ಬೆಳ್ತಂಗಡಿ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಕೊರೊನಾಗೆ ಪತಿಯೂ ಬಲಿ

(ನ್ಯೂಸ್ ಕಡಬ) newskadaba,ಬೆಳ್ತಂಗಡಿ ಜೂ.24: ಕೋವಿಡ್ ಮಹಾಮಾರಿಗೆ ತುತ್ತಾಗಿ ಪತ್ನಿ ಕೊನೆಯುಸಿರೆಳೆದ ಕೇವಲ 18 ಗಂಟೆಗಳ ಅಂತರದಲ್ಲೇ ಪತಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯ ಗ್ರಾಮದಲ್ಲಿ‌ ನಡೆದಿದೆ.

ನೆರಿಯ ಗ್ರಾಮದ ಪರಂದಾಡಿ‌ ನಿವಾಸಿ ಸಾರಮ್ಮ (58) ಅವರು ಮಂಗಳೂರಿನ‌ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜೂನ್ 22 ನೇ ಮಂಗಳವಾರ ಮೃತಪಟ್ಟರೆ, ಅವರ ಪತಿ ಇಬ್ರಾಹಿಂ(68) ಅವರು ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ ಇದೀಗ ದಂಪತಿ ಪುತ್ರ ಅಬ್ದುಲ್ ಖಾದರ್ ಅವರಿಗೂ ಕೋವಿಡ್ ದೃಢಪಟ್ಟಿದೆ.ಮೃತರ ಅಂತ್ಯಸಂಸ್ಕಾರ ನೆರಿಯ ಜುಮ್ಮಾ‌ ಮಸ್ಜೀದ್ ದಫನ ಭೂಮಿಯಲ್ಲಿ‌ ಕೋವಿಡ್ ನಿಯಮಾನುಸಾರ ನಡೆದಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ಬೆಳ್ತಂಗಡಿ ಸರ್ಕಲ್ ತಂಡದ ಕಾರ್ಯಕರ್ತರು ನೆರವೇರಿಸಿದ್ದಾರೆ.

Scroll to Top