಡೆದಿದೆ. ಕೋಲಾರದ ನಸಾಪುರದ ರಾಕೇಶ್(24) ಮೃತ ದುರ್ದೈವಿ.   ಕಳೆದ ದಿನ ಕೋಲಾರದ ನರ್ಸಾಪುರದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕ್ವಾಲೀಸ್ ವಾಹನದ ಟಯರ್ ಸಿಡಿದು ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಕ್ವಾಲೀಸ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿತ್ತು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ರಾಕೇಶ್ ಎಂಬುವರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.    

ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು Read More »

ಕರಾವಳಿ

ಉಪ್ಪಿನಂಗಡಿ: ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 28: ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದ ಅಡಿಕೆ ವ್ಯಾಪಾರಿಯೋರ್ವರ ಮೇಲೆ ಚೂರಿಯಿಂದ ತಿವಿದು 4 ಲಕ್ಷ ರೂ.ಗೂ ಅಧಿಕ ಹಣವನ್ನು ದರೋಡೆಗೈದ ಘಟನೆ ಮಂಗಳವಾರ ಪೆರ್ನೆ ಸಮೀಪದ ಪದೆಬರಿಯಲ್ಲಿ ನಡೆದಿದೆ. ಪದೆಬರಿ ನಿವಾಸಿ ದೀಪಕ್‌ ಶೆಟ್ಟಿ (49) ಅವರು ಪೆರ್ನೆಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು, ಮಂಗಳವಾರ ಅಡಿಕೆ ಮಾರಾಟದ ಹಣದೊಂದಿಗೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದರೋಡೆ ನಡೆದಿದೆ. ಚೂರಿಯಿಂದ ತಿವಿಯಲ್ಪಟ್ಟ ದೀಪಕ್‌ ಶೆಟ್ಟಿ ತಲೆ, ಹೊಟ್ಟೆಗೆ ಏಟು ತಗಲಿದ್ದು, ಚಿಂತಾಜನಕ

ಉಪ್ಪಿನಂಗಡಿ: ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದರೋಡೆ Read More »

ಕರಾವಳಿ, ಕ್ರೈಮ್ ನ್ಯೂಸ್

ತೊಕ್ಕೊಟ್ಟುವಿನಲ್ಲಿ ಭೀಕರ ಅಪಘಾತ ಪ್ರಕರಣ➤ ನವದಂಪತಿ ಮೃತ್ಯು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು ಅ. 28: ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಬಜಾಲು ನಿವಾಸಿಗಳಾದ ರಯಾನ್ ಫೆರ್ನಾಂಡೀಸ್, ಹಾಗೂ ಪತ್ನಿ ಪ್ರಿಯಾ ಫೆರ್ನಾಂಡೀಸ್ ಸಾವನ್ನಪ್ಪಿದ ದುರ್ದೈವಿಗಳು. ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉದ್ಯೋಗಿಗಳಾಗಿರುವ ಈ ಇಬ್ಬರು ದಂಪತಿ ಉಳ್ಳಾಲದ ಬಂಗೇರಲೇನ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.     ಕೆಲಸ ಮುಗಿಸಿ ಉಳ್ಳಾಲದ ಮನೆಗೆ ಮರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬಂದ ಟ್ರಕ್ ಬೈಕಿಗೆ ಡಿಕ್ಕಿ

ತೊಕ್ಕೊಟ್ಟುವಿನಲ್ಲಿ ಭೀಕರ ಅಪಘಾತ ಪ್ರಕರಣ➤ ನವದಂಪತಿ ಮೃತ್ಯು Read More »

ಕರಾವಳಿ, ಕರ್ನಾಟಕ

ಮಂಗಳೂರು: ಟ್ರಕ್ ಹಾಗೂ ಬೈಕ್ ನಡುವೆ ಅಪಘಾತ ➤ ಸಹ ಸವಾರೆ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 27. ಬೈಕ್ ಹಾಗೂ ಬೃಹತ್ ಗಾತ್ರದ ಟ್ರಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಇನ್ನೋಋವ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಹೊರವಲಯದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನಲ್ಲಿದ್ದವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಮಂಗಳೂರು: ಟ್ರಕ್ ಹಾಗೂ ಬೈಕ್ ನಡುವೆ ಅಪಘಾತ ➤ ಸಹ ಸವಾರೆ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸವಣೂರು: ಓಮ್ನಿಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ➤ ಓಮ್ನಿ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಸವಣೂರು, ಅ. 27. ಅ.25ರಂದು ಪುತ್ತೂರು- ಕಾಣಿಯೂರು ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಓಮ್ನಿ ಚಾಲಕ ಇಂದು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಬೆಳ್ಳಾರೆ ಸಮೀಪದ ಪಡ್ಪಿನಂಗಡಿಯ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ.     ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓಮ್ನಿ ಮತ್ತು ಸ್ವಿಫ್ಟ್ ಎರಡೂ ಕಾರು  ಜಖಂಗೊಂಡಿದ್ದು, ಢಿಕ್ಕಿಯ

ಸವಣೂರು: ಓಮ್ನಿಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ➤ ಓಮ್ನಿ ಚಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ :ಶಾಲೆಗೆ ನುಗ್ಗಿ ದರೋಡೆ ➤ ದಾಖಲೆಪತ್ರಗಳನ್ನು ಸುಟ್ಟ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ಅ. 27:  ಅಳದಂಗಡಿ ಬಳಿಯ ಪಿಲ್ಯ ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯ ಬೀಗವನ್ನು ಮುರಿದು ಒಳ ನುಗಿದ ಕಳ್ಳರು ದಾಖಲೆ ಪತ್ರಗಳನ್ನು ಸುಟ್ಟು ಹಾಕಿ ಹಣಕ್ಕಾಗಿ ಹುಡುಕಾಡಿದ ಘಟನೆ (ಅ, 26) ಕಳೆದ ದಿನ ರಾತ್ರಿ ನಡೆದಿದೆ.   ಶಾಲೆಯ ಮುಂಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಗೋದ್ರೇಜಿನ ಬೀಗವನ್ನು ಒಡೆದು, ಅದರಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ವಿವಿಧ ದಾಖಲೆ ಪತ್ರಗಳನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ಜತೆಗೆ ಶಾಲೆಗೆ ಅಳವಡಿಸಲಾಗಿದ್ದ

ಬೆಳ್ತಂಗಡಿ :ಶಾಲೆಗೆ ನುಗ್ಗಿ ದರೋಡೆ ➤ ದಾಖಲೆಪತ್ರಗಳನ್ನು ಸುಟ್ಟ ಕಳ್ಳರು Read More »

ಕರಾವಳಿ, ಕ್ರೈಮ್ ನ್ಯೂಸ್

ಶರಾಬಿನ ನಶೆ : ಬ್ಲೇಡಿನಿಂದ ಕೈ ಕೋಯ್ದುಕೊಂಡು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಶಿರ್ವ ಅ. 27: ಕುಡಿತದ ಅಮಲಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಬ್ಲೇಡಿನಿಂದ ಕೈ ಕೋಯ್ದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟಕಲ್ಲಿನಲ್ಲಿ ಸಂಭವಿಸಿದೆ.   ಬಂಟಕಲ್ಲಿನ ಅರಸಿಕಟ್ಟೆ ಪ್ರೇಮಾ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಭಾನುವಾರ ಬೆಳಗ್ಗೆಯೇ ಶರಾಬಿನ ಅಮಲಿನಲ್ಲಿ ಗಂಡನ ಜೊತೆ ಜಗಳವಾಡಿದ್ದರು. ಅದೇ ದಿನ ರಾಥ್ರಿ ಮತ್ತೇ ಗಂಡನ ಜೊತೆ ಜಗಳ ನಡೆದಿತ್ತು. ಊಟ ಮಾಡಿ ಮಲಗುವಂತೆ ಗಂಡ ಹೆಂಡತಿಗೆ ಹೇಳಿದ್ದಾರೆ. ತಕ್ಷಣವೇ ರೂಮಿನೊಳಗೆ ಹೋದ ಮಹಿಳೆ ಬ್ಲೇಡಿನಿಂದ

ಶರಾಬಿನ ನಶೆ : ಬ್ಲೇಡಿನಿಂದ ಕೈ ಕೋಯ್ದುಕೊಂಡು ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಬೆಳ್ಳಾರೆ: ವ್ಯಕ್ತಿಯೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ. 27. ಬೆಳ್ಳಾರೆ ಮುಖ್ಯ ರಸ್ತೆಯ ಕಾಮಧೇನು ಟವರ್‌ ಸಮೀಪ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿಯನ್ನು ಜಾಲ್ಸೂರು ಗ್ರಾಮದ ಬೈದರ ಕೊಳಂಜಿ ಮನೆ ಅಣ್ಣು (58 ವ.) ಎಂದು ಗುರುತಿಸಲಾಗಿದೆ.     ಮೃತ ದೇಹವನ್ನು ನೋಡಿದ ಸಾರ್ವಜನಿಕರು ಪೊಲೀಸ್‌ ಠಾಣೆಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪತ್ತೆಹಚ್ಚಿದ ಬಳಿಕ ಮನೆಯವರಿಗೆ ವಿಷಯ ತಿಳಿಸಲಾಯಿತು. ಮನೆಯವರು ಬಂದ ಬಳಿಕ ಮಹಜರು

ಬೆಳ್ಳಾರೆ: ವ್ಯಕ್ತಿಯೋರ್ವನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ಅ. 27. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 12 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.     ಕಡಬ ತಾಲೂಕಿನ ಕಾಮನ ನಿವಾಸಿ 28 ವರ್ಷದ ಯುವತಿ, ಹಳೆನೇರಂಗಿ ನಿವಾಸಿ 26 ವರ್ಷದ ಯುವತಿ, ಮರ್ದಾಳ ನಿವಾಸಿ 78 ವರ್ಷದ ವ್ಯಕ್ತಿ, ಚಾರ್ವಕ ನಿವಾಸಿ 46 ವರ್ಷದ ವ್ಯಕ್ತಿ, ನೆಲ್ಯಾಡಿ ನಿವಾಸಿ 31 ರ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿದೆ.‌  

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ದೃಢ Read More »

ಕರಾವಳಿ

ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.!

(ನ್ಯೂಸ್ ಕಡಬ) newskadaba.com ಭಟ್ಕಳ ಅ. 27:  ತಾಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಿದ್ವಾಯಿ ರೋಡ್, ಫಿರ್ದೋಸ್ ನಗರ, ಹೆಬಳೆ ರೋಡ್ ಸೇರಿದಂತೆ ವಿವಿದೆಡೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಭಟ್ಕಳ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಿದ್ವಾಯಿ ರಸ್ತೆಯ ಮಸೀದಿ ಸಮೀಪ ಅಲ್ಹಿಜಾಜ್ ಅವರ ಅದ್ವಾನ್ ರುಕ್ಕುದ್ದೀನ ಮನೆಯ ಬಚ್ಚಲು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿದ್ದಾರೆ.     ಮನೆಯಲ್ಲಿ

ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top