ಕರಾವಳಿ

ಕಡಬ: ರಿಕ್ಷಾ ಚಾಲಕನಿಂದ ಅತ್ಯಾಚಾರ ➤ ಯುವತಿ ಎಂಟು ತಿಂಗಳ ಗರ್ಭಿಣಿ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ರಿಕ್ಷಾ ಚಾಲಕನೋರ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ನಿರಂತರ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ಆಕೆ ಗರ್ಭಿಣಿಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಿಂದ ವರದಿಯಾಗಿದೆ. ಕೊಯಿಲ ಗ್ರಾಮದ ಬುಡಲೂರು ನಿವಾಸಿ ರಿಕ್ಷಾ ಚಾಲಕ ಯುವರಾಜ್ ಎಂಬಾತ ತನ್ನ ಪರಿಚಯದ 19 ವರ್ಷದ ಯುವತಿಯನ್ನು ಕಳೆದೊಂದು ವರ್ಷದಿಂದ ಆತನ ಮನೆಯ ಸಮೀಪದ ಗುಡ್ಡದಲ್ಲಿ ನಿರಂತರವಾಗಿ ಅತ್ಯಾಚಾರಗೈದಿದ್ದಾನೆ ಎನ್ನಲಾಗಿದೆ. ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಮನೆಯವರು ಆಕೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಆಕೆ […]

ಕಡಬ: ರಿಕ್ಷಾ ಚಾಲಕನಿಂದ ಅತ್ಯಾಚಾರ ➤ ಯುವತಿ ಎಂಟು ತಿಂಗಳ ಗರ್ಭಿಣಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜುಲೈ.31ಕ್ಕೆ CBSE 12ನೇ ತರಗತಿ ಫಲಿತಾಂಶ!

(ನ್ಯೂಸ್ ಕಡಬ) newskadaba,ನವದೆಹಲಿ  ಜೂ.17: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಕುರಿತಂತೆ ಕೇಂದ್ರ ಸರ್ಕಾರವು, ಸುಪ್ರೀಂ ಕೋರ್ಟ್ ಗೆ ಜುಲೈ 31ರಂದು 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸುವುದಾಗಿ ಮಾಹಿತಿಯನ್ನು ತಿಳಿಸಿದೆ.   ಈ ಕುರಿತಂತೆ ಇಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ಸಿಬಿಎಸ್‌ಇಗೆ 10, 11 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮೌಲ್ಯಮಾಪನ ಮಾನದಂಡವನ್ನು ಸುಪ್ರೀಂ ಕೋರ್ಟ್ ಮುಂದೆ ತಿಳಿಸಿದ್ದಾರೆ.ಸಿಬಿಎಸ್‌ಇ ಮತ್ತು ಸಿಐಎಸ್ಸಿಇಎಸ್ಸಿ ಮುಂದೆ ಗ್ರೇಡ್ ಗಳು /

ಜುಲೈ.31ಕ್ಕೆ CBSE 12ನೇ ತರಗತಿ ಫಲಿತಾಂಶ! Read More »

ಕರಾವಳಿ

ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.17: ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ಇ-ಸಹಮತಿ ಆ್ಯಪ್ ಸಿದ್ಧಪಡಿಸಿದ್ದು, ಶೀಘ್ರವೇ ಈ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ.   ಇ-ಆಡಳಿತ ಇಲಾಖೆ ಎನ್ ಐಸಿ ಮೂಲಕ ಇ-ಸಹಮತಿ ಆ್ಯಪ್(e-Sahamati App) ಸಿದ್ಧಪಡಿಸಲಾಗಿದ್ದು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಮತ್ತು ಖಾಸಗಿ ಕಂಪನಿಗಳ ಜೊತೆಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಊರಿನಲ್ಲಿಯೇ ಆ್ಯಪ್ ಬಳಸಿಕೊಂಡು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.ಇ-ಸಹಮತಿ

ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ Read More »

ಕರಾವಳಿ

ತೈಲ ಬೆಲೆಯೇರಿಕೆ ವಿರೋಧಿಸಿ ಎಸ್ಡಿಪಿಐ ವತಿಯಿಂದ ಬೆಳ್ತಂಗಡಿಯಾದ್ಯಂತ ಪ್ರತಿಭಟನೆ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಜೂ. 17. ದಿನದಿಂದ ದಿನಕ್ಕೆ ಇಂಧನ ತೈಲ ಬೆಲೆಯೇರಿಕೆಯಾಗಿ ಇದೀಗ ಪೆಟ್ರೋಲ್ ಬೆಲೆ 100ರ ಗಡಿ ದಾಟಿರುವುದನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ, ಕಲ್ಲೇರಿ, ಮದ್ದಡ್ಕ, ಕೊಕ್ಕಡ, ಕುಪ್ಪೆಟ್ಟಿ ಮುಂತಾದ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರಕಾರದ ವಿರುದ್ಧ ಪೆಟ್ರೋಲ್ ಬಂಕ್ ಗಳ ಎದುರು ವಾಹನಗಳಿಗೆ ಹಗ್ಗ ಕಟ್ಟಿ ಎಳೆದು, ಸೈಕಲ್ ತುಳಿದು, ಭಿತ್ತಿ ಪತ್ರ ಪ್ರದರ್ಶಿಸಿ, ಘೋಷಣೆ

ತೈಲ ಬೆಲೆಯೇರಿಕೆ ವಿರೋಧಿಸಿ ಎಸ್ಡಿಪಿಐ ವತಿಯಿಂದ ಬೆಳ್ತಂಗಡಿಯಾದ್ಯಂತ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು…. ಈಗ ಗ್ರೀನ್​ ಫಂಗಸ್​ ಪತ್ತೆ..!

(ನ್ಯೂಸ್ ಕಡಬ) newskadaba,ಇಂದೋರ್ ಜೂ.16:ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮೊದಲಿಗೆ ಬ್ಲ್ಯಾಕ್​ ಫಂಗಸ್ Black Fungus (ಕಪ್ಪು ಶಿಲೀಂಧ್ರ)​ ಕಾಣಿಸಿಕೊಂಡಿತು. ಬಳಿಕ ವೈಟ್ ಫಂಗಸ್ White Fungus ​(ಬಿಳಿ ಶಿಲೀಂಧ್ರ) , ಆನಂತರ ಯೆಲ್ಲೋ ಫಂಗಸ್ Yellow Fungus​(ಹಳದಿ ಶಿಲೀಂಧ್ರ) ಪತ್ತೆಯಾಗಿತ್ತು. ಈಗ ಹೊಸದಾಗಿ ಗ್ರೀನ್ ಫಂಗಸ್ Green Fungus(ಹಸಿರು ಶಿಲೀಂಧ್ರ)​ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ. ಹೌದು, ಮಧ್ಯಪ್ರದೇಶದ ಇಂದೋರ್(Indore)​​ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಗ್ರೀನ್​ ಫಂಗಸ್(Green Fungus)​ ಪತ್ತೆಯಾಗಿರುವುದು ಖಚಿತವಾಗಿದೆ.   34 ವರ್ಷದ ಕೋವಿಡ್​(COVID-19) ಗುಣಮುಖ

ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು…. ಈಗ ಗ್ರೀನ್​ ಫಂಗಸ್​ ಪತ್ತೆ..! Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಏರಿಕೆ..!

(ನ್ಯೂಸ್ ಕಡಬ) newskadaba,ಮಂಗಳೂರು ಜೂ.16:ಜಿಲ್ಲೆಯಲ್ಲಿ ಇಂದು 790 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 966 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ಸಮಯದಲ್ಲಿ 10 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 85,665ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 78,073ಕ್ಕೆ ಏರಿಕೆಯಾಗಿದೆ.    

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಏರಿಕೆ..! Read More »

ಕರಾವಳಿ

ಮಳೆಯಿಂದ ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು ➤ಬೆಳ್ತಂಗಡಿಯಲ್ಲಿ ಸಂಚಾರಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba,ಬೆಳ್ತಂಗಡಿ ಜೂ.16: ನೆರಿಯ ಗ್ರಾಮದ ಅಣಿಯೂರಿನಿಂದ ಕಾಟಾಜೆ, ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ತಿಂಗಳಿನಿಂದ ನಡೆಯುತ್ತಿದೆ. ಈ ನಡುವೆ ಭಾರಿ ಮಳೆಗೆ ವಿದ್ಯುತ್ ಕಂಬಗಳು ರಸ್ತೆಗೆ ಸಾಲಾಗಿ ಬಿದ್ದಿವೆ. ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಪೂರೈಕೆ ಕಂಬಗಳು ಇವೆ. ವಿದ್ಯುತ್ ಕಂಬಗಳ ಬುಡದವರೆಗೂ ರಸ್ತೆ ನಿರ್ಮಾಣಕ್ಕೆ ಗುಡ್ಡ ಕೊರೆದು ಗುತ್ತಿಗೆದಾರರು ಬೇಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. ವಾರದಿಂದ ಮಳೆ ಸುರಿಯುತ್ತಿದ್ದು, ಕಾಟಾಚಾರದ ಕಾಮಗಾರಿಯಿಂದ ವಿದ್ಯುತ್ ಕಂಬಗಳು

ಮಳೆಯಿಂದ ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು ➤ಬೆಳ್ತಂಗಡಿಯಲ್ಲಿ ಸಂಚಾರಕ್ಕೆ ಅಡ್ಡಿ Read More »

ಕರಾವಳಿ

ರಾಜ್ಯದಲ್ಲಿ ಇಂದು 7,345 ಕೊರೊನಾ ಪ್ರಕರಣ ಪತ್ತೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.16: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 7,345 ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, 148 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 27,84,355ಕ್ಕೆ ಏರಿಕೆಯಾಗಿದೆ.   ರಾಜ್ಯ ಆರೋಗ್ಯ ಇಲಾಖೆ ಬುಧವಾರದ ಹೆಲ್ತ್​​ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಇಂದು 7,345 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 148 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 33,296 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಇಂದು 17,913 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 25,99,472 ಮಂದಿ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ

ರಾಜ್ಯದಲ್ಲಿ ಇಂದು 7,345 ಕೊರೊನಾ ಪ್ರಕರಣ ಪತ್ತೆ Read More »

ಕರಾವಳಿ

ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು 21 ದಿನದ ಕಂದಮ್ಮ..?!

(ನ್ಯೂಸ್ ಕಡಬ) newskadaba,ಗಾಜಿಪುರ ಜೂ.15: ನವಜಾತ ಶಿಶುವನ್ನು ಪೆಟ್ಟಿಗೆಯಲ್ಲಿಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿರುವ ಘಟನೆ ದಾದ್ರಿಘಾಟ್​ ಬಳಿ ನಡೆದಿದೆ. ಗಾಳಿ ಜೋರಾಗಿ ಬೀಸಿದ್ದರಿಂದ ಮರದ ಪೆಟ್ಟಿಗೆಯು ದಡಕ್ಕೆ ಬಂದಿತ್ತು. ಅದರಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಆ ಬಾಕ್ಸ್​ ಅನ್ನು ತೆರೆದು ನೋಡಿದಾಗ ಅದರಲ್ಲಿ ಮಗು ಇರುವುದು ಪತ್ತೆಯಾಗಿದೆ. 21 ದಿನದ ಮಗುವಿದ್ದ ಆ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣುವಿನ ಫೋಟೋಗಳಿದ್ದವು. ಇದರೊಂದಿಗೆ ಮಗುವಿನ ಜಾತಕ ಕೂಡ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಪೆಟ್ಟಿಗೆಯಲ್ಲಿ ಮಗುವನ್ನು ಯಾರಿಟ್ಟರು,

ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು 21 ದಿನದ ಕಂದಮ್ಮ..?! Read More »

ಕರಾವಳಿ

ಇಬ್ಬರು ಯುವಕರಿಗೆ “ಸಂಚಾರಿ ವಿಜಯ್” ಕಣ್ಣು ಜೋಡಣೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ಸಂಚಾರಿ ವಿಜಯ್ ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಅವರ ಸಾಮಾಜಿಕ ಕಾರ್ಯ, ನಟನೆ, ಒಳ್ಳೆಯ ಗುಣ ಇರುವಂತಹ ನಟನನ್ನ ಕಳೆದುಕೊಂಡು ಕನ್ನಡಿಗರು ಕಣ್ಣೀರು ಹಾಕುತ್ತಾ ಇದ್ದಾರೆ. ಆದರೆ ಈಗ ಅವರ ನಿಧನದ ನಂತರ ಮಾಡಿರುವ ಮಹಾತ್ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಅವರ ಅಂಗಾಂಗ ದಾನದ ನಿರ್ಧಾರಕ್ಕೆ ವೈದ್ಯರು ಅವರ ಪೋಷಕರಿಗೆ ಧನ್ಯವಾದ ತಿಳಿಸುತ್ತಾ ಇದ್ದಾರೆ. ಸಂಚಾರಿ ವಿಜಯ್ ಅವರ ಕಣ್ಣುಗಳನ್ನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ

ಇಬ್ಬರು ಯುವಕರಿಗೆ “ಸಂಚಾರಿ ವಿಜಯ್” ಕಣ್ಣು ಜೋಡಣೆ Read More »

ಕರಾವಳಿ
Scroll to Top