ನೈಲಾಡಿ: ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ➤ ಕೋಣೆಯೊಳಗೆ ಬಂಧಿ

(ನ್ಯೂಸ್ ಕಡಬ) newskadaba.com ಉಡುಪಿ, ಮಾ.21. ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಭಾನುವಾರದಂದು ನಡೆದಿದೆ.

ಬ್ರಹ್ಮಾವರದ ಬಿಲ್ಲಾಡಿ ಗ್ರಾಮದ ನೈಲಾಡಿ ನಿವಾಸಿ ಕೃಷಿಕ ಅಗ್ನೇಶ್ ಶೆಟ್ಟಿಯವರ ಮನೆಯ ಸಮೀಪ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ವೇಳೆಗೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಮನೆಯ ಕೋಣೆಯೊಳಗೆ ಸೇರಿಕೊಂಡಿದೆ. ಸದ್ದು ಕೇಳಿದ ಎಚ್ಚರಗೊಂಡ ಮನೆಯವರು ಹೊರಗಿನಿಂದ ಕೋಣೆಯ ಬಾಗಿಲು ಹಾಕಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳ ತಂಡ ಚಿರತೆಯನ್ನು ಸುಲಭವಾಗಿ ಸೆರೆ ಹಿಡಿದಿದೆ.

 

 

Scroll to Top