ಕರಾವಳಿ

ಅ.31ರ ಇಂದು ರಾತ್ರಿ ಅಪರೂಪದ ಬ್ಲೂ ಮೂನ್‌ ➤ ತಿಂಗಳಲ್ಲಿ ಎರಡು ಹುಣ್ಣಿಮೆ.

(ನ್ಯೂಸ್ ಕಡಬ) newskadaba.com ಮಂಗಳೂರು ಅ. 31:  ಖಗೋಳ ಕೌತುಕಗಳಲ್ಲಿ ಒಂದಾದ ಬ್ಲ್ಯೂಮೂನ್‌ ಅ.31ರ ಇಂದು ಸಂಭವಿಸಲಿದೆ. ಅಂದರೆ ಇದು ಈ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆ.ಮೊದಲ ಹುಣ್ಣಿಮೆ ಅ.1ರಂದು ಸಂಭವಿಸಿತ್ತು. ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ (ಲೂನಾರ್‌ ಮಂಥ್‌) ನಡುವಿನ ಅವಧಿ 29ದಿನ, 44 ನಿಮಿಷ 38 ಸೆಕೆಂಡ್‌ ಆಗಿರುತ್ತದೆ. ಇದರಲ್ಲಿ 30 ದಿನ ತುಂಬಲು ಬಾಕಿ ಉಳಿದ ಸಮಯ ಸೇರಿ ಸೇರಿ ಕೊನೆಗೊಂದು ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸುತ್ತದೆ. ಇದನ್ನೇ […]

ಅ.31ರ ಇಂದು ರಾತ್ರಿ ಅಪರೂಪದ ಬ್ಲೂ ಮೂನ್‌ ➤ ತಿಂಗಳಲ್ಲಿ ಎರಡು ಹುಣ್ಣಿಮೆ. Read More »

ಕರಾವಳಿ, ಕರ್ನಾಟಕ

ಉಚ್ಚಿಲ ಕಡಲತೀರದಲ್ಲಿ ಮಹಿಳೆ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಚ್ಚಿಲ ಅ. 31: ಸೋಮೇಶ್ವರ ಸಮೀಪದ ಉಚ್ಚಿಲ ಕಡಲತೀರದಲ್ಲಿ ಶುಕ್ರವಾರ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಸೋಮೇಶ್ವರದ ಸಂಕೋಳಿಗೆ ನಿವಾಸಿ ಉಷಾ(60)ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆ ಕಳೆದ ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳೆನ್ನಲಾಗಿದೆ.   ಮಾನಸಿಕವಾಗಿ ಜರ್ಜರಿತಗೊಂಡು ಅತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಮೃತದೇಹದ ಪರಿಶೀಲನೆ ನಡೆಸಿದ್ದಾರೆ.  

ಉಚ್ಚಿಲ ಕಡಲತೀರದಲ್ಲಿ ಮಹಿಳೆ ಮೃತದೇಹ ಪತ್ತೆ Read More »

ಕರಾವಳಿ

ಮಂಗಳೂರು ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ➤ ಆರೋಪಿ ಪ್ರೊಫೆಸರ್​. ಅರಬಿ ಸೇವೆಯಿಂದ ವಜಾ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 31: ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಅರಬಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರನ್ನು ಸೇವೆಯಿಂದ ವಜಾಗೊಳಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿನಿ 2018ರಲ್ಲಿ ಸಾಕ್ಷಿ ಸಮೇತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ವಿವಿ ಆಡಳಿತದ ಸಮಿತಿ ತನಿಖೆ ಕೈಗೊಂಡ ನಂತರ ವರದಿಯನ್ನು ಅಂದಿನ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಎ.ಎಂ ಖಾನ್‌ ಅವರಿಗೆ

ಮಂಗಳೂರು ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ➤ ಆರೋಪಿ ಪ್ರೊಫೆಸರ್​. ಅರಬಿ ಸೇವೆಯಿಂದ ವಜಾ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 31:  ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ನಗರದ ಫಳ್ನಿರ್ ಬಳಿಯ ಹೋಟೆಲ್ ಒಂದರಲ್ಲಿ ಕಳೆದ ದಿನ (ಅ.30) ಸಂಜೆ ನಡೆದ ತಿಂಡಿ ವಿಚಾರ ಸಂದರ್ಭ ಮಾತಿಗೆ ಮಾತು ಬೆಳೆದು ಶೂಟೌಟ್ ನಡೆದಿದೆ. ಫಳ್ನಿರ್ ಮಲಬಾರ್ ಗೋಲ್ಡ್‌ ಸಮೀಪದ MFC ರೆಸ್ಟೋರೆಂಟಿಗೆ ಸುಮಾರು 5.15 ರ ಸುಮಾರಿಗೆ ತಿಂಡಿ ತಿನ್ನಲು ಬಂದಿದ್ದ ನಾಲ್ವರು ಯುವಕರು ಮಾರಾಟಕ್ಕೆ ಇಟ್ಟ ತಿಂಡಿಗೆ ಕೈ ಹಾಕಿ ತೆಗೆಯುತ್ತಿದ್ದಾಗ ಹೊಟೇಲ್ ಬೆರಳೆಣಿಕೆಯ ಸಿಬಂದಿಗಳು ಅಕ್ಷೇಪ ವ್ಯಕ್ತ ಪಡಿಸಿದಾಗ ಮಾತಿಗೆ

ಮಂಗಳೂರು: ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬದಲ್ಲಿ ವಕೀಲ ಅಶ್ವಿತ್ ಕಂಡಿಗರವರ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ ಅ. 30:  ಇಲ್ಲಿನ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ ನ್ಯಾಯವಾದಿ ಅಶ್ವಿತ್ ಕಂಡಿಗರವರ ಕಛೇರಿ ಅ.30ರಂದು ಶುಭಾರಂಭಗೊಂಡಿತು. ಕಛೇರಿಯನ್ನು ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈಕೋರ್ಟ್ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪ್ರೇಮ್ ಪ್ರಸಾದ್ ಶೆಟ್ಟಿ ಬೆಂಗಳೂರು, ಹೈಕೋರ್ಟ್ ನ್ಯಾಯವಾದಿ ಕೇತನ್ ಬಂಗೇರ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಬೆಳಂದೂರು ಬಿಜೆಪಿ ಮಹಾಶಕ್ತಿ

ಕಡಬದಲ್ಲಿ ವಕೀಲ ಅಶ್ವಿತ್ ಕಂಡಿಗರವರ ಕಛೇರಿ ಶುಭಾರಂಭ Read More »

ಕರಾವಳಿ

ಕಾರವಾರ :500 ಕೆಜಿಯ ಬೃಹತ್ ಮೀನು ಬಲೆಗೆ

(ನ್ಯೂಸ್ ಕಡಬ) newskadaba.com ಕಾರವಾರ ಅ. 30: ಸುಮಾರು 500 ಕೆ.ಜಿ.ಗೂ ಹೆಚ್ಚು ತೂಕವಿರುವ ಬೃಹತ್ ಗಾತ್ರದ ಮೂರು ತೊರ್ಕೆ ಮೀನುಗಳು ಭಟ್ಕಳ ಮೀನುಗಾರರ ಬಲೆಗೆ ಬಿದ್ದಿದ್ದು, ಮೀನುಗಾರರು ಸಂತಸಗೊಂಡಿದ್ದಾರೆ .ಇಂದು ಬೆಳಗ್ಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ ಬೋಟ್ ಗಳಿಗೆ ಬ್ರಹತ್ ಗಾತ್ರದ ಮೂರು ತೊರ್ಕೆ ಮೀನು ಸಿಕ್ಕಿದ್ದು, ಪ್ರತಿ ಮೀನಿನ ತೂಕ 500 ಕೆ.ಜಿ. ಮೀರಿಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 2 ಮೀಟರ್ ಗೂ ಅಧಿಕ ಉದ್ದದ ಈ ಮೀನುಗಳನ್ನು ಹರಸಾಹಸಪಟ್ಟು ಮೀನುಗಾರರು

ಕಾರವಾರ :500 ಕೆಜಿಯ ಬೃಹತ್ ಮೀನು ಬಲೆಗೆ Read More »

ಕರಾವಳಿ, ಕರ್ನಾಟಕ

ಗೇರು ಬೀಜ ಕಾರ್ಖಾನೆಯಲ್ಲಿ ಕಳ್ಳತನ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ ಅ. 30: ಗೇರು ಬೀಜ ಕಾರ್ಖಾನೆಯಲ್ಲಿನ ಕಳ್ಳತನದ ಪ್ರಕರನಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.  ಬಂಧಿತರನ್ನು ಪುತ್ತೂರಿನ ಮೊಟ್ಟೆತಡ್ಕ ಸೈಯದ್ ಮೊಹಮ್ಮದ್ (37) ಬಂಟ್ವಾಳ ಮಿತ್ತೂರು ಉಮರ್ ಫಾರೂಕ್ (36) ಬಂಧಿತರಿಂದ ಮಾರುತಿ ಸುಝುಕಿ ಕಾರು, ಮತ್ತು ಕಾರ್ಖಾನೆಯಿಂದ ಕಳವಾದ 1.40 ಲಕ್ಷ ಮೌಲ್ಯದ 32 ಗೇರು ಬೀಜ ಡಬ್ಬ ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಉಡುಪಿ ಹೆಬ್ರಿ ಮತ್ತು ಅಜೆಕಾರು

ಗೇರು ಬೀಜ ಕಾರ್ಖಾನೆಯಲ್ಲಿ ಕಳ್ಳತನ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ ➤ ಐವರು ಆರೋಪಿಗಳಿಗೆ ಪೊಲೀಸ್‌ ಕಸ್ಟಡಿ

(ನ್ಯೂಸ್ ಕಡಬ) newskadaba.com ಬಂಟ್ವಾಳ ಅ. 30: ಬಂಟ್ವಾಳ ಭಂಡಾರಿಬೆಟ್ಟು ಬಳಿಯ ವಸತಿ ಸಂಕೀರ್ಣದಲ್ಲಿ ಅ. 20ರಂದು ನಡೆದ ಚಿತ್ರನಟ ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.   ಬಂಟ್ವಾಳದ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್‌ ಕುಲಾಲ್‌, ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್‌, ವೆಂಕಪ್ಪ ಯಾನೆ ವೆಂಕಟೇಶ್‌, ಪ್ರದೀಪ್‌ ಯಾನೆ ಪಪ್ಪು ಹಾಗೂ ಶರೀಫನ್ನು ಬಂಧಿಸಲಾಗಿದೆ.ಇವರಿಗೆ ಐದು ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ. ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಹಾಗೂ ಬಂಟ್ವಾಳ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ ➤ ಐವರು ಆರೋಪಿಗಳಿಗೆ ಪೊಲೀಸ್‌ ಕಸ್ಟಡಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪಡುಬಿದ್ರಿ: ವಿಷ ಸೇವಿಸಿ ಆಟೋ ಚಾಲಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಅ. 30: ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ಆಟೋ ಚಾಲಕನಾಗಿದ್ದ ಎಮ್ ಸತೀಶ್ ಪೂಜಾರಿ (58) ಎಂಬುವರು ಆತ್ಮಹ್ಯೆಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕ ನಾಗಿದ್ದ ಇವರು  ಕೊರೊನಾ ಕಾರಣದಿಂದ ದುಡಿಮೆ ಇಲ್ಲದೆ ಸಾಲವನ್ನು ಮರುಪಾವತಿಸಲು ಆಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಅ.27ರ ಮಂಗಳವಾರದಂದು ಸುಮಾರು 11.00 ಗಂಟೆ ಸಮಯಕ್ಕೆ ಪಡುಬಿದ್ರಿ ಕಾಮತ್‌ ಪೆಟ್ರೋಲ್ ಬಂಕ್ ಬಳಿ ವಿಷ ಸೇವಿಸಿದ್ದರು. ಬಳಿಕ ವಿಷ ಸೇವಿಸಿರುವ ಬಗ್ಗೆ

ಪಡುಬಿದ್ರಿ: ವಿಷ ಸೇವಿಸಿ ಆಟೋ ಚಾಲಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ಅ. 30: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಹೊಸದಾಗಿ ಅಭಿವೃದ್ದಿ ಸಮಿತಿಯನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕುಕ್ಕೆ ದೇವಸ್ಥಾನದಲ್ಲಿ ಈ ಹಿಂದೆ ಒಂಬತ್ತು ಮಂದಿ ಸದಸ್ಯರ ವ್ಯವಸ್ಥಾಪನಾ ಸಮಿತಿ ಇದ್ದು, ಅದರ ಕಾರ್ಯಾವಧಿ ಪೂರ್ಣಗೊಂಡು ಒಂದು ವರ್ಷದ ನಂತರ ಇದೀಗ ಹೊಸದಾಗಿ ಅಭಿವೃದ್ದಿ ಸಮಿತಿಯನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಐದು ಮಂದಿ ಸದಸ್ಯರು ಒಳಗೊಂಡಿದ್ದಾರೆ. ಪಿ.ಜಿ.ಎಸ್. ಪ್ರಸಾದ್, ಕೃಷ್ಣ ಶೆಟ್ಟಿ, ಪ್ರಸನ್ನ ಮತ್ತು ಎಸ್. ಮೋಹನ್ ರಾಮ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ Read More »

ಕರಾವಳಿ, ಕರ್ನಾಟಕ
Scroll to Top