ಕ್ರೈಮ್ ನ್ಯೂಸ್

ಮಂಗಳೂರು: ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಪೊಲೀಸ್ ದಾಳಿ ➤ 50 ಬಾಕ್ಸ್ ಮದ್ಯ ಹಾಗೂ ಆರೋಪಿ ವಶಕ್ಕೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಮೇ. 01. ಬಾರ್ ವೊಂದಕ್ಕೆ ದಾಳಿ ನಡೆಸಿದ ಪೊಲೀಸರು 1.53 ಲಕ್ಷ ರೂ. ಮೌಲ್ಯದ 52 ಬಾಕ್ಸ್‌ ಅಕ್ರಮ ಮದ್ಯ ವಶಪಡಿಸಿ, ಓರ್ವನನ್ನು ಬಂಧಿಸಿದ ಘಟನೆ ತಲಪಾಡಿ ಚೆಕ್‌ಪಾಯಿಂಟ್ ಬಳಿ ನಡೆದಿದೆ. ಬಂಧಿತನನ್ನು ಕ್ಯಾಷಿಯರ್ ಚರಣ್ (22)ಎಂದು ಗುರುತಿಸಲಾಗಿದೆ. ಈ ಕುರಿತು ಆತನಲ್ಲಿ ಪ್ರಶ್ನಿಸಿದಾಗ ಆತ ಮದ್ಯವನ್ನು ನಗರದ ಮತ್ತೊಂದು ವೈನ್ ಶಾಪ್‌ನಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಇದೀಗ ಚರಣ್‌ನನ್ನು ಬಂಧಿಸಿರುವ ಪೊಲೀಸರು, ಬಾರ್‌ ವ್ಯವಸ್ಥಾಪಕರಾದ ದಿವ್ಯಾ ರಾಜ್ ಮತ್ತು ರೋಹಿತ್‌ ಎಂಬವರ […]

ಮಂಗಳೂರು: ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಪೊಲೀಸ್ ದಾಳಿ ➤ 50 ಬಾಕ್ಸ್ ಮದ್ಯ ಹಾಗೂ ಆರೋಪಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ➤ ತಪ್ಪಿದ ಅನಾಹುತ, ಚಾಲಕ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.30. ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ರಸ್ತೆ ಬದಿ ಮಗುಚಿ ಬಿದ್ದ ಘಟನೆ ಶುಕ್ರವಾರದಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಕೊಂಡು ಹೊರಟಿದ್ದ ಟ್ಯಾಂಕರ್ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗ್ಯಾಸ್ ಸೋರಿಕೆ ಆಗದೆ ಇದ್ದುದರಿಂದ ಅನಾಹುತ ತಪ್ಪಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ➤ ತಪ್ಪಿದ ಅನಾಹುತ, ಚಾಲಕ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಮಾಸ್ಕ್ ಧರಿಸಿಲ್ಲವೆಂದು 100 ರೂ. ದಂಡ ➤ ತನ್ನ ಅಹಂಕಾರದಿಂದ 2500 ರೂ. ತೆತ್ತ ಯುವಕ

ಕಡಬ, ಎ.29. ಗುರುವಾರದಂದು ಮಾಸ್ಕ್ ಧರಿಸಿಲ್ಲವೆಂದು 100 ರೂ. ದಂಡ ವಿಧಿಸಿದ್ದಕ್ಕೆ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಉಪ್ಪಿನಂಗಡಿಯ ಯುವಕನೊಬ್ಬ ದುಬಾರಿ ದಂಡ ನೀಡಿ ತೆರಳಿದ್ದಾನೆ. ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ ಉಪ್ಪಿನಂಗಡಿಯ ಇರ್ಷಾದ್ ಎಂಬಾತ ಮಾಸ್ಕ್ ಧರಿಸದೆ ಕಡಬದ ಪೆಟ್ರೋಲ್ ಬಂಕ್ ವೊಂದರಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ವೇಳೆ ಕೋವಿಡ್ ಕಾರ್ಯಪಡೆಯ ಅಧಿಕಾರಿ ಹರೀಶ್ ಬೆದ್ರಾಜೆಯವರ ತಂಡ ತಡೆದು ನಿಲ್ಲಿಸಿ 100 ರೂ. ದಂಡ ವಿಧಿಸಿದ್ದಾರೆ. ಈ ವೇಳೆ ಯುವಕ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ್ದಲ್ಲದೆ,

ಕಡಬ: ಮಾಸ್ಕ್ ಧರಿಸಿಲ್ಲವೆಂದು 100 ರೂ. ದಂಡ ➤ ತನ್ನ ಅಹಂಕಾರದಿಂದ 2500 ರೂ. ತೆತ್ತ ಯುವಕ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬದ ಪತ್ರಕರ್ತ ನಾಗರಾಜ್ N.K. ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು

(ನ್ಯೂಸ್ ಕಡಬ) newskadaba.com ಕಡಬ, ಸೆ.17. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರ ಹೆಸರಿನಲ್ಲಿ‌ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸ್ಥಳೀಯ ವ್ಯಕ್ತಿಗೆ ಸಂದೇಶ ರವಾನಿಸಿ ಹಣದ ಅವಶ್ಯಕತೆ ತೋಡಿಕೊಂಡ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ. ಉದಯವಾಣಿ ಪತ್ರಿಕೆಯ ಕಡಬದ ಪ್ರತಿನಿಧಿ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಅವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ಸ್ಥಳೀಯ ವ್ಯಕ್ತಿಯೋರ್ವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು. ನಂತರ ಮೆಸೆಂಜರ್ ಮೂಲಕ 12 ಸಾವಿರ ತುರ್ತು ಹಣದ

ಕಡಬದ ಪತ್ರಕರ್ತ ನಾಗರಾಜ್ N.K. ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು Read More »

ಕರಾವಳಿ, ಕ್ರೈಮ್ ನ್ಯೂಸ್, ತಂತ್ರಜ್ಞಾನ

ಮರ್ಧಾಳ: ದುರ್ವರ್ತನೆ ತೋರಿದ ನಾಲ್ವರು ಯುವಕರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ. 27. ಮರ್ದಾಳದಲ್ಲಿ ಪೊಲಿಸರೊಂದಿಗೆ ದುರ್ವರ್ತನೆ ತೋರಿದ ನಾಲ್ವರು ಯುವಕರನ್ನು ಕಡಬ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಮರ್ದಾಳ ಪೇಟೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ನಾಲ್ವರು ಯುವಕರು ಬೈಕಿನಲ್ಲಿ ಬಂದಿದ್ದು, ಈ ವೇಳೆ ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ ಪ್ರಶ್ನಿಸಿದ ಪೊಲೀಸರೊಂದಿಗೆ ಮಾತಿಗಿಳಿದ ಯುವಕರು ಎಸ್.ಐ. ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಬಳಿಕ ಎಸ್.ಐ ರುಕ್ಮ ನಾಯ್ಕ್ ಸ್ಥಳಕ್ಕೆ ತೆರಳಿ ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮರ್ಧಾಳ: ದುರ್ವರ್ತನೆ ತೋರಿದ ನಾಲ್ವರು ಯುವಕರು ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಎ. 26. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋವೊಂದು ಪಲ್ಟಿಯಾದ ಪರಿಣಾಮ ಮಗು ಸೇರಿದಂತೆ ಮೂರು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಚಿತ್ರದುರ್ಗದ ಹಿರಿಯೂರು ಪಟ್ಟಣದ ಹೊರ ವಲಯದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೃತರನ್ನು ಹಿರಿಯೂರು ನಿವಾಸಿಗಳಾದ ಸೆಲ್ವಿ (35), ದೀಪಿಕಾ (06) ಹಾಗೂ ನೀಲಮ್ಮ (29) ಎಂದು ಗುರುತಿಸಲಾಗಿದೆ. ಟೆಂಪೋದಲ್ಲಿ ಕಾಂಕ್ರೀಟ್ ಕೆಲಸದ ಕೂಲಿ ಕಾರ್ಮಿಕರನ್ನು ಹಿರಿಯೂರಿನಿಂದ ಚಳ್ಳಕೆರೆಗೆ ಸಾಗಿಸುತ್ತಿದ್ದ ವೇಳೆ ಹಿರಿಯೂರು ಪಟ್ಟಣದ ಹೊರ ವಲಯದಲ್ಲಿ ಈ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ ➤ ಮೂವರ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ ➤ ಸ್ಥಳೀಯರಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 24. ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಗೂಡಿನಬಳಿ ನಿವಾಸಿ ಜೀವರಕ್ಷಕರಾದ ಸತ್ತಾರ್ ಗೂಡಿನಬಳಿ ಹಾಗೂ ಸ್ವಾದಿಕ್ ಎಂ ಕೆ ಎಂಬವರು ನದಿಗೆ ಧುಮುಕಿ ರಕ್ಷಿಸಿದ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಶ್ರವಣಬೆಳಗೊಳ ಮೂಲದವನು ಎನ್ನಲಾಗಿದೆ. ಯುವಕ ಶುಕ್ರವಾರದಂದು ಸಂಜೆ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು, ಜೀವರಕ್ಷಕ ಸತ್ತಾರ್ ಅವರಿಗೆ

ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ ➤ ಸ್ಥಳೀಯರಿಂದ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಕ್ಸಿಜನ್ ಕೊರತೆಯ ನಡುವೆ ಮನೆಯಲ್ಲೇ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ➤ ಆರೋಪಿ ಅಂದರ್, 48 ಸಿಲಿಂಡರ್ ವಶ

(ನ್ಯೂಸ್ ಕಡಬ) newskadaba.com ನವದೆಹಲಿ, ಎ. 24. ಮನೆಯಲ್ಲೇ ಅಕ್ರಮವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟು ಹೆಚ್ಚಿನ ಬೆಲೆಗೆ ವ್ಯಾಪಾರ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಅನಿಲ್ ಕುಮಾರ್​​ ಎಂದು ಗುರುತಿಸಲಾಗಿದೆ. ಈ ಕುರಿತಂತೆ ನಿಖರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ದೆಹಲಿಯ ದಶರತ್​ಪುರ ಪ್ರದೇಶದ ಮನೆಯೊಂದರಲ್ಲಿ ತಲಾ 67 ಲೀಟರ್ ಸಾಮರ್ಥ್ಯವುಳ್ಳ 32 ದೊಡ್ಡ ಹಾಗೂ ತಲಾ 10 ಲೀಟರ್​ ಸಾಮರ್ಥ್ಯದ 16 ಸಣ್ಣ ಆಕ್ಸಿಜನ್​

ಆಕ್ಸಿಜನ್ ಕೊರತೆಯ ನಡುವೆ ಮನೆಯಲ್ಲೇ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ➤ ಆರೋಪಿ ಅಂದರ್, 48 ಸಿಲಿಂಡರ್ ವಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಎ. 23. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಕೊಯಿಲದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೆಮ್ಮಾರ ಗ್ರಾಮದ ಇಲ್ಯಾಸ್ ಎಂದು ಗುರುತಿಸಲಾಗಿದೆ. ಕಡಬ ತಾಲೂಕಿನ ಕೆಮ್ಮಾರದ ಮನೆಯೊಂದರ ಹಿಂಬದಿಯ ಅಂಗಳದಲ್ಲಿ ಅಕ್ರಮ ಕಸಾಯಿಖಾನೆ ನಿರ್ಮಿಸಿ ದನದ ಮಾಂಸ ಮಾಡಿ ಮಾರಾಟಕ್ಕೆ ತಯಾರು ಮಾಡುತ್ತಿದ್ದ ಸಂದರ್ಭ, ಈ ಕುರಿತ ಖಚಿತ ಮಾಹಿತಿಯನ್ನು ಆಧರಿಸಿ ಕಡಬ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಬಂಧಿತನಿಂದ ತಕ್ಕಡಿ, ಮೂವತ್ತೈದು ಕೆ.ಜಿಯಷ್ಟು ಗೋಮಾಂಸ

ಕಡಬ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಓರ್ವನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋಟ: ಕಾರು ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಸ್ಕೂಟರ್ ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕೋಟ, ಎ. 23. ಸ್ಕೂಟರ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟಿಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಸಾಲಿಗ್ರಾಮ ಗುರುನರಸಿಂಹ ಮಂಟಪದ ಎದುರುಗಡೆ ಸಂಭವಿಸಿದೆ. ಗಾಯಗೊಂಡವರನ್ನು ಚಿತ್ರಪಾಡಿಯ ಸತೀಶ್ ಆಚಾರಿ(42) ಹಾಗೂ ಸುಬ್ರಹ್ಮಣ್ಯ(13) ಎಂದು ಗುರುತಿಸಲಾಗಿದೆ. ಚಿತ್ರಪಾಡಿಯಿಂದ ಸಾಲಿಗ್ರಾಮ ಕಡೆಗೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಅತಿವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯ ಬಳಿಕ ಕಾರು ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಲೆತ್ನಿಸಿದ್ದು, ಸಾಸ್ತಾನ ಟೋಲ್

ಕೋಟ: ಕಾರು ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಸ್ಕೂಟರ್ ಸವಾರರಿಬ್ಬರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top