ಕರಾವಳಿ

? ಮಂಗಳೂರು: ನಗರ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆ ಕಾರ್ಯಾಚರಣೆ ➤ ಸುಮಾರು ಹತ್ತೂವರೆ ಲಕ್ಷ ರೂ. ದಂಡ ಸಂಗ್ರಹ…!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 09. ಸಂಚಾರ ನಿಯಮ ಉಲ್ಲಂಘನೆ ಕುರಿತು ಕಳೆದೆರಡು ದಿನಗಳಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ಒಟ್ಟು 2,207 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದರ ಪೈಕಿ 937 ಹೆಲ್ಮೆಟ್ ರಹಿತ ಸಂಚಾರ, 198 ದೋಷಯುಕ್ತ ನಂಬರ್ ಪ್ಲೇಟ್‌ ಹಾಗೂ 189 ಸೀಟ್‌ ಬೆಲ್ಟ್ ರಹಿತ ವಾಹನ ಚಲಾವಣೆ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ನಿಯಮ‌ ಉಲ್ಲಂಘಿಸಿದವರಿಂದ ಒಟ್ಟು 10.29 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಮಂಗಳೂರು […]

? ಮಂಗಳೂರು: ನಗರ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆ ಕಾರ್ಯಾಚರಣೆ ➤ ಸುಮಾರು ಹತ್ತೂವರೆ ಲಕ್ಷ ರೂ. ದಂಡ ಸಂಗ್ರಹ…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

? ಬಂಟ್ವಾಳ: ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ 9ನೇ ತರಗತಿ ಬಾಲಕ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 09. 9ನೇ ತರಗತಿಯ ವಿದ್ಯಾರ್ಥಿಯೋರ್ವ ಹೆತ್ತವರು ಬೈದರು ಎಂಬ ಸಣ್ಣ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಳ್ತಿಲ ಗ್ರಾಮದ ಚೆರ್ಕಳ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೈದ ಬಾಲಕನನ್ನು ಹರ್ಷಿತ್ (14) ಎಂದು ಗುರುತಿಸಲಾಗಿದೆ. ಈತ ಜಾತ್ರೆಯಿಂದ ಬರುವಾಗ ತಡವಾಗಿದ್ದಲ್ಲದೆ, ತಂಗಿಗೆ ಐಸ್ ಕ್ರೀಂ ಕೂಡಾ ತಂದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಹೆತ್ತವರು ಜೋರು ಮಾಡಿದ್ದರು. ಇದೇ ಕಾರಣವನ್ನು ನೆಪ ಮಾಡಿಕೊಂಡು ಮಾನಸಿಕವಾಗಿ ನೊಂದು ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ

? ಬಂಟ್ವಾಳ: ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ 9ನೇ ತರಗತಿ ಬಾಲಕ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಪುಳಿಕುಕ್ಕು ತಲುಪಿದ ಕಾಡಾನೆ ? ಕಡಬ ಕಡೆಗೆ ಸಂಚರಿಸುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಸುಳ್ಯ ತಾಲೂಕಿನ ಪಂಬೆತ್ತಾಡಿ ಕಾಡಿನಿಂದ ಸೋಮವಾರ ರಾತ್ರಿ ಕಡಬ ಕಡೆಗೆ ಹೊರಟಿದ್ದ ಕಾಡಾನೆಯು ಪಳಿಕುಕ್ಕು ಅರಣ್ಯ ಪ್ರದೇಶಕ್ಕೆ ತಲುಪಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ದಿನ ರಾತ್ರಿ ಆನೆಯು ಪಂಬೆತ್ತಾಡಿಯಿಂದ ಹೊರಟಿದ್ದು, ಪಂಜ ಮೂಲಕ ಪುಳಿಕುಕ್ಕು ಕಡೆಗೆ ಸಂಚರಿಸಿದೆ. ಆನೆಯು ಪ್ರತೀ ವರ್ಷ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ಹಿಂದಿನ ವರ್ಷ ಕೂಡಾ ಪುಳಿಕುಕ್ಕು ಕಾಡಿನಲ್ಲಿ ಒಂದು ದಿನ ವಾಸವಾಗಿತ್ತು. ಹಗಲು ಹೊತ್ತಿನಲ್ಲಿ ಈ ಆನೆಯು ಸಂಚರಿಸುವ

? ಪುಳಿಕುಕ್ಕು ತಲುಪಿದ ಕಾಡಾನೆ ? ಕಡಬ ಕಡೆಗೆ ಸಂಚರಿಸುವ ಸಾಧ್ಯತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

? ವಿಟ್ಲ: ಒಂಟಿ ಕಾಡುಕೋಣ ಪ್ರತ್ಯಕ್ಷ…! ➤ ಸಾರ್ವಜನಿಕರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 09. ಇಲ್ಲಿನ ಕೊಳ್ನಾಡು ಗ್ರಾಮದ ಸುತ್ತಮುತ್ತಲಿನ ಭಾಗದಲ್ಲಿ ಒಂಟಿ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಕೊಳ್ನಾಡು ಗ್ರಾಮದ ಸೆರ್ಕಳ, ಪೀಲ್ಯಡ್ಕ, ನಾರ್ಶ ಪ್ರದೇಶದಲ್ಲಿ ಈ ಕಾಡುಕೋಣ ಪ್ರತ್ಯಕ್ಷವಾಗಿದೆ. ಈ ಭಾಗದ ಸುತ್ತಮುತ್ತಲಿನಲ್ಲಿ ಹಲವು ಮನೆಗಳು ಹಾಗೂ ಶಾಲೆಗಳಿದ್ದು, ಪ್ರತಿನಿತ್ಯ ನೂರಾರು ಜನರು ಇದೇ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದಾರೆ. ಇದೀಗ ಕಾಡುಕೋಣ ಪ್ರತ್ಯಕ್ಷವಾಗಿದ್ದರಿಂದ ಜನರು ಆತಂಕಪಡುವಂತಾಗಿದೆ.

? ವಿಟ್ಲ: ಒಂಟಿ ಕಾಡುಕೋಣ ಪ್ರತ್ಯಕ್ಷ…! ➤ ಸಾರ್ವಜನಿಕರಲ್ಲಿ ಆತಂಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

? ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಪು, ಫೆ. 08. ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಮೀನುಗಾರನೋರ್ವ ಬಲೆಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಕಾಪು ಲೈಟ್ ಹೌಸ್ ಬಳಿ ನಡೆದಿದೆ. ಮೃತಪಟ್ಟವರನ್ನು ಕಾಪು ಗರಡಿ ನಿವಾಸಿ ಕಾಸ್ಮರ್ (65) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸಾಂಪ್ರದಾಯಿಕ ಮೀನುಗಾರಿಕೆಗೆಂದು ತೆರಳಿದ್ದ ಇವರು ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಬಲೆಯೊಳಗೆ‌ ಸಿಲುಕಿ, ಸಮುದ್ರಕ್ಕೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಕಾಸ್ಮಾರ್ ನೀರಿನಲ್ಲಿ‌ ಮುಳುಗುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣ ಅವರ ನೆರವಿಗೆ ಧಾವಿಸಿದ್ದರು.‌ ಆದರೆ

? ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಬೈಕ್ – ಬೊಲೆರೋ ನಡುವೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.08. ಬೈಕ್ ಹಾಗೂ ಬೊಲೆರೋ ನಡುವೆ ನಡೆದ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರದಂದು ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಮಾಣಿ ಸಮೀಪದ ಬರಿಮಾರು ನಿವಾಸಿ ಬಾಲಕೃಷ್ಣ(55) ಎಂದು ಗುರುತಿಸಲಾಗಿದೆ. ವಿಟ್ಲದಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ಬೈಕಿಗೆ ಹಿಂದಿನಿಂದ ಬೊಲೆರೋ ಢಿಕ್ಕಿ ಹೊಡೆದಿದ್ದು, ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಬಾಲಕೃಷ್ಣ ರವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ

ವಿಟ್ಲ: ಬೈಕ್ – ಬೊಲೆರೋ ನಡುವೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

? ಬುಲೆಟ್ ಹಾಗೂ ಕಾರು ನಡುವೆ ಅಪಘಾತ ➤ ಉಳ್ಳಾಲ ಎ.ಎಸ್.ಐ ಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 08. ಬುಲೆಟ್ ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್.ಐ ಅವರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 66 ರ ಕೊಲ್ಯ ದುರ್ಗಾಂಬ ಗ್ಯಾರೇಜ್ ಬಳಿ ನಡೆದಿದೆ. ಗಾಯಗೊಂಡವರನ್ನು ಉಳ್ಳಾ ಠಾಣಾ ಎ.ಎಸ್.ಐ ಶೇಖರ್ ಗಟ್ಟಿ ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಕಡೆಯಿಂದ ತನ್ನ ಮಕ್ಕಳ ಜೊತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕೇರಳ ನೋಂದಣಿಯ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ

? ಬುಲೆಟ್ ಹಾಗೂ ಕಾರು ನಡುವೆ ಅಪಘಾತ ➤ ಉಳ್ಳಾಲ ಎ.ಎಸ್.ಐ ಗೆ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗ್ರಾಮದ ಅಭಿವೃದ್ದಿಗೆ ಸಂಘಟಿತ ಪ್ರಯತ್ನ ಅಗತ್ಯ ➤ ಸಚಿವ ಅಂಗಾರ

(ನ್ಯೂಸ್ ಕಡಬ) newskadaba.com ಕೊಂಬಾರು, ಫೆ. 08. ಗ್ರಾಮದ ಅಭಿವದ್ಧಿಗೆ ಸಮಾಜದ ಎಲ್ಲಾ ಸಮುದಾಯದವರು ಸಂಘಟಿತರಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮನೋಭಾವ ಮುಖ್ಯ ಮತ್ತು ಇಂತಹ ಪ್ರಯತ್ನ ಪತ್ರಕರ್ತರ ಗ್ರಾಮವಾಸವ್ಯ ಶಿಬಿರದಲ್ಲಿ ನಡೆದಿರುವುದನ್ನು ನಾನು ಗುರುತಿಸಿದ್ದೇನೆ ಎಂದು‌ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಸಹಯೋಗದೊಂದಿಗೆ, ದ.ಕ ಜಿಲ್ಲಾಡಳಿತ, ದ.ಕ‌ ಜಿ.ಪಂ, ಪೊಲೀಸ್ ಇಲಾಖೆ, ಕಡಬ

ಗ್ರಾಮದ ಅಭಿವೃದ್ದಿಗೆ ಸಂಘಟಿತ ಪ್ರಯತ್ನ ಅಗತ್ಯ ➤ ಸಚಿವ ಅಂಗಾರ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಪಶು ಆಸ್ಪತ್ರೆ ಕಟ್ಟಡಕ್ಕೆ ಸಚಿವ ಎಸ್.ಅಂಗಾರ ಅವರಿಂದ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 08. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಶು ವೈದ್ಯಕೀಯ ವ್ಯವಸ್ಥೆಗಳನ್ನು ಸಮಗ್ರವಾಗಿ ಅಭಿವೃದ್ಧಿಯ ಹಿತದೃಷ್ಠಿಯಿಂದ ಸಂಬಂಧಪಟ್ಟ ಪಶು ಸಂಗೋಪನಾ ಸಚಿವರಲ್ಲಿ ಚರ್ಚೆ ನಡೆಸಲಾಗಿದೆ ಎಂದು ಒಳನಾಡು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಹೇಳಿದರು.   ದ.ಕ ಜಿ.ಪಂ. ಮಂಗಳೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಇದರ ಆರ್‌.ಐಡಿಎಫ್- 25 ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಭಾನುವಾರ

ಸುಬ್ರಹ್ಮಣ್ಯ: ಪಶು ಆಸ್ಪತ್ರೆ ಕಟ್ಟಡಕ್ಕೆ ಸಚಿವ ಎಸ್.ಅಂಗಾರ ಅವರಿಂದ ಶಂಕುಸ್ಥಾಪನೆ Read More »

ಕರಾವಳಿ, ಕರ್ನಾಟಕ

ಸುಳ್ಯ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸಜ್ಜನೋತ್ಸವ ಹಾಗೂ ನೂತನ ಸಭಾಭವನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 08. ತಾಲ್ಲೂಕಿನ ಸಂಪಾಜೆ ಗ್ರಾಮದಲ್ಲಿ ಹಲವಾರು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಾನವ ಸಂಪನ್ಮೂಲದ ರಾಜ್ಯ ಉಪಾಧ್ಯಕ್ಷ ರಾದ ಡಾ. ಉಮ್ಮರ್ ಬೀಜದಕಟ್ಟೆಯವರ ಸಜ್ಜನ ಪ್ರತಿಷ್ಠಾನದ ವತಿಯಿಂದ ಗೂನಡ್ಕ ಬೀಜದಕಟ್ಟೆ ಎಂಬಲ್ಲಿ ಸಭಾಭವನ ಉದ್ಘಾಟನೆ ಮತ್ತು ಸಜ್ಜನೋತ್ಸವವು ಫೆ.6ರಂದು ನಡೆಯಿತು. ಮರ್ಹೂಂ ಸೈದು ಹಾಜಿ ಸಭಾಭವನವನ್ನು ಡಾ.ಉಮ್ಮರ್ ರವರ ಮಾತೃಶ್ರೀ ಪಾತುಮ್ಮ ಹಜ್ಜುಮ್ಮ ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಡಾ.ಉಮ್ಮರ್ ವಹಿಸಿದರು. ಮುಖ್ಯ ಆತಿಥಿಗಳಾಗಿ ಆಗಮಿಸಿದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ

ಸುಳ್ಯ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸಜ್ಜನೋತ್ಸವ ಹಾಗೂ ನೂತನ ಸಭಾಭವನ ಉದ್ಘಾಟನೆ Read More »

ಕರಾವಳಿ, ಕರ್ನಾಟಕ
Scroll to Top