ಉಳ್ಳಾಲ: ಬಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಸ್ಕೂಟರ್ ಸವಾರನಿಗೆ ಗಂಭೀರ ಗಾಯ



(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 22. ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಟಯರ್ ಅಂಗಡಿ ಮಾಲೀಕ ಗಂಭಿರ ಗಾಯಗೊಂಡಿರುವ ಘಟನೆ ತಲಪಾಡಿ ಬಳಿ ಸಂಭವಿಸಿದೆ.







 

ಗಂಭೀರ ಗಾಯಗೊಂಡವರನ್ನು ಸ್ಕೂಟರ್ ಸವಾರ ಉದ್ಯಾವರ ಮಾಡ ನಿವಾಸಿ ತುಳಸಿ (35) ಎಂದು ಗುರುತಿಸಲಾಗಿದೆ. ಇವರು ತಲಪಾಡಿಯಲ್ಲಿ ಟಯರ್ ಅಂಗಡಿ ಹೊಂದಿದ್ದು, ಮನೆಯಿಂದ ಸ್ಕೂಟರಿನಲ್ಲಿ ಅಂಗಡಿಗೆ ಬರುತ್ತಿದ್ದ ಸಂದರ್ಭ ಡಿವೈಡರ್ ಬಳಿ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಮತ್ತು ಸವಾರ ಬಸ್ಸಿನಡಿಯಲ್ಲಿ ಸಿಲುಕಿದ್ದರು. ಈ ಕುರಿತು ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top