ಕರಾವಳಿ

ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಅಪರ ತಹಶೀಲ್ದಾರರಿಗೆ ಮನವಿ

(ನ್ಯೂಸ್ ಕಡಬ) Newskadaba.com ಪುತ್ತೂರು, ಜೂ. 05. ರಾಜ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ವರ್ಷಾನುವರ್ಷ ಬಹುದೊಡ್ಡ ಸಂಖ್ಯೆಯಲ್ಲಿ ಅರೆವೈದ್ಯಕೀಯ ಪದವಿಯನ್ನು ಪಡೆದು ತೇರ್ಗಡೆಯಾಗುತ್ತಾರೆ. ಆದರೆ, ಸರಕಾರದಿಂದ ಅಂಗೀಕೃತವಾದ ಅಧಿಕೃತ ಅರೆವೈದ್ಯಕೀಯ ಮಂಡಳಿ ಇಲ್ಲದ ಕಾರಣ ವಿದ್ಯಾರ್ಥಿಗಳು ಕೆಲಸಕ್ಕಾಗಿ ಪರದಾಡುವಂತಾಗಿದೆ. ತಕ್ಷಣ ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ, ಪದವೀಧರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸಬೇಕೆಂದು ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಅಪರ ತಹಶೀಲ್ದಾರರಿಗೆ ಮನವಿ […]

ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಅಪರ ತಹಶೀಲ್ದಾರರಿಗೆ ಮನವಿ Read More »

ಕರಾವಳಿ, ಕರ್ನಾಟಕ

ದ. ಕನ್ನಡದ ಮೊದಲ ಆಕ್ಸಿಜನ್ ಉತ್ಪಾದನಾ ಘಟಕ ಬಂಟ್ವಾಳದಲ್ಲಿ ಉದ್ಘಾಟನೆ

(ನ್ಯೂಸ್ ಕಡಬ) newskadaba,ಬಂಟ್ವಾಳ ಜೂ.05:ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕವನ್ನು ವಾಮದಪದವು ಸಮುದಾಯ ಬಂಟ್ವಾಳದ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಉದ್ಘಾಟನೆ ಮಾಡಲಾಯಿತು.     ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು.ಬಂಟ್ವಾಳದಲ್ಲಿ ಕೊರೊನಾ ವಿರುದ್ಧ ಹೋರಾಟ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಹಾಗೂ ಅಧಿಕಾರಿ ವೃಂದದ ಶ್ರಮವನ್ನು ಅವರು ಶ್ಲಾಘಿಸಿದರು.  

ದ. ಕನ್ನಡದ ಮೊದಲ ಆಕ್ಸಿಜನ್ ಉತ್ಪಾದನಾ ಘಟಕ ಬಂಟ್ವಾಳದಲ್ಲಿ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಕಡಬ: ಖಾಸಗಿ ಕ್ಲಿನಿಕ್ ಗೆ ಭೇಟಿ ನೀಡಿದ ಕೊರೋನಾ ಸೋಂಕಿತ ➤ ಕ್ಲಿನಿಕ್ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಇಲ್ಲಿನ ಮುಳಿಮಜಲು ಕಾಲೋನಿಯಲ್ಲಿ ನಾಲ್ಕು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ, ಮನೆ ಹಾಗೂ ಸೋಂಕಿನ ವರದಿ ಬಂದ ಬಳಿಕವೂ ಸೋಂಕಿತ ಭೇಟಿ ನೀಡಿದ ಕಡಬದ ಜೆ.ಎಮ್,ಜೆ. ಕ್ಲಿನಿಕ್‌ನ್ನು ಸೀಲ್ ಡೌನ್ ಮಾಡಲಾಗಿದೆ. ಮುಳಿಮಜಲು ಕಾಲೋನಿಯ ವ್ಯಕ್ತಿಯೋರ್ವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದ ಹಿನ್ನಲೆಯಲ್ಲಿ ಅವರ ಮನೆಯವರು ಹಾಗೂ ಕಾಲೋನಿಯ ಇತರ ಮನೆಯವರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಅದರಲ್ಲಿ ೪ ಮಂದಿ

ಕಡಬ: ಖಾಸಗಿ ಕ್ಲಿನಿಕ್ ಗೆ ಭೇಟಿ ನೀಡಿದ ಕೊರೋನಾ ಸೋಂಕಿತ ➤ ಕ್ಲಿನಿಕ್ ಸೀಲ್ ಡೌನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನರಿಮೊಗರು: ಮಾನಸಿಕ ಅಸ್ವಸ್ಥೆಯಾಗಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba,ನರಿಮೊಗರು ಜೂ.05: ಮಾನಸಿಕ ಅಸ್ವಸ್ಥೆ ಯುವತಿಯೊಬ್ಬರು ನಾಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕರ್ಗಲ್ಲು ಎಂಬಲ್ಲಿ ವರದಿಯಾಗಿದೆ. 23 ವರ್ಷದ ವಿಜೇತಾ ಎಂಬುವವರು ನಾಪತ್ತೆಯಾಗಿರುವ ಯುವತಿ.   ವಿಜೇತ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಜೂ.4ರಂದು ಬೆಳಿಗ್ಗೆ ತನ್ನ ಮನೆಯಿಂದ ಹೊರಗೆ ಹೋದವರು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಯುವತಿ ತಂದೆ ಅಣ್ಣು ಪೂಜಾರಿ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನರಿಮೊಗರು: ಮಾನಸಿಕ ಅಸ್ವಸ್ಥೆಯಾಗಿದ್ದ ಯುವತಿ ನಾಪತ್ತೆ Read More »

ಕರಾವಳಿ

ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ➤ ಖ್ಯಾತ ಕಿರುತೆರೆ ನಟನ ಬಂಧನ

(ನ್ಯೂಸ್ ಕಡಬ) newskadaba,ಮುಂಬೈ ಜೂ.05: ಬಣ್ಣದ ಲೋಕದ ಕನಸು ಹೊತ್ತು ಬಂದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಡಿ ಬಾಲಿವುಡ್​ ಸಿರಿಯಲ್​ ನಟ ಪರ್ಲ್‌ ವಿ ಪುರಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.   ‘ನಾಗಿನ್ 3’, ‘ನಾಗಾರ್ಜುನ ಏಕ್ ಯೋಧ’, ‘ಬೆಪನಾಹ್ ಪ್ಯಾರ್’, ‘ಬ್ರಹ್ಮರಾಕ್ಷಸ್ 2’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಪರ್ಲ್ ಪುರಿಯನ್ನು ಮುಂಬಯಿಯ ಅಂಬೋಳಿ ಪೊಲೀಸರು ನೆರವಿನೊಂದಿಗೆ ಮಿರಾ ಭಾಯಂದಾರ್ ವಾಸಾಯಿ ವಿರಾರ್ ಪೊಲೀಸರು ಬಂಧಿಸಿದ್ದಾರೆ.ನಟನ ವಿರುದ್ಧ ಎಫ್ ಐಆರ್ ದಾಖಲಾಗಿದೆ    

ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ➤ ಖ್ಯಾತ ಕಿರುತೆರೆ ನಟನ ಬಂಧನ Read More »

ಕರಾವಳಿ

ಕಡಬದಲ್ಲಿ ಇಳಿಕೆ ಕಂಡ ಕೊರೋನಾ ➤ 43 ಮಂದಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಕೊರೋನಾ ಎರಡನೇ ಅಲೆಯು ಗ್ರಾಮೀಣ ಭಾಗದಲ್ಲಿ ಹಬ್ಬುತ್ತಿದ್ದು, ಕಡಬ ತಾಲೂಕಿನಲ್ಲಿ ಇಂದು ಕೊರೋನಾ ಸೋಂಕು ಕೊಂಚ ಇಳಿಮುಖವಾಗಿದೆ. ಆರೋಗ್ಯ ಇಲಾಖೆಯ ವರದಿಯಂತೆ ಇಂದು ಕಡಬ ತಾಲೂಕು ವ್ಯಾಪ್ತಿಯಲ್ಲಿ 43 ಮಂದಿಗೆ ಕೊರೋನಾ ದೃಢಪಟ್ಟಿದೆ. ಸಾರ್ವಜನಿಕರ ನಿರ್ಲಕ್ಷ್ಯವೇ ಕೊರೋನಾ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.      

ಕಡಬದಲ್ಲಿ ಇಳಿಕೆ ಕಂಡ ಕೊರೋನಾ ➤ 43 ಮಂದಿಗೆ ಕೋವಿಡ್ ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನಾ ಸೋಂಕಿಗೆ ಕಡಬ ತಾಲೂಕಿನ ಮತ್ತೋರ್ವರು ಬಲಿ ➤ 89 ವರ್ಷದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಕೊರೋನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ವ್ಯಕ್ತಿಯೋರ್ವರು ಬಲಿಯಾಗಿದ್ದು, ಈ ಮೂಲಕ ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮೃತ ವ್ಯಕ್ತಿಯನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಬಡಿಲ ನಿವಾಸಿ 89 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳೆದ ಮೂರು ವಾರಗಳ ಹಿಂದೆ ಇವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು. ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರನ್ನು

ಕೊರೋನಾ ಸೋಂಕಿಗೆ ಕಡಬ ತಾಲೂಕಿನ ಮತ್ತೋರ್ವರು ಬಲಿ ➤ 89 ವರ್ಷದ ವ್ಯಕ್ತಿ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಲಾಕ್‍ಡೌನ್ ನಿಯಮ ಪಾಲನೆಯ ಜವಾಬ್ದಾರಿ ಪೊಲೀಸರಿಗೆ ಮಾತ್ರವೇ.? ➤ ಎಸಿ ಸೂಚನೆಯಂತೆ ಇಂದಿನಿಂದ ಅಲರ್ಟ್ ಆಗ್ತಾರಾ ಅಧಿಕಾರಿಗಳು..?

✍? ವಿಜಯ ಕುಮಾರ್ (ನ್ಯೂಸ್ ಕಡಬ) newskadaba.com ಕಡಬ, ಜೂ.04. ಹಲವಾರು ಕಾರಣಗಳಿಂದ ದಿನದಿಂದ ದಿನಕ್ಕೆ ಕಡಬ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಕೂಡ ಸಂಶಯ ಉಂಟಾಗುತ್ತಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಸರಕಾರ ಮತ್ತೆ ಲಾಕ್‍ಡೌನ್ ಮುಂದುವರಿಸಿ ಆದೇಶಿಸಿದೆ. ಸರಕಾರ ಯಾವುದೇ ಆದೇಶಗಳನ್ನು ಮಾಡಿದರೂ ಜನ ಅದನ್ನು ಯಥಾವತ್ತಾಗಿ ಪಾಲನೆ ಮಾಡುವುದಿಲ್ಲ, ಯಾಕೆಂದರೆ ಅಧಿಕಾರಿಗಳು ದಿನಂಪ್ರತಿ ಅದನ್ನು ಹೇಳುತ್ತಾ ಬರಬೇಕಾಗುತ್ತದೆ, ಆದರೆ ಇಲ್ಲಿ ಲಾಕ್‍ಡೌನ್

ಲಾಕ್‍ಡೌನ್ ನಿಯಮ ಪಾಲನೆಯ ಜವಾಬ್ದಾರಿ ಪೊಲೀಸರಿಗೆ ಮಾತ್ರವೇ.? ➤ ಎಸಿ ಸೂಚನೆಯಂತೆ ಇಂದಿನಿಂದ ಅಲರ್ಟ್ ಆಗ್ತಾರಾ ಅಧಿಕಾರಿಗಳು..? Read More »

ಕರಾವಳಿ, ಕರ್ನಾಟಕ, ವಿಶೇಷ ಲೇಖನಗಳು

ದಕ್ಷಿಣ ಕನ್ನಡದಲ್ಲಿ ಇಂದು ಕೊರೋನಾ ಸೋಂಕಿಗೆ 9 ಮಂದಿ ಬಲಿ ➤ 806 ಮಂದಿಗೆ ಪಾಸಿಟಿವ್, 858 ಮಂದಿ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.04. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಕೊರೋನಾ ಸಾವಿನ ಸಂಖ್ಯೆ ದಿನೇ‌ ದಿನೇ‌ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಇಂದು ಕೊರೋನಾ ಮಹಾಮಾರಿಗೆ ಒಂಬತ್ತು ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 937ಕ್ಕೆ ಏರಿಕೆಯಾಗಿದೆ. ಇಂದು 806 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, 858 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.        

ದಕ್ಷಿಣ ಕನ್ನಡದಲ್ಲಿ ಇಂದು ಕೊರೋನಾ ಸೋಂಕಿಗೆ 9 ಮಂದಿ ಬಲಿ ➤ 806 ಮಂದಿಗೆ ಪಾಸಿಟಿವ್, 858 ಮಂದಿ ಬಲಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ 8 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 04. ಇಲ್ಲಿನ ಕುಂಜತ್ತಬೈಲ್ ದೇವಿನಗರದಲ್ಲಿ ಮನೆಯೊಂದರ ಬಳಿ ಜುಗಾರಿ ಆಡುತ್ತಿದ್ದ 8 ಮಂದಿ ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಗಿಲ್ಬರ್ಟ್ ನೊರೊನ್ಹಾ, ರಾಜು, ರಿಜ್ವಾನ್, ಶಿವಾಜಿ, ಅಲೆಗ್ಸಾಂಡರ್, ತಂಗಸ್ವಾಮಿ, ಮಂಜುನಾಥ ಜಾಗೂ ಸ್ಟಿವಾರ್ಟ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಆಟಕ್ಕೆ ಬಳಸಿದ 13,775 ರೂ. ನಗದು ಸಹಿತ 15,225 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ 8 ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top