ಕರಾವಳಿ

ಆಸ್ಪತ್ರೆ, ಮೆಡಿಕಲ್ ಹೊರತುಪಡಿಸಿ ನಾಳೆ ಜಿಲ್ಲಾದ್ಯಂತ ಸಂಪೂರ್ಣ ಬಂದ್ ➤ ಹೊರಬಂದರೆ ಬೀಳುತ್ತೆ ದಂಡ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.07. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ತಿಳಿಸಿದ್ದಾರೆ. ಮೆಡಿಕಲ್ ಸ್ಟೋರ್ ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ತುರ್ತು ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24×7 ಕಾರ್ಯಾಚರಣೆಗಳ ಅಗತ್ಯವಿರುವ ಕೈಗಾರಿಕೆಗಳು/ಕಂಪನಿಗಳು/ಸಂಸ್ಥೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುವ ಸ್ಥಳದಲ್ಲೇ ಕಾರ್ಮಿಕರು ಲಭ್ಯವಿದ್ದಲ್ಲಿ ಮಾತ್ರ […]

ಆಸ್ಪತ್ರೆ, ಮೆಡಿಕಲ್ ಹೊರತುಪಡಿಸಿ ನಾಳೆ ಜಿಲ್ಲಾದ್ಯಂತ ಸಂಪೂರ್ಣ ಬಂದ್ ➤ ಹೊರಬಂದರೆ ಬೀಳುತ್ತೆ ದಂಡ Read More »

ಕರಾವಳಿ

ನಾಳೆಯಿಂದ ಬೆಳಿಗ್ಗೆ 9 ಗಂಟೆಯ ನಂತರ ಪೇಟೆಗೆ ಬಂದವರಿಗೆ ಕಾದಿದೆ ಆಪತ್ತು ➤ ಕೊರೋನಾ ತಡೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿದಿಂದ ಕಠಿಣ ರೂಲ್ಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ನಾಳೆಯಿಂದ (ಮೇ.07) ಜಾರಿಗೆ ಬರುವಂತೆ ಹೊಸ ಕಾನೂನನ್ನು ಹೊರತಂದಿದೆ. ನಾಳೆಯಿಂದ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, 1 0 ಗಂಟೆಯ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕಾಗಿದೆ. ಮೆಡಿಕಲ್ ಗೆ ಹೋಗುವವರು ತಮ್ಮ ಹತ್ತಿರದ ಮೆಡಿಕಲ್ ಗಷ್ಟೇ ಹೋಗಬೇಕಾಗಿದ್ದು, ವಾಹನಗಳಲ್ಲಿ ಬೇರೆ ಕಡೆ ಹೋದರೆ ವಾಹನಗಳನ್ನು ಸೀಜ್ ಮಾಡುವಂತೆ

ನಾಳೆಯಿಂದ ಬೆಳಿಗ್ಗೆ 9 ಗಂಟೆಯ ನಂತರ ಪೇಟೆಗೆ ಬಂದವರಿಗೆ ಕಾದಿದೆ ಆಪತ್ತು ➤ ಕೊರೋನಾ ತಡೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿದಿಂದ ಕಠಿಣ ರೂಲ್ಸ್ Read More »

ಕರಾವಳಿ, ಕರ್ನಾಟಕ

ಕಡಬ: ಅನಗತ್ಯ ತಿರುಗಾಡುವವರಿಗೆ ಪೊಲೀಸರಿಂದ ಬಿಸಿ ➤ 7 ವಾಹನಗಳು ಸೀಝ್

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಿರುವ ಕಡಬ ಪೊಲೀಸರು ಗುರುವಾರದಂದು 7 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿರುವ ಕಡಬ ಪೊಲೀಸರು ಮಾಸ್ಕ್ ಧರಿಸದೆ ಬಂದಿದ್ದ 11 ಮಂದಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ ತಂಡ ತಂಡವಾಗಿ ಪೊಲೀಸರು ಗಸ್ತು ತಿರುಗುತ್ತಿದ್ದು, ಸಂಜೆ ವೇಳೆಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ.      

ಕಡಬ: ಅನಗತ್ಯ ತಿರುಗಾಡುವವರಿಗೆ ಪೊಲೀಸರಿಂದ ಬಿಸಿ ➤ 7 ವಾಹನಗಳು ಸೀಝ್ Read More »

ಕರಾವಳಿ

ಕಡಬ ತಾಲೂಕಿನಲ್ಲಿ ಒಂದೇ ದಿನ 101 ಮಂದಿಗೆ ಕೊರೋನಾ ಪಾಸಿಟಿವ್ ➤ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ 188 ಪ್ರಕರಣ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಗುರುವಾರದಂದು ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ 289 ಮಂದಿಗೆ ಕೊರೋನಾ ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಕಡಬ ತಾಲೂಕಿನಲ್ಲಿ 101 ಪ್ರಕರಣ, ಪುತ್ತೂರು ತಾಲೂಕಿನಲ್ಲಿ 134 ಪ್ರಕರಣ ಹಾಗೂ ಸುಳ್ಯ ತಾಲೂಕಿನಲ್ಲಿ 54 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೊದಲು ಪೇಟೆಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಕೊರೋನಾ ಸೋಂಕು ಇದೀಗ ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ.  

ಕಡಬ ತಾಲೂಕಿನಲ್ಲಿ ಒಂದೇ ದಿನ 101 ಮಂದಿಗೆ ಕೊರೋನಾ ಪಾಸಿಟಿವ್ ➤ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ 188 ಪ್ರಕರಣ ಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಕೊರೋನಾ ಆರ್ಭಟ ➤ ಒಂದೇ ದಿನ 149 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಮಂಗಳವಾರದಂದು ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ 149 ಮಂದಿಗೆ ಕೊರೋನಾ ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ 98 ಪ್ರಕರಣ ಹಾಗೂ ಸುಳ್ಯ ತಾಲೂಕಿನಲ್ಲಿ 51 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೊದಲು ಪೇಟೆಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಕೊರೋನಾ ಸೋಂಕು ಇದೀಗ ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ.    

ಕಡಬ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಕೊರೋನಾ ಆರ್ಭಟ ➤ ಒಂದೇ ದಿನ 149 ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಿದ ಸುಳ್ಯ ಎಸ್ಐ ➤ ನಾಳೆಯಿಂದ ಸುಳ್ಯ ಪೇಟೆಗೆ ವಾಹನ ಪ್ರವೇಶಕ್ಕೆ ನಿರ್ಬಂಧ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.05. ಅನಗತ್ಯ ತಿರುಗಾಡುವವರಿಗೆ ಸುಳ್ಯ ಪೊಲೀಸರು ಬಿಸಿ ಮುಟ್ಟಿಸಿದ್ದು, ನಾಳೆಯಿಂದ ಸುಳ್ಯ ಪೇಟೆಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಸುಳ್ಯ ಠಾಣಾ ಎಸ್ಐ ಸೂಚಿಸಿದ್ದಾರೆ. ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಲು ಸರಕಾರವು ಅವಕಾಶವನ್ನು ಕಲ್ಪಿಸಿದೆಯಾದರೂ ಹೆಚ್ಚಿನವರು ಸುಳ್ಯ ಪೇಟೆಗೆ ಆಗಮಿಸುವ ಮೂಲಕ ಟ್ರಾಫಿಕ್ ಜಾಮ್ ಗೆ ಕಾರಣರಾಗುತ್ತಿದ್ದಾರೆ. ಸುಳ್ಯದ ಜ್ಯೋತಿ ಸರ್ಕಲ್, ಗಾಂಧಿನಗರ ಹಾಗೂ ವಿವೇಕಾನಂದ ಸರ್ಕಲ್ ನಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಲಾಗುವುದು. ಅಗತ್ಯ ವಾಹನಗಳನ್ನಷ್ಟೇ ವಿಚಾರಿಸಿ

ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಿದ ಸುಳ್ಯ ಎಸ್ಐ ➤ ನಾಳೆಯಿಂದ ಸುಳ್ಯ ಪೇಟೆಗೆ ವಾಹನ ಪ್ರವೇಶಕ್ಕೆ ನಿರ್ಬಂಧ Read More »

ಕರಾವಳಿ

ಕಡಬ: ಕೊರೋನಾ ಸೋಂಕಿಗೆ 32 ವರ್ಷದ ವ್ಯಕ್ತಿ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಮೇ.04. ಕೊರೋನಾ ಸೋಂಕಿನಿಂದ ಕಡಬ ತಾಲೂಕಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಗಳವಾರದಂದು ನಡೆದಿದೆ. ತಾಲೂಕಿನ ಕಾಣಿಯೂರು ಸಮೀಪದ ಕಾಯಿಮಣ ನಿವಾಸಿ 32 ವರ್ಷ ಪ್ರಾಯದ ವ್ಯಕ್ತಿಯನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.    

ಕಡಬ: ಕೊರೋನಾ ಸೋಂಕಿಗೆ 32 ವರ್ಷದ ವ್ಯಕ್ತಿ ಬಲಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಜನರ ಮೃತ್ಯು ಪ್ರಕರಣ ಹಿನ್ನೆಲೆ ➤ ರಾಜ್ಯ ಸರಕಾರದ ವಿರುದ್ದ ಪ್ರಕರಣ ದಾಖಲಿಸಲು ಕ್ಯಾಂಪಸ್ ಫ್ರಂಟ್ ಆಗ್ರಹ

(ನ್ಯೂಸ್ ಕಡಬ) Newskadaba.com ಚಾಮರಾಜನಗರ, ಮೇ. 04. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಗಂಟೆಗಳ ಅವಧಿಯಲ್ಲಿ 24 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿ ಘಟನೆಗೆ ಕ್ಯಾಂಪಸ್ ಫ್ರಂಟ್ ಕರ್ನಾಟಕ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ಅಲ್ಲದೇ ಈ ದುರಂತಕ್ಕೆ ಜಿಲ್ಲಾಡಳಿತ ಸೇರಿದಂತೆ ಸರಕಾರವು ನೇರ ಹೊಣೆಯಾಗಿದೆ. ಮತ್ತು ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿರವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆರೋಪಿಸುತ್ತಿದೆ. ಕೊರೋನಾ ಎರಡನೇ ಅಲೆಯಿಂದ ದೇಶದಲ್ಲಿ ದಿನನಿತ್ಯ ಆಗುತ್ತಿರುವ ಸಾವುಗಳಿಂದ ದೇಶವೇ ಭೀತಿಗೊಳಪಟ್ಟಿದೆ. ಈಗಾಗಲೇ ದೇಶದ

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಜನರ ಮೃತ್ಯು ಪ್ರಕರಣ ಹಿನ್ನೆಲೆ ➤ ರಾಜ್ಯ ಸರಕಾರದ ವಿರುದ್ದ ಪ್ರಕರಣ ದಾಖಲಿಸಲು ಕ್ಯಾಂಪಸ್ ಫ್ರಂಟ್ ಆಗ್ರಹ Read More »

ಕರಾವಳಿ

ಗಡಿಯಾರ: ಲಾರಿ – ದ್ವಿಚಕ್ರ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಾಣಿ, ಮೇ.03. ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸಿಮೆಂಟ್ ಸಾಗಾಟದ ಲಾರಿ ಮತ್ತು ಬುಡೋಳಿಯಿಂದ ಗಡಿಯಾರ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಗಡಿಯಾರ ಸಮೀಪದ ಜೋಗಿಬೆಟ್ಟು ಎಂಬಲ್ಲಿ ಢಿಕ್ಕಿಯಾಗಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಬುಡೋಳಿ ನಿವಾಸಿ ಶರೀಫ್(35) ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

ಗಡಿಯಾರ: ಲಾರಿ – ದ್ವಿಚಕ್ರ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮರ್ಧಾಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪಿಕಪ್

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಚಾಲಕನ ನಿಯಂತ್ರಣ ಪಿಕಪ್ ವಾಹನವೊಂದು ರಸ್ತೆಯಲ್ಲೇ ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಸೋಮವಾರದಂದು ನಡೆದಿದೆ. ಕಡಬದಿಂದ ಸುಂಕದಕಟ್ಟೆ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಲ್ಲಾಜೆ ಸಮೀಪದ ತಿರುವಿನಲ್ಲಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಪಿಕಪ್ ವಾಹನದಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.    

ಮರ್ಧಾಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪಿಕಪ್ Read More »

ಕರಾವಳಿ
Scroll to Top