ಕರಾವಳಿ

ಕಲ್ಲಡ್ಕ: ಬೆಳಗಿನ ಘಟನೆ ಮಾಸುವ ಮುನ್ನವೇ ಕಾರು – ಡಿಯೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.07. ಕಾರು ಹಾಗೂ ಹೋಂಡಾ ಡಿಯೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಡಿಯೋ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಕಲ್ಲಡ್ಕ ಸಮೀಪದ ಪೂರ್ಲಿಪಾಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಸವಾರನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಅಪಘಾತದ ತೀವ್ರತೆಗೆ ಡಿಯೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ರೆಟಾ ಕಾರಿನ ಒಂದು ಪಾರ್ಶ್ವ ಹಾನಿಯಾಗಿದೆ. ಇಂದು ಬೆಳಗ್ಗೆಯಷ್ಟೇ […]

ಕಲ್ಲಡ್ಕ: ಬೆಳಗಿನ ಘಟನೆ ಮಾಸುವ ಮುನ್ನವೇ ಕಾರು – ಡಿಯೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದ.ಕ ಜಿಲ್ಲಾ ಕಮಾಂಡೆಂಟ್ ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 07. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು  ಇವರ ಹೆಸರನ್ನು ಮಾನ್ಯ ಆರಕ್ಷಕ ಮಹಾನಿರ್ದೇಶಕರು ಗೃಹರಕ್ಷಕ ದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು, ಪೌರರಕ್ಷಣೆ, ಬೆಂಗಳೂರು ರವರು ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಶಿಫಾರಸ್ಸು ಮಾಡಿದ್ದು, ಸದರಿಯವರಿಗೆ 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿರುತ್ತದೆ. ಶ್ರೀಯುತರು ದಿನಾಂಕ: 06-01-2015 ರಲ್ಲಿ ಇಲಾಖೆಗೆ ಸಮಾದೇಷ್ಟರಾಗಿ ಸೇರ್ಪಡೆಗೊಂಡು 2020 ರಲ್ಲಿ ಎರಡನೇ ಅವಧಿಯಾಗಿ ಅವರನ್ನು ಸಮಾದೇಷ್ಟರನ್ನಾಗಿ ನೇಮಿಸಲಾಗಿರುತ್ತದೆ.  ಕಳೆದ 6 ತಿಂಗಳಿನಿಂದ

ದ.ಕ ಜಿಲ್ಲಾ ಕಮಾಂಡೆಂಟ್ ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ Read More »

ಕರಾವಳಿ, ಕರ್ನಾಟಕ

ಕಡಬ: ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್ ಕೇಶವ ಗೌಡ ನಿಧನ

(ನ್ಯೂಸ್ ಕಡಬ) newskadaba.com ಕಡಬ, 07. ಬಿಳಿನೆಲೆ ಗ್ರಾಮದ ಪುತ್ತಿಲ ನಿವಾಸಿ ವಿಜಯ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಕೇಶವ ಗೌಡ(69) ಅವರು ತನ್ನ ಸ್ವಗೃಹದಲ್ಲಿ ನಿಧನರಾದರು. ವಿಜಯಾ ಬ್ಯಾಂಕ್ ನ ಹಲವಾರು ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಶಾರದಾ, ಪುತ್ರ ರಕ್ಷಿತ್ ಹಾಗೂ ಪುತ್ರಿಯರಾದ ಶೃತಿ, ಸ್ವಾತಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.  

ಕಡಬ: ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್ ಕೇಶವ ಗೌಡ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗಂಡಿಬಾಗಿಲು ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಗಂಡಿಬಾಗಿಲು, ಫೆ. 07. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖರ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇದರ ವತಿಯಿಂದ ಪೋಷಣ್ ಕಾರ್ಯಕ್ರಮವು ಶುಕ್ರವಾರದಂದು ಗಂಡಿಬಾಗಿಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾ.ಪಂ ಸದಸ್ಯ ನಜೀರ್ ಪೂರಿಂಗ, ಬಾಲ ವಿಕಾಸ ಸಮಿತಿ ಸದಸ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಗಂಡಿಬಾಗಿಲು ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಗಂಡಿಬಾಗಿಲು ಶಾಲಾ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ➤ ಶಾಲೆ ಎಲ್ಲಾ ಮತ, ಧರ್ಮದವರ ದೇಗುಲ- ಸರ್ವೋತ್ತಮ ಗೌಡ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 07. ದೇವಸ್ಥಾನ ಹಿಂದೂ ಭಾಂಧವರಿಗೆ, ಮಸೀದಿ ಮುಸ್ಲಿಂ ಸಮುದಾಯದವರಿಗೆ, ಚರ್ಚ್ ಕ್ರೈಸ್ತ ಧರ್ಮಿಯರಿಗೆ ಮಾತ್ರ ಸೀಮಿತವಾಗಿರುತ್ತದೆ, ಆದರೆ ಶಾಲೆ, ವಿದ್ಯಾ ಸಂಸ್ಥೆಗಳು ಎಲ್ಲಾ ಜಾತಿ, ಮತ, ಧರ್ಮದವರಿಗೂ ದೇಗುಲವಾಗಿರುತ್ತದೆ, ಈ ಹಿನ್ನೆಲೆಯಲ್ಲಿ ಇದರ ಮೂಲ ಸೌಕರ್ಯಗಳಿಗೆ ಕೊರತೆ ಆಗದಂತೆ ಅನುದಾನ ಹಂಚಿಕೆ ಮಾಡುವುದು ಜನ ಪ್ರತಿನಿಧಿಯ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಹೇಳಿದರು. ಅವರು ಫೆ. 5ರಂದು ಗಂಡಿಬಾಗಿಲು ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3.50

ಗಂಡಿಬಾಗಿಲು ಶಾಲಾ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ➤ ಶಾಲೆ ಎಲ್ಲಾ ಮತ, ಧರ್ಮದವರ ದೇಗುಲ- ಸರ್ವೋತ್ತಮ ಗೌಡ Read More »

ಕರಾವಳಿ, ಕರ್ನಾಟಕ

ಕಡಬ: ವಿಕಲಚೇತನ ವ್ಯಕ್ತಿಗೆ ವ್ಹೀಲ್ ಚಯರ್ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಫೆ. 07. ಕೊಯಿಲ ಗ್ರಾಮದ ಸನ್ಯಾಸಿಮೂಲೆ ನಿವಾಸಿ ವಿಕಚೇತನ ವ್ಯಕ್ತಿ ಇಸ್ಮಾಯಿಲ್ ಎಂಬವರಿಗೆ ಬೆಂಗಳೂರಿನ ಉದ್ಯಮಿಯೋರ್ವರು ನೀಡಿದ ವ್ಹೀಲ್ ಚಯರ್ ಒಂದನ್ನು ಹಸ್ತಾಂತರಿಸಲಾಯಿತು. ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ನಝೀರ್ ಪೂರಿಂಗ ಅವರ ಮನವಿಯಂತೆ ಉದ್ಯಮಿ, ಕಾಂಗ್ರೆಸ್ ಮುಖಂಡ ಬೆಂಗಳೂರಿನ ಎನ್.ಅಬ್ದುಲ್ ರಝಾಕ್ ಎಂಬವರು ಈ ಚಯರ್ ನ್ನು ನೀಡಿದ್ದಾರೆ. ಹಸ್ತಾಂತರಿಸುವ ಸಂದರ್ಭದಲ್ಲಿ ಕಡಬ ಕಾಂಗ್ರೆಸ್ ಮುಖಂಡ ಹೆಚ್.ಆದಂ, ಪಕ್ಷದ ಕಾರ್ಯಕರ್ತ ಎಸ್.ಅಬ್ದುಲ್ ರಹಿಮಾನ್ ಹಾಗೂ ಎಸ್.ಪಿ ಖಲಂದರ್ ಉಪಸ್ಥಿತರಿದ್ದರು.

ಕಡಬ: ವಿಕಲಚೇತನ ವ್ಯಕ್ತಿಗೆ ವ್ಹೀಲ್ ಚಯರ್ ಹಸ್ತಾಂತರ Read More »

ಕರಾವಳಿ, ಕರ್ನಾಟಕ

ಬಾಳಿಲ: ತುಳು ನಾಮಫಲಕ ಅನಾವರಣ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.07. ತುಳುನಾಡಿನಲ್ಲಿ ತುಳು ಲಿಪಿಯ ಬೆಳವಣಿಗೆ ಭಾರಿ ಹುಮ್ಮಸ್ಸಿನಿಂದ ನಡೆಯುತ್ತಿದ್ದು, ಬಾಳಿಲದ ದೈವಶಕ್ತಿ ಯುವ ಸಂಘದ ವತಿಯಿಂದ ಸುಳ್ಯ ತಾಲೂಕಿನ ಬಾಳಿಲದಲ್ಲಿ ತುಳು ಲಿಪಿಯ ನಾಮಫಲಕವನ್ನು ಶನಿವಾರದಂದು ಅನಾವರಣಗೊಳಿಸಲಾಯಿತು. ತುಳು ನಾಮ ಫಲಕವನ್ನು ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ (ರಿ.) ಅಯ್ಯನಕಟ್ಟೆ ಇದರ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಗೌಡ ಬೇರಿಕೆ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಳುನಾಡ್ (ರಿ.) ಇದರ ಉಪ

ಬಾಳಿಲ: ತುಳು ನಾಮಫಲಕ ಅನಾವರಣ Read More »

ಕರಾವಳಿ

?ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಸಿಬ್ಬಂದಿಯೋರ್ವರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 07. ಇಲ್ಲಿನ ಹೊಟೇಲ್ ಸಿಬ್ಬಂದಿಯೋರ್ವರ ಮೃತದೇಹವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಪತ್ತೆಯಾಗಿದೆ. ಮೃತರನ್ನು ಪೊಲೀಸ್ ಠಾಣೆಯ ಬಳಿಯ ಹೊಟೇಲೊಂದರ ಸಿಬ್ಬಂದಿ ಸತೀಶ ಎಂದು ಗುರುತಿಸಲಾಗಿದೆ.  

?ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಸಿಬ್ಬಂದಿಯೋರ್ವರ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿದ್ಯಾರ್ಥಿ ನಿಲಯಗಳ ದಾಖಲಾತಿ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 07. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳಾದ ಬೋಳಾರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಾದ ಚಿಲಿಂಬಿ, ದೇರಳಕಟ್ಟೆ, ಗುರುಕಂಬಳ, ಬೆಂಜನಪದವು ಹಾಗೂ ಕಡಬ ತಾಲೂಕಿನಲ್ಲಿ ವಿದ್ಯಾರ್ಥಿ ನಿಲಯಗಳ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಅಲ್ಪಸಂಖ್ಯಾತರ ವಿಸ್ತಾರಣಾಧಿಕಾರಿ ಕಛೇರಿ, ಮೌಲನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ,

ವಿದ್ಯಾರ್ಥಿ ನಿಲಯಗಳ ದಾಖಲಾತಿ – ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಕಲ್ಲಡ್ಕ: ಟ್ಯಾಂಕರ್ – ಸ್ಕೂಟರ್ ನಡುವೆ ಢಿಕ್ಕಿ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.07. ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಡ್ಕ ಪೇಟೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೃತ ಸವಾರನನ್ನು ಕಲ್ಲಡ್ಕದ ಬಿಕೆ ನಗರ ನಿವಾಸಿ ಹಿಮಾದ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಕಲ್ಲಡ್ಕ ಪೇಟೆಯಲ್ಲಿ ಸ್ಕೂಟರ್ ಗೆ ಢೆಕ್ಕಿಯಾಗಿದ್ದು, ಘಟನೆಯಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಯುವಕನ ಮೃತದೇಹ ಛಿದ್ರವಾಗಿತ್ತು. ಸ್ಥಳಕ್ಕೆ ಬಂಟ್ವಾಳ

ಕಲ್ಲಡ್ಕ: ಟ್ಯಾಂಕರ್ – ಸ್ಕೂಟರ್ ನಡುವೆ ಢಿಕ್ಕಿ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top