ಹಣ ಕೊಡದೇ ಇದ್ದುದಕ್ಕೆ ಪಂಚಾಯತ್ ಸದಸ್ಯನ ಮೇಲೆ ಮಂಗಳಮುಖಿಯರಿಂದ ಹಲ್ಲೆ…!



(ನ್ಯೂಸ್ ಕಡಬ) newskadaba.com ತುಮಕೂರು, ಜು. 02. ಗ್ರಾಮ ಪಂಚಾಯತ್ ಸದಸ್ಯರೋರ್ವರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಎಂಬಲ್ಲಿ ನಡೆದಿದೆ.







ಹಲ್ಲೆಗೊಳಗಾದವರನ್ನು ಕೋಡ್ಲಾಪುರ ಗ್ರಾಮ ಪಂಚಾಯತ್ ಸದಸ್ಯ ರಂಗನಾಥ್ ಎಂದು ಗುರುತಿಸಲಾಗಿದೆ. ಮಂಗಳ ಮುಖಿಯರು ಇವರ ಬೈಕ್ ಅಡ್ಡಗಟ್ಟಿ ಹಣ  ಕೇಳಿದ್ದು, ಈ ವೇಳೆ ರಂಗನಾಥ್ ಹಣ  ಕೊಡದೇ ಇದ್ದಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top