ಕರಾವಳಿ

ಮಾರ್- ಇವಾನಿಯೋಸ್ ಕಾಲೇಜು: ‘ಲಿಂಗತ್ವ, ಶಾಲೆ ಮತ್ತು ಸಮಾಜ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ

(ನ್ಯೂಸ್ ಕಡಬ) newskadaba.com ಕುಂತೂರು, ನ. 18. ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯ ಕುಂತೂರು ಇದರ ಆಶ್ರಯದಲ್ಲಿ “ಲಿಂಗತ್ವ, ಶಾಲೆ ಮತ್ತು ಸಮಾಜ” ಎಂಬ ವಿಷಯದ ಕುರಿತು “ವಿಚಾರ ಸಂಕಿರಣ” ಕಾರ್ಯಕ್ರಮವು ನೆರವೇರಿತು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಲಿಂಗತ್ವ ಎಂದರೆ, ಸರ್ವ ಸಮಾನವಾದುದು, ನಾವೆಲ್ಲಾ ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಅತ್ರಾಡಿ ಅಮೃತ ಶೆಟ್ಟಿ ಇವರು ಗಂಡು-ಹೆಣ್ಣು ಎಂಬುದು […]

ಮಾರ್- ಇವಾನಿಯೋಸ್ ಕಾಲೇಜು: ‘ಲಿಂಗತ್ವ, ಶಾಲೆ ಮತ್ತು ಸಮಾಜ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ Read More »

ಕರಾವಳಿ, ಕರ್ನಾಟಕ

ಉಪ ಅಂಚೆ ಪಾಲಕರಿಂದ ಸಾವಿರಾರು ರೂ. ವಂಚನೆ ➤ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 18. ತಾಲೂಕಿನ ಮಂಚಿ ಅಂಚೆ ಕಚೇರಿಯಲ್ಲಿ ಉಪ ಅಂಚೆ ಪಾಲಕರಾಗಿದ್ದ ವೃಶಬೇಂದ್ರ ಹೆಬ್ಬಾರ್ ಅವರು ಅಂಚೆ ಕಚೇರಿಯ ವ್ಯವಹಾರಕ್ಕೆಂದು ಹಣ ತೆಗೆದು ಕಚೇರಿಯ ಬ್ರಾಂಚ್ ಗೆ ಕಳುಹಿಸದೇ ತನ್ನ ಸ್ವಂತಕ್ಕೆ ಬಳಸಿಕೊಂಡು ಅಂಚೆ ಕಚೇರಿಗೆ ವಂಚಿಸಿದ ಬಗ್ಗೆ ಜೋಡುಮಾರ್ಗ ಸಹಾಯಕ ಅಂಚೆ ಕಚೇರಿಯ ಮುಖ್ಯಸ್ಥ ಲೋಕನಾಥ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃಶಬೇಂದ್ರ ಅವರು ಮಂಚಿ ಉಪಅಂಚೆ ಕಛೇರಿಯಲ್ಲಿ 2014 ರ ಎಪ್ರಿಲ್

ಉಪ ಅಂಚೆ ಪಾಲಕರಿಂದ ಸಾವಿರಾರು ರೂ. ವಂಚನೆ ➤ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರಿನಿಂದ ಕೇರಳಕ್ಕೆ ಅಕ್ರಮವಾಗಿ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣ ➤ 16 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18. ಅಕ್ರಮವಾಗಿ ಕೇರಳಕ್ಕೆ ಎರಡು ಲೀಟರ್ ಶ್ರೀಗಂಧದ ಎಣ್ಣೆ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕಾಸರಗೋಡು ಕೊಲ್ಲಂಬಾಡಿ ನಿವಾಸಿ ಮಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನಿಂದ ಕೇರಳಕ್ಕೆ ಅಕ್ರಮವಾಗಿ ಗಂಧದ ಎಣ್ಣೆ ಸಾಗಿಸುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು, ಬಳಿಕ ವಿಚಾರಣೆಗೆ ಹಾಜರಾಗದೇ ಸುಮಾರು‌ 16 ವರ್ಷಗಳಿಂದ

ಪುತ್ತೂರಿನಿಂದ ಕೇರಳಕ್ಕೆ ಅಕ್ರಮವಾಗಿ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣ ➤ 16 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಫಾಸ್ಟ್ ಫುಡ್ ಮಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 18. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳ ತಂಡವೊಂದು ಫಾಸ್ಟ್ ಫುಡ್ ಅಂಗಡಿಯೊಂದರ ಮಾಲೀಕನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ರಾತ್ರಿ ನಡೆದಿದೆ. ಹಲ್ಲೆಗೊಳಗಾದವರನ್ನು ಆದರ್ಶ ನಗರದ ಫಾಸ್ಟ್ ಫುಡ್ ಅಂಗಡಿ ಮಾಲಕ ಬಾತೀಶ್ ಎಂದು ಗುರುತಿಸಲಾಗಿದೆ. ಇವರು ಉಪ್ಪಿನಂಗಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ಬುಧವಾರ ರಾತ್ರಿ ಇನೋವಾ ಹಾಗೂ ರಿಡ್ಜ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಣ್ಣ ಪುಟ್ಟ ಕಾರಣಕ್ಕೆ ಬಾತೀಶ್ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಉಪ್ಪಿನಂಗಡಿ: ಫಾಸ್ಟ್ ಫುಡ್ ಮಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್ ➤ ವಕೀಲರ ಮನೆಯಲ್ಲಿ ಶೋಧ ಕಾರ್ಯ..!

(ನ್ಯೂಸ್ ಕಡಬ) Newskadaba.com ಮಂಗಳೂರು, ನ. 18. ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿ ರಾಜೇಶ್ ಭಟ್ ಅವರ ಮನೆಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಅವರ ನೇತೃತ್ವದಲ್ಲಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಪಂಚರ ಸಮಕ್ಷಮದಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಪರಾರಿಯಾಗಿರುವ ಆರೋಪಿ ರಾಜೇಶ್ ಭಟ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಮಂಗಳೂರಿನ ಖ್ಯಾತ ವಕೀಲರಾಗಿದ್ದ ರಾಜೇಶ್ ಭಟ್ ಅವರ ಕಚೇರಿಗೆ ಇಂಟರ್ನ್‌ಶಿಪ್‌ಗೆ ಬಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ

ಮಂಗಳೂರು: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್ ➤ ವಕೀಲರ ಮನೆಯಲ್ಲಿ ಶೋಧ ಕಾರ್ಯ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರವಿ ಪೂಜಾರಿ ಹೆಸರಿನಲ್ಲಿ ಬ್ಲ್ಯಾಕ್ ಮೇಲ್..! ➤ ಪ್ರಕರಣವನ್ನು ವಿಲೇವಾರಿ ಮಾಡಿದ ಬಂಟ್ವಾಳ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 18. ವಿಟ್ಲದ ಕೃಷಿಕರೋರ್ವರಿಗೆ ರವಿ ಪೂಜಾರಿ ಹೆಸರಿನಲ್ಲಿ 25 ಲಕ್ಷ ರೂ. ಬೇಡಿಕೆಯಿಟ್ಟು, ಕೊಡದಿದ್ದಲ್ಲಿ ಜೀವಬೆದರಿಕೆ ಒಡ್ಡಿರುವ ಪ್ರಕರಣವನ್ನು ಬಂಟ್ವಾಳ ಜಿಎಂಎಫ್ ಸಿ ನ್ಯಾಯಾಲಯವು ವಜಾಗೊಳಿಸಿದೆ. ವಿಟ್ಲ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ವೆಂಕಟರಮಣ ಭಟ್ ಎಂಬವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರುದಾರರು ಪ್ರಕರಣವನ್ನು ಮುಂದುವರಿಸದೇ ಇರಲು ನಿರ್ಧರಿಸಿದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ.\

ರವಿ ಪೂಜಾರಿ ಹೆಸರಿನಲ್ಲಿ ಬ್ಲ್ಯಾಕ್ ಮೇಲ್..! ➤ ಪ್ರಕರಣವನ್ನು ವಿಲೇವಾರಿ ಮಾಡಿದ ಬಂಟ್ವಾಳ ನ್ಯಾಯಾಲಯ Read More »

ಕರಾವಳಿ, ಕರ್ನಾಟಕ

ಇನ್ಮುಂದೆ ಮರಳು ನೀಡಲು ನೇರವಾಗಿ ಗುತ್ತಿಗೆದಾರರಿಗೆ ಅವಕಾಶ ➤ ಕಡಬ ವ್ಯಾಪ್ತಿಯ ಗುತ್ತಿದಾರರು ಯಾರು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17. ಜಿಲ್ಲೆಯ Non-CRZ ಪ್ರದೇಶದಲ್ಲಿ 17 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿದ್ದು, ಈ ಮರಳು ಬ್ಲಾಕ್‍ಗಳ ಸ್ಟಾಕ್‌ ಯಾರ್ಡ್ ನಿಂದ ಮರಳನ್ನು ಜಿಲ್ಲೆಯಲ್ಲಿನ ಸರಕಾರಿ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ ಪೂರೈಸಿಕೊಳ್ಳಬಹುದಾಗಿದೆ. ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ವಿವರ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಕೆಳಗಿನಂತಿವೆ. 1. ಚಂದ್ರಹಾಸ್ 9964277142 ಬಂಟ್ವಾಳ ಬಡಗಬೆಳ್ಳೂರು 45/1 ಫಲ್ಗುಣಿ ನದಿ 1000 ರೂ. 2. ಚರಣ್‍ಕುಮಾರ್ 9343564043 ಬಂಟ್ವಾಳ ಕಡೇಶಿವಾಲಯ 1 ನೇತ್ರಾವತಿ 1200

ಇನ್ಮುಂದೆ ಮರಳು ನೀಡಲು ನೇರವಾಗಿ ಗುತ್ತಿಗೆದಾರರಿಗೆ ಅವಕಾಶ ➤ ಕಡಬ ವ್ಯಾಪ್ತಿಯ ಗುತ್ತಿದಾರರು ಯಾರು ಗೊತ್ತೇ..? Read More »

ಕರಾವಳಿ, ಕರ್ನಾಟಕ

ಆಲಂಕಾರು: ವಾಟರ್ ಬೆಲ್, ಅಕ್ಷಯ ಬುಟ್ಟಿ ಯೋಜನೆ ಮತ್ತು ಪೂರ್ವ ಪ್ರಾಥಮಿಕ ಶಾಲಾ ತರಗತಿಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ನ. 18. ಶೈಕ್ಷಣಿಕ ಗುಣಮಟ್ಟ, ಕಲಿಕಾ ವಾತಾವರಣ ಸ್ವಚ್ಚವಾಗಿದ್ದರೆ ಜನ ಶಿಕ್ಷಣ ಸಂಸ್ಥೆಯನ್ನು ಮೆಚ್ಚಿಕೊಂಡು ಮಕ್ಕಳನ್ನು ದಾಖಲಿಸುತ್ತಾರೆ ಎನ್ನುವುದಕ್ಕೆ ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ. ಇಲ್ಲಿ ಪೋಷಕರ ಆಶಯವನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. . ಪೋಷಕರ, ಸಹೋದ್ಯೋಗಿಗಳ, ಶಿಕ್ಷಣ ಪ್ರೇಮಿಗಳ, ಮೇಲಾಧಿಕಾರಿಗಳ ನೆರವಿನಿಂದ ಶಾಲೆ ಈ ಮಟ್ಟಕ್ಕೆ ಬೆಳೆದಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಹೇಳಿದರು. ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ

ಆಲಂಕಾರು: ವಾಟರ್ ಬೆಲ್, ಅಕ್ಷಯ ಬುಟ್ಟಿ ಯೋಜನೆ ಮತ್ತು ಪೂರ್ವ ಪ್ರಾಥಮಿಕ ಶಾಲಾ ತರಗತಿಗಳ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ನಿಯಂತ್ರಣ ತಪ್ಪಿ ರಸ್ತೆಗುರುಳಿದ ಲಾರಿ ➤ ಚಾಲಕ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 18. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಗುರುಳಿದ ಘಟನೆ ಗುರುವಾರದಂದು ನೆಲ್ಯಾಡಿ ಸಮೀಪ ನಡೆದಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ನೆಲ್ಯಾಡಿ: ನಿಯಂತ್ರಣ ತಪ್ಪಿ ರಸ್ತೆಗುರುಳಿದ ಲಾರಿ ➤ ಚಾಲಕ ಪಾರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ಮುಳುಗಡೆ ➤ ಏಳು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾರವಾರ, ನ. 18. ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ ಎರಡು ಬೋಟುಗಳು ಹವಾಮಾನ ವೈಪರೀತ್ಯದಿಂದಾಗಿ ಗೋವಾದ ಪಣಜಿ ಬಳಿಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಡೆಯಾದ ಘಟನೆ ನಡೆದಿದೆ. ಮಲ್ಪೆಯಿಂದ ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟ್‌ಗಳು ಅಲೆಗಳ ಹೊಡೆತಕ್ಕೆ ಸಿಲುಕಿದ್ದು, ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ ಎನ್ನಲಾಗಿದೆ. ಮಾತಾ ಜಟಗೇಶ್ವರ ಮತ್ತು ಪಲ್ಲಕ್ ಎಂಬ ಹೆಸರಿನ ಬೋಟ್ ಮುಳುಗಡೆಯಾಗಿದ್ದು, ಇದರಲ್ಲಿದ್ದ ಏಳು ಮಂದಿಯನ್ನು, ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್

ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ಮುಳುಗಡೆ ➤ ಏಳು ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top