ಕ್ರೈಮ್ ನ್ಯೂಸ್

ಪುತ್ತೂರು: ಬೈಕ್,ಜೀಪ್ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 28: ಕಳೆದ ದಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ-ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ಬೈಕ್ ಮತ್ತು ಬೊಲೆರೊ ಜೀಪು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪರ್ಲಡ್ಕದ ಹಾಸೀಮ್(19) ಎಂದು ಗುರುತಿಸಲಾಗಿದೆ.     ಹಾಸೀಮ್ ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಬೈಪಾಸ್ ರಸ್ತೆಗೆ ಎಂಟ್ರಿ ಕೊಡುತ್ತಿದ್ದ ಬೊಲೆರೊ ಜೀಪು ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡಿದ್ದು, […]

ಪುತ್ತೂರು: ಬೈಕ್,ಜೀಪ್ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ವಿದ್ಯುತ್ ಪ್ರವಾಹಿಸಿ ಓರ್ವ ಮೃತ್ಯು ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ನ. 27: ಬೆಳ್ತಂಗಡಿ ತಾಲೂಕಿನ ಕಳೆಂಜ ಇಲ್ಲಿನ ಶಾಲೆತ್ತಡ್ಕ ಜಂಕ್ಷನ್ ನಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ.     ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯನ್ನು ಪ್ರತಾಪ್ ಮೂಡಬಿದ್ರೆ(20.ವ) ಎಂದು ಗುರುತಿಸಲಾಗಿದೆ. ಮೂಡಬಿದ್ರೆಯ ಗುತ್ತಿಗೆದಾರರಾದ ಕುಮಾರ್ ಎಲೆಕ್ಟ್ರಿಕಲ್ಸ್ ನ ಸಿಬ್ಬಂದಿಗಳಾದ ಇವರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬದಲ್ಲಿ ಇರುವಾಗಲೇ ವಿದ್ಯುತ್

ಬೆಳ್ತಂಗಡಿ: ವಿದ್ಯುತ್ ಪ್ರವಾಹಿಸಿ ಓರ್ವ ಮೃತ್ಯು ➤ ಇಬ್ಬರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಕುದುರೆ ರೇಸ್ ಜೂಜು ➤ ನಾಲ್ವರು ಆರೋಪಿಗಳು ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 27: ಸಿಸಿಬಿ ಪೊಲೀಸರು ಕುದುರೆ ರೇಸ್ ಜೂಜು ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 20 ಲಕ್ಷ ರೂಪಾಯಿ ಹಾಗೂ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ವಿಜಯ ನಗರದ ಸತ್ಯನಾರಾಯಣ,ಕುಮಾರ, ಶ್ರೀಕಾಂತ್ ಹಾಗೂ ಶೇಷಾದ್ರಿಪುರಂ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ.     ಆರ್ ಪಿ ಸಿ ಬಡಾವಣೆಯ ಮನೆಯೊಂದರಲ್ಲಿ ಬೆಟ್ಟಿಂಗ್ ಕಟ್ಟಿ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 20 ಲಕ್ಷ ರೂ

ಕುದುರೆ ರೇಸ್ ಜೂಜು ➤ ನಾಲ್ವರು ಆರೋಪಿಗಳು ಖಾಕಿ ಬಲೆಗೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಮಾನುಷವಾಗಿ ಜಾನುವಾರು ಸಾಗಾಟ ➤ ಐದು ದನಗಳ ರಕ್ಷಣೆ,ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ ನ. 27: ಅಮಾನುಷ ರೀತಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬೆಳಗ್ಗೆ ತಡೆದಿದ್ದು, ಐದು ದನಗಳನ್ನು ರಕ್ಷಿಸಿದ್ದು, ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.   ಕಾರ್ಕಳ ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ಹಿಂಸಾತ್ಮಕವಾಗಿ ದನಗಳನ್ನು ತುಂಬಿಸಿ ಅತೀ ವೇಗವಾಗಿ ಹೋಗುತ್ತಿದ್ದ ಓಮ್ನಿ ಕಾರನ್ನು ಪೊಲೀಸರು ಅನುಮಾನಗೊಂಡು ಪೇಟೆಯ ಬಜಾಜ್ ಶೋರೂಂ ಬಳಿಯ ಅಡ್ಡರಸ್ತೆಯಲ್ಲಿ ತಡೆದಿದ್ದಾರೆ. ಕಾರು ನಿಲ್ಲಿಸಿ ಚಾಲಕ ಸಹಿತ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಅಮಾನುಷವಾಗಿ ಜಾನುವಾರು ಸಾಗಾಟ ➤ ಐದು ದನಗಳ ರಕ್ಷಣೆ,ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಬೈಕ್ ಮತ್ತು ಆಟೋರಿಕ್ಷಾ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು ನ. 27: ಕಳೆದ ದಿನ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಹನಫಿ ಬಜಾರ್ ಬಳಿ  ಬೈಕ್ ಹಾಗೂ ಆಟೋರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಾಗೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಚೆರ್ಕಳ ಮಾಸ್ತಿಕುಂಡು ಪೊವ್ವಲ್ ನಿವಾಸಿ ಮಸೂದ್(25) ಎಂದು ಗುರುತಿಸಲಾಗಿದೆ.       ಮೃತಪಟ್ಟ ವ್ಯಕ್ತಿಯನ್ನು ಗುರುತು ಚೀಟಿ ಹಾಗೂ ಬೈಕ್ ನಂಬರ್ ಸಹಾಯದಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದೆ. ಗಂಭೀರ ಗಾಯಗೊಂಡಿದ್ದ ಸಂದೀಪ್

ಕಾಸರಗೋಡು: ಬೈಕ್ ಮತ್ತು ಆಟೋರಿಕ್ಷಾ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಂಜದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಪಂಜ ನ. 27: ಕಳೆದ ದಿನ ಪಂಜದ ಯುವಕನೋರ್ವ ಬೆಂಗಳೂರಿನ ತನ್ನ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪಂಜದ ಬರೆಮೇಲು ಮೋನಪ್ಪ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರ ಜತಿನ್ ಕುಮಾರ್(30)(ದೀಕ್ಷಿತ್) ಎಂದು ಗುರುತಿಸಲಾಗಿದೆ.   ಬೆಂಗಳೂರಿನಲ್ಲಿ ಹುಂಡೈ ಕಂಪೆನಿಯ ಉದ್ಯೋಗಿಯಾಗಿರುವ ಇವರು ಕಳೆದ ದಿನ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ವಿಷಯ ತಿಳಿದ ಸಂಬಂಧಿಕರು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ

ಪಂಜದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು : ಕದ್ರಿಯಲ್ಲಿ ಉಗ್ರ ಸಂಘಟನೆ ಲಷ್ಕರ್‌‌ ಪರ ಗೋಡೆ ಬರಹ

(ನ್ಯೂಸ್ ಕಡಬ) newskadaba.com ಮಂಗಳೂರು ನ. 27: ಮಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ .ಸರ್ಕ್ಯೂಟ್‌ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಕಾಂಪೌಂಡ್‌ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿದೆ. ಲಷ್ಕರ್ ಉಗ್ರರನ್ನು ಕರೆಸುವಂತೆ ನಮಗೆ ಒತ್ತಾಯ ಮಾಡಬೇಡಿ ಎಂದೆಲ್ಲಾ ಗೋಡೆಯಲ್ಲಿ ಬರೆಯಲಾಗಿದೆ.       ಇದು ಜನನಿಬಿಡ ರಸ್ತೆಯಾಗಿದ್ದು,  ಹತ್ತಿರದಲ್ಲೇ ಕದ್ರಿ ಪಾರ್ಕ್, ಕದ್ರಿ ಪೊಲೀಸ್ ಠಾಣೆಯಿದೆ.ಕಳೆದ ರಾತ್ರಿ ತಡರಾತ್ರಿ ಈ ವಿವಾದಾತ್ಮಕ ಬರಹ ಬರೆಯಲಾಗಿದೆ

ಮಂಗಳೂರು : ಕದ್ರಿಯಲ್ಲಿ ಉಗ್ರ ಸಂಘಟನೆ ಲಷ್ಕರ್‌‌ ಪರ ಗೋಡೆ ಬರಹ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ವಾಹನ ಶೋ ರೂಮ್ ಒಳಗೆ ನುಗ್ಗಿ ಮಾಜಿ ನೌಕರನಿಂದ ದಾಂದಲೆ ➤ ಪಿಎಫ್‍ಗಾಗಿ ನಡೆಯಿತು ನೂಕಾಟ- ತಲ್ಲಾಟ

(ನ್ಯೂಸ್ ಕಡಬ) newskadaba.com ಪುತ್ತೂರು ನ. 26: ದ್ವಿಚಕ್ರ ವಾಹನ ಶೋ ರೂಮ್ ಗೆ ಅಕ್ರಮ ಪ್ರವೇಶಿಸಿ ಮಾಜಿ ನೌಕರ ದಾಂಧಲೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.     ಪುತ್ತೂರಿನ ಪ್ರತಿಷ್ಟಿತ ವಾಹನ ಶೋ ರೂಮ್ ವೊಂದಕ್ಕೆ ಮಾಜಿ ನೌಕರರಾದ ರಂಜನ್ (26) ಎಂಬುವರು ಅಕ್ರಮವಾಗಿ ಪ್ರವೇಶಿಸಿ ಅವರ ಪಿಎಫ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹೆಚ್ ಆರ್ ಗಿರೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದಲ್ಲದೆ, ಕ್ಯಾಬೀನ್ನಲ್ಲಿದ್ದ ಕೃಷ್ಣ ಕಿಶೋರ್ ಎಂಬುವರ ಮೇಲೆ ಹಲ್ಲಗೆ ಯತ್ನಿಸಿದ್ದಾನೆ, ಈ ವೇಳೆ ಕೃಷ್ಣ ಕಿಶೋರ್

ಪುತ್ತೂರು: ವಾಹನ ಶೋ ರೂಮ್ ಒಳಗೆ ನುಗ್ಗಿ ಮಾಜಿ ನೌಕರನಿಂದ ದಾಂದಲೆ ➤ ಪಿಎಫ್‍ಗಾಗಿ ನಡೆಯಿತು ನೂಕಾಟ- ತಲ್ಲಾಟ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಅಕ್ರಮ ಮರ ಸಾಗಾಟ ಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 26: ಕಡೇ ಶಿವಾಲಯ ಗ್ರಾಮದ ಬುಡೋಳಿ ಎಂಬಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಬಂಟ್ವಾಳ ಅರಣ್ಯ ಇಲಾಖೆ ಸಿಬ್ಬಂದಿಗಳು ಪುತ್ತೂರು ವಲಯ ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಪತ್ತೆ ಹಚ್ಚಿ ಲಾರಿ ಸಮೇತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.     ಬಂಟ್ವಾಳ ವಲಯ ಅರಣ್ಯಾಧಿಕಾರಿಗಳಾದ ರಾಜೇಶ್ ಬಳೆಗಾರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರೀತಂ ಎಸ್, ಯಶೋಧರ, ಅರಣ್ಯ ರಕ್ಷಕರುಗಳಾದ ಲಕ್ಷ್ಮೀ ನಾರಾಯಣ. ಜಿತೇಶ್, ಸಿಬ್ಬಂದಿಗಳಾದ ಪ್ರವೀಣ್ ಕಲ್ಮಲೆ, ಭಾಸ್ಕರ, ಡಿ. ಜಯರಾಂ ಪಾಲ್ಗೊಂಡಿದ್ದರು.

ಬಂಟ್ವಾಳ: ಅಕ್ರಮ ಮರ ಸಾಗಾಟ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ➤ ರೌಡಿಶೀಟರ್ ಓರ್ವನ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಕಳೆದ ದಿನ ರಾತ್ರಿ  ರೌಡಿಶೀಟರ್‌ ಓರ್ವನನ್ನು ಭೀಕರವಾಗಿ ಹತ್ಯೆಗೈದ  ಘಟನೆ ಬೊಕ್ಕಪಟ್ಟಣದ ಕರ್ನಲ್‌ ಗಾರ್ಡನ್‌ ಒಳಗಡೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಇಂದ್ರಜೀತ್‌ (29)  ಎಂದು ಗುರುತಿಸಲಾಗಿದೆ.     ಈತ ರೌಡಿಶೀಟರ್‌ ಎಂದು ತಿಳಿದು ಬಂದಿದ್ದು, ಕಳೆದ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ರಾತ್ರಿ ಸುಮಾರು 2 ಗಂಟೆಗೆ ಕರ್ನಲ್‌ ಗಾರ್ಡನ್‌ ಬಳಿ ಈತನ ಹತ್ಯೆಗೈಯಲಾಗಿದೆ ಹಾಗೂ

ಮಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ➤ ರೌಡಿಶೀಟರ್ ಓರ್ವನ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top