ಕ್ರೈಮ್ ನ್ಯೂಸ್

? ಮಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಉಂಗುರ ಹಿಡಿದುಕೊಂಡು ಓಟಕ್ಕಿತ್ತ ಖದೀಮ ➤ ಬೆನ್ನಟ್ಟಿ ಹಿಡಿದ ಶಾಪ್ ಮಾಲಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 05. ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳನೋರ್ವ ನಗರದ ಜ್ಯುವೆಲ್ಲರಿ ಶಾಪ್ ನಿಂದ ಹಾಡಹಗಲೇ ಉಂಗುರವೊಂದನ್ನು ಕಳವುಗೈದು ಓಡಿದ್ದು ಸ್ವತಃ ಜ್ಯುವೆಲ್ಲರಿ ಸಿಬಂದಿ ಮತ್ತು ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ. ಅರುಣ್ ಜಿ. ಶೇಟ್ ಎಂಬವರಿಗೆ ಸೇರಿದ ನಗರದ ಅರುಣ್ ಜಿ. ಶೇಟ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ ವರ್ಕ್ಸ್ ಶಾಪ್ ಗೆ ಗುರುವಾರ ಮಧ್ಯಾಹ 2 ಗಂಟೆಯ ವೇಳೆವೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮ, ಆಭರಣವನ್ನು ಖರೀದಿಸುವಂತೆ ನಟಿಸಿದ್ದು, […]

? ಮಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಉಂಗುರ ಹಿಡಿದುಕೊಂಡು ಓಟಕ್ಕಿತ್ತ ಖದೀಮ ➤ ಬೆನ್ನಟ್ಟಿ ಹಿಡಿದ ಶಾಪ್ ಮಾಲಕ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಡ್ರಗ್ಸ್ ಜಾಲ ಪ್ರಕರಣ ➤ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ನಿವಾಸದ ಮೇಲೆ ಪೊಲೀಸ್ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 05. ಡ್ರಗ್ಸ್ ಜಾಲದಲ್ಲಿ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸಂಜಯ್ ನಗರದಲ್ಲಿರುವ ಅವರ ನಿವಾಸದ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಮಸ್ತಾನ್ ಚಂದ್ರ ಅವರು ನಿರ್ದೇಶಕ, ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಸಿತಾರ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅಲ್ಲದೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ ಬಾಸ್ ಎಂಟ್ರಿ ಕೊಟ್ಟಿದ್ದರು. ಡ್ರಗ್ಸ್ ಜಾಲದಲ್ಲಿ

ಡ್ರಗ್ಸ್ ಜಾಲ ಪ್ರಕರಣ ➤ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ನಿವಾಸದ ಮೇಲೆ ಪೊಲೀಸ್ ದಾಳಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು ➤ 7 ಬೈಕ್ ಗಳು ಜಖಂ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 05. ಚಾಲಕಿಯ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿದ ಪರಿಣಾಮ ರಸ್ತೆ ಬದಿಯಲ್ಲಿದ್ದ 7 ದ್ವಿಚಕ್ರ ವಾಹನಗಳು ನಜ್ಜುಗುಜ್ಜಾದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯಿಂದ ಮಣಿಪಾಲದ ಕಡೆಗೆ ತೆರಳುತ್ತಿದ್ದ ಕಾರು ಲಕ್ಷ್ಮೀಂದ್ರ ನಗರದ ಬಳಿ ನಿಯಂತ್ರಣ ತಪ್ಪಿ ಕಂದಕಕ್ಕೆ ಇಳಿದಿದ್ದು, ಈ ಸಂದರ್ಭದಲ್ಲಿ 7 ದ್ವಿಚಕ್ರ ವಾಹನಗಳು ಕಾರಿನ ಜೊತೆಗೆ ಮಳೆಗಾಲದಲ್ಲಿ ನೀರು ಹರಿಯುವ ತೋಡಿಗೆ ಬಿದ್ದಿದೆ. ಕೆಳಭಾಗದಲ್ಲಿ ಮರವಿದ್ದ ಕಾರಣ ಕಾರು ಸಂಪುರ್ಣವಾಗಿ ಕಂದಕಕ್ಕೆ ಉರುಳದೆ ವಾಲಿ ನಿಂತಿದೆ.

ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು ➤ 7 ಬೈಕ್ ಗಳು ಜಖಂ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಡಮಂಗಲ: ದಲಿತ ಮಹಿಳೆಯೋರ್ವರ ಮನೆ ಧ್ವಂಸ ➤ ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ

(ನ್ಯೂಸ್ ಕಡಬ) newskadaba.com ಎಡಮಂಗಲ, ಮಾ. 05. ದಲಿತ ಮಹಿಳೆಯೋರ್ವರಿಗೆ ಸೇರಿದ ಮನೆಯೊಂದನ್ನು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಧ್ವಂಸ ಮಾಡಿರುವ ಘಟನೆ ಎಡಮಂಗಲದಲ್ಲಿ ಬುಧವಾರದಂದು ನಡೆದಿದೆ. ಕಜೆತ್ತಡ್ಕದ ಬಾಲಕಿ ಎಂಬವರ ಮನೆಯನ್ನು ಹಾನಿ ಮಾಡಲಾಗಿದ್ದು, ಸೀಟು ಸಹಿತ ಮನೆಯ ವಸ್ತುಗಳನ್ನೆಲ್ಲ ಎಸೆಯುವ ಅಮಾನವೀಯ ದೃಶ್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಘಟಗೆ ಸಂಬಂಧಿಸಿ ಆರೋಪಿಗಳಾದ ವಿ ಶೆಟ್ಟಿ ಹಾಗೂ ವಿದ್ಯಾ ಸೇರಿದಂತೆ ನಾಲ್ವರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಎಫ್. ಐ.ಆರ್ ದಾಖಲಾಗಿದೆ. ಬಾಲಕಿ ಎಂಬವರು ನೀಡಿದ

ಎಡಮಂಗಲ: ದಲಿತ ಮಹಿಳೆಯೋರ್ವರ ಮನೆ ಧ್ವಂಸ ➤ ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೆಂಜಾರು: ಗೋಶಾಲೆ ನೆಲಸಮ ➤ ನೂರಾರು ಗೋವುಗಳು ಬೀದಿಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 05. ಸರಕಾರಿ ಜಾಗ ಅತಿಕ್ರಮಣ ಆರೋಪದಡಿ ಗೋ ಶಾಲೆಯೊಂದನ್ನು ನೆಲಸಮಗೊಳಿಸಿದ ಘಟನೆ ಕೆಂಜಾರುವಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಕೆಂಜಾರು ಎಂಬಲ್ಲಿ ಕಪಿಲಾ ಗೋಶಾಲೆಯನ್ನು ಕೇಂದ್ರ ಸರ್ಕಾರದ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿಗಾಗಿ ಗೋವುಗಳು ಮೇಯಲು ಹೋಗಿದ್ದ ವೇಳೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ನೆಲಸಮ ಮಾಡಲಾಗಿದೆ ಎಂದು ತಿಳಿದು ಬಂದಿದೆ. 1993ರಲ್ಲಿ ಕೆಐಎಡಿಬಿ ಜಾಗದ ಮಾಲೀಕರಿಂದ ಹತ್ತು ವರ್ಷಗಳ ಹಿಂದೆ ಪರಿಹಾರ ಕೊಟ್ಟು ಈ ಜಾಗವನ್ನು ಸ್ವಾಧೀನ ಪಡಿಸಲಾಗಿತ್ತು. ಜಾಗ

ಕೆಂಜಾರು: ಗೋಶಾಲೆ ನೆಲಸಮ ➤ ನೂರಾರು ಗೋವುಗಳು ಬೀದಿಪಾಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟ್ ಇಬ್ಭಾಗ ➤ ಐವರು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 05. ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮಗುಚಿದ ಪರಿಣಾಮ ಐವರು ಮೀನುಗಾರರು ಸಮುದ್ರದಲ್ಲಿ ಸಿಲುಕಿದ ಘಟನೆ ಬೇಕಲ ಸಮುದ್ರದಲ್ಲಿ ನಡೆದಿದೆ. ಸುಮಾರು ಎರಡು ಗಂಟೆಗಳ ಕಾಲ ಜೀವನ್ಮರಣದ ನಡುವೆ ಒದ್ದಾಡುತ್ತಿದ್ದ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ರಕ್ಷಣಾ ಪಡೆ ಸಿಬಂದಿಗಳು ರಕ್ಷಿಸಿದ್ದಾರೆ. ಕಾಸರಗೋಡು ತೀರದಿಂದ ಹತ್ತು ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಅಲೆಗಳ ಅಬ್ಬರಕ್ಕೆ ಮಗುಚಿ ಇಬ್ಬಾಗಗೊಂಡಿದ್ದು, ಬೋಟ್ ನ ಒಂದು ಭಾಗದಲ್ಲಿ

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟ್ ಇಬ್ಭಾಗ ➤ ಐವರು ಮೀನುಗಾರರ ರಕ್ಷಣೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುರತ್ಕಲ್: ಖಾಸಗಿ ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ➤ ಪ್ರಶ್ನಿಸಿದ ಪ್ರಾಂಶುಪಾಲರಿಗೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 05. ದೇರಳಕಟ್ಟೆ ಕಾಲೇಜಿನ ರ್ಯಾಗಿಂಗ್ ಪ್ರಕರಣದ ಬಳಿಕ ಈಗ ಇದೀಗ ಸುರತ್ಕಲ್ ಬಳಿಯ ಮುಕ್ಕದಲ್ಲಿ ರ್ಯಾಗಿಂಗ್ ನಡೆಸಿದ್ದು, ಘಟನೆಗೆ ಸಂಬಂಧಿಸಿ ಮುಕ್ಕದ ಶ್ರೀನಿವಾಸ ಕಾಲೇಜಿನ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ರ್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಪ್ರಾಂಶುಪಾಲರು ನಾಲ್ವರನ್ನು ಕರೆದು ಬುದ್ಧಿ ಮಾತು ಹೇಳಿ, ಡಿಬಾರ್ ಮಾಡುವುದಾಗಿ ಬೆದರಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ಮೂವರು ವಿದ್ಯಾರ್ಥಿಗಳು ಪ್ರಾಂಶುಪಾಲರ ಮೇಲೆಯೇ ಹಲ್ಲೆ ನಡೆಸಿರುವ

ಸುರತ್ಕಲ್: ಖಾಸಗಿ ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ➤ ಪ್ರಶ್ನಿಸಿದ ಪ್ರಾಂಶುಪಾಲರಿಗೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಿಮೆ ಬಡ್ಡಿದರದ ಆಮಿಷವೊಡ್ಡಿ ಚಿನ್ನಾಭರಣ ಸಾಲ ನೀಡಿ ವಂಚನೆ ➤ ಆರೋಪಿಯ ಹೆಡೆಮುರಿ ಕಟ್ಟಿದ ಕಡಬ ಮೂಲದ ಇನ್ಸ್‌ಪೆಕ್ಟರ್ ಸುರೇಶ್

(ನ್ಯೂಸ್ ಕಡಬ) newskadaba.com ಮೈಸೂರು, ಮಾ.04. ಕಡಿಮೆ ಬಡ್ಡಿ ದರದ ಆಮಿಷವೊಡ್ಡಿ ಚಿನ್ನವನ್ನು ಅಡವಿರಿಸಿ ಗ್ರಾಹಕರಿಗೆ ಹಿಂತಿರುಗಿಸದೆ ಮೋಸ ಮಾಡುತ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಿರುವ ಮೈಸೂರು ಲಷ್ಕರ್ ಠಾಣಾ ಇನ್ಸ್‌ಪೆಕ್ಟರ್ ಕಡಬ ಮೂಲದ ಸುರೇಶ್ ಕುಮಾರ್, ಆರೋಪಿಯಿಂದ 579.39 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದಿ| ನಾರಾಯಣ ಎಂಬವರ ಪುತ್ರ ಮಂಜುನಾಥ್ (42) ಎಂಬಾತ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಬಾಲಾಜಿ ಗೋಲ್ಡ್ ಫೈನಾನ್ಸ್ ನಡೆಸುತ್ತಿದ್ದು, ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲವನ್ನು ನೀಡುತ್ತಿದ್ದ.

ಕಡಿಮೆ ಬಡ್ಡಿದರದ ಆಮಿಷವೊಡ್ಡಿ ಚಿನ್ನಾಭರಣ ಸಾಲ ನೀಡಿ ವಂಚನೆ ➤ ಆರೋಪಿಯ ಹೆಡೆಮುರಿ ಕಟ್ಟಿದ ಕಡಬ ಮೂಲದ ಇನ್ಸ್‌ಪೆಕ್ಟರ್ ಸುರೇಶ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಬೆಂಬಲಿಗರಿಂದ 8ಕ್ಕೂ ಅಧಿಕ ಬಸ್ ಗಳ ಮೇಲೆ ಕಲ್ಲು ತೂರಾಟ

(ನ್ಯೂಸ್ ಕಡಬ) newskadaba.com ಬೆಳಗಾವಿ, ಮಾ. 05. ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಬೆಂಬಲಿಗರಿಂದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 8ಕ್ಕೂ ಅಧಿಕ ಬಸ್‌ಗಳ ಮೇಲೆ‌ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಗೋಕಾಕ್ ನಗರದ ಕೇಂದ್ರ ಬಸ್ ನಿಲ್ದಾಣಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ನಿಂತಿದ್ದ ಬಸ್​ಗಳ ಮೇಲೆ ಏಕಾಏಕಿ 10ಕ್ಕೂ ಹೆಚ್ಚು ಬೈಕ್​ಗಳಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್​ನ ಹಿಂಬದಿ ಹಾಗೂ ಮುಂಭಾಗದ ಗಾಜುಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್

ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಬೆಂಬಲಿಗರಿಂದ 8ಕ್ಕೂ ಅಧಿಕ ಬಸ್ ಗಳ ಮೇಲೆ ಕಲ್ಲು ತೂರಾಟ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಅಕ್ರಮ ಮರ ಸಾಗಾಟದ ದೂರು ನೀಡಿದ್ದ ವ್ಯಕ್ತಿಯ ವಿರುದ್ದವೇ ಪ್ರಕರಣ ದಾಖಲಿಸಿದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ. 04. ಅಕ್ರಮ ಮರ ಲೂಟಿ ವಿರುದ್ಧ ದೂರು ನೀಡಿದ್ದಾರೆನ್ನಲಾದ ವ್ಯಕ್ತಿಯ ಮನೆಗೆ ರಾತ್ರೋ ರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹಳೆಯ ಪ್ರಸಾದ್ ಎಂಬವರ ಮನೆಯಲ್ಲಿದ್ದ ಮರದ ಹಲಗೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸಾದ್ ಅವರು ಅಕ್ರಮವಾಗಿ ಮರ ಕಡಿದು ಮನೆಯಲ್ಲಿ ಶೇಖರಣೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಮಂಗಳವಾರದಂದು ತಡರಾತ್ರಿ ಸಂಚಾರಿ ದಳದ ಸಂಧ್ಯಾ ಅವರ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ

ಕಡಬ: ಅಕ್ರಮ ಮರ ಸಾಗಾಟದ ದೂರು ನೀಡಿದ್ದ ವ್ಯಕ್ತಿಯ ವಿರುದ್ದವೇ ಪ್ರಕರಣ ದಾಖಲಿಸಿದ ಅಧಿಕಾರಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top