ಕರಾವಳಿ

ಬಂಟ್ವಾಳ: ಎರಡೆರಡು ಪಾಸ್ ಪೋರ್ಟ್ ಪಡೆದು ವಂಚಿಸಿದ ಆರೋಪಿ ವಿರುದ್ದ ಕೇಸು ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 04: ಎರಡೆರಡು ಪಾಸ್ ಪೋರ್ಟ್ ಮಾಡಿಸಿಕೊಂಡು ಅಪರಾಧವೆಸಗಿದ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸಂಗಬೆಟ್ಟು ಗ್ರಾಮದ ಕಲ್ಕುರಿ ನಿವಾಸಿ ಲ್ಯಾನ್ಸಿ ಸಿಕ್ವೇರಾ(50) ಎಂದು ಗುರುತಿಸಲಾಗಿದೆ.     ಈತ 2002 ರ ನವೆಂಬರ್ 15 ರಂದು ಮುಂಬೈನಲ್ಲಿ ಪಾಸ್ ಪೋರ್ಟ್ ಪಡೆದಿದ್ದು, ಇದಕ್ಕಿಂತ ಮೊದಲು ಬೆಂಗಳೂರಿನಿಂದ ಪಾಸ್ ಪೋರ್ಟ್ ಪಡೆದಿದ್ದ. ಎರಡು ಪಾಸ್ ಪೋರ್ಟ್ ಗಳಲ್ಲಿ ಬೇರೆ ಬೇರೆ ಮಾಹಿತಿಯನ್ನು ನೀಡಿದ್ದು, ಈತನ ವಿರುದ್ಧ […]

ಬಂಟ್ವಾಳ: ಎರಡೆರಡು ಪಾಸ್ ಪೋರ್ಟ್ ಪಡೆದು ವಂಚಿಸಿದ ಆರೋಪಿ ವಿರುದ್ದ ಕೇಸು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಭಟ್ಕಳ : ಸಮತಾ ಹೆಗ್ಡೆಗೆ ಕೀಟ ಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ

(ನ್ಯೂಸ್ ಕಡಬ) newskadaba.com ಭಟ್ಕಳ, ಡಿ.04: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಎಂ.ಎಸ್ಸಿ. (ಕೀಟ ಶಾಸ್ತ್ರ) ವಿಭಾಗದಲ್ಲಿ ಮುರ್ಡೇಶ್ವರದ ಸಮತಾ ಹೆಗ್ಡೆ ಟಾಪರ್ ಆಗಿ ಚಿನ್ನದ ಪದಕ ಪಡೆದಿದ್ದಾರೆ. ಜಿ.ಕೆ.ವಿ.ಕೆ. ಹೆಬ್ಬಾಳದಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಎಂ.ಎಸ್ಸಿ (ಕೀಟ ಶಾಸ್ತ್ರ)ದಲ್ಲಿ ಟಾಪರ್ ಆಗಿ ಹೊರ ಹೊಮ್ಮಿರುವ ಇವರು ಪ್ರಸ್ತುತ ಬೇಯರ್ಸ್ (ಜರ್ಮನಿ) ಕಂಪೆನಿಯಲ್ಲಿ ಕೀಟ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುರ್ಡೇಶ್ವರ ನಿಸರ್ಗ ರೆಸಿಡೆನ್ಸಿಯ ಜಯಾನಂದ ಹೆಗ್ಡೆ ಹಾಗೂ ಶಾಲಿನಿ ಹೆಗ್ಡೆ ದಂಪತಿಯ ಪುತ್ರಿ.ಇವರು ಕುಂದಾಪುರದ ಆರ್.ಎನ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ

ಭಟ್ಕಳ : ಸಮತಾ ಹೆಗ್ಡೆಗೆ ಕೀಟ ಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ Read More »

ಕರಾವಳಿ

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 04: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯದಲ್ಲಿ ಮಂಗಳೂರು ಕಡೆ ಚಲಿಸುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಅನತಿ ದೂರದಲ್ಲಿದ್ದ ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ.     ಪುತ್ತೂರಿನಿಂದ ರಾತ್ರಿ ಮಂಗಳೂರು ಕಡೆಗೆ ಹೋಗುತಿದ್ದ ಟಿಪ್ಪರ್ ಕಬಕ ಸಮೀಪದ ಪೋಳ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯನ್ನು ಬಿಟ್ಟು ದೂರದಲ್ಲಿದ್ದ ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ವಿದ್ಯುತ್ ತಂತಿಯ ಕಡಿತದಿಂದಾಗಿ

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ Read More »

ಕರಾವಳಿ

ಮಂಗಳೂರು ಗೋಲಿಬಾರ್ ಪ್ರಕರಣ ➤ ಸರ್ಕಾರದ ಕೈಸೇರಿದ ಮೆಜಿಸ್ಟೀರಿಯಲ್ ತನಿಖೆ ವರದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04:  ಕಳೆದ ಡಿ.19 ರಂದು ನಡೆದ ಮಂಗಳೂರು ಹಿಂಸಾಚಾರ ಮತ್ತು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಮೆಜಿಸ್ಟೀರಿಯಲ್ ತನಿಖೆಯ ಅಂತಿಮ ವರದಿಯನ್ನು ನ.4ರಂದು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. 50 ಪುಟಗಳ ವರದಿ ಮತ್ತು ಸುಮಾರು 2500 ದಾಖಲೆಗಳನ್ನು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.    

ಮಂಗಳೂರು ಗೋಲಿಬಾರ್ ಪ್ರಕರಣ ➤ ಸರ್ಕಾರದ ಕೈಸೇರಿದ ಮೆಜಿಸ್ಟೀರಿಯಲ್ ತನಿಖೆ ವರದಿ Read More »

ಕರಾವಳಿ

ಉಳ್ಳಾಲ: ನೀರಿನ ಟ್ಯಾಂಕರ್ ಹರಿದು ಗಂಭೀರ ಗಾಯಗೊಂಡಿದ್ದ 5 ವರ್ಷದ ಮಗು ಮೃತ್ಯು.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04: ಉಳ್ಳಾಲ ಬೈಲಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ನೀರಿನ ಟ್ಯಾಂಕರ್‌ನ ಅಡಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಕಳೆದ ದಿನ ಮೃತಪಟ್ಟಿದೆ. ಸೋಮವಾರ ಸಂಜೆ ತಾಯಿ ಮತ್ತು ಸಹೋದರ, ಸಹೋದರಿಯರೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ ಟ್ಯಾಂಕರ್ ಹರಿದ ಪರಿಣಾಮ ಬಾಲಕ ಕೃಷ್ಣ ಗಂಭೀರ ಗಾಯಗೊಂಡಿದ್ದ. ತಕ್ಷನ ಆತನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತಸೆ ಫಲಕಾರಿಯಾಗದೇ ಬಾಲಕ ಕಳೆದ ದಿನ ಆಸ್ಪತ್ರೆಯಲ್ಲಿ

ಉಳ್ಳಾಲ: ನೀರಿನ ಟ್ಯಾಂಕರ್ ಹರಿದು ಗಂಭೀರ ಗಾಯಗೊಂಡಿದ್ದ 5 ವರ್ಷದ ಮಗು ಮೃತ್ಯು.! Read More »

ಕರಾವಳಿ

ಕಡಬ: ಜೋಯೆಲ್ ಸ್ಕರಿಯ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಡಿ. 04. ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಎಂಎಸ್ಸಿ (Big Data Analytics) ವಿದ್ಯಾರ್ಥಿಯಾಗಿರುವ ಕಡಬದ ಜೋಯೆಲ್ ಸ್ಕರಿಯ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ ಲಭಿಸಿದೆ. ವೈಯಕ್ತಿಕ ನೆಲೆಯಲ್ಲಿ ವಿವಿಧ ರೀತಿಯಲ್ಲಿ ಅತೀ ಹೆಚ್ಚು ಡಿಜಿಟಲ್ ಮಂಡಲ ಆರ್ಟ್ಸ್ ರಚನೆ ಮಾಡಿರುವ ಅವರ ಸಾಧನೆಯನ್ನು ಗುರುತಿಸಿ ಸಂಸ್ಥೆಯು ಈ ಪುರಸ್ಕಾರ ನೀಡಿದೆ. ಇವರು ಕಡಬದ ಕೇಳಂಕುನ್ನೆಲ್ ಸ್ಕರಿಯ ಹಾಗೂ ಬೆಟ್ಟಿ ದಂಪತಿಯ ಪುತ್ರ.

ಕಡಬ: ಜೋಯೆಲ್ ಸ್ಕರಿಯ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ Read More »

ಕರಾವಳಿ, ಕರ್ನಾಟಕ

ಕನಕದಾಸರ ತತ್ವ ,ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ➤ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಕನಕದಾಸರು ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು, ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಇಂದು ನಗರದ ಜಿಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕನಕದಾಸರು 15-16 ನೇ

ಕನಕದಾಸರ ತತ್ವ ,ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ➤ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ Read More »

ಕರಾವಳಿ

ಮಂಗಳೂರು: ಗೋಹತ್ಯೆ ನಿಷೇಧ ಕಾನೂನು ➤ ರಾಜ್ಯ ಸರ್ಕಾರಕ್ಕೆ ಸವಾಲೆಸೆದ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03:  ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ. ಹಾಗಿರುವಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ಎರಡು ತಿಂಗಳಿನಿಂದ ಬರೀ ಚರ್ಚೆ ಯಾಕೆ..? ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ. ಚರ್ಚಿಸುವ ಎಂದು ಶಾಸಕ ಯುಟಿ ಖಾದರ್ ಸವಾಲೆಸೆದಿದ್ದಾರೆ.     ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೀಗ ಗೋ ಹತ್ಯಾ ನಿಷೇಧ ಕಾನೂನಿನ ಬಗ್ಗೆ ಭಾರಿ ಚರ್ಚೆ ನಡೆಯುತ್ತಲಿದೆ. ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು

ಮಂಗಳೂರು: ಗೋಹತ್ಯೆ ನಿಷೇಧ ಕಾನೂನು ➤ ರಾಜ್ಯ ಸರ್ಕಾರಕ್ಕೆ ಸವಾಲೆಸೆದ ಯು.ಟಿ.ಖಾದರ್ Read More »

ಕರಾವಳಿ

ಸುಳ್ಯ: ಮಂಡೆಕೋಲು ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಮಂಡೆಕೋಲು, ಡಿ. 03: ಇಂದು ಮಂಗಳೂರಿನಲ್ಲಿ ನಡೆದ ಸ್ಕ್ಯಾಡ್ಸ್ ಮಹಾಸಭೆಯಲ್ಲಿ 2019-20 ನೇ ಸಾಲಿನಲ್ಲಿ ದ.ಕ ಕೃಷಿ ಅಭಿವೃದ್ಧಿ ಸಹಕಾರಿ ಸಂಘ (skads) ಇಲ್ಲಿ ಕೃಷಿ ಯಂತ್ರೋಪಕರಣ ಖರೀದಿಸಿ ಸುಳ್ಯ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುವ ಮಂಡೆಕೋಲು ಸಹಕಾರಿ ಸಂಘಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.     ಪ್ರಶಸ್ತಿಯನ್ನು ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಹಾಗೂ ಮುಖ್ಯ ಕಾರ್ಯನಿರ್ವನಿರ್ವಹಣಾಧಿಕಾರಿ ಅನಂತಕೃಷ್ಣ ಚಾಕೋಟೆಯವರು ಸ್ವೀಕರಿಸಿದರು.    

ಸುಳ್ಯ: ಮಂಡೆಕೋಲು ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ Read More »

ಕರಾವಳಿ

ಉಡುಪಿ ಕೃಷ್ಣಮಠದಲ್ಲಿ ಕಾಣೆಯಾಗಿದ್ದ ‘ಕನ್ನಡ ಬೋರ್ಡ್’ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಉಡುಪಿ ಶ್ರೀಕೃಷ್ಣ ಮಠದ ಮಹಾದ್ವಾರದ ಮೇಲಿದ್ದ ಕನ್ನಡ  ಬದಲಿಗೆ ತುಳು ಹಾಗೂ ಸಂಸ್ಕೃತ ಬೋರ್ಡ್ ಅಳವಡಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕೃಷ್ಣಮಠದ ಆಡಳಿತ ಮಂಡಳಿ ಮಹಾದ್ವಾರಕ್ಕೆ ಕನ್ನಡದ ನಾಮಫಲಕವನ್ನು ಅಳವಡಿಸಿದೆ.   ಕೊರೊನಾ ಲಾಕ್‌ಡೌನ್ ವೇಳೆ ಸಂಪೂರ್ಣವಾಗಿ ಮಠವನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಳೆಯ ಬೋರ್ಡ್ ತೆಗೆದು, ಹೊಸ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಕನ್ನಡ ಮಾಯವಾಗಿ ತುಳು ಮತ್ತು ಸಂಸ್ಕೃತ ಪ್ರತ್ಯಕ್ಷವಾಗಿತ್ತು.

ಉಡುಪಿ ಕೃಷ್ಣಮಠದಲ್ಲಿ ಕಾಣೆಯಾಗಿದ್ದ ‘ಕನ್ನಡ ಬೋರ್ಡ್’ ಪ್ರತ್ಯಕ್ಷ Read More »

ಕರಾವಳಿ
Scroll to Top