ಕರಾವಳಿ

? ಕಡಬ ತಾಲೂಕಿನಲ್ಲಿ ಮತ್ತೆ 2 ಜೋಡಿ ಚಿರತೆ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಕಡಬ, ಏ. 01. ತಾಲೂಕಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜೋಡಿ ಚಿರತೆಗಳು ಕಾಣಿಯೂರು – ಚಾರ್ವಾಕ- ಕಡಬ ರಸ್ತೆಯ ದೋಳ್ಪಾಡಿ ಮರ್ಲಾಣಿ ಎಂಬಲ್ಲಿ ಕೊಜಂಬೇಡಿ ಸೇತುವೆಯ ಮೇಲ್ಭಾಗದಲ್ಲಿ 2 ಚಿರತೆಗಳು ರಸ್ತೆ ದಾಟಿ ದೋಳ್ಪಾಡಿ ಕಡೆ ಸಾಗುವುದನ್ನು ಕಡಬ ಕಡೆಯಿಂದ ಬರುತ್ತಿದ್ದ ಪ್ರಯಾಣಿಕರಿಗೆ ಕಂಡುಬಂದಿದೆ. ಇತ್ತೀಚೆಗೆ ಕೆಲವರಿಗೆ ಕಾಡಿನಿಂದ ಚಿರತೆ ಕೂಗುವ ಶಬ್ದ ಕೇಳಿಬಂದಿದೆ ಎನ್ನಲಾಗಿದೆ. ಚಿರತೆ ಪತ್ತೆಯಾಗಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಿಂಗಳ ಹಿಂದೆಯಷ್ಟೇ ಕಡಬ ತಾಲೂಕಿನಲ್ಲಿ […]

? ಕಡಬ ತಾಲೂಕಿನಲ್ಲಿ ಮತ್ತೆ 2 ಜೋಡಿ ಚಿರತೆ ಪ್ರತ್ಯಕ್ಷ Read More »

ಕರಾವಳಿ, ಕರ್ನಾಟಕ

ಕಡಬ: ಮನೆಮಂದಿ ಜಾತ್ರೆಗೆ ತೆರಳಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಏ. 01. ಮನೆಯವರೆಲ್ಲರೂ ಜಾತ್ರೆಗೆ ತೆರಳಿದ್ದ ಸಂದರ್ಭ ಕೊಯಿಲ ಗ್ರಾಮದ ಗಂಡಿಬಾಗಿಲು ಆನೆಗುಂಡಿ ಎಂಬಲ್ಲಿ ಚೆನ್ನಪ್ಪ ಗೌಡ ಎಂಬವರ ಮನೆಗೆ ಬುಧವಾರದಂದು ರಾತ್ರಿ ನುಗ್ಗಿದ ಕಳ್ಳರು ಸುಮಾರು ಏಳೂವರೆ ಪವನ್ ಚಿನ್ನಾಭರಣ ಲೂಟಿಗೈದ ಘಟನೆ ನಡೆದಿದೆ.   ಮನೆಯವರೆಲ್ಲ ಸಂಜೆ 7 ಗಂಟೆಗೆ ಕೊಯಿಲದಲ್ಲಿ ನಡೆಯುತ್ತಿದ್ದ ಜಾತ್ರೆಗೆಂದು ಹೋಗಿದ್ದು, ಮರಳಿ 10 ಗಂಟೆಗೆ ಬರುವುದರ ನಡುವೆ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಮನೆಮಂದಿ ಜಾತ್ರೆಗೆ ತೆರಳಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಜ್ಯುವೆಲ್ಲರಿ ಮಾರ್ಟ್ ಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಹಾಗೂ ನಗದು ಜೊತೆ ಸಿಸಿ ಕ್ಯಾಮರಾ ಹೊತ್ತೊಯ್ದರು

(ನ್ಯೂಸ್ ಕಡಬ) newskadaba.com ಸುಳ್ಯ, ಏ. 01. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಚಿನ್ನದ ಅಂಗಡಿಯ ಬೀಗ ಮುರಿದಿರುವ ವಿಷಯ ತಿಳಿದ ಸ್ಥಳೀಯರು, ಅಂಗಡಿ ಮಾಲಕರು ಹಾಗೂ ಪೋಲೀಸರು ಬಂದು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಜೊತೆಗೆ ಸಿಸಿ ಕ್ಯಾಮರಾವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕಳವಾದ ಸ್ವತ್ತುಗಳ

ಸುಳ್ಯ: ಜ್ಯುವೆಲ್ಲರಿ ಮಾರ್ಟ್ ಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಹಾಗೂ ನಗದು ಜೊತೆ ಸಿಸಿ ಕ್ಯಾಮರಾ ಹೊತ್ತೊಯ್ದರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.01. ಕಡಬದ ವಿದ್ಯಾರ್ಥಿಯೋರ್ವ ಮಂಗಳೂರಿನಲ್ಲಿ ಮೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಕಡಬ ತಾಲೂಕಿನ ಇಚಿಲಂಪಾಡಿ ನಿವಾಸಿ ರಿನು ವರ್ಗೀಸ್(20) ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದ ರಿನು ವರ್ಗೀಸ್, ಬುಧವಾರ ರಾತ್ರಿ ತಾನು ತಂಗಿದ್ದ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ

ಕಡಬದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಭೂಮಿ ಕೇಂದ್ರದಲ್ಲಿ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆಯ ಹಿನ್ನೆಲೆ ➤ ಎಪ್ರಿಲ್ 10 ರ ವರೆಗೆ ಆನ್‌ಲೈನ್‌ನಲ್ಲಿ ಪಹಣಿ ಪಡೆಯುವಂತೆ ಕಡಬ ತಹಶೀಲ್ದಾರ್ ಪ್ರಕಟಣೆ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಎಪ್ರಿಲ್ 01 ರಿಂದ 10 ರ ವರೆಗೆ ಕಡಬ ತಾಲೂಕಿನ ಭೂಮಿ ಕೇಂದ್ರದಲ್ಲಿ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆ ನಡೆಯಲಿರುವ ಕಾರಣ ಪಹಣಿ ವಿತರಣೆ ಇರುವುದಿಲ್ಲ. ಭೂಮಿ ಕೇಂದ್ರದ ಸೇವೆಯಲ್ಲಿ ವ್ಯತ್ಯಯ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ದಿನಗಳಲ್ಲಿ ಆನ್‌ಲೈನ್ ಮೂಲಕ ಪಹಣಿ ಪಡೆದುಕೊಳ್ಳುವಂತೆ ಕಡಬ ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.      

ಭೂಮಿ ಕೇಂದ್ರದಲ್ಲಿ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆಯ ಹಿನ್ನೆಲೆ ➤ ಎಪ್ರಿಲ್ 10 ರ ವರೆಗೆ ಆನ್‌ಲೈನ್‌ನಲ್ಲಿ ಪಹಣಿ ಪಡೆಯುವಂತೆ ಕಡಬ ತಹಶೀಲ್ದಾರ್ ಪ್ರಕಟಣೆ Read More »

ಕರಾವಳಿ

ಕಡಬದಲ್ಲಿ ಮತ್ತೆ ಕೊರೋನಾ ಸದ್ದು ➤ 21 ವರ್ಷದ ಯುವಕನಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಕಳೆದ ಹಲವು ಸಮಯಗಳಿಂದ ಸೈಲೆಂಟ್ ಆಗಿದ್ದ ಕೊರೋನಾ ಸೋಂಕು ಇದೀಗ ಮತ್ತೆ ಕಡಬಕ್ಕೆ ಕಾಲಿಟ್ಟಿದೆ. ಆರೋಗ್ಯ ಇಲಾಖೆಯ ಮಾಹಿತಿಯನುಸಾರ ಕಡಬ ತಾಲೂಕಿನ ಉದನೆಯ 21 ವರ್ಷದ ವ್ಯಕ್ತಿಗೆ ಕೊರೋನಾ ದೃಢಗೊಂಡಿದೆ. ಇನ್ನುಳಿದಂತೆ ಪುತ್ತೂರಿನ ಪತ್ರಕರ್ತರೊಬ್ಬರು ಸೇರಿದಂತೆ ಪುತ್ತೂರು ಮತ್ತು ಕಡಬದಲ್ಲಿ 6 ಮಂದಿಗೆ ಕೊರೋನಾ ದೃಢಗೊಂಡಿದೆ ಎನ್ನಲಾಗಿದೆ. ಪುತ್ತೂರು ತಾಲೂಕಿನ ಬನ್ನೂರಿನ 64 ವರ್ಷದ ಪುರುಷ, ಸರ್ವೆಯ 12 ವರ್ಷದ ಬಾಲಕಿ, ಮುಂಡೂರಿನ 70 ವರ್ಷದ ವೃದ್ಧ, ಬನ್ನೂರಿನ 63

ಕಡಬದಲ್ಲಿ ಮತ್ತೆ ಕೊರೋನಾ ಸದ್ದು ➤ 21 ವರ್ಷದ ಯುವಕನಲ್ಲಿ ಕೊರೋನಾ ದೃಢ Read More »

ಕರಾವಳಿ

ಸುಬ್ರಹ್ಮಣ್ಯ: ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ನವಜೋಡಿಗಳು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 31. ಕರ್ನಾಟಕ ಸರ್ಕಾರದ ಯೋಜನೆಯಂತೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬುಧವಾರದಂದು ನಡೆಯಿತು. ಆದಿಸುಬ್ರಹ್ಮಣ್ಯ ಕಲ್ಯಾಣ ಪಂಟಪದಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ 5 ಜೋಡಿಗಳು ಸಪ್ತಪದಿ ತುಳಿದರು. ವಿಶೇಷವಾಗಿ ಗಣಹವನ ನಡೆಸಲಾಯಿತು. ಬಳಿಕ ಪುರೋಹಿತರ ಮಂತ್ರಘೋಷದೊಂದಿಗೆ ಜೋಡಿಗಳ ಧಾರಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ವತಿಯಿಂದ ತಾಳಿ, ಸೀರೆ, ದೋತಿ, ಸ್ಮರಣಿಕೆ ಹಾಗೂ ಪ್ರಸಾದ ನೀಡಿ ಹರಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ್

ಸುಬ್ರಹ್ಮಣ್ಯ: ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ನವಜೋಡಿಗಳು Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಖಾಸಗಿ ಬಸ್ ➤ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 31. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ಇಲ್ಲಿನ ಎಸ್.ವಿ.ಎಸ್ ಕಾಲೇಜಿನ ಬಳಿ ನಡೆದಿದೆ.   ವಾಮದಪದವು, ಪೂಂಜಾಲಕಟ್ಟೆ, ಮೂರ್ಜೆ ಮಾರ್ಗವಾಗಿ ಬಿಸಿ ರೋಡಿಗೆ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಇದರಲ್ಲಿ ಪರೀಕ್ಷೆಗೆಂದು ತೆರಳುತ್ತಿದ್ದ ವಿದ್ಯಾರ್ಥಿಗಳ ಸಹಿತ 25 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಸುಮಾರು 12 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಇವರುನ್ನು ಬಂಟ್ವಾಳದ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಖಾಸಗಿ ಬಸ್ ➤ ಪ್ರಯಾಣಿಕರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಬಸ್ಸಿನಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ ➤ ಬಸ್ ತಡೆದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಸುರತ್ಕಲ್, ಮಾ. 31. ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿಯೊಂದನ್ನು ಸುರತ್ಕಲ್ ಬಳಿ ಬಸ್ಸು ತಡೆದ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಲವ್‌ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಕಂಡು ಬಂದಲ್ಲಿ ಮತ್ತೆ ನೇರಕಾರ್ಯಾಚರಣೆ ನಡೆಸುತ್ತೇವೆಂದು ಬಜರಂಗದಳ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.  

ಮಂಗಳೂರು: ಬಸ್ಸಿನಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ ➤ ಬಸ್ ತಡೆದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ➤ ಮಾಜಿ ಪ್ರಧಾನಿ ದೇವೆಗೌಡ ಹಾಗೂ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 31. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. “ನಾನು ಮತ್ತು ನನ್ನ ಪತ್ನಿ ಚೆನ್ನಮ್ಮಗೆ ಕೋವಿಡ್ ಪಾಸಿಟಿವ್ ಬಂದಿದ್ದು, ನಮ್ಮ ಕುಟುಂಬದ ಸದಸ್ಯರಿಂದ ಸ್ವಯಂ ಆಗಿ ಪ್ರತ್ಯೇಕವಾಗಿರುತ್ತೇವೆ. ಕಳೆದ ಕೆಲವು ದಿನಗಳಿಂದ ನಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಮನವಿ

ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ➤ ಮಾಜಿ ಪ್ರಧಾನಿ ದೇವೆಗೌಡ ಹಾಗೂ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು Read More »

ಕರಾವಳಿ
Scroll to Top