ಕ್ರೈಮ್ ನ್ಯೂಸ್

ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತು ಶಿಶು ಕೊಲೆ..?!

(ನ್ಯೂಸ್ ಕಡಬ) newskadaba,ಚಿಕ್ಕಬಳ್ಳಾಪುರ ಜು.03:ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶು ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿರುವ ಶೌಚಾಲಯದ ಕಿಟಕಿಗೆ ಮಗು ತೂರಿಸಿ ಕುತ್ತಿಗೆಗೆ ದಾರದಿಂದ ನೇಣು ಬಿಗಿದು ಕೊಲೆ ಮಾಡಲಾಗಿದೆ. ಇನ್ನೂ ಕೊಲೆಯಾದ ಮಗು ಹೆಣ್ಣಾಗಿದ್ದು, ಹೆಣ್ಣು ಮಗು ಅಂತಲೇ ಕೊಲೆ ಮಾಡಿದರಾ ಅನ್ನೋ ಅನುಮಾನ ದಟ್ಟವಾಗಿದೆ. ಅಂದಹಾಗೆ ಇಂದು ಬೆಳಗ್ಗೆ 8 ಗಂಟೆ 45 ನಿಮಿಷ ಸುಮಾರಿಗೆ ಆಸ್ಪತ್ರೆಗೆ ಬಂದ ಇಬ್ಬರು ಅಪರಿಚಿತ ಮಹಿಳೆಯರು ಹಾಗೂ ಓರ್ವ ಪುರುಷ ಶೌಚಾಲಯದೊಳಗೆ […]

ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತು ಶಿಶು ಕೊಲೆ..?! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರಿನಲ್ಲಿ ಒಂದು ವೈಶಾಚಿಕ ಕೃತ್ಯ ➤ ಗುಂಡು ಹೊಡೆದು ಬೀದಿನಾಯಿ ಹತ್ಯೆ

(ನ್ಯೂಸ್ ಕಡಬ) newskadaba,ಮಂಗಳೂರು ಜು.02: ಬೀದಿನಾಯಿಯೊಂದನ್ನು ಅಮಾನವೀಯವಾಗಿ ಗುಂಡು ಹೊಡೆದು ಹತ್ಯೆ ಮಾಡಿರುವ ಹೇಯ ಕೃತ್ಯವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಾಯಿಯನ್ನು ಬೈಕ್ ಗೆ ಕಟ್ಟಿ ಅಮಾನವೀಯವಾಗಿ ಎಳೆದೊಯ್ದ ಎರಡು ಪ್ರಕರಣಗಳು ಮಂಗಳೂರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಅದರ ಬೆನ್ನಲ್ಲೇ ನಡೆದ ಈ ಕೃತ್ಯದಿಂದ ಎಲ್ಲರೂ ತಲೆತಗ್ಗಿಸುವಂತಾಗಿದೆ. ಮಂಗಳೂರು ನಗರದ ಶಿವಭಾಗ್‍ನ‌ ಬಳಿಯಿರುವ ಆಭರಣ ಜ್ಯುವೆಲ್ಲರ್ಸ್ ಮಳಿಗೆಯ ಹಿಂಭಾಗದ ರಸ್ತೆಯಲ್ಲಿ ಗುಂಡು ಹೊಡೆಸಿಕೊಂಡು ಬೀದಿ ನಾಯಿಯೊಂದನ್ನು ಸತ್ತು ಬಿದ್ದಿತ್ತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿರುವ ಅನಿಮಲ್

ಮಂಗಳೂರಿನಲ್ಲಿ ಒಂದು ವೈಶಾಚಿಕ ಕೃತ್ಯ ➤ ಗುಂಡು ಹೊಡೆದು ಬೀದಿನಾಯಿ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಅವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) Newskadaba.com ಕಡಬ, ಜು. 02. ಮಹಿಳೆಯೋರ್ವರು ನಾಪತ್ತೆಯಾದ ಘಟನೆ ತಾಲೂಕಿನ ದೋಳ್ಪಾಡಿಯಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಳು ಪಚ್ಚೋಳಿ ಎಂಬವರ ಪುತ್ರಿ ಲಲಿತಾ(30 ಎಂದು ಗುರುತಿಸಲಾಗಿದೆ. ಇವರು ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ಜೂನ್ 29ರಂದು ಸಹೋದರ ಹಾಗೂ ಆತನ ಪತ್ನಿ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಮರಳಿದಾಗ ಮನೆಗೆ ಬೀಗ ಹಾಕಿದ್ದು, ಬೀಗದ ಕೀ ಸ್ಥಳದಲ್ಲೇ ಬಿದ್ದಿತ್ತು. ಲಲಿತಾ ಅವರನ್ನು ಎಲ್ಲೆಡೆ ಹುಡುಕಾಡಿದರೂ ಅವರು ಪತ್ತೆಯಾಗದ ಕಾರಣ ಲಲಿತಾ ಅವರ

ಕಡಬ: ಅವಿವಾಹಿತ ಮಹಿಳೆ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ತಂದೆಯೇ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ➤ ಚಿಕಿತ್ಸೆ ಪಡೆಯುತ್ತಿದ್ದ ಮಗ ಮೃತ್ಯು

(ನ್ಯೂಸ್ ಕಡಬ) Newskadaba.com ಮಂಗಳೂರು, ಜು. 02. ತಂದೆಯೇ ಸ್ವತಃ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಪುತ್ರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತನನ್ನು ಆರೋಪಿ ವಿಶ್ವನಾಥ್ ಶೆಟ್ಟಿ ಪುತ್ರ ಸ್ವಾಮೀತ್ ಶೆಟ್ಟಿ (25) ಎಂದು ಗುರುತಿಸಲಾಗಿದೆ. ನಗರದ ಹೊರವಲಯದ ಜಪ್ಪಿನಮೊಗರು ಎಂಬಲ್ಲಿ ಜೂನ್ 21ರಂದು ರಾತ್ರಿ ದನ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಕೋಪಗೊಂಡ ವಿಶ್ವನಾಥ ಶೆಟ್ಟಿ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು.

ಮಂಗಳೂರು: ತಂದೆಯೇ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ➤ ಚಿಕಿತ್ಸೆ ಪಡೆಯುತ್ತಿದ್ದ ಮಗ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪೋಷಕರು ಮದುವೆಗೆ ಒತ್ತಾಯಿಸಿದರೆಂದು ತನ್ನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

(ನ್ಯೂಸ್ ಕಡಬ) Newskadaba.com ತಮಿಳುನಾಡು, ಜು. 02. ಮದುವೆಯಾಗಲು ಪೋಷಕರು ಒತ್ತಾಯ ಮಾಡಿದರೆಂದು ಯುವಕನೋರ್ವ ತನ್ನ ಮರ್ಮಾಂಗವನ್ನೇ ಕತ್ತರಿಸಿ ಆತ್ಮಹತ್ಯೆಗೆತ್ನಿಸಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ತಮ್ಮಂಪಟ್ಟಿ ಎಂಬಲ್ಲಿ ನಡೆದಿದೆ. ಯುವಕನನ್ನು ವಿಜಯರಾಘವನ್ ಎಂದು ಗುರುತಿಸಲಾಗಿದೆ. ಇವನಿಗೆ ಮದುವೆ ಮಾಡಿಕೊಳ್ಳುವಂತೆ ಪೋಷಕರು ಒತ್ತಾಯ ಹೇರಿದ್ದರು. ಈ ಹಿನ್ನೆಲೆ ಮನೆಯಲ್ಲಿ ಜಗಳ ಮಾಡಿದ ಈತ ತನ್ನ ಮರ್ಮಾಂಗ ಹಾಗೂ ಕುತ್ತಿಗೆಯನ್ನು ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಪೋಷಕರು ಮದುವೆಗೆ ಒತ್ತಾಯಿಸಿದರೆಂದು ತನ್ನ ಮರ್ಮಾಂಗವನ್ನೇ ಕತ್ತರಿಸಿದ ಯುವಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಣ ಕೊಡದೇ ಇದ್ದುದಕ್ಕೆ ಪಂಚಾಯತ್ ಸದಸ್ಯನ ಮೇಲೆ ಮಂಗಳಮುಖಿಯರಿಂದ ಹಲ್ಲೆ…!

(ನ್ಯೂಸ್ ಕಡಬ) newskadaba.com ತುಮಕೂರು, ಜು. 02. ಗ್ರಾಮ ಪಂಚಾಯತ್ ಸದಸ್ಯರೋರ್ವರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ಕೋಡ್ಲಾಪುರ ಗ್ರಾಮ ಪಂಚಾಯತ್ ಸದಸ್ಯ ರಂಗನಾಥ್ ಎಂದು ಗುರುತಿಸಲಾಗಿದೆ. ಮಂಗಳ ಮುಖಿಯರು ಇವರ ಬೈಕ್ ಅಡ್ಡಗಟ್ಟಿ ಹಣ  ಕೇಳಿದ್ದು, ಈ ವೇಳೆ ರಂಗನಾಥ್ ಹಣ  ಕೊಡದೇ ಇದ್ದಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಕೊಡದೇ ಇದ್ದುದಕ್ಕೆ ಪಂಚಾಯತ್ ಸದಸ್ಯನ ಮೇಲೆ ಮಂಗಳಮುಖಿಯರಿಂದ ಹಲ್ಲೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಶಿವಮೊಗ್ಗ, ಜು. 01. ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕಿನ ಕೆಳದ್ರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುಬ್ರಹ್ಮಣ್ಯ ಎಂಬವರ ಪುತ್ರ ಗಣೇಶ್(22) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಈತನ ಮೃತದೇಹದ ಬಳಿ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಡಲಾಗಿತ್ತು. ಈ ಕುರಿತು ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಸ್ಕೂಟಿ ಹಾಗೂ ಓಮ್ನಿ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) Newskadaba.com ಕಡಬ, ಜು. 01. ಇಂದು ಬೆಳಗಿನ ಜಾವ ಸ್ಕೂಟಿ ಹಾಗೂ ಓಮ್ನಿ ನಡುವೆ ಢಿಕ್ಕಿ ಹೊಡೆದ ಇಬ್ಬರು ಗಾಯಗೊಂಡ ಘಟನೆ ಬಲ್ಯ ಎಂಬಲ್ಲಿ ನಡೆದಿದೆ. ಅಲಂಕಾರಿನಿಂದ ಕಡಬಕ್ಕೆ ಬರುತ್ತಿದ್ದ ಸ್ಕೂಟರ್ ಹಾಗೂ ವಿರುದ್ದ ದಿಕ್ಕಿನಿಂದ ತೆರಳುತ್ತಿದ್ದ ಮಾರುತಿ ಓಮ್ನಿ ಕಾರಿನ ನಡುವರ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು, ಇವರನ್ನು ಚಿಕಿತ್ಸೆಗಾಗಿ ಕಡಬದ ಸರ್ಕಾರಿ ಆಸ್ಪತ್ರಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಸ್ಕೂಟಿಯು ಓಮ್ನಿ ಕಾರಿನಡಿಯಲ್ಲಿ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಡಬ: ಸ್ಕೂಟಿ ಹಾಗೂ ಓಮ್ನಿ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನವ ವಿವಾಹಿತೆ ಹತ್ಯೆ!

(ನ್ಯೂಸ್ ಕಡಬ) newskadaba,ಚಿಕ್ಕಮಗಳೂರು ಜೂ.30:ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮೂರು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ವಿವಾಹಿತೆಯನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ನೀರಿನ ಸಂಪ್ ಗೆ ಮುಳುಗಿಸಿ ಸಿಮ್ರಾನ್ (22) ಕೊಲೆ ಮಾಡಲಾಗಿದೆ. ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್ ಅವರನ್ನು ಫೈರೋಜ್ ಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮದುವೆಗೆ ಮೊದಲೇ ಅಕ್ರಮ ಸಂಬಂಧ ಹೊಂದಿದ್ದ ಫೈರೋಜ್ ಮದುವೆ ಆದ ಮೇಲೂ ಮುಂದುವರಿಸಿದ್ದ. ಇದಕ್ಕೆ ಹೆತ್ತವರು ಕೂಡ ಬೆಂಬಲ

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನವ ವಿವಾಹಿತೆ ಹತ್ಯೆ! Read More »

ಕ್ರೈಮ್ ನ್ಯೂಸ್

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಸಾಗಟ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba,ಕುಮಟಾ ಜೂ.30: ಮೀನಿನ ಬಾಕ್ಸ್’ಗಳಲ್ಲಿ ಇರಿಸಿ ಬರೋಬ್ಬರಿ ಮೂರು ಟನ್ ಗಿಂತಲೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಮಟದ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಕ್ರಮ ಗೋ ಮಾಂಸ ಸಾಗಟ ಮಾಡುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಮಹಮ್ಮದ್ ಶಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಾನಗಲ್ ನಿಂದ ಮಂಗಳೂರಿಗೆ ಗೋ ಮಾಂಸ ಸಾಗಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಆತನ ಹೇಳಿಕೆಯಿಂದ ಮಂಗಳೂರಿನಲ್ಲಿ ಗೋ

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಸಾಗಟ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top