ಕ್ರೈಮ್ ನ್ಯೂಸ್

ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಮೈದುನನ ಕೊಂದ ಅತ್ತಿಗೆ ➤ ತಾಯಿ – ಮಗನ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.09. ಆಸ್ತಿ ತಕರಾರಿನ ಹಿನ್ನೆಲೆಯಲ್ಲಿ ಅತ್ತಿಗೆ ಹಾಗೂ ಮೈದುನನ ನಡುವೆ ಚಕಮಕಿ ನಡೆದು ಪಾನಮತ್ತನಾಗಿದ್ದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಸುಳ್ಯ ಸಮೀಪದ ಪೆರಾಜೆ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಪೆರಾಜೆ ಗ್ರಾಮದ ಪೀಚೆ ನಿವಾಸಿ ಶ್ರೀಮತಿ ತಾರಿಣಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಇವರ ನಡುವೆ ಆಸ್ತಿ ತಕರಾರು ಇತ್ತೆನ್ನಲಾಗಿದೆ. ಶುಕ್ರವಾರ ತಡರಾತ್ರಿ ಉತ್ತರಕುಮಾರ ಹಾಗೂ ಅತ್ತಿಗೆಯ ನಡುವೆ ಕ್ಷುಲ್ಲಕ […]

ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಮೈದುನನ ಕೊಂದ ಅತ್ತಿಗೆ ➤ ತಾಯಿ – ಮಗನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಜ್ಪೆಯಲ್ಲಿ ಬೈಕಿಗೆ ಟಿಪ್ಪರ್ ಢಿಕ್ಕಿ: ಮಹಿಳೆ ಮೃತ್ಯು

ಮಂಗಳೂರು, ಮೇ 7: ಬೈಕಿಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ಮಹಿಳೆ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬಜ್ಪೆಯ ಪಾಪಿಲಾನ್ ಬಾರ್ ಸಮೀಪ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಜೋಕಟ್ಟೆ ನಿವಾಸಿ ಶಶಿಕಲಾ(45) ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯೊಂದಿಗೆ ತೆರಳುತ್ತಿದ್ದರು. ಬೈಕ್ ಚಲಾಯಿಸುತ್ತಿದ್ದ ಶಶಿಕಲಾ ಅವರ ಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಅಪಘಾತಕ್ಕೆ ಕಾರಣವಾದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ ಎಂದ ತಿಳಿದು ಬಂದಿದೆ.

ಬಜ್ಪೆಯಲ್ಲಿ ಬೈಕಿಗೆ ಟಿಪ್ಪರ್ ಢಿಕ್ಕಿ: ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಆತೂರು: ಮೆಸ್ಕಾಂ ಮೀಟರ್ ರೀಡರ್ ಗೆ ಹಲ್ಲೆ ➤ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ,‌ ಮೇ.07. ಉಪ್ಪಿನಂಗಡಿ ಮೆಸ್ಕಾಂ ಕಛೇರಿಯ ಗುತ್ತಿಗೆ ಅಧಾರದಲ್ಲಿ ಮೀಟರ್ ರೀಡರ್ ಓರ್ವರಿಗೆ ವೃತ್ತಿ ನಿರ್ವಹಿಸುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದ್ದು ಬುಧವಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಆಲಂಕಾರು ಕಕ್ವೆ ನಿವಾಸಿ ಶಿವಣ್ಣ ಗೌಡ ಹಲ್ಲೆಗೊಳಗಾದವರು. ಕೊಯಿಲ ಗ್ರಾಮದ ಆತೂರು ನಿವಾಸಿ ಯೂಸುಫ್ ಎಂಬವರ ಮನೆಯ ಮೀಟರ್ ರೀಡಿಂಗ್ ನಡೆಸಿ ರಸೀದಿಯನ್ನು ಮನೆಯಲ್ಲಿದ್ದ ಹಮೀದ್ ಎಂಬವರಿಗೆ ನೀಡಿದ್ದು, ಈ ಸಂದರ್ಭ ಬಿಲ್ಲು ಹೆಚ್ಚು ನೀಡಿದ್ದೀರಿ ಎಂದು

ಆತೂರು: ಮೆಸ್ಕಾಂ ಮೀಟರ್ ರೀಡರ್ ಗೆ ಹಲ್ಲೆ ➤ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ದೇಶದಲ್ಲಿ ಒಂದೇ ದಿನ ಕೊರೋನ ಸೋಂಕಿಗೆ 48 ಮಂದಿ ಸಾವು: 1,396 ಹೊಸ ಪ್ರಕರಣ ಪತ್ತೆ

ಹೊಸದಿಲ್ಲಿ, ಎ.27: ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,396 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. 48 ಮಂದಿ ಕೊರೋನಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 27,892 ಕ್ಕೆ ಏರಿಕೆಯಾಗಿದ್ದು, ಈವರೆಗೆ 872 ಮಂದಿ ಸಾವನ್ನಪ್ಪಿದ್ದಾರೆ. 6,185 ಜನರು ಗುಣಮುಖರಾಗಿದ್ದು, 20,835 ಜನರು ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 8,068 ಜನರಿಗೆ ಸೋಂಕು ತಗುಲಿದ್ದು, 342 ಜನರು ಮೃತಪಟ್ಟಿದ್ದಾರೆ. ಗುಜರಾತ್ ನಲ್ಲಿ

ದೇಶದಲ್ಲಿ ಒಂದೇ ದಿನ ಕೊರೋನ ಸೋಂಕಿಗೆ 48 ಮಂದಿ ಸಾವು: 1,396 ಹೊಸ ಪ್ರಕರಣ ಪತ್ತೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಂಪ್ಯ: ಅಕ್ರಮ ಕಳ್ಳಬಟ್ಟಿ ಸಾರಾಯಿ ಪತ್ತೆಹಚ್ಚಿದ ಸಂಪ್ಯ ಪೊಲೀಸರು ➤ ಕಳ್ಳಬಟ್ಟಿ ಸಾರಾಯಿ ಸಹಿತ ಕಾರು ವಶಕ್ಕೆ, ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.22. ಅಕ್ರಮ ಕಳ್ಳಬಟ್ಟಿ ಸಾರಾಯಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಸಂಪ್ಯ ಠಾಣಾ ಎಸ್.ಐ. ಉದಯ ರವಿ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿ ಸಾರಾಯಿ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಂಡ ಘಟನೆ ಬುಧವಾರದಂದು ಠಾಣಾ ವ್ಯಾಪ್ತಿಯ ಅಮ್ಚಿನಡ್ಕ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ನೆಟ್ಟಣಿಗೆ ಮುಡ್ನೂರು ನಿವಾಸಿ ಕೇಶವ ಪಾಟಾಳಿ ಎಂದು ಗುರುತಿಸಲಾಗಿದೆ. ಕಳ್ಳಬಟ್ಟಿ ಸಾರಾಯಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಮ್ಚಿನಡ್ಕ ಬಳಿ ಕಾರನ್ನು ತಡೆದು ತಪಾಸಣೆ

ಸಂಪ್ಯ: ಅಕ್ರಮ ಕಳ್ಳಬಟ್ಟಿ ಸಾರಾಯಿ ಪತ್ತೆಹಚ್ಚಿದ ಸಂಪ್ಯ ಪೊಲೀಸರು ➤ ಕಳ್ಳಬಟ್ಟಿ ಸಾರಾಯಿ ಸಹಿತ ಕಾರು ವಶಕ್ಕೆ, ಓರ್ವನ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ➤ ದನ, ಮಾಂಸ ವಶ: ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬುಧವಾರ ಬೆಳ್ಳಂಬೆಳಗ್ಗೆ ಇಲ್ಲಿನ ಕಳಾರ ಎಂಬಲ್ಲಿನ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೋಲಿಸ್ ತಂಡ ಒಂದು ದನ, ಹಾಗೂ ಮಾಂಸ ವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ಜಾಬೀರ್ ಹಾಗೂ ಹಾಶಿರ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್.ಐ ರುಕ್ಮ ನಾಯ್ಕ್ ಅವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಭವಿತ್ ರೈ. ಶಿವರಾಜ್, ಕನಕರಾಜ್, ಮೋನಪ್ಪ,

ಕಡಬ: ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ➤ ದನ, ಮಾಂಸ ವಶ: ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

Breaking news ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ

ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ ಬೆಂಗಳೂರು, ಎ. 21: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 7 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ವಿಜಯಪುರ 3, ಕಲಬುರಗಿ 3, ದ.ಕ.ದ ಓರ್ವರಿಗೆ ಸೋಂಕು ದೃಢಪಟ್ಟಿದೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ 67 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Breaking news ದ.ಕ.ದ ಓರ್ವ ಸೇರಿ ರಾಜ್ಯದಲ್ಲಿ 7 ಮಂದಿಗೆ ಕೊರೋನ ಸೋಂಕು ದೃಢ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

Breaking news ಕಲಬುರಗಿಯಲ್ಲಿ ಕೊರೋನ ಸೋಂಕಿಗೆ 4 ನೇ ಬಲಿ: 80 ವರ್ಷದ ವೃದ್ಧ ಮೃತ್ಯು

ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ ಕಲಬುರಗಿ, ಎ.21: ಕೊರೋನ ಸೋಂಕಿಗೆ ಜಿಲ್ಲೆಯ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದರಿಂದ ಮೃತಪಟ್ಟವರ ಸಂಖ್ಯೆ ‌ನಾಲ್ಕಕ್ಕೇರಿದಂತಾಗಿದೆ. ಒಟ್ಟು ರಾಜ್ಯದಲ್ಲಿ ಕೊರೋನದಿಂದ 17 ಮಂದಿ ಸಾವನ್ನಪ್ಪಿದ್ದಾರೆ. ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಜ್ವರ ‌ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಅವರ ವರದಿ ಬಂದಿದ್ದು, ಕೋವಿಡ್ 19 ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

Breaking news ಕಲಬುರಗಿಯಲ್ಲಿ ಕೊರೋನ ಸೋಂಕಿಗೆ 4 ನೇ ಬಲಿ: 80 ವರ್ಷದ ವೃದ್ಧ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೊರೋನ ಸೋಂಕಿಗೆ ಭಾರತೀಯ ಮೂಲದ ಯುಕೆ ವೈದ್ಯ ಬಲಿ

ಲಂಡನ್, ಎ.21:  ಇಂಗ್ಲೇಂಡ್ ನಲ್ಲಿರುವ ಭಾರತೀಯ ಮೂಲದ ವೈದ್ಯ ಮಂಜೀತ್ ಸಿಂಗ್  ರಿಯಾದ್ ಕೋವಿಡ್ 19 ಮಹಾಮಾರಿಗೆ ಬಲಿಯಾಗಿದ್ದಾರೆ. ತುರ್ತು ಔಷಧ ಸಲಹೆಗಾರರಾಗಿದ್ದಇವರಿಗೆ ಡರ್ಬಿಶೈರ್ ನಲ್ಲಿ  ಸಹೋದ್ಯೋಗಿಗಳು ಮತ್ತು ರೋಗಿಗಳಿಂದ ಭಾರೀ ಗೌರವವಿತ್ತು. 1992 ರಲ್ಲಿ ಲೀಸೆಸ್ಟರ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ  ಪಡೆದ ರಿಯಾತ್, ಅಪಘಾತ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯ ಮೊದಲ ಸಿಖ್  ತುರ್ತು ಸಲಹೆಗಾರರಾಗಿದ್ದರು. ಆ ಮೂಲಕ ವೈರಸ್‌ಗೆ ಬಲಿಯಾದ  ಭಾರತೀಯ ಮೂಲದ ವೃತ್ತಿಪರ ವೈದ್ಯರೆನಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ  ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ

ಕೊರೋನ ಸೋಂಕಿಗೆ ಭಾರತೀಯ ಮೂಲದ ಯುಕೆ ವೈದ್ಯ ಬಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಕಡಬ: ಮನೆಯ ಅಟ್ಟದಿಂದ ಕೆಳಕ್ಕೆ ಬಿದ್ದು ಯುವಕ ಗಂಭೀರ ➤ ಪುತ್ತೂರಿನ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಎ.19. ಮನೆಯ ಅಟ್ಟದಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಭಾನುವಾರ ರಾತ್ರಿ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ನಾಕೂರು ನಿವಾಸಿ ಹಂಝ ಎಂಬವರ ಪುತ್ರ ಪೈಝಲ್(26) ಎಂಬಾತ ತನ್ನ ಮನೆಯ ಅಟ್ಟದಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ. ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಡಬದ 108 ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಬ: ಮನೆಯ ಅಟ್ಟದಿಂದ ಕೆಳಕ್ಕೆ ಬಿದ್ದು ಯುವಕ ಗಂಭೀರ ➤ ಪುತ್ತೂರಿನ ಆಸ್ಪತ್ರೆಗೆ ದಾಖಲು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top