ಕ್ರೈಮ್ ನ್ಯೂಸ್

? ಮಂಗಳೂರು ಮೂಲದ ಉದ್ಯಮಿ ವಿಜಯಪುರದಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಜಯಪುರ, ಎ. 01. ಇಲ್ಲಿನ ಇಂಡಿ ಎಂಬಲ್ಲಿ ಅಮರ್ ಹೆಸರಿನ ಹೋಟೆಲ್ ನಡೆಸುತ್ತಿದ್ದ ಉದ್ಯಮಿಯೋರ್ವರು ಕೊರೋನಾ ವೈರಸ್ ನಿಂದಾಗಿ ಹೋಟೆಲ್ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ ಕಾರಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮಂಗಳೂರು ಮೂಲದ ಗಣೇಶ್ ಎಂದು ಗುರುತಿಸಲಾಗಿದೆ. ಇವರು ಹೋಟೆಲ್ ನಡೆಸಲು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಇದರ ಬಡ್ಡಿ ಕಟ್ಟಲಾಗದೇ ಒದ್ದಾಡುತ್ತಿದ್ದರು. ಅಲ್ಲದೇ ಕೊರೋನಾದಿಂದಾಗಿ ಹೋಟೆಲ್​​ ಕೂಡಾ ಸರಿಯಾಗಿ ನಡೆಯದೆ ಚಿಂತೆಗೀಡಾಗಿ […]

? ಮಂಗಳೂರು ಮೂಲದ ಉದ್ಯಮಿ ವಿಜಯಪುರದಲ್ಲಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ಟ್ರಕ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಎ. 01. ಟ್ರಕ್‍ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಾಪುರದ ಮಾಸ್ತಿಕಟ್ಟೆಯ ಯಡೂರು ಬಳಿ ನಡೆದಿದೆ. ಮೃತರನ್ನು ಉಡುಪಿಯ ಪೆರಂಪಳ್ಳಿಯ ಜೋಸೆಫ್ ಗೋಮ್ಸ್ (28) ಎಂದು ಗುರುತಿಸಲಾಗಿದೆ. ಜೋಸೆಫ್ ಗೋಮ್ಸ್ ಹಾಗೂ ಮತ್ತವರ ಸ್ನೇಹಿತರು ಮಾಸ್ತಿಕಟ್ಟೆಯಲ್ಲಿರುವ ಸ್ನೇಹಿತನ ಮನೆಗೆ ತೆರಳುತ್ತಿದ್ದ ವೇಳೆ ಜೋಸೆಫ್ ರವರ ಬೈಕ್ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಬರುತ್ತಿದ್ದ ಟ್ರಕ್‍ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಗಂಭೀರ

ಉಡುಪಿ: ಟ್ರಕ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ➤ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಮನೆಮಂದಿ ಜಾತ್ರೆಗೆ ತೆರಳಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಏ. 01. ಮನೆಯವರೆಲ್ಲರೂ ಜಾತ್ರೆಗೆ ತೆರಳಿದ್ದ ಸಂದರ್ಭ ಕೊಯಿಲ ಗ್ರಾಮದ ಗಂಡಿಬಾಗಿಲು ಆನೆಗುಂಡಿ ಎಂಬಲ್ಲಿ ಚೆನ್ನಪ್ಪ ಗೌಡ ಎಂಬವರ ಮನೆಗೆ ಬುಧವಾರದಂದು ರಾತ್ರಿ ನುಗ್ಗಿದ ಕಳ್ಳರು ಸುಮಾರು ಏಳೂವರೆ ಪವನ್ ಚಿನ್ನಾಭರಣ ಲೂಟಿಗೈದ ಘಟನೆ ನಡೆದಿದೆ.   ಮನೆಯವರೆಲ್ಲ ಸಂಜೆ 7 ಗಂಟೆಗೆ ಕೊಯಿಲದಲ್ಲಿ ನಡೆಯುತ್ತಿದ್ದ ಜಾತ್ರೆಗೆಂದು ಹೋಗಿದ್ದು, ಮರಳಿ 10 ಗಂಟೆಗೆ ಬರುವುದರ ನಡುವೆ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಮನೆಮಂದಿ ಜಾತ್ರೆಗೆ ತೆರಳಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಜ್ಯುವೆಲ್ಲರಿ ಮಾರ್ಟ್ ಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಹಾಗೂ ನಗದು ಜೊತೆ ಸಿಸಿ ಕ್ಯಾಮರಾ ಹೊತ್ತೊಯ್ದರು

(ನ್ಯೂಸ್ ಕಡಬ) newskadaba.com ಸುಳ್ಯ, ಏ. 01. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಚಿನ್ನದ ಅಂಗಡಿಯ ಬೀಗ ಮುರಿದಿರುವ ವಿಷಯ ತಿಳಿದ ಸ್ಥಳೀಯರು, ಅಂಗಡಿ ಮಾಲಕರು ಹಾಗೂ ಪೋಲೀಸರು ಬಂದು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಜೊತೆಗೆ ಸಿಸಿ ಕ್ಯಾಮರಾವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕಳವಾದ ಸ್ವತ್ತುಗಳ

ಸುಳ್ಯ: ಜ್ಯುವೆಲ್ಲರಿ ಮಾರ್ಟ್ ಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಹಾಗೂ ನಗದು ಜೊತೆ ಸಿಸಿ ಕ್ಯಾಮರಾ ಹೊತ್ತೊಯ್ದರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮ ಸಂಬಂಧದಲ್ಲಿ ಬಿರುಕು ➤ ಪ್ರಿಯತಮೆಯ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ಪ್ರಿಯತಮ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಮಾ. 31. ಪ್ರಿಯಕರನೋರ್ವ ತನ್ನ ಪ್ರಿಯತಮೆಯ 6 ವರ್ಷದ ಮಗನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಕಾಣೆಯಾಗಿದ್ದ 6 ವರ್ಷದ ಬಾಲಕನ ಅಸ್ಥಿಪಂಜರ ಪತ್ತೆಯಾಗಿದೆ. ಕೊಲೆಯಾದವನ್ನು ವಾಟದ ಹೊಸಹಳ್ಳಿಯ ವಿಷ್ಣುವರ್ಧನ್ (6) ಎಂದು ಗುರುತಿಸಲಾಗಿದೆ. ಆರೋಪಿ ವಾಟದ ಹೊಸಹಳ್ಳಿ ಗ್ರಾಮದ ರಾಮಾಂಜಿ ಎಂಬಾತ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದು, ಗೌರಿಬಿದನೂರು ತಾಲೂಕಿನ ಸಾದರ್ಲಹಳ್ಳಿ ಬಳಿ ಬಾಲಕನ ಅಸ್ಥಿಪಂಜರ ಪತ್ತೆಯಾಗಿದೆ. ಬಾಲಕ ವಿಷ್ಣುವರ್ಧನ್ ಪ್ರಭಾವತಿ ಹಾಗೂ ನಾರಾಯಣಸ್ವಾಮಿ ದಂಪತಿಯ ಮಗನಾಗಿದ್ದು, ಮಾರ್ಚ್ 16

ಅಕ್ರಮ ಸಂಬಂಧದಲ್ಲಿ ಬಿರುಕು ➤ ಪ್ರಿಯತಮೆಯ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ಪ್ರಿಯತಮ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಖಾಸಗಿ ಬಸ್ ➤ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 31. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ಇಲ್ಲಿನ ಎಸ್.ವಿ.ಎಸ್ ಕಾಲೇಜಿನ ಬಳಿ ನಡೆದಿದೆ.   ವಾಮದಪದವು, ಪೂಂಜಾಲಕಟ್ಟೆ, ಮೂರ್ಜೆ ಮಾರ್ಗವಾಗಿ ಬಿಸಿ ರೋಡಿಗೆ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಇದರಲ್ಲಿ ಪರೀಕ್ಷೆಗೆಂದು ತೆರಳುತ್ತಿದ್ದ ವಿದ್ಯಾರ್ಥಿಗಳ ಸಹಿತ 25 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಸುಮಾರು 12 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಇವರುನ್ನು ಬಂಟ್ವಾಳದ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಖಾಸಗಿ ಬಸ್ ➤ ಪ್ರಯಾಣಿಕರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಬಸ್ಸಿನಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ ➤ ಬಸ್ ತಡೆದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಸುರತ್ಕಲ್, ಮಾ. 31. ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿಯೊಂದನ್ನು ಸುರತ್ಕಲ್ ಬಳಿ ಬಸ್ಸು ತಡೆದ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಲವ್‌ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಕಂಡು ಬಂದಲ್ಲಿ ಮತ್ತೆ ನೇರಕಾರ್ಯಾಚರಣೆ ನಡೆಸುತ್ತೇವೆಂದು ಬಜರಂಗದಳ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.  

ಮಂಗಳೂರು: ಬಸ್ಸಿನಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ ➤ ಬಸ್ ತಡೆದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಖಾಸಗಿ ಬಸ್ಸಿನಡಿಗೆ ಬಿದ್ದು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 31. ಖಾಸಗಿ ಬಸ್ಸಿನ ಅಡಿಗೆ ಬಿದ್ದು ಕಾಲೇಜು ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರದಂದು ಬೆಳಗ್ಗೆ ನಗರದ ಮರಕಡ ಜಂಕ್ಷನ್ ನಲ್ಲಿ ನಡೆದಿದೆ.   ಮೃತ ವಿದ್ಯಾರ್ಥಿನಿಯನ್ನು ಚೆಲ್ಲಯ್ಯ ಅವರ ಪುತ್ರಿ, ಕಾವೂರು ಕುಂಜತ್ ಬೈಲ್ ಜ್ಯೋತಿನಗರ ನಿವಾಸಿ ಸಿ.ಪವಿತ್ರ (21) ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.  

ಮಂಗಳೂರು: ಖಾಸಗಿ ಬಸ್ಸಿನಡಿಗೆ ಬಿದ್ದು ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಫರಂಗಿಪೇಟೆ: ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 30. ಮಸೀದಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮಸೀದಿಯ ಧರ್ಮಗುರುವಿಗೆ ಹಲ್ಲೆ ನಡೆಸಿರುವ ಘಟನೆ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ‌. ಹಲ್ಲೆಗೊಳಗಾದವರನ್ನು ಫರಂಗಿಪೇಟೆ- ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಯ ಧರ್ಮ ಗುರು, ಕುಂದಾಪುರ ನಿವಾಸಿ ಮುಸ್ತಾಕ್ ಎಂದು ಗುರುತಿಸಲಾಗಿದೆ. ಇವರು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ಸಂದರ್ಭ ಕಾಲಿಗೆ ಗಾಯಗಳಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ 12 ಗಂಟೆಯ

ಫರಂಗಿಪೇಟೆ: ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗ್ಯಾಸ್ ಟ್ಯಾಂಕರ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ➤ ನಿಂತಿಕಲ್ಲಿನಿಂದ ತೆರಳುತ್ತಿದ್ದ ಆರು ಮಂದಿ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.30. ಅನಿಲ ಸಾಗಾಟದ ಟ್ಯಾಂಕರೊಂದು ಮಾರುತಿ ಇಕೋ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು ಎಂಬಲ್ಲಿ ಮಂಗಳವಾರದಂದು ನಡೆದಿದೆ. ಗಂಭೀರ ಗಾಯಗೊಂಡವರನ್ನು ಮುಲ್ಕಿ ಸಮೀಪದ ಕಿನ್ನಿಗೋಳಿ ಐಕಳ ನಿವಾಸಿಗಳೆಂದು ಗುರುತಿಸಲಾಗಿದೆ. ಗಾಯಾಳುಗಳು ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆ ಸಲ್ಲಿಸಿ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ. ಇವರಿದ್ದ ಕಾರು ಪಾಣೆಮಂಗಳೂರು ಸಮೀಪಿಸುತ್ತಿದ್ದಂತೆ

ಗ್ಯಾಸ್ ಟ್ಯಾಂಕರ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ➤ ನಿಂತಿಕಲ್ಲಿನಿಂದ ತೆರಳುತ್ತಿದ್ದ ಆರು ಮಂದಿ ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top