ಕರಾವಳಿ

ಬೆಳ್ತಂಗಡಿ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಕೊರೊನಾಗೆ ಪತಿಯೂ ಬಲಿ

(ನ್ಯೂಸ್ ಕಡಬ) newskadaba,ಬೆಳ್ತಂಗಡಿ ಜೂ.24: ಕೋವಿಡ್ ಮಹಾಮಾರಿಗೆ ತುತ್ತಾಗಿ ಪತ್ನಿ ಕೊನೆಯುಸಿರೆಳೆದ ಕೇವಲ 18 ಗಂಟೆಗಳ ಅಂತರದಲ್ಲೇ ಪತಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯ ಗ್ರಾಮದಲ್ಲಿ‌ ನಡೆದಿದೆ. ನೆರಿಯ ಗ್ರಾಮದ ಪರಂದಾಡಿ‌ ನಿವಾಸಿ ಸಾರಮ್ಮ (58) ಅವರು ಮಂಗಳೂರಿನ‌ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜೂನ್ 22 ನೇ ಮಂಗಳವಾರ ಮೃತಪಟ್ಟರೆ, ಅವರ ಪತಿ ಇಬ್ರಾಹಿಂ(68) ಅವರು ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ ಇದೀಗ ದಂಪತಿ ಪುತ್ರ ಅಬ್ದುಲ್ ಖಾದರ್ […]

ಬೆಳ್ತಂಗಡಿ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಕೊರೊನಾಗೆ ಪತಿಯೂ ಬಲಿ Read More »

ಕರಾವಳಿ

ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

(ನ್ಯೂಸ್ ಕಡಬ) newskadaba,ಬಾಗಲಕೋಟೆ ಜೂ.24: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿದಿದ್ದ ಉರಗ ರಕ್ಷರೊಬ್ಬರು ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಮೀಪ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.   0 ವರ್ಷ ಪ್ರಾಯದ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿ. ಬುಧವಾರ ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು. ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಕಚ್ಚಿತ್ತು. ಬಳಿಕ ಸದಾಶಿವ ಅವರು

ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು Read More »

ಕರಾವಳಿ

ಉಡುಪಿ:ನಿರುದ್ಯೋಗ ಸಮಸ್ಯೆಯಿಂದ ನೊಂದ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba,ಉಡುಪಿ ಜೂ.24: ನಿರುದ್ಯೋಗ ಸಮಸ್ಯೆಯಿಂದ ಮನನೊಂದ ಯುವಕನೊಬ್ಬ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಕ್ಕಿಕಟ್ಟೆ- ಇಂದಿರಾನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಇಂದಿರಾನಗರ ನಿವಾಸಿ ಧನಂಜಯ್ ಎಸ್(36 ) ಎಂದು ಗುರುತಿಸಲಾಗಿದೆ. ಲಾಕ್‌ಡೌನ್ ತುರ್ತು ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:ನಿರುದ್ಯೋಗ ಸಮಸ್ಯೆಯಿಂದ ನೊಂದ ಯುವಕ ಆತ್ಮಹತ್ಯೆ Read More »

ಕರಾವಳಿ

ಮಂಗಳೂರು : ಸಮುದ್ರಕ್ಕೆ ಹಾರಿ ಇಂಜಿನಿಯರಿಂಗ್ ಪದವೀಧರ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.24:ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಿಂದ ಹಾರಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ಕಚೇರಿ ಬಳಿಯ ನಿವಾಸಿ ಪವನ್ ಭಟ್ (3೦) ಆತ್ಮಹತ್ಯೆಗೈದ ಯುವಕ. ಗಣೇಶ್ ಪ್ರಸನ್ನ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಮಗನಾದ ಪವನ್ ಮೈಸೂರಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಎನ್ನಲಾಗಿದೆ. ಮೈಸೂರಿನಿಂದ ಬಂದ ಬಳಿಕ ನಿತ್ಯವೂ ಸೋಮೇಶ್ವರ ದೇವಸ್ಥಾನಕ್ಕೆ ಪವನ್ ಬಂದು ಹೋಗುತ್ತಿದ್ದರೆನ್ನಲಾಗಿದೆ. ಸಂಜೆ ರುದ್ರಪಾದೆಯ ಮೇಲಿಂದ ಏಕಾಏಕಿ ಸಮುದ್ರಕ್ಕೆ ಜಿಗಿದದ್ದನ್ನ ಸ್ಥಳೀಯರು ಕಂಡಿದ್ದಾರೆ. ಪವನ್

ಮಂಗಳೂರು : ಸಮುದ್ರಕ್ಕೆ ಹಾರಿ ಇಂಜಿನಿಯರಿಂಗ್ ಪದವೀಧರ ಯುವಕ ಆತ್ಮಹತ್ಯೆ Read More »

ಕರಾವಳಿ

ಮನೆಯಲ್ಲಿದ್ದ ಅಡಿಕೆ ಚೀಲವನ್ನು ಕದ್ದೊಯ್ದ ಪಕ್ಕದ ಮನೆಯಾತ ➤ ಪೊಲೀಸರಿಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಮನೆಯಲ್ಲಿರಿಸಿದ್ದ ಅಡಿಕೆ ಚೀಲವನ್ನು ಪರಿಚಿತ ವ್ಯಕ್ತಿಯೋರ್ವ ಕದ್ದೊಯ್ದ ಘಟನೆ ಠಾಣಾ ವ್ಯಾಪ್ತಿಯ ಹಳೆನೇರಂಕಿ ಎಂಬಲ್ಲಿ ಬುಧವಾರದಂದು ನಡೆದಿದೆ. ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿ ನಿವಾಸಿ ಸುಕೇಶ ಎಂಬವರು ತನ್ನ ಮನೆಯ ಅಂಗಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಅಡಿಕೆಯನ್ನು ಇರಿಸಿದ್ದರು ಎನ್ನಲಾಗಿದೆ. ಬುಧವಾರದಂದು ಮನೆಮಂದಿ ತೋಟಕ್ಕೆ ತೆರಳಿದ್ದ ವೇಳೆ ಪಕ್ಕದ ಮನೆಯ ಪರಮೇಶ್ವರ್ ಎಂಬಾತ ಒಂದು ಗೋಣಿ ಚೀಲ ಅಡಿಕೆಯನ್ನು ಎಗರಿಸಿರುವುದಾಗಿ ಸುಕೇಶ ಕಡಬ ಠಾಣೆಗೆ ದೂರು ನೀಡಿದ್ದಾರೆ.    

ಮನೆಯಲ್ಲಿದ್ದ ಅಡಿಕೆ ಚೀಲವನ್ನು ಕದ್ದೊಯ್ದ ಪಕ್ಕದ ಮನೆಯಾತ ➤ ಪೊಲೀಸರಿಗೆ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲೇ ಮೊದಲು ಟ್ರ್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳೆ ಸುಮಂಗಲಮ್ಮ ಇನ್ನಿಲ್ಲ

(ನ್ಯೂಸ್ ಕಡಬ) newskadaba,ಚಿತ್ರದುರ್ಗ ಜೂ.23: ರಾಜ್ಯದಲ್ಲಿ ಮೊದಲು ಟ್ರ್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಮಂಗಲಮ್ಮ ವೀರಭದ್ರಪ್ಪ(69) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಇಂದು ಬೆಳಗಿನ ಜಾವ 3.30ಕ್ಕೆ ಸುಮಂಗಲಮ್ಮ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಅವರ ಕರ್ಮ ಭೂಮಿಯಲ್ಲೆ ಇಂದು ನೆರವೇರಿದ್ದು, ಮೃತರ ನಿಧನಕ್ಕೆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಕೃಷಿಕ ಬಂಧುಗಳು ಕಂಬನಿ ಮಿಡಿದಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಂತೆ ಬೆಳೆಸಿದ್ದಲ್ಲದೆ, ತಾವು ನಂಬಿದ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವರಿಯದೆ ದುಡಿಮೆ ಮಾಡುತ್ತಿದ್ದ ಸುಮಂಗಲಮ್ಮ,

ರಾಜ್ಯದಲ್ಲೇ ಮೊದಲು ಟ್ರ್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳೆ ಸುಮಂಗಲಮ್ಮ ಇನ್ನಿಲ್ಲ Read More »

ಕರಾವಳಿ

ದಕ್ಷಿಣ ಕನ್ನಡದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ ➤ ಇಂದು 13 ಮಂದಿ ಮೃತ್ಯು, 538 ಮಂದಿಗೆ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಗೊಂಡಿದ್ದರೂ, ಕೊರೋನಾ‌ ಅಟ್ಟಹಾಸ ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ಒಂದೇ ದಿನ 538 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, 13 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಒಟ್ಟು 1093 ಮಂದಿ ಕೊರೋನಾ ಸೋಂಕಿನಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ.      

ದಕ್ಷಿಣ ಕನ್ನಡದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ ➤ ಇಂದು 13 ಮಂದಿ ಮೃತ್ಯು, 538 ಮಂದಿಗೆ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ

(ನ್ಯೂಸ್ ಕಡಬ) newskadaba,ಗಾಂಧಿನಗರ ಜೂ.23: ಚಿನ್ನದ ಮನುಷ್ಯ ಎಂದು ಹೆಸರು ಪಡೆದಿರುವ ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಪಿ ಪಟೇಲ್ ಗುಜರಾತಿನ ಅಹಮದಾಬಾದ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದ ಜೊತೆ ನೆಡದ ಗಲಾಟೆ ಬಳಿಕ ತಾನೇ ಕುತ್ತಿಗೆ ಹಿಸುಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲಿಸ್ ಮೂಲಗಳಿಂದ ತಿಳಿದುಬಂದಿದೆ. ರಾಜಿಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕುಂಜಾಲ್ ಪಟೇಲ್, ದರಿಯಾಪುರ್ ಕ್ಷೇತ್ರದಿಂದ ಈ ಮುಂಚೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದನು. ಕೆಜಿಗಟ್ಟಲೇ ಚಿನ್ನಾಭರಣ ಧರಿಸಿದ್ದ ಕುಂಜಾಲ್ ಪಟೇಲ್ ಫೋಟೋ ವೈರಲ್ ಆಗಿ ಖ್ಯಾತಿಗಳಿಸಿದ್ದನು.ಆತ್ಮಹತ್ಯೆ ಸಂಬಂಧ ಅನುಮಾನವು ವ್ಯಕ್ತವಾಗಿದ್ದು,

ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ Read More »

ಕರಾವಳಿ

ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಬಸ್ ಸಂಚಾರ ಆರಂಭ ➤ ಮಧ್ಯಾಹ್ನ 1 ಗಂಟೆಯವರೆಗೆ ಸಂಚಾರಕ್ಕೆ ಅನುಮತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.22. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬೆಳಿಗ್ಗೆ 07 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಮಧ್ಯಾಹ್ನ 01 ಗಂಟೆಯವರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕರ್ಫ್ಯೂ ಇರಲಿದ್ದು, ಉಳಿದ ದಿನಗಳಲ್ಲಿ ಮೇಲಿನ ಆದೇಶ ಅನ್ವಯವಾಗಲಿದೆ. ಅಂಗಡಿ ಮುಂಗಟ್ಟು ಮತ್ತಿತರ ವಾಣಿಜ್ಯ ಚಟುವಟಿಕೆಯ

ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಬಸ್ ಸಂಚಾರ ಆರಂಭ ➤ ಮಧ್ಯಾಹ್ನ 1 ಗಂಟೆಯವರೆಗೆ ಸಂಚಾರಕ್ಕೆ ಅನುಮತಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಜಿಲ್ಲಾಡಳಿತದ ನಿಲುವಿಗೆ ಸೆಡ್ಡು ಹೊಡೆದ ಉಪ್ಪಿನಂಗಡಿಯ ವ್ಯಾಪಾರಸ್ಥರು ➤ ಪುಟ್ಪಾತ್ ನಲ್ಲಿ ವಸ್ತುಗಳನ್ನಿರಿಸಿ ಮಾರಾಟ

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಜೂ.22. ಲಾಕ್‌ಡೌನ್ ನಿಯಮಾವಳಿಯ ಗೊಂದಲದ ನಡುವೆ ಮಂಗಳವಾರದಂದು ಉಪ್ಪಿನಂಗಡಿ ಪರಿಸರದಲ್ಲಿ ಬಿರುಸಿನ ವ್ಯಾಪಾರ ವಹಿವಾಟು ನಡೆದವು. ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ ಜಿಲ್ಲಾಡಳಿತದ ನಿಲುವಿನಂತೆ ಹಲವು ದಿನಗಳ ಕಾಲ ಅಂಗಡಿಯಲ್ಲಿ ವ್ಯಾಪಾರ ನಡೆಸಲಾಗದೇ ಜೀನವದಲ್ಲಿ ಸಂಕಷ್ಟ ಎದುರಿಸಿದ್ದ ಬಹುತೇಕ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿ ಮುಂಭಾಗದ ಪುಟ್ ಪಾತ್‌ನಲ್ಲಿ ವಸ್ತುಗಳನ್ನಿರಿಸಿ  ಮಾರಾಟ ಮಾಡುವ ಮೂಲಕ ತಮ್ಮನ್ನು ತಾವು ಪುಟ್‌ಪಾತ್ ವ್ಯಾಪಾರಿಗಳೆಂದು ಘೋಷಿಸಿಕೊಂಡರು. ಈ ಮಧ್ಯೆ ಜಿಲ್ಲಾ ಉಸ್ತುವಾರಿ

ಜಿಲ್ಲಾಡಳಿತದ ನಿಲುವಿಗೆ ಸೆಡ್ಡು ಹೊಡೆದ ಉಪ್ಪಿನಂಗಡಿಯ ವ್ಯಾಪಾರಸ್ಥರು ➤ ಪುಟ್ಪಾತ್ ನಲ್ಲಿ ವಸ್ತುಗಳನ್ನಿರಿಸಿ ಮಾರಾಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top