ಕ್ರೈಮ್ ನ್ಯೂಸ್

ಅರಂತೋಡು: ಶಿಕಾರಿಗೆಂದು ಹೊರಟಿದ್ದ ನಾಲ್ವರ ಪೈಕಿ ಓರ್ವನಿಗೆ ಗುಂಡೇಟು

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 05. ಶಿಕಾರಿಗೆಂದು ಹೋಗಿದ್ದ ನಾಲ್ವರು ಯುವಕರ ಪೈಕಿ ಓರ್ವನಿಗೆ ಗುಂಡು ತಗುಲಿ ಗಾಯಗೊಂಡ ಘಟನೆ ನಡೆದಿದೆ. ಅರಂತೋಡಿನ ನಾಲ್ವರು ಯುವಕರು ಗುರುವಾರ ರಾತ್ರಿ ಶಿಕಾರಿಗೆಂದು ಪೂಮಲೆ ಕಾಡಿಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇವರೆಲ್ಲರೂ ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದ ಕಡೆಗೆ ಓರ್ವ ಗುಂಡು ಹಾರಿಸಿದ್ದು, ಅದು ಆ ಕಡೆ ಕುಳಿತಿದ್ದ ಸತ್ಯಮೂರ್ತಿ ಎಂಬ ಯುವಕನಿಗೆ ತಾಗಿತ್ತು. ಗುಂಡೇಟಿಗೆ ಒಳಗಾದ ಸತ್ಯಮೂರ್ತಿಯನ್ನು ಸುಳ್ಯದ […]

ಅರಂತೋಡು: ಶಿಕಾರಿಗೆಂದು ಹೊರಟಿದ್ದ ನಾಲ್ವರ ಪೈಕಿ ಓರ್ವನಿಗೆ ಗುಂಡೇಟು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ‌ ಸೇರಿದಂತೆ‌ ಹಲವು ದೇವಾಲಯಗಳ ಕಳ್ಳತನ‌ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 05. ದೇವಸ್ಥಾನಗಳ ಕಾಣಿಕೆ ಹುಂಡಿಯನ್ನು ಕದ್ದು ದುಷ್ಕೃತ್ಯವೆಸಗುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಸುಹೈಲ್ ಹಾಗೂ ಸಿರಾಜುದ್ದೀನ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಮಂಗಳೂರಿನ ಹಲವು ಕಡೆಗಳಲ್ಲಿ ಕೊರಗಜ್ಜ ಸ್ವಾಮಿ ದೈವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳಲ್ಲಿ ಕಳ್ಳತನ ನಡೆದಿತ್ತು. ಅಲ್ಲದೇ ಆರೋಪಿಗಳು ಕಾಣಿಕೆ ಹುಂಡಿಯನ್ನು ಕದ್ದ ಬಳಿಕ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್ ಹಾಕುತ್ತಿದ್ದರಲ್ಲದೇ

ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ‌ ಸೇರಿದಂತೆ‌ ಹಲವು ದೇವಾಲಯಗಳ ಕಳ್ಳತನ‌ ಪ್ರಕರಣ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಣಾಜೆ: ಮರಕ್ಕೆ ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 05. ಅವಿವಾಹಿತ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ‌ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ನೆತ್ತಿಲಪದವು ಸೈಟ್ ನಿವಾಸಿ ರಕ್ಷಿತ್ ಸನಿಲ್(22) ಎಂದು ಗುರುತಿಸಲಾಗಿದೆ. ಈತನ ಮೃತದೇಹವು ನರಿಂಗಾನ ಗ್ರಾಮದ ಕೊಲ್ಲರಕೋಡಿ ಶಾಲಾ ಮೈದಾನದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಣಾಜೆ: ಮರಕ್ಕೆ ನೇಣುಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಬೈಕ್ – ಸಿಮೆಂಟ್ ಮಿಕ್ಸರ್ ಲಾರಿ ನಡುವೆ ಢಿಕ್ಕಿ ➤ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.05. ಸಿಮೆಂಟ್ ಮಿಕ್ಸರ್ ವಾಹನ ಹಾಗೂ ಬೈಕ್ ನಡುವೆ ಢಿಕ್ಕಿ ಸಂಬಂಧಿಸಿದ ಪರಿಣಾಮ ಸಹ ಸವಾರೆಯೋರ್ವರು ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಮಹಿಳೆಯನ್ನು ಸರಳಿಕಟ್ಟೆ ನಿವಾಸಿ ರಫೀಕ್ ಎಂಬವರ ಪತ್ನಿ ಸಕೀನಾ ಎಂದು ಗುರುತಿಸಲಾಗಿದೆ. ಬಿ.ಸಿ.ರೋಡ್ ನಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನ ಹಾಗೂ ಬೈಕ್‌ ಮಧ್ಯೆ ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಬಳಿ ಢಿಕಯಾಗಿ ಈ ಸಂಭವಿಸಿದೆ. ಘಟನೆಯಲ್ಲಿ

ಉಪ್ಪಿನಂಗಡಿ: ಬೈಕ್ – ಸಿಮೆಂಟ್ ಮಿಕ್ಸರ್ ಲಾರಿ ನಡುವೆ ಢಿಕ್ಕಿ ➤ ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಣಿಪಾಲ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಣಿಪಾಲ, ಫೆ. 05. ಆಟೋ ರಿಕ್ಷಾವೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಮಣಿಪಾಲ ಪೊಲೀಸರು ಇಂದು ಶೀಂಬ್ರಾ ಸೇತುವೆ ಬಳಿ ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಮಹಾರಾಷ್ಟ್ರ ಮೂಲದ ಗೌತಮ್ ರಾಜು ಶಿಮುಂಗೆ(30), ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ (38) ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ (40)ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 2,66,000 ರೂ. ಮೌಲ್ಯದ ಸುಮಾರು 8 ಕೆ.ಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ

ಮಣಿಪಾಲ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಧರ್ಮಸ್ಥಳ ಸ್ನಾನಘಟ್ಟದ ಬಳಿ ಅಪರಿಚಿತ ಮಹಿಳೆಯರ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ. 05. ಅಪರಿಚಿತ ಮಹಿಳೆಯರಿಬ್ಬರ ಮೃತದೇಹವು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ. ಮೃತ ಇಬ್ಬರು ಮಹಿಳೆಯರು ಸುಮಾರು 45 ಮತ್ತು 25 ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದೆ. ನದಿ ತೀರಕ್ಕೆ ಸ್ನಾನಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳು ಮೃತದೇಹವನ್ನು ಮೊದಲು ನೋಡಿದ್ದು, ಇದರ ಮಾಹಿತಿಯಂತೆ ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಮೃತದೇಹಗಳು ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿದ್ದವು.

ಧರ್ಮಸ್ಥಳ ಸ್ನಾನಘಟ್ಟದ ಬಳಿ ಅಪರಿಚಿತ ಮಹಿಳೆಯರ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಟ್ಟೆ ತೊಳೆಯಲೆಂದು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು

(ನ್ಯೂಸ್ ಕಡಬ) newskadaba.com ಕೋಲಾರ, ಫೆ. 04. ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ. ಮೃತರನ್ನು ರುಕ್ಮಿಣಿ ಬಾಯ್(35) ಹಾಗೂ ಇವರ ಪುತ್ರಿಯರಾದ ಆರತಿ(6), ಕೀರ್ತಿ(5) ಹಾಗೂ ರುಕ್ಮಿಣಿ ಅವರ ತಂಗಿ ರಾಜೇಶ್ವರಿ(30) ಎಂದು ಗುರುತಿಸಲಾಗಿದೆ. ಕೆರೆಯ ಬಳಿ ಬಟ್ಟೆ ತೊಳೆಯುತ್ತಿದ್ದ ವೇಳೆ ನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿಗೆ ಇಳಿದಿದ್ದು, ಈ ಸಂದರ್ಭ ಮುಳುಗಿ ಹೋಗಿದ್ದಾರೆ. ಮಕ್ಕಳನ್ನು ರಕ್ಷಿಸಲೆಂದು ತಮ್ಮ ಜೀವದ

ಬಟ್ಟೆ ತೊಳೆಯಲೆಂದು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಯುವತಿಯ ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 04. ಬಲವಂತ ದೈಹಿಕ ಸಂಪರ್ಕ ಬೆಳೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣದ ಆರೋಪಿಗೆ ಮಂಗಳೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.   ಸವಣೂರು ಇಡ್ಯಾಡಿಯ ಪೂವಣಿ ಗೌಡ ಎಂಬವರ ಪುತ್ರ ಬಾಲಕೃಷ್ಣ ಎಂಬವರು ದಿನಾಂಕ 8.19.2020ರಂದು ಯುವತಿಯೋರ್ವಳು ಕೆಲಸದಿಂದ ಹಿಂದಿರುಗುತ್ತಿದ್ದ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಸರ್ವೆ ಎಂಬಲ್ಲಿ ನಿಲ್ಲಿಸಿ ಯುವತಿಯ ಮೊಬೈಲನ್ನು ಬಿಸಾಡಿ ಬೊಬ್ಬೆ ಹೊಡೆದರೆ ನಿನ್ನನ್ನು, ನಿನ್ನ ತಂದೆ ತಾಯಿಯನ್ನು ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ನೀಡಿದ್ದಾನೆ.

ಪುತ್ತೂರು: ಯುವತಿಯ ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣ ➤ ಆರೋಪಿಗೆ ಜಾಮೀನು ಮಂಜೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮನೆಯವರ ವಿರೋಧದ ನಡುವೆಯೇ ಮದುವೆಯಾದ ಹಿನ್ನೆಲೆ ➤ ಮದುಮಗನಿಗೆ ಸೇರಿದ 250 ಅಡಿಕೆ ಗಿಡಗಳನ್ನು ಕತ್ತರಿಸಿದ ಪೋಷಕರು..!

(ನ್ಯೂಸ್ ಕಡಬ) newskadaba.com ತುಮಕೂರು, ಫೆ. 04. ಮನೆಯವರ ಇಚ್ಛೆಗೆ ವಿರುದ್ದವಾಗಿ ಮದುವೆಯಾದಳು ಎಂಬ ದ್ವೇಷದಲ್ಲಿ ಮದುಮಗನಿಗೆ ಸೇರಿದ 250 ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ ವಿಲಕ್ಷ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯ ಎಂಬಲ್ಲಿ ನಡೆದಿದೆ. ಮಲ್ಲಸಂದ್ರಪಾಳ್ಯ ಗ್ರಾಮದ ರವಿಚಂದ್ರ ಹಾಗೂ ಅನು ಎಂಬವರು ಪ್ರೀತಿಸಿ ಎರಡು ದಿನಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯವರಿಂದ ವಿರೋಧವಿದ್ದು, ಈ ಹಿನ್ನೆಲೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎನ್ನುವ ದ್ವೇಷಕ್ಕೆ ಅನು ಪೋಷಕರಾದ ಸಂತೋಷ್ ಹಾಗೂ ಗಂಗಮ್ಮ

ಮನೆಯವರ ವಿರೋಧದ ನಡುವೆಯೇ ಮದುವೆಯಾದ ಹಿನ್ನೆಲೆ ➤ ಮದುಮಗನಿಗೆ ಸೇರಿದ 250 ಅಡಿಕೆ ಗಿಡಗಳನ್ನು ಕತ್ತರಿಸಿದ ಪೋಷಕರು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ➤ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 04. ಹಿಂದೂ ಧರ್ಮದ ಬಗ್ಗೆ ಸಾಹಿತಿ ಪ್ರೊ. ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಹಿತಿ ಭಗವಾನ್ ಅವರ ಮುಖಕ್ಕೆ ಬಿಜೆಪಿ ಪರ ವಕೀಲೆ ಮೀರಾ ರಾಘವೇಂದ್ರ ಅವರು ಕೋರ್ಟ್ ಆವರಣದಲ್ಲಿ ಮಸಿ ಬಳಿದ ಘಟನೆ ನಡೆದಿದೆ. ಹಿಂದೂ ಧರ್ಮವನ್ನು ಅವಹೇಳಿಸಿದ್ದಾರು ಎಂದು ಮೀರಾ ಅವರು ಪ್ರಕರಣ ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಕೋರ್ಟ್ ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಹಿಂದೂ ಧರ್ಮ

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ➤ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top