ಕ್ರೈಮ್ ನ್ಯೂಸ್

ಲಂಚ ಸ್ವೀಕರಿಸುತ್ತಿದ್ದ ತಾಲೂಕು ಕಛೇರಿ ಗುಮಾಸ್ತ ಎಸಿಬಿ ವಶಕ್ಕೆ..!

(ನ್ಯೂಸ್ ಕಡಬ) newskadaba.com ಮೈಸೂರು, ಫೆ. 06. ಲಂಚ ಸ್ವೀಕರಿಸುತ್ತಿದ್ದ ಶ್ರೀರಂಗಪಟ್ಟಣ ತಾಲೂಕು ಕಛೇರಿಯ ಆರ್.ಆರ್ ಶಾಖೆ ಗುಮಾಸ್ತ ಪಿ.ಮಂಜು ಎಂಬವರನ್ನು ಎಸಿಬಿ ವಶಕ್ಕೆ ಪಡೆಯಲಾಗಿದೆ. ಇವರು ತಾಲೂಕಿನ ಚಂದಗಿರಿಕೊಪ್ಪದಲ್ಲಿ ಗ್ರಾಮದ ಧರಣೇಂದ್ರ ಕುಮಾರ್ ಎಂಬವರಿಂದ ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಸತೀಶ್ ಹಾಗೂ ರವಿಶಂಕರ್ ಹಣದ ಸಹಿತ ಆರೋಪಿಯನ್ನು ವಶಪಡಿಸಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ತಾಲೂಕು ಕಛೇರಿ ಗುಮಾಸ್ತ ಎಸಿಬಿ ವಶಕ್ಕೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

?ಮರಾಠಿ ಮಾತನಾಡುವಂತೆ ಒತ್ತಾಯಿಸಿ ಕನ್ನಡಿಗ ಲಾರಿ ಚಾಲಕನಿಗೆ ಹಲ್ಲೆ..!

(ನ್ಯೂಸ್ ಕಡಬ) newskadaba.com ಬೆಳಗಾವಿ, ಫೆ. 06. ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಕರ್ನಾಟಕದ ಲಾರಿ ಚಾಲಕನೋರ್ವನ ಮೇಲೆ ಮರಾಠಿಗರು ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ತುಮಕೂರು ತಾಲೂಕಿನ ಶಿರಾ ಲಾರಿ ಚಾಲಕ ಗೋವಿಂದ ಎಂದು ಗುರುತಿಸಲಾಗಿದೆ. ಇವರು ಗುಜರಾತಿನ ಅಹಮದಾಬಾದ್‌ ನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭ ಮಹಾರಾಷ್ಟ್ರದ ಸತಾರಾ ಟೋಲ್ ಗೇಟ್ ಬಳಿ ಶುಕ್ರವಾರ ರಾತ್ರಿ ಎಂಟು ಗಂಟೆ ವೇಳೆಗೆ, ಮರಾಠಿಗರು ಅರೆ ಬೆತ್ತಲೆ ಮಾಡಿ ಅವರಿಗೆ ಹಲ್ಲೆ ನಡೆಸಿ, ಬಟ್ಟೆಗಳನ್ನು ಹರಿದು ಹಾಕಿ

?ಮರಾಠಿ ಮಾತನಾಡುವಂತೆ ಒತ್ತಾಯಿಸಿ ಕನ್ನಡಿಗ ಲಾರಿ ಚಾಲಕನಿಗೆ ಹಲ್ಲೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

?ದಾಖಲೆಗಳಿಲ್ಲದ ಸುಮಾರು 1.47 ಕೋಟಿ ರೂ ಸಾಗಾಟ..! ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ದಾವಣಗೆರೆ, ಫೆ. 06. ದಾವಣಗೆರೆ, ಫೆ. 06. ದಾಖಲೆ ಇಲ್ಲದೇ ಕಾರಿನಲ್ಲಿ ಶುಕ್ರವಾರ ರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ 1.47 ಕೋಟಿ ರೂ. ಅನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಮೂವರನ್ನು ಬಂಧಿಸಿದ ಘಟನೆ ನಗರದ ಕೆ.ಆರ್.ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ನಡೆದಿದೆ. ಬಂಧಿತ ಆರೋಪಿಗಳನ್ನು ಕಲಬುರ್ಗಿ ನಿವಾಸಿಗಳಾದ ಶ್ರೀಕಾಂತ್ (26), ಮಹೇಶ್ (23) ಹಾಗೂ ಕಾರಿನ ಚಾಲಕ ಬೀರಲಿಂಗ (25) ಎಂದು ಗುರುತಿಸಲಾಗಿದೆ. ಕಲಬುರ್ಗಿಯಿಂದ ದಾವಣಗೆರೆಗೆ ಬರುತ್ತಿದ್ದ ಕಾರನ್ನು ಉತ್ತರ ಸಂಚಾರ ಠಾಣೆಯ

?ದಾಖಲೆಗಳಿಲ್ಲದ ಸುಮಾರು 1.47 ಕೋಟಿ ರೂ ಸಾಗಾಟ..! ➤ ಮೂವರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

?ಕೊಣಾಜೆ: ಖಾರದ ಪುಡಿ ಎರಚಿ ಮಹಿಳೆಯ ಕರಿಮಣಿ ಸರ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 06. ದುಷ್ಕರ್ಮಿಗಳ ತಂಡವೊಂದು ಮಹಿಳೆಗೆ ಖಾರದ ಪುಡಿ ಎರಚಿ ಕತ್ತಿನಲ್ಲಿದ್ದ ಕರಿಮಣಿಸರವನ್ನು ಎಗರಿಸಿ ಪರಾರಿಯಾದ ಘಟನೆ ಶುಕ್ರವಾರ ಹರೇಕಳದ ಬಾವಲಿಗುರಿ ಎಂಬಲ್ಲಿ ನಡೆದಿದೆ. ಹರೇಕಳದ ಬಾವಲಿಗುರಿ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶಾಂತ ಎಂಬ ಮಹಿಳೆಗೆ ಬೈಕಿನಲ್ಲಿ ಬಂದ ಇಬ್ಬರು ಖಾರದ ಪುಡಿ ಎರಚಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದರು. ಆದರೆ ದುಷ್ಕರ್ಮಿಗಳು ಎಗರಿಸಿದ ಕರಿಮಣಿ ಸರ ರೋಲ್ಡ್ ಗೋಲ್ಡ್ ಆಗಿತ್ತು ಎನ್ನಲಾಗಿದೆ. ಈ ಕುರಿತು ಶಾಂತ

?ಕೊಣಾಜೆ: ಖಾರದ ಪುಡಿ ಎರಚಿ ಮಹಿಳೆಯ ಕರಿಮಣಿ ಸರ ಎಗರಿಸಿದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾರು – ಮೀನಿನ ಲಾರಿ ನಡುವೆ ಅಪಘಾತ ➤ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.06. ಲಾರಿ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಗಾಯಗೊಂಡ ಘಟನೆ ಶನಿವಾರ ಬೆಳಗಿನ ಜಾವ ನಂತೂರಿನಲ್ಲಿ ನಡೆದಿದೆ. ದಯಾನಂದ ಕತ್ತಲ್ ಸಾರ್ ಅವರು ತನ್ನ ಕಾರಿನಲ್ಲಿ ನಗರದಿಂದ ನಂತೂರು ಕಡೆಗೆ ತೆರಳುತ್ತಿದ್ದ ವೇಳೆ ನಂತೂರು ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೀನಿನ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದಯಾನಂದ ಕತ್ತಲ್ ಸಾರ್ ಅವರ ತಲೆಗೆ ಗಾಯಗಳಾಗಿದ್ದು,

ಕಾರು – ಮೀನಿನ ಲಾರಿ ನಡುವೆ ಅಪಘಾತ ➤ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

?ಸುಳ್ಯ: ಬೇಟೆಗೆ ತೆರಳಿದ್ದ ವೇಳೆ ಗುಂಡೇಟು – ವ್ಯಕ್ತಿಗೆ ಗಾಯ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 06. ಶಿಕಾರಿಗೆಂದು ತೆರಳಿದ್ದ ವೇಳೆ ಕಾಡು ಪ್ರಾಣಿಗೆಂದು ಹಾರಿಸಿದ್ದ ಗುಂಡು ಜೊತೆಗಾರನಿಗೇ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮೂರವನ್ನು ಬಂಧಿಸಿದ ಘಟನೆ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ. ಬಂದಿತರನ್ನು ರಾಧಾಕೃಷ್ಣ (48), ಗಣೇಶ್ (35) ಮತ್ತು ಮೋನಪ್ಪ (50) ಎಂದು ಗುರುತಿಸಲಾಗಿದೆ. ಗುರುವಾರದಂದು ರಾತ್ರಿ ವೇಳೆ ಅರಂತೋಡು ಬಳಿಯ ಪೂಮಲೆ ಬೆಟ್ಟದಲ್ಲಿ ನಾಲ್ವರು ಶಿಕಾರಿಗೆ ತೆರಳಿದ್ದು, ಕಾಡಿಗೆ ತಲುಪಿದ ಬಳಿಕ ಇವರು ಹಂದಿಯನ್ನು ಅಟ್ಟಿಸಲೆಂದು ನಾಲ್ವರು ನಾಲ್ಕು ಕಡೆಗೆ

?ಸುಳ್ಯ: ಬೇಟೆಗೆ ತೆರಳಿದ್ದ ವೇಳೆ ಗುಂಡೇಟು – ವ್ಯಕ್ತಿಗೆ ಗಾಯ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಬಂಟ್ವಾಳ: ಬರೋಬ್ಬರಿ 13 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ➤ ಐವರು ಖತರ್ನಾಕ್ ಕಿಲಾಡಿಗಳ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 05. ಜಿಲ್ಲೆಯಲ್ಲಿ ಹತ್ತಕ್ಕೂ ಮಿಕ್ಕ ಸರಣಿ ಕಳ್ಳತನಗೈದಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ವಿಶೇಷ ತಂಡ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅರ್ಕುಳ ವಳಚ್ಚಿಳ್ ನಿವಾಸಿ ಅಮ್ಮೀ ಯಾನೆ ಅಮರುದ್ದೀನ್, ಮಂಗಳೂರು ಕಣ್ಣೂರು ನಿವಾಸಿಗಳಾದ ಮಹಮದ್ ಯೂನುಸ್ ಮತ್ತು ಹಫೀಸ್ ಯಾನೆ ಅಪ್ಪಿ, ಸಜಿಪಮೂಡ ಗ್ರಾಮದ ಪೆರ್ವಾ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ (27) ಹಾಗೂ ಮಂಗಳೂರು ಬೆಂಗ್ರೆ ನಿವಾಸಿ

? ಬಂಟ್ವಾಳ: ಬರೋಬ್ಬರಿ 13 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ➤ ಐವರು ಖತರ್ನಾಕ್ ಕಿಲಾಡಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

? Breaking News ಪುತ್ತೂರು: ಬೈಕ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 05. ಬೈಕ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಮುರ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪುತ್ತೂರು ಪಡೀಲು ನಿವಾಸಿ ಅಭಿನವ್ ಎಂದು ಗುರುತಿಸಲಾಗಿದೆ. ಕಾಲೇಜು ಶಿಕ್ಷಣದೊಂದಿಗೆ ಪತ್ರಿಕಾ ವಿತರಕನಾಗಿ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತನಾಗಿದ್ದ ಅಭಿನವ್ ಸಂಚರಿಸುತ್ತಿದ್ದ ಬೈಕ್ ಹಾಗೂ ಆಟೋರಿಕ್ಷಾ ನಡುವೆ ಮುರ ಎಂಬಲ್ಲಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ

? Breaking News ಪುತ್ತೂರು: ಬೈಕ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? 5 ಕೋಟಿ ನೀಡಿದರೆ ಪ್ರಧಾನಿಯನ್ನು ಕೊಲ್ಲುವುದಾಗಿ ಪೋಸ್ಟ್ ವೈರಲ್… ➤ ಉದ್ಯಮಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುದುಚೇರಿ, ಫೆ. 05. ಐದು ಕೋಟಿ ನೀಡಿದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ ಉದ್ಯಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಿಯಲ್ ಎಸ್ಟೇಟ್ ಒಂದರ ಉದ್ಯಮಿ ಆರ್ಯನ್‌ ಕುಪ್ಪಂ ಗ್ರಾಮದ ನಿವಾಸಿ ಸತ್ಯಾನಂದಂ(43) ಎಂದು ಗುರುತಿಸಲಾಗಿದೆ. ಈತನ ಬಂಧನದ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

? 5 ಕೋಟಿ ನೀಡಿದರೆ ಪ್ರಧಾನಿಯನ್ನು ಕೊಲ್ಲುವುದಾಗಿ ಪೋಸ್ಟ್ ವೈರಲ್… ➤ ಉದ್ಯಮಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ: ರಸ್ತೆ ಬದಿನಿಂತಿದ್ದ ಕಾರಿಗೆ ಸ್ಕೂಟಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 05. ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಯುವತಿಯೋರ್ವಳು ಚಲಾಯಿಸಿಕೊಂಡು ಬಂದ ಸ್ಕೂಟಿ ಡಿಕ್ಕಿ ಹೊಡೆದ ಘಟನೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ನಡೆದಿದೆ. ಘಟನೆಯ ಪರಿಣಾಮ ಕಾರಿನ ಹಿಂಬದಿ ಮತ್ತು ಸ್ಕೂಟಿಯ ಮುಂಭಾಗ ಜಖಂಗೊಂಡಿದೆ.

ಸುಳ್ಯ: ರಸ್ತೆ ಬದಿನಿಂತಿದ್ದ ಕಾರಿಗೆ ಸ್ಕೂಟಿ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top