ಕರಾವಳಿ

ಅಕ್ರಮ ಗಣಿಗಾರಿಕೆ ತಹಶೀಲ್ದಾರ್ ದಿಢೀರ್ ದಾಳಿ ➤ ಹಿಟಾಚಿ ಹಾಗೂ ಲಾರಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ನ. 22. ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾದ ಪಡು ಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂದ್ರಕೆರೆ ಗಂಪದದ್ದ ಗ್ರಾನೈಟ್ ಕಲ್ಲಿನ ಕೋರೆಗೆ ರವಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯ ವೇಳೆ ಗ್ರಾನೈಟ್ ಕಲ್ಲು ಲೋಡ್ ಹೊಂದಿದ್ದ ಒಂದು ಲಾರಿ, ಒಂದು ಹಿಟಾಚಿ ಮತ್ತು ಗ್ರಾನೈಟ್ ಕಟ್ಟಿಂಗ್ ಬ್ಲಾಸ್ಟಿಂಗ್ ಯಂತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಸರಕಾರಿ ಜಾಗವೊಂದರಲ್ಲಿ […]

ಅಕ್ರಮ ಗಣಿಗಾರಿಕೆ ತಹಶೀಲ್ದಾರ್ ದಿಢೀರ್ ದಾಳಿ ➤ ಹಿಟಾಚಿ ಹಾಗೂ ಲಾರಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೋಮೇಶ್ವರ ಬೀಚ್ ನಲ್ಲಿ ಕಸ ಎಸೆದ ಯುವತಿಯರು ➤ ದಂಡ ವಿಧಿಸಿ ಎಚ್ಚರಿಕೆ ನೀಡಿದ ಪುರಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 22. ನಗರದ ಹೊರವಲಯದ ಸೋಮೇಶ್ವರ ಬೀಚ್ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಪ್ರವಾಸಿ ಯುವತಿಯರಿಗೆ ಸೋಮೇಶ್ವರ ಪುರಸಭೆ ವತಿಯಿಂದ 500 ದಂಡ ವಿಧಿಸಿದ ಘಟನೆ ವರದಿಯಾಗಿದೆ. ಸೋಮೇಶ್ವರ ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಗಿ ಕಂಡುಬಂದಿದೆ. ಇದರಿಂದ ಸೋಮೇಶ್ವರ ಪುರಸಭೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದರು.

ಸೋಮೇಶ್ವರ ಬೀಚ್ ನಲ್ಲಿ ಕಸ ಎಸೆದ ಯುವತಿಯರು ➤ ದಂಡ ವಿಧಿಸಿ ಎಚ್ಚರಿಕೆ ನೀಡಿದ ಪುರಸಭೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ.ಕ. ಕಸಾಪ ಅಧ್ಯಕ್ಷರಾಗಿ ಡಾ.ಎಂ.ಪಿ ಶ್ರೀನಾಥ್ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 22. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಡಾ.ಎಂ.ಪಿ. ಶ್ರೀನಾಥ್ ಅವರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷತೆಗೆ ಭಾನುವಾರದಂದು ನಡೆದ ಚುನಾವಣೆಯಲ್ಲಿ ಡಾ.ಎಂ.ಪಿ.ಶ್ರೀನಾಥ್ 1,489 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಎಂ.ಆರ್. ವಾಸುದೇವ ಅವರು 534 ಮತಗಳನ್ನು ಪಡೆದಿದ್ದಾರೆ. ಶ್ರೀನಾಥ್ ಅವರು ಸುಳ್ಯದಲ್ಲಿ 219, ಬೆಳ್ತಂಗಡಿ 520, ಮಂಗಳೂರು 192, ಪುತ್ತೂರು 182, ಕಡಬ 46, ವಿಟ್ಲ 54, ಮೂಡಬಿದ್ರೆ 28, ಕೊಕ್ಕಡ

ದ.ಕ. ಕಸಾಪ ಅಧ್ಯಕ್ಷರಾಗಿ ಡಾ.ಎಂ.ಪಿ ಶ್ರೀನಾಥ್ ಆಯ್ಕೆ Read More »

ಕರಾವಳಿ, ಕರ್ನಾಟಕ

ಕಡಬ: ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗಗ್ರಹಣ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ. 22. ಯುವವಾಹಿನಿ ಕಡಬ ಘಟಕದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು. ಇದರ ಉದ್ಘಾಟನೆಯನ್ನು ಮಾಡಿದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಂಜಿನಿಯರ್ ಸಜಿ ಕುಮಾರ್ ಮಾತನಾಡಿ, ಯುವ ಮನಸುಗಳಲ್ಲಿನ ಉತ್ತಮ ಯೋಚನೆಗಳನ್ನು ಯೋಜನೆಗಳನ್ನಾಗಿ ರೂಪಿಸಿ ಸಾಮಾಜಿಕ ಬದಲಾವಣೆಗೆ ಕೊಡುಗೆಯಾಗಿ ನೀಡಬೇಕು. ಸಮಾಜದಲ್ಲಿನ ದುರ್ಬಲರನ್ನು ಅಣಕಿಸುವುದಕ್ಕಿಂತ ಅವರನ್ನು ನಮ್ಮೊಂದಿಗೆ ಜೊತೆಯಾಗಿಸುವ ಪ್ರಯತ್ನವನ್ನು ಸಂಘಟನೆಯ ಮೂಲಕ ಮಾಡಲು ಸಾಧ್ಯ ಎಂದರು.

ಕಡಬ: ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗಗ್ರಹಣ ಸಮಾರಂಭ Read More »

ಕರಾವಳಿ, ಕರ್ನಾಟಕ

ಜಾಗದ ತಕರಾರು ➤ ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಮೈದುನ..!

(ನ್ಯೂಸ್ ಕಡಬ) newskadaba.com ಪುತ್ತೂರು, ನ. 22. ಜಮೀನು ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ಮಹಿಳೆಯೋರ್ವರಿಗೆ ನಾಡಕೋವಿಯಿಂದ ಶೂಟ್ ಮಾಡಿದ ಪ್ರಕರಣ ತಾಲೂಕಿನ ನರಿಮೊಗರು ಗ್ರಾಮದ ವೀರಮಂಗಲ ಎಂಬಲ್ಲಿ ಭಾನುವಾರದಂದು ನಡೆದಿದೆ. ಆರೋಪಿ ದೇವಪ್ಪ ಎಂಬಾತ ತನ್ನ ಅತ್ತಿಗೆ ಧರ್ಣಮ್ಮ ಎಂಬವರಿಗೆ ನಾಡಕೋವಿಯಿಂದ ಶೂಟ್ ಮಾಡಿದ್ದು, ಗುಂಡು ಗುರಿ ತಪ್ಪಿದ ಕಾರಣ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಜಾಗದ ತಕರಾರು ➤ ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಮೈದುನ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..!

(ನ್ಯೂಸ್ ಕಡಬ) newskadaba.com‌ ಮಂಗಳೂರು, ನ. 22. ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜೊಂದರ ಜೋಡಿಗಳು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರನ್ನೆಲ್ಲ ಒಪ್ಪಿಸಿ ಶಾಸ್ತ್ರಬದ್ಧವಾಗಿ ಮದುವೆಯಾಗುತ್ತಿದ್ದಾರೆ. ಕೇರಳದ ಕಣ್ಣೂರಿನಲ್ಲೇ ನ. 29ರಂದು ಇಬ್ಬರ ವಿವಾಹಕ್ಕೆ ಡೇಟ್ ಫಿಕ್ಸ್ ಕೂಡ ಆಗಿದ್ದು, ಈ ಜೋಡಿಯ ವಿವಾಹಕ್ಕೆ ಲವ್ ಜಿಹಾದ್ ಆರೋಪ ಕೂಡಾ ಕೇಳಿಬಂದಿತ್ತು. ಈ ಮದುವೆಯನ್ನು ತಡೆಯಲು ಹಿಂದೂ ಸಂಘಟನೆಗಳು ಮತ್ತು ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಗಳು, ಆಕೆಯ ಮನೆಗೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದ್ದು, ಆದರೆ ಯುವತಿಯು

ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಂಟು ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆಮಾಡಿ ಚರಂಡಿಗೆಸೆದ ಕಿಡಿಗೇಡಿಗಳು ➤ ಕರಾವಳಿಯನ್ನೇ ಬೆಚ್ಚಿಬೀಳಿಸುವ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 21. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೋರ್ವರ ಎಂಟು ವರ್ಷದ ಮಗುವೊಂದನ್ನು ಅತ್ಯಾಚಾರಗೈದು ಕೊಲೆಮಾಡಿ ಚರಂಡಿಗೆಸೆದು ಹೋದ ಘಟನೆ ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಕಾರ್ಮಿಕರು ಟೈಲ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಒಂದು ಮಗು ಸಂಜೆ ವೇಳೆಗೆ ಕಾಣೆಯಾಗಿತ್ತು. ಕಾರ್ಮಿಕರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಸಂಜೆ 6 ಗಂಟೆಯ ವೇಳೆಗೆ ಅಲ್ಲೇ ಪಕ್ಕದ ಚರಂಡಿಯಲ್ಲಿ ಮಗುವಿನ ಮೃತದೇಹ

ಎಂಟು ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆಮಾಡಿ ಚರಂಡಿಗೆಸೆದ ಕಿಡಿಗೇಡಿಗಳು ➤ ಕರಾವಳಿಯನ್ನೇ ಬೆಚ್ಚಿಬೀಳಿಸುವ ಘಟನೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಯುನೈಟೆಡ್ ಕ್ರಿಸ್ಮಸ್ ಆಚರಣಾ ಸಮಿತಿಯ ಪ್ರಥಮ ಸಭೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 21. ಯುನೈಟೆಡ್ ಕ್ರಿಸ್ಮಸ್ ಆಚರಣಾ ಸಮಿತಿ ನೆಲ್ಯಾಡಿ ಇದರ 2021ರ ಯುನೈಟೆಡ್ ಕ್ರಿಸ್ಮಸ್ ಆಚರಣೆಯ ಪ್ರಥಮ ಸಭೆಯು ನ.21 ಆದಿತ್ಯವಾರದಂದು ನೆಲ್ಯಾಡಿ ಸೈಂಟ್ ಆಲ್ಫೋನ್ಸಾ ಚರ್ಚ್ ಸಭಾಭವನದಲ್ಲಿ ಫಾ.ಸಿಬಿ ತೋಮಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದರ ನೂತನ ಅಧ್ಯಕ್ಷರಾಗಿ ಫಾ.ಸಿಬಿ ತೋಮಸ್, ಉಪಾಧ್ಯಕ್ಷರಾಗಿ ಫಾ.ಸತ್ಯನ್ ಒಐಸಿ, ಸಂಚಾಲಕರಾಗಿ ಫಾ. ಹೆನಿ ಜೇಕಬ್, ಕಾರ್ಯದರ್ಶಿಯಾಗಿ ಪ್ರಶಾಂತ್ ವರ್ಗೀಸ್, ಕೋಶಾಧಿಕಾರಿಯಾಗಿ ಅರುಣ್ ಅವರನ್ನು ನಾಮ ನಿರ್ದೇಶನ ಮಾಡಲಾಯಿತು. 2021 ರ ಕ್ರಿಸ್ಮಸ್ ಆಚರಣೆಯನ್ನು

ನೆಲ್ಯಾಡಿ: ಯುನೈಟೆಡ್ ಕ್ರಿಸ್ಮಸ್ ಆಚರಣಾ ಸಮಿತಿಯ ಪ್ರಥಮ ಸಭೆ Read More »

ಕರಾವಳಿ, ಕರ್ನಾಟಕ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ ➤ ವಿದ್ಯಾರ್ಥಿ ಸಂಘ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ನ. 21. ಸೈಂಟ್ ಜೋಕಿಮ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಎಸ್ ಎಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಗೋವಿಂದ ಎನ್. ಎಸ್ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, “ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯಲು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ರಚನಾತ್ಮಕ ಚಟುವಟಿಕೆಗಳು ಪೂರಕವಾಗಿದೆ, ಪ್ರಾಮಾಣಿಕತೆಯೊಂದಿಗೆ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ ➤ ವಿದ್ಯಾರ್ಥಿ ಸಂಘ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಕಡಬ: ಹಾಡು ಹಗಲೇ ಮನೆಯಂಗಳದಲ್ಲಿ ಕಾಡಾನೆ ಪ್ರತ್ಯಕ್ಷ..! ➤ ಆತಂಕದಲ್ಲಿ ಜನತೆ

(ನ್ಯೂಸ್ ಕಡಬ) newskadaba.com ಕಡಬ, ನ. 21. ಹಾಡುಹಗಲೇ ಕಾಡಾನೆ ಹಿಂಡೊಂದು ಮನೆ ಅಂಗಳ ಹಾಗೂ ತೋಟಕ್ಕೆ ಲಗ್ಗೆಯಿಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವ ಘಟನೆ ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕೊಣಾಜೆ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಾಡು ಹಗಲಲ್ಲೂ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸುತ್ತಿರುವ ದೂರು ಕೇಳಿಬಂದಿದೆ. ಹಲವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ ಸೇರಿದಂತೆ ಇತರೆ ಕೃಷಿಗಳನ್ನು

ಕಡಬ: ಹಾಡು ಹಗಲೇ ಮನೆಯಂಗಳದಲ್ಲಿ ಕಾಡಾನೆ ಪ್ರತ್ಯಕ್ಷ..! ➤ ಆತಂಕದಲ್ಲಿ ಜನತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top