ಕಡಬ: ಕೊರೋನಾ ಸೋಂಕಿಗೆ 32 ವರ್ಷದ ವ್ಯಕ್ತಿ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಮೇ.04. ಕೊರೋನಾ ಸೋಂಕಿನಿಂದ ಕಡಬ ತಾಲೂಕಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಗಳವಾರದಂದು ನಡೆದಿದೆ.

ತಾಲೂಕಿನ ಕಾಣಿಯೂರು ಸಮೀಪದ ಕಾಯಿಮಣ ನಿವಾಸಿ 32 ವರ್ಷ ಪ್ರಾಯದ ವ್ಯಕ್ತಿಯನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

 

 

Scroll to Top