ಕ್ರೈಮ್ ನ್ಯೂಸ್

ಉಡುಪಿ: ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ -ಮಗನಿಗೆ ಪೊಲೀಸರಿಂದ ಹಲ್ಲೆ ➤ ಮಾನವ ಹಕ್ಕುಗಳ ಆಯೋಗಕ್ಕೆ ದೂರು

(ನ್ಯೂಸ್ ಕಡಬ) newskadaba.com ಉಡುಪಿ, ಜ. 27. ಬೈಕಿನಲ್ಲಿ ತೆರಳುತ್ತಿದ್ದ ತಾಯಿ ಹಾಗೂ ಮಗನನ್ನು ತಪಾಸಣೆ ನೆಪದಲ್ಲಿ ಥಳಿಸಿದ ಅಮಾನವೀಯ ಘಟನೆ ಇಲ್ಲಿನ ಕೋಟ ಎಂಬಲ್ಲಿ ನಡೆದಿದೆ. ಪ್ರಶಾಂತ್ ಎಂಬವರು, ಕೋಟ ಮೂರು ಕೈ ರಸ್ತೆಯಲ್ಲಿ ಸಾಯ್ಬರ ಕಟ್ಟೆಗೆಂದು ತಾಯಿ ಶಾರದಾ ಅವರನ್ನು ತನ್ನು ಬೈಕ್ ನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಕೋಟ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಬಿ.ಪಿ. ಮತ್ತು ಸ್ಟೇಶನ್ ಎಸ್ ಬಿ ರಾಜು ಎಂಬವರು ತಪಾಸಣೆಯ ನೆಪದಲ್ಲಿ ಪ್ರಶಾಂತ್ ಅವರ […]

ಉಡುಪಿ: ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ -ಮಗನಿಗೆ ಪೊಲೀಸರಿಂದ ಹಲ್ಲೆ ➤ ಮಾನವ ಹಕ್ಕುಗಳ ಆಯೋಗಕ್ಕೆ ದೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಒಂಟಿ ಮಹಿಳೆಯರಿದ್ದ ಮನೆಯ ಕಳ್ಳತನಕ್ಕೆ ಯತ್ನ ➤ ಇಬ್ಬರ ಬಂಧನ, ಓರ್ವ ಪರಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಜ. 27. ಒಂಟಿ ಮಹಿಳೆಯರಿದ್ದ ಮನೆಗೆ ಕನ್ನ ಹಾಕುತ್ತಿದ್ದ ಮೂವರಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಬ್ರಹ್ಮಾವರ ಬಳಿಯ ಶಿರಿಯಾ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಸುರೇಶ್, ಬೆಂಗಳೂರು ಮೂಲದ ರಾಕೇಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ನಂದೀಶ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇವರು ಒಂಟಿ ಮಹಿಳೆಯರಿದ್ದ ಮನೆಗೆ ಬಂದು ವಸ್ತುಗಳನ್ನು ದೋಚುತ್ತಿದ್ದರು. ಇದನ್ನು ಪ್ರಶ್ನಿಸಿದ ಸ್ಥಳಿಯರಿಗೆ ಚೂರಿ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಕುರಿತು ಬ್ರಹ್ಮಾವರ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳೀಯರು

ಉಡುಪಿ: ಒಂಟಿ ಮಹಿಳೆಯರಿದ್ದ ಮನೆಯ ಕಳ್ಳತನಕ್ಕೆ ಯತ್ನ ➤ ಇಬ್ಬರ ಬಂಧನ, ಓರ್ವ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಆಸ್ಪತ್ರೆಗೆ ತಪಾಸಣೆಗೆಂದು ಬಂದ ಕಾಮುಕನಿಂದ ನರ್ಸ್ ಗೆ ಕಿರುಕುಳ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 27. ಇಲ್ಲಿನ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ತಪಾಸಣೆಗೆಂದು ಬಂದಿದ್ದ ವ್ಯಕ್ತಿಯೋರ್ವ ತಪಾಸಣೆ ನಡೆಸುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಧಿತ ಆರೋಪಿಯನ್ನು ಕೆ.ಸಿ. ರೋಡ್ ಕಾಟುಂಗುರ ಗುಡ್ಡೆ ನಿವಾಸಿ ಇಬ್ರಾಹಿಂ ಖಲೀಲ್ (27) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಕೋಟೆಕಾರಿನ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಆರೋಪಿಯು ತಪಾಸಣೆ ನಡೆಸುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಕುರಿತು

ಉಳ್ಳಾಲ: ಆಸ್ಪತ್ರೆಗೆ ತಪಾಸಣೆಗೆಂದು ಬಂದ ಕಾಮುಕನಿಂದ ನರ್ಸ್ ಗೆ ಕಿರುಕುಳ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪತ್ನಿಯ ಮೇಲಿನ ದ್ವೇಷಕ್ಕೆ 18 ಮಂದಿ ಮಹಿಳೆಯರನ್ನು ಹತ್ಯೆಗೈದ ನರಹಂತಕ..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 27. 18 ಮಹಿಳೆಯರ ಸರಣಿ ಹತ್ಯೆಗೈದ ಆರೋಪದಡಿಯಲ್ಲಿ 45 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮೈನಾ ರಾಮುಲು ಎಂದು ಗುರುತಿಸಲಾಗಿದೆ. ಈತ ವಿವಾಹವಾದ ಕೆಲವೇ ದಿನಗಳಲ್ಲಿ ಈತನ ಪತ್ನಿ ದೂರವಾಗಿ, ಬೇರೊಬ್ಬನನ್ನು ಮದುವೆಯಾಗಿರುವ ಹಿನ್ನೆಲೆಯಲ್ಲಿ ಆತ ಈ ಕೃತ್ಯ ಎಸಗುತ್ತಿದ್ದನು ಎನ್ನಲಾಗಿದೆ. ಮಹಿಳೆಯರ ಸರಣಿ ಕೊಲೆ ಮಾತ್ರವಲ್ಲದೆ, ಇತರ ಅಪರಾಧ ಚಟುವಟಿಕೆಗಳಲ್ಲೂ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಪತ್ನಿ ಬಿಟ್ಟು ಹೋಗಿದ್ದರಿಂದ

ಪತ್ನಿಯ ಮೇಲಿನ ದ್ವೇಷಕ್ಕೆ 18 ಮಂದಿ ಮಹಿಳೆಯರನ್ನು ಹತ್ಯೆಗೈದ ನರಹಂತಕ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಸಮೀಪದ ಕಟ್ಟಡವೊಂದರಿಂದ ಆಯತಪ್ಪಿ ಬಿದ್ದ ಸೆಕ್ಯುರಿಟಿ ಗಾರ್ಡ್ ಓರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕುತ್ತಾರಿನ‌ ಸತೀಶ್(38) ಎಂದು ಗುರುತಿಸಲಾಗಿದೆ. ಇವರು ಲಿಫ್ಟ್ ಚೆಕ್ ಮಾಡಲೆಂದು ತೆರಳಿದ್ದ ವೇಳೆ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜೀಪು ಹಾಗೂ ಟ್ರೇಲರ್ ನಡುವೆ ಢಿಕ್ಕಿ ➤ ಒಂದೇ ಕುಟುಂಬದ 8 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ರಾಜಸ್ಥಾನ, ಜ. 27. ಜೀಪು ಹಾಗೂ ಟ್ರೇಲರ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಮೃತಪಟ್ಟ ಘಟನೆ ಶೇಖಾವತಿಯ ಸಿಕಾರ್ ಜಿಲ್ಲೆಯ ಖತುಷ್ಯಂ ಎಂಬಲ್ಲಿ ನಡೆದಿದೆ.ಅಪಘತಕ್ಕೊಳಗಾದವರು ಮಧ್ಯಪ್ರದೇಶ ಮೂಲದವರಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸಿದ್ದಾರೆ.

ಜೀಪು ಹಾಗೂ ಟ್ರೇಲರ್ ನಡುವೆ ಢಿಕ್ಕಿ ➤ ಒಂದೇ ಕುಟುಂಬದ 8 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆಂದು ತೆರಳಿದ್ದ ಯುವಕ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 25. ಇಬ್ಬರು ವ್ಯಕ್ತಿಗಳು ಜಲಪಾತಕ್ಕೆ ಮೋಜಿಗಾಗಿ ತೆರಳಿದ್ದ ವೇಳೆ ಅಯುತಪ್ಪಿ ಜಲಪಾತಕ್ಕೆ ಬಿದ್ದು, ಓರ್ವ ಮೃತಪಟ್ಟ ದುರ್ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯ ಎಳನೀರು ಘಾಟ್ ಬಂಗಾರಪಲ್ಕೆ ಅರಣ್ಯ ವ್ಯಾಪ್ತಿಯ ಬಡಮನೆಹಬ್ಬಿ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ(26) ಎಂದು ಗುರುತಿಸಲಾಗಿದೆ. ಇಲ್ಲಿ ಪ್ರವೇಶಕ್ಕೆ ಅನುಮತಿ ಇಲ್ಲದೇ ಇದ್ದರೂ 5 ಜನರ ತಂಡವು ಅನಧಿಕೃತವಾಗಿ ಬಂಗಾರಪಲ್ಕೆ

ಬೆಳ್ತಂಗಡಿ: ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆಂದು ತೆರಳಿದ್ದ ಯುವಕ ನೀರುಪಾಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಕಾರು ಮತ್ತು ಬೊಲೆರೋ ಅಪಘಾತದ ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು ➤ ಮೃತರ ಸಂಖ್ಯೆ ಎರಡಕ್ಕೇರಿಕೆ

ಕಡಬ, ಜ.25. ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಭಾನುವಾರ ಸಂಜೆ ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ರಿಟ್ಝ್ ಕಾರು ಚಾಲಕ ನವೀನ್ ಮಾರ್ಟಿಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಮೃತರ ತಂದೆ ನಿಕೋಲಸ್ ಮಾರ್ಟಿಸ್, ತಾಯಿ ಸಿಸಿಲಿಯಾ ಲಸ್ರಾದೋ, ಸಹೋದರಿ

ಕಡಬ: ಕಾರು ಮತ್ತು ಬೊಲೆರೋ ಅಪಘಾತದ ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು ➤ ಮೃತರ ಸಂಖ್ಯೆ ಎರಡಕ್ಕೇರಿಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 25. ಇಲ್ಲಿನ ವೃದ್ಧಾಶ್ರಮದಲ್ಲಿದ್ದ ಬಿಗ್‌ ಬಾಸ್‌ ಖ್ಯಾತಿಯ ನಟಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಜಯಶ್ರೀ ರಾಮಯ್ಯ ಎಂದು ಗುರುತಿಸಲಾಗಿದೆ. ಇವರು ಮಾಗಡಿ ರಸ್ತೆಯ ಪ್ರಗತಿ ಲೇಔಟ್‌ ನಲ್ಲಿರುವ ಸಂಧ್ಯಾಕಿರಣ ಎಂಬ ವೃದ್ಧಾಶ್ರಮದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದು, ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಮಾರನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 25. ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳನ್ನು ಆಕೆಯ ದೊಡ್ಡಪ್ಪನ ಮಗನೇ ಅತ್ಯಾಚಾರವೆಸಗಿರುವ ಆರೋಪಿಯನ್ನು ಬಂಧಿಸಿದ ಘಟನೆ ತಾಲೂಕಿನ ಬಂದಾರು ಗ್ರಾಮದ ಪುಂಡೈಬನ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿ ಪ್ರವೀಣ್ ಎಂಬಾತ ಆಗಾಗ ಬಾಲಕಿಯ ಮನೆಗೆ ಬಂದು ಹೋಗುತ್ತಿದ್ದು, ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಇದೀಗ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಆರು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top