ಕರಾವಳಿ

ಸುರಭಿ ಬಾರ್ ಗೆ ನುಗ್ಗಿದ ಕಳ್ಳರು ➤ ಮೂರು ಲಕ್ಷ ನಗದು ಹಾಗೂ ಮದ್ಯ ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.14. ಬಾರ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಹಾಗೂ ಮದ್ಯದ ಬಾಟಲಿಗಳನ್ನು ಕಳವುಗೈದ  ಘಟನೆ ಮೆಲ್ಕಾರ್ ಸಮೀಪದ ಕಂದೂರು ಎಂಬಲ್ಲಿ ನಡೆದಿದೆ. ಬಂಟ್ವಾಳದ ಸುರಭಿ ಎಂಬ ಹೆಸರಿನ ಬಾರ್‌ ಗೆ ಶಟರ್‌ ನ ಬೀಗ ಮುರಿದು ನುಗ್ಗಿದ ಕಳ್ಳರು ಕೌಂಟರ್‌ನಲ್ಲಿದ್ದ ಸುಮಾರು ಮೂರು ಲಕ್ಷ ರೂ. ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ನೇತೃತ್ವದ ತಂಡ ಭೇಟಿ ನೀಡಿ ಪ್ರಕರಣ […]

ಸುರಭಿ ಬಾರ್ ಗೆ ನುಗ್ಗಿದ ಕಳ್ಳರು ➤ ಮೂರು ಲಕ್ಷ ನಗದು ಹಾಗೂ ಮದ್ಯ ದೋಚಿ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜ. 16ರಂದು ಕೋವಿಡ್ ಲಸಿಕೆ ವಿತರಿಸುವ ಹಿನ್ನೆಲೆ ➤ ಮಂಗಳೂರು ತಲುಪಿದ 42,500 ಕೋವಿಶೀಲ್ಡ್ ಲಸಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 14. ಜ. 16ರಿಂದ ಕೋವಿಡ್ ಲಸಿಕೆ ನೀಡಲಾಗುವುದರಿಂದ ಸೋಂಕು ವಿರೋಧಿ ಕೋವಿಶೀಲ್ಡ್ ಲಸಿಕೆಯು ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ತಲುಪಿದ್ದು, ಜಿಲ್ಲಾ ಔಷಧ ಉಗ್ರಾಣದಲ್ಲಿ ದಾಸ್ತಾನಿರಿಸಲಾಗಿದೆ. ಇದರಲ್ಲಿ ಒಟ್ಟು 42,500 ಲಸಿಕೆಗಳಿದ್ದು, ದ.ಕ. ಜಿಲ್ಲೆಗೆ 24,500, ಚಿಕ್ಕಮಗಳೂರು ಜಿಲ್ಲೆಗೆ 6,000 ಹಾಗೂ ಉಡುಪಿಗೆ 12,000 ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಜ. 16ರಂದು ಕೋವಿಡ್ ಲಸಿಕೆ ವಿತರಿಸುವ ಹಿನ್ನೆಲೆ ➤ ಮಂಗಳೂರು ತಲುಪಿದ 42,500 ಕೋವಿಶೀಲ್ಡ್ ಲಸಿಕೆ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ಕೊಟ್ಟಿಗೆಗೆ ಬೆಂಕಿ ಹಿಡಿದು ಮೂರು ಕ್ವಿಂಟಾಲ್ ಗೂ ಮಿಕ್ಕ ರಬ್ಬರ್ ಶೀಟ್ ಭಸ್ಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 14. ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಕ್ವಿಂಟಾಲ್ ಗೂ ಮಿಕ್ಕ ರಬ್ಬರ್ ಶೀಟ್, ಮನೆಯ ಅಗತ್ಯ ದಾಖಲೆ ಪತ್ರಗಳು ಹಾಗೂ ನಗದು ಬೆಂಕಿಗಾಹುತಿಯಾದ ಘಟನೆ ಕೊಕ್ಕಡದ ಪಿಜಿನಡ್ಕ ಎಂಬಲ್ಲಿ ನಡೆದಿದೆ. ಪಿಜಿನಡ್ಕದ ಚೀಂಕ್ರ ಎಂಬವರು ಹೊಸಮನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಹೊಸಮನೆಯಲ್ಲಿಯೇ ವಾಸಿಸುತ್ತಿದ್ದ ಇವರು ಹಳೆ ಮನೆಯಲ್ಲಿ ಅಡಿಗೆ ಮಾಡುತ್ತಿದ್ದರು. ಕೊಟ್ಟಿಗೆಯು ಹಳೆ ಮನೆಗೆ ತಾಗಿಕೊಂಡಿದ್ದು, ಮನೆಯ ವಸ್ತುಗಳನ್ನೆಲ್ಲ ಅದರಲ್ಲಿ ಜೋಡಿಸಿಡಲಾಗಿತ್ತು. ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಮೆನೆಯ ಹೆಂಚು

ಬೆಳ್ತಂಗಡಿ: ಕೊಟ್ಟಿಗೆಗೆ ಬೆಂಕಿ ಹಿಡಿದು ಮೂರು ಕ್ವಿಂಟಾಲ್ ಗೂ ಮಿಕ್ಕ ರಬ್ಬರ್ ಶೀಟ್ ಭಸ್ಮ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು ಗ್ರಾಮಾಂತರ- ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14.  ಮಂಗಳೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ  ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಐಕಳ ಗ್ರಾಮ ಪಂಚಾಯತ್‍ ನ ಏಳಿಂಜೆ ಅಂಗನವಾಡಿ ಕೇಂದ್ರ, ಪಾವೂರು ಗ್ರಾಮ ಪಂಚಾಯತ್‍ ನ ಪೋಡಾರ್ ಸೈಟ್ ಅಂಗನವಾಡಿ ಕೇಂದ್ರ,  ಉಲ್ಲಾಳ ನಗರಸಭೆ, ವಾರ್ಡ್ ನಂ. 17 ರ ಕಲ್ಲಾಪು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ. ಪಡುಮಾರ್ನಾಡು ಗ್ರಾಮ ಪಂಚಾಯತ್‍ ನ ಮುಗೇರಕಳ ಅಂಗನವಾಡಿ

ಮಂಗಳೂರು ಗ್ರಾಮಾಂತರ- ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಕೌಶಲ್ಯ ತರಬೇತಿ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14. ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯ ವಿಶೇಷ ಕೇಂದ್ರೀಯ ನೆರವಿನಡಿ (SCA to SCSP) ಪರಿಶಿಷ್ಟ  ಜಾತಿಯ ಜನಾಂಗದ ಫಲಾಪೇಕ್ಷಿಗಳಿಗೆ ಕೌಶಲ್ಯ ತರಬೇತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಟೆಲಿವಿಷನ್ ಜರ್ನಲಿಸಂ, ಕ್ಯಾಮರಾಮ್ಯಾನ್ ತರಬೇತಿ ಹಮ್ಮಿಕೊಂಡಿದ್ದು, ತರಬೇತಿಯನ್ನು ಮೆ:ಅನನ್ಯ ಕ್ರಿಯೇಷನ್ಸ್, ಮಂಡ್ಯ ಜಿಲ್ಲೆ ಇಲ್ಲಿ ನಡೆಸಲಾಗುವುದು. ಪರಿಶಿಷ್ಟ ಜಾತಿಯ ಕನಿಷ್ಠ 18 ರಿಂದ 25 ವಯೋಮಿತಿಯ ಪದವೀದರ ಯುವಕ/

ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಕೌಶಲ್ಯ ತರಬೇತಿ Read More »

ಕರಾವಳಿ, ಕರ್ನಾಟಕ

ರಾಮ ಮಂದಿರ ನಿರ್ಮಾಣದ ನಿಧಿಗೆ ಧರ್ಮಸ್ಥಳದಿಂದ 25 ಲಕ್ಷ ➤ ಡಾ| ವಿರೇಂದ್ರ ಹೆಗ್ಗಡೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜ. 14. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ನಿರ್ಮಾಣದ ನಿಧಿಗೆ ಧರ್ಮಸ್ಥಳ ಕ್ಷೇತ್ರದಿಂದ 25 ಲಕ್ಷ ರೂಪಾಯಿ ನಿಧಿ ಸಮರ್ಪಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ನಿಧಿ‌ ಸಮರ್ಪಣೆ ಅಭಿಯಾನದ‌ ಕುರಿತು‌ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ನಿಧಿ ಸಮರ್ಪಣ ಅಭಿಯಾನ ಆರಂಭವಾಗಿದ್ದು, ಈ ನಿಟ್ಟಿ‌ನಲ್ಲಿ ಧರ್ಮಸ್ಥಳ ಕ್ಷೇತ್ರದಿಂದ

ರಾಮ ಮಂದಿರ ನಿರ್ಮಾಣದ ನಿಧಿಗೆ ಧರ್ಮಸ್ಥಳದಿಂದ 25 ಲಕ್ಷ ➤ ಡಾ| ವಿರೇಂದ್ರ ಹೆಗ್ಗಡೆ Read More »

ಕರಾವಳಿ, ಕರ್ನಾಟಕ

ತಂಬಾಕು ಉತ್ಪನ್ನ ಬಳಕೆ ಬದುಕಿಗೆ ಮಾರಕ ➤ ಡಾ ಹನುಮಂತರಾಯಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 14. ಪ್ರಸ್ತುತ ಸಮಾಜದಲ್ಲಿ ಯುವಕ-ಯುವತಿಯರು ತಂಬಾಕು ಸೇವನೆಯ ದಾಸರಾಗುತ್ತಿರುವ ಬಗ್ಗೆ ಚಿಂತಿಸಬೇಕಾಗಿದೆ. ಯುವಕ ಯುವತಿಯರ ಬದುಕನ್ನು ಕಾರ್ಯೋನ್ಮುಖವಾಗಿ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಸಿ ತಿಳಿಸಿದರು. ಜನವರಿ 12 ರಂದು ದ.ಕ ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣದ ಅಂಗವಾಗಿ

ತಂಬಾಕು ಉತ್ಪನ್ನ ಬಳಕೆ ಬದುಕಿಗೆ ಮಾರಕ ➤ ಡಾ ಹನುಮಂತರಾಯಪ್ಪ Read More »

ಕರಾವಳಿ, ಕರ್ನಾಟಕ

ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾ| ಘಟಕದಿಂದ ಪ್ರಬಂಧ, ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ➤ ಕನ್ನಡವನ್ನು ಉಳಿಸುವ ಕೆಲಸ ಮನೆಯಿಂದಲೇ ಆರಂಭಗೊಳ್ಳಲಿ -ಭವ್ಯಾ ಪಿ.ಆರ್

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಲಾದ ಪ್ರಬಂಧ ಹಾಗೂ ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಜ.8ರಂದು ದರ್ಬೆ ಸಂತೃಪ್ತಿ ಹೊಟೇಲ್ ಮುಂಭಾಗದ ಸಣ್ಣ ಕೈಗಾರಿಕಾ ಸಹಕಾರಿ ಸಂಘದ ಕೈಗಾರಿಕಾ ಸಹಕಾರಿ ಭವನದಲ್ಲಿ ನಡೆಯಿತು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊರೋನಾ ಕಾಲಘಟ್ಟದಲ್ಲಿಯು ಕರ್ನಾಟಕ ಪತ್ರಕರ್ತರ

ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾ| ಘಟಕದಿಂದ ಪ್ರಬಂಧ, ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ➤ ಕನ್ನಡವನ್ನು ಉಳಿಸುವ ಕೆಲಸ ಮನೆಯಿಂದಲೇ ಆರಂಭಗೊಳ್ಳಲಿ -ಭವ್ಯಾ ಪಿ.ಆರ್ Read More »

ಕರಾವಳಿ, ಕರ್ನಾಟಕ

ಶಿರಾಡಿ: ತುಳು ಚಿತ್ರನಟ ರೂಪೇಶ್ ಶೆಟ್ಟಿಯವರ ಕಾರು ಅಪಘಾತ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ.13. ತುಳು ಚಿತ್ರನಟ ರೂಪೇಶ್ ಶೆಟ್ಟಿಯವರ ಟೊಯೋಟಾ ಫಾರ್ಚ್ಯೂನರ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ನಡುವೆ ಢಿಕ್ಕಿಯಾದ ಘಟನೆ ಬುಧವಾರ ಸಂಜೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ನಡೆದಿದೆ. ಕಾರ್ಯಕ್ರಮದ ನಿಮಿತ್ತ ತನ್ನ ಗೆಳೆಯರ ಜೊತೆ ಬೆಂಗಳೂರಿಗೆ ತೆರಳುತ್ತಿದ್ದ ರೂಪೇಶ್‌ ಶೆಟ್ಟಿಯವರು ಸಂಚರಿಸುತ್ತಿದ್ದ ಕಾರು ಶಿರಾಡಿ ಘಾಟಿಯಲ್ಲಿ ಬುಧವಾರ ಸಂಜೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸ್ನೇಹಿತರು ಸಣ್ಣ ಪುಟ್ಟ ಗಾಯಗಳೊಂದಿಗೆ

ಶಿರಾಡಿ: ತುಳು ಚಿತ್ರನಟ ರೂಪೇಶ್ ಶೆಟ್ಟಿಯವರ ಕಾರು ಅಪಘಾತ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಎಬಿವಿಪಿ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 13. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಹಾಗೂ ಇದರ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯದ ನಗರ ಅಧ್ಯಕ್ಷರಾದ ಸೋಮಶೇಖರ್ ನಾಯಕ್, ಉಪನ್ಯಾಸಕರು ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ವಹಿಸಿದ್ದರು ಹಾಗೂ ಮುಖ್ಯ ಅತಿಥಿಯಾಗಿ ವನಜ.ವಿ ಭಟ್ ಸದಸ್ಯರು ಅಭಿವೃದ್ಧಿ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ಉಪಸ್ಥಿತರಿದ್ದರು ಮತ್ತು

ಸುಬ್ರಹ್ಮಣ್ಯ: ಎಬಿವಿಪಿ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ Read More »

ಕರಾವಳಿ, ಕರ್ನಾಟಕ
Scroll to Top