ಕರಾವಳಿ

ಸುಬ್ರಹ್ಮಣ್ಯ ಉಪವಲಯಾಧಿಕಾರಿಯಾಗಿ ರವಿಚಂದ್ರ ಪಡುಬೆಟ್ಟು ಭಡ್ತಿ

(ನ್ಯೂಸ್ ಕಡಬ) newskadaba.com ಕಡಬ, ಜ. 24. ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಚಂದ್ರ ಪಡುಬೆಟ್ಟು ಎಂಬವರು ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದಾರೆ.  2005ರಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯಕ್ಕೆ ಸೇರಿಕೊಂಡ ಬಳಿಕ 2010ರಲ್ಲಿ ಅರಣ್ಯ ರಕ್ಷಕರಾಗಿ ಭಡ್ತಿ ಹೊಂದಿದ್ದರು. ಇದೀಗ 2021ರಲ್ಲಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ಹೊಂದಿದ್ದಾರೆ. ಕರ್ನಾಟಕ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ನೆಲ್ಯಾಡಿ‌ ಗ್ರಾಮದ ಪಡುಬೆಟ್ಟುವಿನ ಮಾಲೆವು ಮುಗೇರ ಮತ್ತು ಮುದರು […]

ಸುಬ್ರಹ್ಮಣ್ಯ ಉಪವಲಯಾಧಿಕಾರಿಯಾಗಿ ರವಿಚಂದ್ರ ಪಡುಬೆಟ್ಟು ಭಡ್ತಿ Read More »

ಕರಾವಳಿ, ಕರ್ನಾಟಕ

ಕಡಲ ತೀರ ತ್ಯಾಜ್ಯಗುಂಡಿಯಲ್ಲ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ದಿನನಿತ್ಯ ಕಡಲತೀರಕ್ಕೆ ವಿಹಾರಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರು ಕಡಲ ತೀರವನ್ನು ಕಲುಷಿತಗೊಳಿಸುತ್ತಿರುವುದು ಬಹಳ ಖೇದಕರ ವಿಚಾರವಾಗಿದೆ. ವಾರಾಂತ್ಯದ ಮೋಜುಮಸ್ತಿಗೆ ಬರುವ ಯುವಕ, ಯುವತಿಯರು ಕಡಲತೀರದಲ್ಲಿ ಪ್ಲಾಸ್ಟಿಕ್ ಬಾಟಲ್, ಕವರ್‍ಗಳು ಮತ್ತು ಬಿಯರ್ ಬಾಟಲ್‍ಗಳನ್ನು ಎಸೆಯುವುದು ಅಕ್ಷಮ್ಯ ಅಪರಾಧ. ಕಡಲ ತೀರ ಎನ್ನುವುದು ತ್ಯಾಜ್ಯ ಗುಂಡಿಯಲ್ಲ. ಕಡಲತೀರವನ್ನು ಕಲುಷಿತಗೊಳಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು

ಕಡಲ ತೀರ ತ್ಯಾಜ್ಯಗುಂಡಿಯಲ್ಲ ➤ ಡಾ|| ಚೂಂತಾರು Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಎಂದು ಹೇಳಿ 25 ಮಂದಿಯಿಂದ ಇಬ್ಬರಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ಸರಿಸುಮಾರು 25ಕ್ಕಿಂತಲೂ ಅಧಿಕ ಜನರ ತಂಡವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ಬೆಳ್ತಂಗಡಿ ತಾಲೂಕಿನ ಸುದೇಮುಗೇರು ನಿವಾಸಿ ಮಹಮ್ಮದ್ ಅಲ್ತಾಫ್ (21) ಎಂದು ಗುರುತಿಸಲಾಗಿದೆ. ಅಲ್ತಾಫ್ ಎಂಬವರು ಉಜಿರೆಯ ಎಂಪಾಯರ್ ಹೋಟೆಲ್ ನಲ್ಲಿ ಜ್ಯೂಸ್ ಮೇಕರ್ ಆಗಿ ಕೆಲಸ ಮಾಡಿಕೊಂಡಿದ್ದು, ಒಂದು ವಾರದ ಹಿಂದೆ ಹೋಟೆಲ್ ಗೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ್ದಕ್ಕೆ ಅವರಲ್ಲಿ ನೀನು ಯಾಕೆ ನನ್ನನ್ನು ಗುರಾಯಿಸಿ ನೋಡಿದ್ದಿ ಎಂದು

ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಎಂದು ಹೇಳಿ 25 ಮಂದಿಯಿಂದ ಇಬ್ಬರಿಗೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 24. ಇಲ್ಲಿನ ಕೇರ್ಪಳ ಎಂಬಲ್ಲಿನ ಮಹಿಳೆಯೋರ್ವರು ಜ.18ರಂದು ಕಾಣೆಯಾಗಿದ್ದು, ಇದೀಗ ಅವರ ಮೃತದೇಹವು ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಸುಳ್ಯದ ಕೇರ್ಪಳದಲ್ಲಿ ಬಾಡಿಗೆ ಕೋಣೆಯಲ್ಲಿರುವ ಆನಂದ ಎಂಬವರ ಪತ್ನಿ ಚಂದ್ರಾವತಿಯವರ ಮೊಬೈಲ್ ಫೋನ್ ಮತ್ತು ಪರ್ಸ್ ನದಿಯಲ್ಲಿದ್ದುದನ್ನು ಕಂಡು ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದವರು ಸೇರಿ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ ಹಾಗೂ ಮನೆಗೂ ಹಿಂತಿರುಗಿರಲಿಲ್ಲ. ಇದೀಗ ಜ.23 ರಂದು ನಾರ್ಕೋಡು ಸಮೀಪ ಪಯಸ್ವಿನಿ ಹೊಳೆಯ ನೀರಲ್ಲಿ

ಸುಳ್ಯ: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅಶ್ವತ್ಥ ಮರ ಬಿದ್ದು ವಾಹನಗಳು ಜಖಂ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ಇಲ್ಲಿನ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಮುಂದೆ ಇದ್ದ ಅಶ್ವತ್ಥ ಕಟ್ಟೆಯ ಹಳೆಯದಾದ ಮರವೊಂದು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ‌ಟ್ಯಾಂಕರ್, ಜೆಸಿಬಿ ಹಾಗೂ ಕಾರಿಗೆ ಹಾನಿಯಾಗಿದೆ. ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು ಮರದಡಿ ನಿಲ್ಲಿಸಿದ್ದ ಒಂದು ನೀರಿನ ಟ್ಯಾಂಕರ್, ಜೆಸಿಬಿ ಮತ್ತು ಒಂದು ಕಾರಿನ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ. ಈ ಸಂದರ್ಭ ಆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ.

ಮಂಗಳೂರು: ಅಶ್ವತ್ಥ ಮರ ಬಿದ್ದು ವಾಹನಗಳು ಜಖಂ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 24. ಪಾದಚಾರಿ ವೃದ್ದರೋರ್ವರಿಗರ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ದ ಸ್ಥಳದಲ್ಲೇ ಮೃತಪಟ್ಟ ಘಟನೆ ನಸುಕಿನ ಜಾವ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.   ಮೃತರನ್ನು ಪಾಣೆಮಂಗಳೂರಿನ ನಿವಾಸಿ ಹಮ್ಮಬ್ಬ (60) ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಸಹರಾ ಆಸ್ಪತ್ರೆಯ ಎದುರು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ತೊಕ್ಕೊಟ್ಟಿನ ಕಲ್ಲಾಪಿನಲ್ಲಿರುವ ಸಂಬಂಧಿಕರ ಮ‌ನೆಗೆ ಬಂದಿದ್ದರೆನ್ನಲಾಗಿದೆ. ಮಂಗಳೂರು

ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 23. ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ಕೆ.ಸಿ. ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ. ಮತ್ತು ಗುರುರಾಜ್ ರವರು ದ.ಕ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಜನವರಿ 28, 29 ಮತ್ತು 30 ರಂದು ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಜನವರಿ 28 ರಂದು ಬೆಳಿಗ್ಗೆ 11 ಗಂಟೆಗೆ ಸುಳ್ಯ ಸರ್ಕಾರಿ ನಿರೀಕ್ಷಣಾ ಮಂದಿರ, ಮಧ್ಯಾಹ್ನ 2.30 ಗಂಟೆಗೆ ಪುತ್ತೂರು ಸರ್ಕಾರಿ ನಿರೀಕ್ಷಣಾ ಮಂದಿರ,

ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಚರ್ಚ್ ಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 23. ಇಲ್ಲಿನ ನಾವೂರು ಗ್ರಾಮದ ಪರ್ಲ ಚರ್ಚ್ ನ ಒಳನುಗ್ಗಿದ ಕಳ್ಳರು ಹಣಕ್ಕಾಗಿ ತಡಕಾಡಿ ಪವಿತ್ರ ವಸ್ತುಗಳನ್ನು ಹಾನಿ ಮಾಡಿದ ಘಟನೆ ವರದಿಯಾಗಿದೆ. ಶುಕ್ರವಾರದಂದು ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಚರ್ಚ್ ಪ್ರತಿನಿಧಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರ ದುಷ್ಕೃತ್ಯ ಚರ್ಚ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾವೂರು ಚರ್ಚ್ ರಸ್ತೆಯಲ್ಲಿದ್ದ ಬಾರ್ ಮತ್ತು ಪ್ರಾವಿಷನ್

ಬಂಟ್ವಾಳ: ಚರ್ಚ್ ಗೆ ನುಗ್ಗಿದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಮುಜರಾಯಿ ದೇವಾಲಯಗಳಲ್ಲಿ ಪ್ರತೀ ತಿಂಗಳು ಎರಡು ಬಾರಿ ಸಪ್ತಪದಿ ಕಾರ್ಯಕ್ರಮ ➤ ಕೋಟ ಶ್ರೀ ನಿವಾಸ್ ಪೂಜಾರಿ

(ನ್ಯೂಸ್ ಕಡಬ) newskadaba.com ಸುಬ್ರಮಣ್ಯ, ಜ. 23. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ 11ನೇ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಮುಜರಾಯಿ ದೇವಸ್ಥಾನಗಳಲ್ಲಿ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ತಿಂಗಳಿಗೆ ಎರಡು ಸಲ ಸಪ್ತಪದಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಫೆಬ್ರವರಿ ತಿಂಗಳ 17 ಮತ್ತು 25ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಆ ಬಳಿಕ ಆಯಾ ತಿಂಗಳ ಮುಹೂರ್ತ ನೋಡಿಕೊಂಡು ಆಯಾ ಜಿಲ್ಲೆಗಳ ಜನರ ಸಂಪ್ರದಾಯ,

ಸುಬ್ರಹ್ಮಣ್ಯ: ಮುಜರಾಯಿ ದೇವಾಲಯಗಳಲ್ಲಿ ಪ್ರತೀ ತಿಂಗಳು ಎರಡು ಬಾರಿ ಸಪ್ತಪದಿ ಕಾರ್ಯಕ್ರಮ ➤ ಕೋಟ ಶ್ರೀ ನಿವಾಸ್ ಪೂಜಾರಿ Read More »

ಕರಾವಳಿ, ಕರ್ನಾಟಕ

ಉಳ್ಳಾಲ: ಮಹಿಳೆಗೆ ಅತ್ಯಾಚಾರ ಹಾಗೂ ಮಕ್ಕಳಿಗೆ ಕಿರುಕುಳ ಪ್ರಕರಣ ➤ ಎಸ್ಡಿಪಿಐ ಮುಖಂಡನ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 23. ಮತಾಂತರಗೊಂಡ ಮಹಿಳೆಗೆ ಸಹಾಯದ ನೆಪವಿಟ್ಟು ಅತ್ಯಾಚಾರವೆಸಗಿ ಆಕೆಯ ಇಬ್ಬರು ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಉಳ್ಳಾಲದ ಎಸ್ಡಿಪಿಐ ಮುಖಂಡನನ್ನು ಉಳ್ಳಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.   ಬಂಧಿತ ಆರೋಪಿಯನ್ನು SDPI ಮುಖಂಡ ಸಿದ್ದೀಕ್ ಎಂದು ಗುರುತಿಸಲಾಗಿದೆ. ಈ ಸಂತ್ರಸ್ತ ಮಹಿಳೆಯು ಗಂಡನಿಂದ ದೂರವಾಗಿ ಉಳ್ಳಾಲದ ಒಂಭತ್ತುಕೆರೆ ಎಂಬಲ್ಲಿ ತನ್ನ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳೊಂದಿಗೆ ವಾಸಿಸುತ್ತಿದ್ದು, ಈಕೆಗೆ ಸಹಾಯ ಮಾಡೋ ನೆಪದಲ್ಲಿ ಸ್ನೇಹ ಬೆಳೆಸಿಕೊಂಡ ಸಿದ್ದೀಕ್ ಆಕೆಯನ್ನು

ಉಳ್ಳಾಲ: ಮಹಿಳೆಗೆ ಅತ್ಯಾಚಾರ ಹಾಗೂ ಮಕ್ಕಳಿಗೆ ಕಿರುಕುಳ ಪ್ರಕರಣ ➤ ಎಸ್ಡಿಪಿಐ ಮುಖಂಡನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top