ಕ್ರೈಮ್ ನ್ಯೂಸ್

ಬೆಂಗಳೂರು: ನಿಗೂಢ ಸ್ಫೋಟಕ್ಕೆ ವ್ಯಕ್ತಿಯ ಕಾಲಿಗೆ ಗಂಭೀರ ಗಾಯ

ಬೆಂಗಳೂರು, ಮಾ.8: ನಗರದ ಆಡುಗೋಡಿಯ ಬಳಿ ಸ್ಫೋಟ ಸಂಭವಿಸಿದ ವ್ಯಕ್ತಿಯೊಬ್ಬರ ಎಡಗಾಲು ತುಂಡಾದ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ನರಸಿಂಹಯ್ಯ(50) ಎಂದು ಗುರುತಿಸಲಾಗಿದೆ. ಕಸದ ರಾಶಿಯ ನಡುವೆ ಈ ಸ್ಫೋಟ ಸಂಭವಿಸಿರುವುದು ಅಚ್ಚರಿ, ಆತಂಕ ಮೂಡಿಸಿದೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಗ್ರಾನೈಟ್ ಕತ್ತರಿಸುವ ಕೆಮಿಕಲ್ ಎಸೆದಿದ್ದು, ಕೆಮಿಕಲ್ ರಿಯಾಕ್ಷನ್‌ನ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ನಿಗೂಢ ಸ್ಫೋಟಕ್ಕೆ ವ್ಯಕ್ತಿಯ ಕಾಲಿಗೆ ಗಂಭೀರ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಪಿಸ್ತೂಲ್, ಸಜೀವ ಗುಂಡುಗಳು ಚರಂಡಿಯಲ್ಲಿ ಪತ್ತೆ

ಕಾಸರಗೋಡು, ಮಾ.7: ನಗರದ ರಸ್ತೆ ಬದಿಯ ಚರಂಡಿಯೊಂದರಲ್ಲಿ ಎರಡು ಪಿಸ್ತೂಲ್ ಹಾಗೂ ಆರು ಸಜೀವ ಗುಂಡುಗಳು ಪತ್ತೆಯಾಗಿವೆ. ಕಾಸರಗೋಡು ರೈಲು ನಿಲ್ದಾಣ ಮುಂಭಾಗದ ರಸ್ತೆಬದಿಯ ಚರಂಡಿಯನ್ನು ಸ್ವಚ್ಛತೆಗೊಳಿಸುತ್ತಿದ್ದಾಗ ಪಿಸ್ತೂಲು ಮತ್ತು ಗುಂಡುಗಳು ಪತ್ತೆಯಾಗಿವೆ ಎಂದು ಕಾರ್ಮಿಕರು ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಕಾಸರಗೋಡು ನಗರ ಠಾಣಾ ಪೊಲೀಸರು ರಿವಾಲ್ವರ್ ಮತ್ತು ಗುಂಡುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪತ್ತೆಯಾಗಿರುವ ಪಿಸ್ತೂಲುಗಳು ಮತ್ತು ಗುಂಡುಗಳು ತುಕ್ಕು ಹಿಡಿದಿದೆ. ವರ್ಷಗಳ ಹಿಂದೆಯೇ ಇದನ್ನು ಇಲ್ಲಿ ಎಸೆದು

ಕಾಸರಗೋಡು: ಪಿಸ್ತೂಲ್, ಸಜೀವ ಗುಂಡುಗಳು ಚರಂಡಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಶ್ವದಾದ್ಯಂತ ಕೊರೋನಗೆ 3,282 ಮಂದಿ ಬಲಿ

ಮಾಸ್ಕೋ, ಮಾ.7: ಡೆಡ್ಲಿ ಕೊರೋನ ವೈರಸ್‌ಗೆ ಜಗತ್ತಿನಾದ್ಯಂತ ಬಲಿಯಾದವರ ಸಂಖ್ಯೆ 3,282ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,241 ಹೊಸ ಸೋಂಕಿತರು ಪತ್ತೆಯಾಗಿದ್ದು, 84 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸಾವನ್ನಪ್ಪಿದವರು ಮಾತ್ರವಲ್ಲದೇ ವಿಶ್ವದಾದ್ಯಂತ ಸೋಂಕು ಪೀಡಿತರ ಸಂಖ್ಯೆ 95,333ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 80,565 ಜನರು ಚೀನಾ ಪ್ರಜೆಗಳು ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ 2019ರ ಡಿಸೆಂಬರ್‌ನಲ್ಲಿ ಕಂಡುಬಂದಿದ್ದ ಕೊರೋನ

ವಿಶ್ವದಾದ್ಯಂತ ಕೊರೋನಗೆ 3,282 ಮಂದಿ ಬಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತುಮಕೂರು: ಭೀಕರ ಅಪಘಾತ; 12 ಮಂದಿ ಮೃತ್ಯು

ತುಮಕೂರು, ಮಾ.6: ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಕುಣಿಗಲ್ ಸಮೀಪ ನಡೆದಿದೆ. ಮೃತರನ್ನು ಮಂಜುನಾಥ್ (35), ತನುಜ (25), ಗೌರಮ್ಮ (60), ರತ್ನಮ್ಮ (52), ಸುಂದರರಾಜ್ (48), ರಾಜೇಂದ್ರ (27), ಸರಳ (32), ಪ್ರಶನ್ಯಾ (14), ಬೆಂಗಳೂರಿನ ದೊಡ್ಡ ಆಲದಮರ ಮೂಲದ ಲಕ್ಷ್ಮೀಕಾಂತ್ (24), ಸಂದೀಪ (36), ಮಧು (28) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೂ ನಾಲ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರು: ಭೀಕರ ಅಪಘಾತ; 12 ಮಂದಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೈಂದೂರು: ಬೈಕುಗಳ ಢಿಕ್ಕಿ; ಓರ್ವ ಮೃತ್ಯು

ಕುಂದಾಪುರ, ಮಾ.6: ಎರಡು ಬೈಕ್‌ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ಇನ್ನೊಬ್ಬ ಸವಾರ ಮತ್ತು ಇಬ್ಬರು ಸಹಸವಾರರು ಗಂಭೀರ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಕೊಲ್ಲೂರು ರಸ್ತೆಯ ಗೋಳಿಹೊಳೆ ಮಸೀದಿ ಸಮೀಪ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಬೈಕ್ ಸವಾರನನ್ನು ಸಾರ್ಕಲ್ಲು ತೊಂಡ್ಳೆ ನಿವಾಸಿ ಸುಧೀರ್ ಗೌಡ(25) ಎಂದು ಗುರುತಿಸಲಾಗಿದೆ. ಸುಧೀರ್ ಗೌಡ ಹಾಗೂ ಆತನ ಸ್ನೇಹಿತ ಸುರೇಂದ್ರ ಗೌಡ ಇಬ್ಬರು ತೊಂಡ್ಳೆಯಿಂದ ಗೋಳಿಹೊಳೆ ಮೂರುಕೈಗೆ ಬೈಕಿನಲ್ಲಿ ಹೋಗಿದ್ದರೆನ್ನಲಾಗಿದೆ. ಇದೇ

ಬೈಂದೂರು: ಬೈಕುಗಳ ಢಿಕ್ಕಿ; ಓರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಸೆಂಗಾರ್ ದೋಷಿ

ಹೊಸದಿಲ್ಲಿ, ಮಾ.4: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ದೋಷಿ ಎಂದು ದಿಲ್ಲಿಯ ತೀಸ್ ಹಜಾರಿ ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2018ರ ಎಪ್ರಿಲ್‌ನಲ್ಲಿ ಸಂತ್ರಸ್ತೆಯ ತಂದೆಗೆ ಸೆಂಗಾರ್ ಸಹೋದರ ಅಟುಲ್ ಸೆಂಗಾರ್ ಮತ್ತು ಸಹಚರರು ಮನಸೋ ಇಚ್ಛೆ ಥಳಿಸಲಾಗಿತ್ತು. ನಂತರ ಪೊಲೀಸರು ಅವರನ್ನು ಆಸ್ಪತ್ರೆಗೆ ಸಾಗಿಸುವ ಬದಲು ಠಾಣೆಗೆ ಕರೆದೊಯ್ದಿದ್ದರು. ಇದಾದ ಎರಡು ದಿನಗಳ ಬಳಿಕ ಅವರು ಠಾಣೆಯಲ್ಲಿ

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಸೆಂಗಾರ್ ದೋಷಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ➤ 23 ಲಕ್ಷದ ಗಾಂಜಾ ಸಹಿತ 6 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು. ಮಾ. 04, ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು 23 ಲಕ್ಷ ರೂ. ವೌಲ್ಯದ 43 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಸಹಿತ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗದ್ದಾರೆ. ಬಂಧಿತರನ್ನು ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆಂಧ್ರಪ್ರದೇಶ ಮೂಲದವರಾದ ಕವಿತಾ(23), ಕಿಲ್ಲೊ ಧನುರಾಜೈ (25), ಪಂಗೈ ಮತ್ಯರಾಜು (26) ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಲಪಟ್ಟಿ ಸುಬ್ಬಾರೆಡ್ಡಿ (42),

ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ➤ 23 ಲಕ್ಷದ ಗಾಂಜಾ ಸಹಿತ 6 ಮಂದಿ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: 33 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು

ಉಡುಪಿ, ಮಾ.4: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಪಡುಬಿದ್ರೆ ನಂದಿಕೂರಿನ ಕೈಗಾರಿಕಾ ವಲಯದಲ್ಲಿರುವ ಆಯುಷ್ ಎನ್‌ವೈರ್‌ಟೆಕ್ ಪ್ರೈ.ಲಿಮಿಟೆಡ್‌ನಲ್ಲಿ ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಯಿತು. ಜಿಲ್ಲೆಯ ಸೆನ್ ಅಪರಾಧ ಠಾಣೆಯ 11 ಪ್ರಕರಣಗಳಲ್ಲಿ 31.84 ಕೆ.ಜಿ., ಮಣಿಪಾಲ ಠಾಣೆಯ ನಾಲ್ಕು ಪ್ರಕರಣಗಳಲ್ಲಿ 1.56 ಕೆ.ಜಿ. ಹಾಗೂ ಉಡುಪಿ ನಗರ ಠಾಣೆಯ ಎರಡು ಪ್ರಕರಣಗಳಲ್ಲಿ 1.67 ಕೆ.ಜಿ. ಸೇರಿದಂತೆ ಒಟ್ಟು 17 ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಒಟ್ಟು 32 ಕೆಜಿ 883 ಗ್ರಾಂ ಗಾಂಜಾವನ್ನು ನಾಶಪಡಿಸಲಾಯಿತು. ಈ ಪ್ರಕ್ರಿಯೆಯಲ್ಲಿ

ಉಡುಪಿ: 33 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಿರಿಯಡ್ಕ: ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ

ಉಡುಪಿ, ಮಾ.2: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ರೈತನೋರ್ವ ಮೃತಪಟ್ಟ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ರೈತನನ್ನು ಪೆರ್ಡೂರು ಗ್ರಾಮದ ಮೂಡು ಜೆಡ್ಡು ಮನೆ ನಿವಾಸಿ ಗುಂಡು ನಾಯ್ಕಾ (58) ಎಂದು ಗುರುತಿಸಲಾಗಿದೆ. ಮೃತರು ತೋಟ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು, ಕೃಷಿಗಾಗಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಕೃಷಿಯಲ್ಲಿ ಸರಿಯಾದ ಆದಾಯ ಬಾರದೇ ಇದ್ದುದರಿಂದ ಸಾಲ ತೀರಿಸಲು ಸಾಧ್ಯವಿಲ್ಲದೇ ನೊಂದುಕೊಂಡಿದ್ದು, ಆಗ್ಗಾಗೆ ಸಾಯುವ ಮಾತನಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ

ಹಿರಿಯಡ್ಕ: ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಸ್ ಢಿಕ್ಕಿ ಹೊಡೆದು ಬೈಕ್ ಸವಾರಿಬ್ಬರು ಮೃತ್ಯು

ಬೆಂಗಳೂರು, ಮಾ.2: ಬೈಕ್‌ಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ನಗರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಕೂಳೂರು ನಿವಾಸಿ ಸಚಿನ್(24) ಹಾಗೂ ಪ್ರತಾಪ್(24) ಎಂದು ಗುರುತಿಸಲಾಗಿದೆ. ಸ್ನೇಹಿತರಾಗಿದ್ದ ಇವರಿಬ್ಬರೂ ತಮ್ಮ ಗ್ರಾಮಕ್ಕೆ ಹೋಗಲು ಮಂಗಳವಾರಪೇಟೆ ಬಳಿ ಪೆಟ್ರೋಲ್ ಹಾಕಿಸಿಕೊಂಡು ಬುಲೆಟ್ ಬೈಕ್‌ನಲ್ಲಿ ಮುಂಜಾನೆ 4:30ರ ಸುಮಾರಿಗೆ ಮಂಗಳವಾರಪೇಟೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ

ಬಸ್ ಢಿಕ್ಕಿ ಹೊಡೆದು ಬೈಕ್ ಸವಾರಿಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top