ಕ್ರೈಮ್ ನ್ಯೂಸ್

ಬಸ್-ಆಟೋ ಡಿಕ್ಕಿ  ಚಿಕಿತ್ಸೆ ಸ್ಪಂದಿಸದೆ ಆಟೋ ಚಾಲಕ ಮೃತ್ಯು..! 

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30. ಬಸ್ ಆಟೋ ಡಿಕ್ಕಿಯಾಗಿ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಹಂಪನಕಟ್ಟೆ ಖಾಸಗಿ ಹೊಟೇಲ್ ಬಳಿ ಇಂದು ನಡೆದಿದೆ. ಅವಘಡದಲ್ಲಿ ಆಟೋ ಚಾಲಕ ದೇವರಾಜ್ ಅವರಿಗೆ ಗಂಭೀರ ಗಾಯವಾಗಿದ್ದರಿಂದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದೇವರಾಜ್ ಅವರು, ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.  

ಬಸ್-ಆಟೋ ಡಿಕ್ಕಿ  ಚಿಕಿತ್ಸೆ ಸ್ಪಂದಿಸದೆ ಆಟೋ ಚಾಲಕ ಮೃತ್ಯು..!  Read More »

ಕರಾವಳಿ, ಕ್ರೈಮ್ ನ್ಯೂಸ್

ಎಕ್ಸ್ ಪ್ರೆಸ್‌ ವೇನಲ್ಲಿ ಹುಚ್ಚಾಟ- ಚಾಲಕರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಡ್ಯ, ಆ. 29. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇನಲ್ಲಿ ಹುಚ್ಚಾಟ ನಡೆಸಿ ಖಾಸಗಿ ಬಸ್ ಚಾಲಕ ಮತ್ತು ಸಹ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ವಿರುದ್ಧ ದಿಕ್ಕಿನಲ್ಲಿ ಬಸ್ ಓಡಿಸುತ್ತಿರುವ ವೀಡಿಯೋವನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪರಿಣಾಮ, ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ರನ್ನು ಟ್ಯಾಗ್ ಮಾಡಿ ತನ್ನ ಎಕ್ಸ್ ಖಾತೆ ಮೂಲಕ ಈ ವೀಡಿಯೋ ಪೋಸ್ಟ್ ಮಾಡಲಾಗಿತ್ತು. ವಿಡಿಯೋ ವೈರಲ್

ಎಕ್ಸ್ ಪ್ರೆಸ್‌ ವೇನಲ್ಲಿ ಹುಚ್ಚಾಟ- ಚಾಲಕರು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ- ಮತ್ತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಚಿಕ್ಕಣ್ಣ ಇಂದು ಬಸವೇಶ್ವರನಗರದಲ್ಲಿರುವ ಎಸಿಪಿ ಕಚೇರಿಗೆ ಎರಡನೇ ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಆರೋಪಿ ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಕ್ಕೆ ಮತ್ತೆ ವಿಚಾರಣೆಗೆ ಕರೆಯಲಾಗಿದೆ ಎಂದು ವರದಿ ತಿಳಿಸಿದೆ. ಈ ಕುರಿತು ವಿಚಾರಣೆಯ ಬಳಿಕ ಚಿಕ್ಕಣ್ಣ ಮಾತನಾಡಿ, ನಾನು ಒಬ್ಬ ಸಾಕ್ಷಿದಾರನಾಗಿದ್ದುಕೊಂಡು ಹೋಗಿ ದರ್ಶನ್‌ ರನ್ನು ಮಾತನಾಡಿಸಬಾರದು ಅನ್ನೋದು ನನಗೆ ಗೊತ್ತಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣ- ಮತ್ತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಲೆಯಲ್ಲಿ ಬಾಲಕಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ ಆರೆಸ್ಟ್

(ನ್ಯೂಸ್ ಕಡಬ) newskadaba.com ಥಾಣೆ, ಆ. 29.  ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ಬಾಲಕಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಬುಧವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಶಿಕ್ಷಕ ತನ್ನ ಮೊಬೈಲ್ ಫೋನ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ್ದು, ಈ ವಿಚಾರವನ್ನು ಬಾಲಕಿಯೊಬ್ಬಳು ತನ್ನ ಪೋಷಕರಿಗೆ ತಿಳಿಸಿದ್ದರಿಂದ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಶಾಲೆಯಲ್ಲಿ ಬಾಲಕಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ ಆರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿದ್ರೆಯಲ್ಲಿದ್ದ ಪತ್ನಿಯ ಕತ್ತು ಕೊಯ್ದು ಹತ್ಯೆ..! ಆರೋಪಿ ಅರೆಸ್ಟ್..!                     

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29.  ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿಯೊಬ್ಬ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಗರದ ಕೆಂಗೇರಿ ಉಪನಗರದಲ್ಲಿ ನಡೆದಿದೆ. ನವ್ಯಾ (25) ಹತ್ಯೆಯಾದ ದುರ್ದೈವಿ. ಆರೋಪಿಯನ್ನು ಆಕೆಯ ಪತಿ ಕಿರಣ್ ಎಂದು ಗುರುತಿಸಲಾಗಿದೆ. ಕ್ಯಾಬ್‌ ಚಾಲಕನಾಗಿದ್ದ ಕಿರಣ್‌, ಎಸ್‌ಎಂವಿ ಲೇಔಟ್‌ನ ಒಂದನೇ ಬ್ಲಾಕ್‌ನಲ್ಲಿ ನೆಲೆಸಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಕೌಟುಂಬಿಕ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಕಿರಣ್‌ ಅತಿಯಾಗಿ ಮದ್ಯ ಸೇವಿಸುತ್ತಿದ್ದರು. ದಂಪತಿ ಮಧ್ಯೆ ನಿತ್ಯ ಗಲಾಟೆಯಾಗುತ್ತಿತ್ತು

ನಿದ್ರೆಯಲ್ಲಿದ್ದ ಪತ್ನಿಯ ಕತ್ತು ಕೊಯ್ದು ಹತ್ಯೆ..! ಆರೋಪಿ ಅರೆಸ್ಟ್..!                      Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಪಾನ್‌ನಲ್ಲಿ ಅಪ್ಪಳಿಸಿದ ಶಾನ್‌ಶಾನ್‌ ಚಂಡಮಾರುತ- ಮೂರು ಮಂದಿ ಸಾವು

(ನ್ಯೂಸ್ ಕಡಬ) newskadaba.com ಟೋಕಿಯೊ, ಆ. 29.  ನೈರುತ್ಯ ಜಪಾನ್‌ ಕಾಗೋ ಶಿಮಾ ಪ್ರಾಂತ್ಯಕ್ಕೆ ಶಾನ್ ಶಾನ್‌ ಚಂಡಮಾರುತ ಅಪ್ಪಳಿಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರಿ ಮಳೆ, ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೈರುತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಗಂಟೆಗೆ 198 ಕಿ.ಮೀ . ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ

ಜಪಾನ್‌ನಲ್ಲಿ ಅಪ್ಪಳಿಸಿದ ಶಾನ್‌ಶಾನ್‌ ಚಂಡಮಾರುತ- ಮೂರು ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಜಮ್ಮು ಕಾಶ್ಮೀರದಲ್ಲಿ  2 ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆ   ಮೂರು ಭಯೋತ್ಪಾದಕರ ಹತ್ಯೆ

(ನ್ಯೂಸ್ ಕಡಬ) newskadaba.com ಶ್ರೀನಗರ, ಆ. 29.  ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆಗಳು ಮೂರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. 2 ಪ್ರತ್ಯೇಕ ಎನ್‌ ಕೌಂಟರ್ ನಡೆಸಿದ ಭದ್ರತಾ ಪಡೆಗಳು, ಕುಶಾಲ್ ಪೊಸ್ಟ್ ಕರ್ನಾಹನಲ್ಲಿ (ತಂಗಧಾರ್) ಇಬ್ಬರು ಮತ್ತು ಗುಲಾಬ್ ಪೊಸ್ಟ್ ನ ಕುಮಕಾರಿನ ಪಕ್ಕದಲ್ಲಿ ಒಬ್ಬ ಭಯೋತ್ಪಾಕನನ್ನು ಹತ್ಯೆ ಮಾಡಿದೆ. ಭಾರೀ ಮಳೆಯಿಂದಾಗಿ ಭದ್ರತಾ ಪಡೆಗೆ ಭಯೋತ್ಪಾದಕರ ಮೃತದೇಹಗಳನ್ನು ವಶಪಡಿಸಲು ಆಗಲಿಲ್ಲ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ  2 ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆ   ಮೂರು ಭಯೋತ್ಪಾದಕರ ಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೌಕಾನೆಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಶತ್ರು ದೇಶಗಳಿಗೆ ರವಾನೆ ಮೂವರನ್ನು ವಶಕ್ಕೆ ಪಡೆದ ರಾಷ್ಟ್ರೀಯ ತನಿಖಾ ತಂಡ

(ನ್ಯೂಸ್ ಕಡಬ) newskadaba.com ಕಾರವಾರ, ಆ. 29.  ಐಎನ್‌ಎಸ್ ಕದಂಬ ನೌಕಾನೆಲೆಗೆ ಸಂಬಂಧಿಸಿದ ಚಿತ್ರಗಳು ಮತ್ತು ಮಾಹಿತಿಗಳನ್ನು ಶತ್ರು ದೇಶಗಳಿಗೆ ರವಾನಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ತಂಡ ಮೂವರನ್ನು ಕಸ್ಟಡಿಗೆ ತೆಗೆದುಕೊಂಡಿದೆ ಎನ್ನಲಾಗಿದೆ. ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಎನ್‌ಐಎ ಅಧಿಕಾರಿಗಳ ತಂಡವು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಆರೋಪಿಗಳನ್ನು ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ

ನೌಕಾನೆಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಶತ್ರು ದೇಶಗಳಿಗೆ ರವಾನೆ ಮೂವರನ್ನು ವಶಕ್ಕೆ ಪಡೆದ ರಾಷ್ಟ್ರೀಯ ತನಿಖಾ ತಂಡ Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ವಾಹನ ತಡೆದು ಅವಾಚ್ಯ ಪದಗಳಿಂದ ನಿಂದನೆ ಆರೋಪ – ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 29. ವ್ಯಕ್ತಿಯೋರ್ವ ವಾಹನವನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಣಿಯೂರು ನಿವಾಸಿ ಸಿದ್ದಿಕ್(43ವ) ಎಂಬವರು ನೀಡಿದ ದೂರಿನ ಮೇರೆಗೆ ಶರತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ. 27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್

ವಾಹನ ತಡೆದು ಅವಾಚ್ಯ ಪದಗಳಿಂದ ನಿಂದನೆ ಆರೋಪ – ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಢಾಕಾ ಸರೋವರದಲ್ಲಿ ಬಾಂಗ್ಲಾದೇಶ ಟಿವಿ ಪತ್ರಕರ್ತೆಯ ಮೃತದೇಹ ಪತ್ತೆ 

(ನ್ಯೂಸ್ ಕಡಬ) newskadaba.com ಢಾಕಾ, ಆ. 29. ಬಾಂಗ್ಲಾದೇಶ ಟಿವಿ ಪತ್ರಕರ್ತೆ ಸಾರಾ ರಹನುಮಾ ಅವರ ಮೃತದೇಹವು ಢಾಕಾದ ಹತಿರ್ ಜೀಲ್ ಸರೋವರದಲ್ಲಿ ಪತ್ತೆಯಾಗಿದೆ. ಸರೋವರದಲ್ಲಿ ಆಕೆಯ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಮೃತದೇಹವನ್ನು ಸರೋವರದಿಂದ ಹೊರತೆಗೆಯಲಾಗಿದೆ ಎಂದು ವರದಿ ತಿಳಿದುಬಂದಿದೆ. ಇನ್ನು ಸಾವಿಗೂ ಮುನ್ನ ಸಾರಾ ನಿನ್ನೆ ರಾತ್ರಿ ಫೇಸ್ ಬುಕ್‌ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. ಜೊತೆಗೆ ಹಿಂದಿನ ಪೋಸ್ಟ್ ನಲ್ಲಿ ಅವರು, ಸಾವಿಗೆ ಸಮಾನವಾದ ಜೀವನವನ್ನು ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂದು ಪೋಸ್ಟ್ ಮಾಡಿದ್ದರು. ಈ

ಢಾಕಾ ಸರೋವರದಲ್ಲಿ ಬಾಂಗ್ಲಾದೇಶ ಟಿವಿ ಪತ್ರಕರ್ತೆಯ ಮೃತದೇಹ ಪತ್ತೆ  Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top