ಕರಾವಳಿ

ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ➤ ಬ್ಲಾಕ್ ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಭಿಲಾಷ್ ಪಿ.ಕೆ.

(ನ್ಯೂಸ್ ಕಡಬ) newskadaba.com ಕಡಬ, ಮಾ.21. ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಜನರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ ರಾಜಕೀಯ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಈ ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಹಿರಿಯರು ಯುವ ಸಮೂಹಕ್ಕೆ ತಿಳಿ ಹೇಳಬೇಕಾದ ಅವಶ್ಯಕತೆಯಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯಪಟ್ಟರು. ಅವರು ಭಾನುವಾರದಂದು ಕಡಬದ ಭಾಗೀರಥಿ ಟವರ್‍ಸ್‌ನ ವಠಾರದಲ್ಲಿ ಜರಗಿದ ಕಡಬ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ಲಾಕ್ ಯುವಕ ಕಾಂಗ್ರೆಸ್‌ನ ಅಧ್ಯಕ್ಷರು ಹಾಗೂ […]

ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ➤ ಬ್ಲಾಕ್ ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಭಿಲಾಷ್ ಪಿ.ಕೆ. Read More »

ಕರಾವಳಿ

ಆಲಂಕಾರು ಶ್ರೀ ಭಾರತೀ ಶಾಲೆಗೆ 2 ಉಚಿತ ಬಸ್‌ಗಳ ಹಸ್ತಾಂತರ ➤ ಕರ್ಣಾಟಕ ಬ್ಯಾಂಕ್ ಮತ್ತು LIC ಪ್ರಾಯೋಜಕತ್ವ

(ನ್ಯೂಸ್ ಕಡಬ) newskadaba.com ಕಡಬ, ಮಾ.21. ಆಲಂಕಾರು ಭಾರತೀ ಶಾಲೆಗೆ ಕರ್ನಾಟಕ ಬ್ಯಾಂಕ್ ಹಾಗೂ ಭಾರತೀಯ ಜೀವ ವಿಮಾ ನಿಗಮವು ಉಚಿತವಾಗಿ ಎರಡು ಬಸ್ ಗಳನ್ನು ಕೊಡುಗೆಯಾಗಿ ನೀಡಿವೆ. ಕರ್ನಾಟಕ ಬ್ಯಾಂಕ್ ಸಿಯಸ್ಆರ್ ನಿಧಿಯಿಂದ ಕೊಡಲ್ಪಟ್ಟ ಬಸ್ಸನ್ನು ಮಂಗಳೂರಿನ ಕೇಂದ್ರ ಕಛೇರಿ ಪರಿಸರದಲ್ಲಿ ಬ್ಯಾಂಕ್ ನ ಆಡಳಿತ ನಿರ್ದೇಶಕ ರಾದ ಶ್ರೀ ಮಹಾಬಲೇಶ್ವರ ಎಂ.ಎಸ್. ಅವರು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಯವರಾದ ಡಾ.ಕೃಷ್ಣ ಭಟ್ ಕೋಂಕೋಡಿ, ಶಾಲೆಯ

ಆಲಂಕಾರು ಶ್ರೀ ಭಾರತೀ ಶಾಲೆಗೆ 2 ಉಚಿತ ಬಸ್‌ಗಳ ಹಸ್ತಾಂತರ ➤ ಕರ್ಣಾಟಕ ಬ್ಯಾಂಕ್ ಮತ್ತು LIC ಪ್ರಾಯೋಜಕತ್ವ Read More »

ಕರಾವಳಿ

ನೈಲಾಡಿ: ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ➤ ಕೋಣೆಯೊಳಗೆ ಬಂಧಿ

(ನ್ಯೂಸ್ ಕಡಬ) newskadaba.com ಉಡುಪಿ, ಮಾ.21. ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಭಾನುವಾರದಂದು ನಡೆದಿದೆ. ಬ್ರಹ್ಮಾವರದ ಬಿಲ್ಲಾಡಿ ಗ್ರಾಮದ ನೈಲಾಡಿ ನಿವಾಸಿ ಕೃಷಿಕ ಅಗ್ನೇಶ್ ಶೆಟ್ಟಿಯವರ ಮನೆಯ ಸಮೀಪ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ವೇಳೆಗೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಮನೆಯ ಕೋಣೆಯೊಳಗೆ ಸೇರಿಕೊಂಡಿದೆ. ಸದ್ದು ಕೇಳಿದ ಎಚ್ಚರಗೊಂಡ ಮನೆಯವರು ಹೊರಗಿನಿಂದ ಕೋಣೆಯ ಬಾಗಿಲು ಹಾಕಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳ ತಂಡ ಚಿರತೆಯನ್ನು

ನೈಲಾಡಿ: ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ➤ ಕೋಣೆಯೊಳಗೆ ಬಂಧಿ Read More »

ಕರಾವಳಿ

ಬಂಟ್ವಾಳ: ಜ್ಯೋತಿಷಿಗೆ ಚೂರಿಯಿಂದ ಇರಿದು ದುಷ್ಕರ್ಮಿಗಳು ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 20. ಜ್ಯೋತಿಷಿಯೋರ್ವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಿ.ಸಿ ರೋಡಿನಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಪಂಡಿತ್ ಲಕ್ಷ್ಮೀಕಾಂತ್ ಭಟ್ ಎಂದು ಗುರುತಿಸಲಾಗಿದೆ. ಜ್ಯೋತಿಷಿಯ ಬಳಿ ಬಂದ ಇಬ್ಬರು ವ್ಯಕ್ತಿಗಳು ಯಾವುದೋ ದ್ವೇಷದಿಂದಾಗಿ ಚೂರಿಯಿಂದ ಇರಿದು ಬಾಗಿಲು ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಮೂರ್ಛೆ ಹೋಗಿದ್ದ ಪಂಡಿತ್ ಅವರು ಸ್ವಲ್ಪ ಸಮಯದ ನಂತರ ಎಚ್ಚರಗೊಂಡು, ಬಳಿಕ ಅವರೇ ಎದ್ದು ಕೋಣೆಯಿಂದ ಹೊರಬಂದಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪಂಡಿತ್ ಅವರನ್ನು ಕಂಡ

ಬಂಟ್ವಾಳ: ಜ್ಯೋತಿಷಿಗೆ ಚೂರಿಯಿಂದ ಇರಿದು ದುಷ್ಕರ್ಮಿಗಳು ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಅಯೋಗದ ಜಿಲ್ಲಾಧ್ಯಕ್ಷರಾಗಿ ರಿಯಾಝ್ ಕಲ್ಲುಗುಂಡಿ ನೇಮಕ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 20. ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಆಯೋಗದ ಜಿಲ್ಲಾಧ್ಯಕ್ಷರಾಗಿ ಸಂಪಾಜೆ ಗ್ರಾಮದ ಕಲ್ಲುಂಗುಂಡಿಯ ರಿಯಾಝ್ ರವರನ್ನು ಮಾನವ ಹಕ್ಕುಗಳ ಅಯೋಗದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಪೆರಿಗೇರಿಯವರ ಶಿಫಾರಸ್ಸು ಮೇರೆಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ರಾಷ್ಟ್ರೀಯ ನಾಯಕರಾದ ಡಾ.ಅವಿನಾಶ್ ಸಕುಂದೆರವರು ನೇಮಕ ಗೊಳಿಸಿದರು. ಇವರು ಸಂಪಾಜೆ ಗ್ರಾಮದ ಪೇರಡ್ಕ ಮುಹಿಯದ್ದೀನ್ ಜುಮ್ಮಾಮಸೀದಿ ಅಧ್ಯಕ್ಷರಾದ ಎಸ್.ಅಲಿ ಹಾಜಿಯವರ ಸುಪುತ್ರ.  

ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಅಯೋಗದ ಜಿಲ್ಲಾಧ್ಯಕ್ಷರಾಗಿ ರಿಯಾಝ್ ಕಲ್ಲುಗುಂಡಿ ನೇಮಕ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ➤ ಮೂವರು ಗಂಭೀರ | ರಸ್ತೆ ಬದಿಯಲ್ಲಿ ಬಿದ್ದಿದ್ದ ಕಾಲುಗಳು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.20. ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಶನಿವಾರದಂದು ಸಂಭವಿಸಿದೆ. ಹ್ಯುಂಡೈ ಐ20 ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕಿಗೆ ಕಾಂಚನ ಕ್ರಾಸ್ ಬಳಿಯ ಸಣ್ಣಂಪಾಡಿ ಎಂಬಲ್ಲಿ ಢಿಕ್ಕಿ ಹೊಡೆದಿದ್ದು, ಬೈಕಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸವಾರರ ಕಾಲು ತುಂಡು ತುಂಡಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ

ಉಪ್ಪಿನಂಗಡಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ➤ ಮೂವರು ಗಂಭೀರ | ರಸ್ತೆ ಬದಿಯಲ್ಲಿ ಬಿದ್ದಿದ್ದ ಕಾಲುಗಳು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ತಾಜ್ ಸೂಪರ್ ಬಝಾರ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್‌ ಕಾಂಪ್ಲೆಕ್ಸ್ ನಲ್ಲಿ ತಾಜ್ ಸೂಪರ್ ಬಝಾರ್ ಗುರುವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಬಹು| ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು. ದಿನ ಬಳಕೆಯ ವಸ್ತುಗಳನ್ನು ಅತೀ ಕಡಿಮೆ ದರದಲ್ಲಿ ಚಿಲ್ಲರೆ ಹಾಗೂ ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಹಾಜಿ ಕೆ.ಎಸ್. ಅಬ್ದುಲ್ಲಾ ತಿಳಿಸಿದ್ದಾರೆ.  

ಕಡಬ: ತಾಜ್ ಸೂಪರ್ ಬಝಾರ್ ಶುಭಾರಂಭ Read More »

ಕರಾವಳಿ

“ಝೀರೋ ಡ್ರಾಪ್ ಔಟ್” ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ತಾಲೂಕು ಶಿಕ್ಷಣಾಧಿಕಾರಿಯ ಭೇಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 19. ಸಮಾಜದಲ್ಲಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ‘ಉತ್ತಮ ಭವಿಷ್ಯಕ್ಕಾಗಿ ಕಾರ್ಯ ಪ್ರವೃತ್ತರಾಗೋಣ’ ಎಂಬ ಘೋಷಾ ವಾಕ್ಯದೊಂದಿಗೆ “ಝೀರೋ ಡ್ರಾಪ್ ಔಟ್” ಎಂಬ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ, ವಿದ್ಯಾರ್ಥಿಗಳ ಸಮಾಲೋಚನೆ, ಜಾಗೃತಿ ಕಾರ್ಯಕ್ರಮ, ಪೋಷಕರ ಸಭೆ, ಹೆಲ್ಪ್ ಡೆಸ್ಕ್ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ತಾಲೂಕು

“ಝೀರೋ ಡ್ರಾಪ್ ಔಟ್” ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ತಾಲೂಕು ಶಿಕ್ಷಣಾಧಿಕಾರಿಯ ಭೇಟಿ Read More »

ಕರಾವಳಿ, ಕರ್ನಾಟಕ

ಉಳ್ಳಾಲ: ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ ➤ ವಿದ್ಯಾರ್ಥಿಗಳಿಂದ ಮಾನವ ಹಕ್ಕು ಆಯೋಗಕ್ಕೆ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 18. ಶಿಕ್ಷಣದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿ, ಹಿಂದಿರುಗುತ್ತಿದ್ದ ವೇಳೆ ಗಾಂಜಾ ವ್ಯಸನಿಗಳಿಂದ ಹಲ್ಲೆಗೊಳಗಾಗಿ ನಂತರ ಉಳ್ಳಾಲ ಪೊಲೀಸರು ಠಾಣೆಗೆ ವಿದ್ಯಾರ್ಥಿಗಳನ್ನು ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಕುರಿತು ಹಲ್ಲೆಗೊಳಗಾದ ಮೂವರು ವಿದ್ಯಾರ್ಥಿಗಳು ಮಾನವ ಹಕ್ಕು ಆಯೋಗಕ್ಕೆ ದೂರನ್ನು ಸಲ್ಲಿಸಿದರು. ದೂರು ಸ್ವೀಕರಿಸಿದ ಅಧಿಕಾರಿಗಳು ಪ್ರಕರಣವನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಉಳ್ಳಾಲ: ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ ➤ ವಿದ್ಯಾರ್ಥಿಗಳಿಂದ ಮಾನವ ಹಕ್ಕು ಆಯೋಗಕ್ಕೆ ದೂರು Read More »

ಕರಾವಳಿ, ಕರ್ನಾಟಕ

ಅರಂತೋಡು: ಮಾ. 26ರಂದು ಡಾ.ಕೆ.ಎಮ್ ಶಾಹ್ ಮುಸ್ಲಿಯಾರ್ ಅನುಸ್ಮರಣೆ ಹಾಗೂ ಆಡಳಿತ ಮಂಡಳಿ ಕಛೇರಿ ಉದ್ಘಾಟನಾ ಸಮಾರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 18. ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆಗೈದು ನಮ್ಮನ್ನಗಲಿದ ಮರ್ಹೂಂ ಶೈಖುನಾ ಡಾ.ಕೆ.ಎಮ್.ಶಾಹ್ ಮುಸ್ಲಿಯಾರ್ ಅವರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಆಧುನೀಕರಣಗೊಂಡ ಮದರಸ ಅಧ್ಯಾಪಕರ ವಿಶ್ರಾಂತಿ ಕೊಠಡಿ, ಆಡಳಿತ ಕಛೇರಿ ಮತ್ತುಮಸೀದಿಗೆ ಅಳವಡಿಸಿದ ಹವಾನಿಯಂತ್ರಿತ ಉದ್ಘಾಟನೆ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಜಮಾಅತ್ ಗೆ ನೀಡಿದ ಬಾಡಿಗೆ ಕೊಠಡಿಯ ದಾಖಲೆ ಪತ್ರ ಹಸ್ತಾಂತರ ಕಾರ್ಯಕ್ರಮವು ಮಾರ್ಚ್‌ 26 ರಂದು ಅರಂತೋಡಿನಲ್ಲಿ ನಡೆಯಲಿದೆ.

ಅರಂತೋಡು: ಮಾ. 26ರಂದು ಡಾ.ಕೆ.ಎಮ್ ಶಾಹ್ ಮುಸ್ಲಿಯಾರ್ ಅನುಸ್ಮರಣೆ ಹಾಗೂ ಆಡಳಿತ ಮಂಡಳಿ ಕಛೇರಿ ಉದ್ಘಾಟನಾ ಸಮಾರಂಭ Read More »

ಕರಾವಳಿ, ಕರ್ನಾಟಕ
Scroll to Top