ಕರಾವಳಿ

ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ದಾಳಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 04. ಇಲ್ಲಿನ ಪೆರ್ನೆ ಸಮೀಪ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಜಾಗಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮ ಮರಳುಗಾರಿಕೆಯನ್ನು ಪತ್ತೆ ಹಚ್ಚಲಾಗಿದೆ. ಪೆರ್ನೆ ಗ್ರಾಮದ ಕಳೆಂಜ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮ ಮರಳು ಸಂಗ್ರಹದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹದೇಶ್ವರ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸುವ ಅಕ್ರಮವಾಗಿ ದೋಣಿಯ ಮೂಲಕ […]

ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಮುಂದುವರಿದ ಹೂಕಳ್ಳರ ಹಾವಳಿ ➤ ಸಿಸಿಟಿವಿ ಸೆರೆಯಾದ ಕಳ್ಳತನ ದೃಶ್ಯ ವೈರಲ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 04.‌ತಾಲೂಕಿನ ವಿವಿಧ ಫ್ಲವರ್ ಸ್ಟಾಲ್ ಗಳಿಂದ ನಿರಂತರವಾಗಿ ಮಲ್ಲಿಗೆ ಹೂವಿನ ಕಳ್ಳತನ ಪ್ರಕರಣ ಮುಂದುವರಿಯುತ್ತಿದ್ದು, ಮಂಗಳವಾರದಂದು ರಾತ್ರಿ ಮೆಲ್ಕಾರಿನ ಹೂವಿನ ಅಂಗಡಿಯೊಂದರಲ್ಲಿ ಕಳ್ಳೆತನಗೈದ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಬ್ರಹ್ಮರಕೂಟ್ಲು ಟೋಲ್ ಬೂತ್ ಬಳಿ ಹಾಗೂ ಬಿಸಿರೋಡ್ ಪೇಟೆಯ ಮೂರು ಅಂಗಡಿಗಳಿಂದ ಕಳ್ಳತನ ನಡೆದಿತ್ತು. ಈ ಕುರಿತು ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರಾದರೂ ಕಳ್ಳರ ಕೃತ್ಯ ಮುಂದುವರಿದಿದೆ. ಇದೀಗ ಸಿಸಿಟಿವಿ ಆಧಾರದ ಮೇಲೆ ಓರ್ವನನ್ನು ವಶಕ್ಕೆ ಪಟೆದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ

ಬಂಟ್ವಾಳ: ಮುಂದುವರಿದ ಹೂಕಳ್ಳರ ಹಾವಳಿ ➤ ಸಿಸಿಟಿವಿ ಸೆರೆಯಾದ ಕಳ್ಳತನ ದೃಶ್ಯ ವೈರಲ್ Read More »

ಕರಾವಳಿ, ಕರ್ನಾಟಕ

ಉಳ್ಳಾಲ ಸಮುದ್ರತೀರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಶಂಕೆ…!

(ನ್ಯೂಸ್ ಕಡಬ) newskadaba.com ಉಳ್ಳಾಲ‌, ಫೆ. 04. ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಇಲ್ಲಿನ ಕೋಟೆಪುರ ಸಮುದ್ರತೀರದಲ್ಲಿ ಪತ್ತೆಯಾಗಿದ್ದು, ಇದೊಂದು ಸಂಶಯಾಸ್ಪದವಾದ ಸಾವಾಗಿದೆ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತರನ್ನು ಉಳ್ಳಾಲದ ಕೋಟೆಪುರದ ಮೀನುಗಾರಿಕಾ ಬೋಟನ್ನು ತಯಾರಿಸುವ ವೃತ್ತಿ ನಡೆಸುತ್ತಿದ್ದ ಕಿನ್ಯಾ ನಿವಾಸಿ ನಿತ್ಯಾನಂದ ಭಂಡಾರಿ (40) ಎಂದು ಗುರುತಿಸಲಾಗಿದೆ. ಕೋಟೆಪುರ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರ ಪರಿಶೀಲನೆಯ ವೇಳೆ ಮೃತದೇಹದ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು, ಇದೊಂದು ಸಂಶಯಾಸ್ಪದ ಸಾವಾಗಿದೆ ಎಂದು ಪ್ರಕರಣ

ಉಳ್ಳಾಲ ಸಮುದ್ರತೀರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಶಂಕೆ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ವೃದ್ದೆ ಅಸಹಜ ಮೃತ್ಯು ಪ್ರಕರಣಕ್ಕೆ ಹೊಸ ಟ್ವಿಸ್ಟ್..! ➤ ಪೊಲೀಸ್ ತನಿಖೆಯ ವೇಳೆ ಬಯಲಾಯಿತು ಕೊಲೆ ರಹಸ್ಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 04. ವೃದ್ದೆಯೋರ್ವರು ಅಸಹಜವಾಗಿ ಮೃತಪಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಅಮ್ಮುಂಜೆ ಎಂಬಲ್ಲಿ ವರದಿಯಾಗಿತ್ತು. ಆದರೆ ಇದೀಗ ಈ ಪ್ರಕರಣದ ಕುರಿತಂತೆ ಅಸಹಜ ಸಾವಲ್ಲ ಕೊಲೆ ಎಂಬುವುದು ಸಾಬೀತಾಗಿದೆ. ಮೃತ ಮಹಿಳೆಯನ್ನು ಬೆನೆಡಿಕ್ಟ ಕಾರ್ಲೊ(72) ಎಂದು ಗುರುತಿಸಲಾಗಿದೆ. ಇವರು ಜ. 26ರಂದು ಅಸಹಜವಾಗಿ ಮೃತಪಟ್ಟಿದ್ದು, ಆದರೆ ಈ ಕುರಿತು ಫೆ.2ರಂದು ಅವರ ಪುತ್ರ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ತಾಯಿಯ ಸಾವಿನ ಬಗ್ಗೆ ಅನುಮಾನವಿದೆ ಎಂಬ ದೂರಿನ ಬಗ್ಗೆ ಹಲವರಲ್ಲಿ

ಬಂಟ್ವಾಳ: ವೃದ್ದೆ ಅಸಹಜ ಮೃತ್ಯು ಪ್ರಕರಣಕ್ಕೆ ಹೊಸ ಟ್ವಿಸ್ಟ್..! ➤ ಪೊಲೀಸ್ ತನಿಖೆಯ ವೇಳೆ ಬಯಲಾಯಿತು ಕೊಲೆ ರಹಸ್ಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಲ್ಲಡ್ಕ: ಗ್ಯಾಸ್ ಟ್ಯಾಂಕರ್ – ಕಂಟೈನರ್ ನಡುವೆ ಢಿಕ್ಕಿ ➤ ರಸ್ತೆ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.03. ಗ್ಯಾಸ್ ಟ್ಯಾಂಕರ್ ಹಾಗೂ ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಬುಧವಾರ ರಾತ್ರಿ ನಡೆದಿದೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕಂಟೈನರ್ ಲಾರಿ ನಡುವೆ ಕಲ್ಲಡ್ಕ ಎಂಬಲ್ಲಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ಲಾರಿಗಳ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ

ಕಲ್ಲಡ್ಕ: ಗ್ಯಾಸ್ ಟ್ಯಾಂಕರ್ – ಕಂಟೈನರ್ ನಡುವೆ ಢಿಕ್ಕಿ ➤ ರಸ್ತೆ ಸಂಚಾರ ಅಸ್ತವ್ಯಸ್ತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಚಿರತೆ ಹಿಡಿಯುವ ‘ಆಪರೇಷನ್ ಚೀತಾ’ ಕಾರ್ಯಾಚರಣೆ ಹೇಗಿತ್ತು ಗೊತ್ತೇ..⁉️ ➤ ಅರಿವಳಿಕೆ ನೀಡುವ ವೇಳೆ ಚಿರತೆ ಎಸ್ಕೇಪ್ ಆಗಿದ್ದಾದರೂ ಹೇಗೆ..⁉️

ಕಡಬ: ಚಿರತೆ ಹಿಡಿಯುವ ‘ಆಪರೇಷನ್ ಚೀತಾ’ ಕಾರ್ಯಾಚರಣೆ ಹೇಗಿತ್ತು ಗೊತ್ತೇ..⁉️ ➤ ಅರಿವಳಿಕೆ ನೀಡುವ ವೇಳೆ ಚಿರತೆ ಎಸ್ಕೇಪ್ ಆಗಿದ್ದಾದರೂ ಹೇಗೆ..⁉️ Read More »

ಕರಾವಳಿ

ಗುಂಡ್ಯ: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ➤ ಮೃತದೇಹದ ಅಸ್ಥಿಪಂಜರ ಆಸ್ಪತ್ರೆಗೆ ರವಾನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.03. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯ ಎಂಬಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಗುಂಡ್ಯ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೃತ ಶರೀರದ ಅಸ್ಥಿಪಂಜರ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೊಲೀಸರು ನೆಲ್ಯಾಡಿಯ ಎಸ್ಡಿಪಿಐ ಕಾರ್ಯಕರ್ತರ ನೆರವಿನೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೊ ಎಂಬ

ಗುಂಡ್ಯ: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ➤ ಮೃತದೇಹದ ಅಸ್ಥಿಪಂಜರ ಆಸ್ಪತ್ರೆಗೆ ರವಾನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಶಾಂತಿಮೊಗರು, ಫೆ. 03. ಮೀನು ಹಿಡಿಯಲೆಂದು ತೆರಳಿದ್ದ ವೇಳೆ ನದಿಯಲ್ಲಿ ನಾಪತ್ತೆಯಾಗಿದ್ದ ಕಾಂತಾರ ಎಂಬವರ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕದಳದ ನಿರಂತರ ಪ್ರಯತ್ನದ ಬಳಿಕ ಮುಳುಗು ತಜ್ಞರಾದ ಹಮೀದ್ ಗೂಡಿನ ಬಳಿ, ಆರಿಫ್ ಗೂಡಿನಬಳಿ, ಮಹಮ್ಮದ್ ಗೂಡಿನಬಳಿ ಕ್ಷಣಾರ್ಧದಲ್ಲಿ ಮೃತದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹದ ಕಾಲಿನ ಭಾಗದಲ್ಲಿ ಮೀನು ಹಿಡಿಯುವ ಬಲೆಯ ಅಚ್ಚು ಮೂಡಿದ್ದು, ಈಜುವಾಗ ಕಾಲಿಗೆ ಅಡ್ಡಲಾಗಿ ಬಲೆ ಸಿಕ್ಕಿದ್ದರಿಂದ ಈ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.  

ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ‘ಆಪರೇಷನ್ ಚೀತಾ’ ಕಾರ್ಯಾಚರಣೆ ವಿಫಲ ➤ ಕಾರ್ಯಾಚರಣೆ ವೇಳೆ ಕಾಡಿನತ್ತ ಓಡಿ ತಪ್ಪಿಸಿಕೊಂಡ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯ ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆಯು ಕಾರ್ಯಾಚರಣೆ ವೇಳೆ ಓಡಿ ತಪ್ಪಿಸಿಕೊಂಡಿದೆ. ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದ್ದು, ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿಯು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದ್ದರಿಂದ ಚಿರತೆಯು ನಾಯಿಯನ್ನು ಹಿಂಬಾಲಿಸಿ ಶೌಚಾಲಯದ ಒಳಗೆ ಬಂದಿತ್ತು. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು ಹಾಕಿದ್ದು, ನಾಯಿ ಮತ್ತು ಚಿರತೆ ಎರಡೂ

ಕಡಬ: ‘ಆಪರೇಷನ್ ಚೀತಾ’ ಕಾರ್ಯಾಚರಣೆ ವಿಫಲ ➤ ಕಾರ್ಯಾಚರಣೆ ವೇಳೆ ಕಾಡಿನತ್ತ ಓಡಿ ತಪ್ಪಿಸಿಕೊಂಡ ಚಿರತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಫೆ. 05ರಂದು ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಶ್ರೀ ಭಾರತೀ ಸಮೂಹ ಸಂಸ್ಥೆಗಳು ಮಂಗಳೂರು, ಮಂಗಳೂರು ಹವ್ಯಕ ಸಭಾ (ರಿ.) ಚೂಂತಾರು ಸರೋಜಿನಿ ಪ್ರತಿಷ್ಠಾನ  (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ರಕ್ತದ ಬ್ಯಾಂಕ್ ತೇಜಸ್ವಿನಿ ಆಸ್ಪತ್ರೆ  ಕದ್ರಿ ಮಂಗಳೂರು  ಇದರ ಸಹಕಾರದೊಂದಿಗೆ ಫೆ. 05 ಶುಕ್ರವಾರದಂದು ಶ್ರೀ ಭಾರತೀ ಕಾಲೇಜು, ನಂತೂರು ಮಂಗಳೂರು ಇಲ್ಲಿ  ಬೆಳಗ್ಗೆ 9.30 ರಿಂದ 12.30 ರವರೆಗೆ ರಕ್ತದಾನ ಶಿಬಿರ ನಡೆಯಲಿರುವುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಕಾರ್ಯಕ್ರಮ

ಮಂಗಳೂರು: ಫೆ. 05ರಂದು ರಕ್ತದಾನ ಶಿಬಿರ Read More »

ಕರಾವಳಿ, ಕರ್ನಾಟಕ
Scroll to Top