ಕರಾವಳಿ

ರಿಕ್ಷಾ ದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಹಿನ್ನೆಲೆ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 27. ಅಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಮಹಿಳೆಗೆ ವ್ಯಕ್ತಿಯೋರ್ವರು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಅನಿಲ್ ಎಂದು ಗುರುತಿಸಲಾಗಿದೆ. ಈತ ರಿಕ್ಷಾವೊಂದರಲ್ಲಿ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆಯು ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ರಿಕ್ಷಾ ದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಹಿನ್ನೆಲೆ ➤ ಓರ್ವ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮನೆ ಬಿಟ್ಟು ತೆರಳಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ, ಅ. 27. ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಮಣ್ಣ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಕೆಲವು ದಿನಗಳ ಹಿಂದೆಮನೆ ಬಿಟ್ಟು ಹೋಗಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ಬಿಟ್ಟು ತೆರಳಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 27. ಬಿಜೆಪಿ ಮುಖಂಡನ ಮೇಲೆ ಬಜರಂಗದಳದ ಕಾರ್ಯಕರ್ತರು ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತರಾದ ನಿತಿನ್, ಪವನ್ ಹಾಗೂ ನಿಶಾಂತ್ ಎಂಬವರು ಬಿಜೆಪಿ ಅಮ್ಟಾಡಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೊಳ್ಳೂರು ಅವರ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಪ್ರಕಾಶ್ ಅವರ ತಾಯಿ ಮತ್ತು ಅಣ್ಣನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು

ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆ ➤ ಆರೋಪಿ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 26. ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ದೂರವಾಣಿ ಕರೆಯ ಮೂಲಕ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ದಿಲೀಪ್ ಮದ್ದಡ್ಕ ಎಂದು ಗುರುತಿಸಲಾಗಿದೆ. ಈತ ಒಂಭತ್ತನೇ ತರಗತಿಯ ಬಾಲಕಿಯನ್ನು ಪರಿಚಯ ಮಾಡಿ, ಆನ್ಲೈನ್ ತರಗತಿಗೆಂದು ಬಾಲಕಿಯ ಜೊತೆಗಿದ್ದ ಮೊಬೈಲ್ ನಂಬರ್ ಪಡೆದು, ಕಳೆದ ಕೆಲ ತಿಂಗಳುಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ವಾಟ್ಸಾಪ್ ಮೂಲಕ ಅಶ್ಲೀಲ ಚಿತ್ರಗಳು ಹಾಗೂ ಕೆಟ್ಟ ಮೆಸೇಜ್ ಗಳನ್ನು

ಬೆಳ್ತಂಗಡಿ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆ ➤ ಆರೋಪಿ ವಿರುದ್ದ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಣಿಯೂರು: ಲಾರಿಯಲ್ಲಿ ಸಾಗಿಸುತ್ತಿದ್ದ ಭತ್ತ ಕಟಾವು ಯಂತ್ರ ವಿದ್ಯುತ್ ತಂತಿಗೆ ಸ್ಪರ್ಶ ➤ ತಪ್ಪಿದ ಭಾರೀ ದುರಂತ

(ನ್ಯೂಸ್ ಕಡಬ) Newskadaba.com ಕಾಣಿಯೂರು, ಅ. 26. ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಲಾರಿಯೊಂದರಲ್ಲಿ ಭತ್ತ ಕಟಾವು ಯಂತ್ರವನ್ನು ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಘಟನೆ ಬೆಳಂದೂರು ಗ್ರಾಮದ ಕೆಲೆಂಬಿರಿ ಎಂಬಲ್ಲಿ ನಡೆದಿದೆ. ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣಡಗೊಂಡಿತ್ತು. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿದ್ದಾರೆ.

ಕಾಣಿಯೂರು: ಲಾರಿಯಲ್ಲಿ ಸಾಗಿಸುತ್ತಿದ್ದ ಭತ್ತ ಕಟಾವು ಯಂತ್ರ ವಿದ್ಯುತ್ ತಂತಿಗೆ ಸ್ಪರ್ಶ ➤ ತಪ್ಪಿದ ಭಾರೀ ದುರಂತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಡಮಂಗಲ: ಬಿರುಕು ಬಿಟ್ಟ ರೈಲ್ವೇ ಹಳಿ ➤ ಚಾಲಕನ ಪ್ರಜ್ಞೆಯಿಂದ‌ ತಪ್ಪಿದ ಅನಾಹುತ

(ನ್ಯೂಸ್ ಕಡಬ) Newskadaba.com ಕಾಣಿಯೂರು, ಅ. 26. ಸುಬ್ರಹ್ಮಣ್ಯ- ಮಂಗಳೂರು ರೈಲ್ವೇಯ ಎಡಮಂಗಲ ಎಂಬಲ್ಲಿ ಹಳಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಮುಂಜಾನೆ ವೇಳೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ಸುಬ್ರಹ್ಮಣ್ಯ- ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಎಡಮಂಗಲ ಸಮೀಪ ರೈಲ್ವೇ ಹಳಿ ಬಿರುಕು ಬಿಟ್ಟಿದ್ದು, ರೈಲಿನ ಒಂದು ಬೋಗಿ ಚಲಿಸಿದ ಕೂಡಲೇ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಚಾಲಕ ರೈಲನ್ನು ನಿಲುಗಡೆಗೊಳಿಸಿ, ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಬಳಿಕ ಹಳಿ

ಎಡಮಂಗಲ: ಬಿರುಕು ಬಿಟ್ಟ ರೈಲ್ವೇ ಹಳಿ ➤ ಚಾಲಕನ ಪ್ರಜ್ಞೆಯಿಂದ‌ ತಪ್ಪಿದ ಅನಾಹುತ Read More »

ಕರಾವಳಿ, ಕರ್ನಾಟಕ

ವ್ಯಾಯಾಮದ ನೆಪದಲ್ಲಿ ಅಸಭ್ಯ ವರ್ತನೆ ಆರೋಪ ➤ ದೈಹಿಕ ಶಿಕ್ಷಣ ನಿರ್ದೇಶಕ ಅರೆಸ್ಟ್

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 26. ವ್ಯಾಯಾಮದ ನೆಪದಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ, ಯುವತಿಯ ತಾಯಿಯು ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಎಂದು ಗುರುತಿಸಲಾಗಿದೆ. ಈತ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿದ್ದ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಅ.23ರಂದು ಲೈಂಗಿಕ

ವ್ಯಾಯಾಮದ ನೆಪದಲ್ಲಿ ಅಸಭ್ಯ ವರ್ತನೆ ಆರೋಪ ➤ ದೈಹಿಕ ಶಿಕ್ಷಣ ನಿರ್ದೇಶಕ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಸ್ತೆ ಕಾಮಗಾರಿ ಹಿನ್ನೆಲೆ- ಬದಲಿ ಸಂಚಾರ ವ್ಯವಸ್ಥೆ ➤ ಕಮಿಷನರ್ ಮಹತ್ವದ ಆದೇಶ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 26. ಇಲ್ಲಿನ ಶರವು ಮಹಾಗಣಪತಿ ದೇವಸ್ಥಾನದ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ಮಾರ್ಗ ಬದಲಾವಣೆ ಮಾಡಿ ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಇಲ್ಲಿನ ಶರವು ಮಹಾಗಣಪತಿ ದೇವಸ್ಥಾನದ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಡಿ.23ರವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೆ.ಎಸ್. ಆರ್ ರಸ್ತೆಯಿಂದ ಪಿಎಂ ರಾವ್ ರಸ್ತೆ ಮೂಲಕ ಗಣಪತಿ ಹೈಸ್ಕೂಲ್ ಕಡೆಗೆ ಸಂಚರಿಸುವ ಎಲ್ಲಾ ತರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಶರವು

ರಸ್ತೆ ಕಾಮಗಾರಿ ಹಿನ್ನೆಲೆ- ಬದಲಿ ಸಂಚಾರ ವ್ಯವಸ್ಥೆ ➤ ಕಮಿಷನರ್ ಮಹತ್ವದ ಆದೇಶ Read More »

ಕರಾವಳಿ, ಕರ್ನಾಟಕ

ಕಡಬ: ಶಾಲೆಯಲ್ಲಿ ಅಡುಗೆ ತಯಾರಿಯ ವೇಳೆ ಗ್ಯಾಸ್ ಸೋರಿಕೆ ➤ ಅಡುಗೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) Newskadaba.com ಕಡಬ, ಅ. 25. ಶಾಲೆಯಲ್ಲಿ ಅಡುಗೆ ಮಾಡುವ ಸಂದರ್ಭ ಗ್ಯಾಸ್ ಸೋರಿಕೆಯುಂಟಾಗಿ ಬೆಂಕಿ ಹೊತ್ತಿದ ಘಟನೆ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಂದು ನಡೆದಿದೆ. ತಕ್ಷಣವೇ ಸ್ಥಳದಲ್ಲಿದ್ದವರು ಕಾರ್ಯಪ್ರವೃತ್ತರಾದ ಹಿನ್ನೆಲೆ ಬಾರೀ ದುರಂತ ತಪ್ಪಿದಂತಾಗಿದೆ. ಕೊರೋನಾ ಹಿನ್ನೆಲೆ ಸೋಮವಾರದಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದೆ. ಎಲ್ಲಾ ಶಾಲೆಗಳಂತೆ ನೂಜಿಬಾಳ್ತಿಲ ಶಾಲೆಯಲ್ಲೂ ಸೋಮವಾರ ಅಡುಗೆ ಮಾಡುವ ಕೊಠಡಿಯಲ್ಲಿ ಗ್ಯಾಸ್ ಉರಿಸುವ ಸಂದರ್ಭ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿದೆ. ತಕ್ಷಣವೇ ಅಡುಗೆ ಸಿಬ್ಬಂದಿಗಳು ಹಾಗೂ

ಕಡಬ: ಶಾಲೆಯಲ್ಲಿ ಅಡುಗೆ ತಯಾರಿಯ ವೇಳೆ ಗ್ಯಾಸ್ ಸೋರಿಕೆ ➤ ಅಡುಗೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 25. ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮೈಂದನಡ್ಕ ನಿವಾಸಿ ಆದಂ(56) ಎಂದು ಗುರುತಿಸಲಾಗಿದೆ. ಬಾಲಕಿಯು ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ವೇಳೆ ಆರೋಪಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು: ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top