ಕ್ರೈಮ್ ನ್ಯೂಸ್

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ➤ 14 ಮಂದಿಯ ಬಂಧನ

(ನ್ಯೂಸ್ ಕಡಬ) Newskadaba.com ಬೆಳಗಾವಿ, ಅ. 25. ರಾಜ್ಯಾದ್ಯಂತ 3,533 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ, ಭಾನುವಾರ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಬಂಧಿಸಲಾಗಿದೆ. ನೇಮಕಾತಿ ಪರೀಕ್ಷೆಯ ವೇಳೆ ಬ್ಲೂಟೂತ್ ಸಾಧನ ಬಳಸಿಕೊಂಡು ನಕಲು ಮಾಡುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಹಾಗೂ ಇದಕ್ಕೆ ಸಹಕರಿಸಿದ 12 ಮಂದಿ ಸೇರಿದಂತೆ 14 ಮಂದಿಯನ್ನು ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ರಾಮತೀರ್ಥ ಪಟ್ಟಣದ ಕೊಠಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಕಲು ಮಾಡಲು […]

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ➤ 14 ಮಂದಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೀನು‌ ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ..!

(ನ್ಯೂಸ್ ಕಡಬ) Newskadaba.com ಕಾರವಾರ, ಅ. 25. ನದಿಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ವೇಳೆ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ದಾಂಡೇಲಿಯಲ್ಲಿ ನಡೆದಿದೆ. ಮೊಸಳೆ ಪಾಲಾದ ಬಾಲಕನನ್ನು ಸ್ಥಳೀಯ ನಿವಾಸಿ ಮೋಹಿನ್ ಮೆಹಬೂಬ್ ಗುಲ್ಬರ್ಗವಾಲೆ(16) ಎಂದು ಗುರುತಿಸಲಾಗಿದೆ. ಬಾಲಕ ಮೋಹಿನ್ ಹಳಿಯಾಳ ರಸ್ತೆಯಲ್ಲಿರುವ ಕಾಳಿ ನದಿಯಲ್ಲಿ ಮೀನು ಹಿಡಿಯಲೆಂದು ಗಾಳ ಹಾಕುತ್ತಿದ್ದ ವೇಳೆ ಮೊಸಳೆಯೊಂದು ಹಠಾತ್ತಾಗಿ ದಾಳಿ ನಡೆಸಿ ಬಾಲಕನನ್ನು ಕಚ್ಚಿ ಎಳೆದೊಯ್ದಿದೆ ಎನ್ನಲಾಗಿದೆ.

ಮೀನು‌ ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 25. ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮೈಂದನಡ್ಕ ನಿವಾಸಿ ಆದಂ(56) ಎಂದು ಗುರುತಿಸಲಾಗಿದೆ. ಬಾಲಕಿಯು ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ವೇಳೆ ಆರೋಪಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು: ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 25. ನಾಪತ್ತೆಯಾಗಿದ್ದ ಬಾಲಕಿಯೋರ್ವಳ ಮೃತದೇಹವು ಮನೆ ಸಮೀಪದ ನದಿಯಲ್ಲಿ ಪತ್ತೆಯಾಗಿರುವ ಘಟನೆ ನಗರದ ಕುದ್ರೋಳಿಯಲ್ಲಿ‌ ನಡೆದಿದೆ. ಮೃತ ಬಾಲಕಿಯನ್ನು ಕುದ್ರೋಳಿ ನಿವಾಸಿ ಸಲಾಂ ಎಂಬವರ ಪುತ್ರಿ ಮುಫೀದಾ (11) ಎಂದು ಗುರುತಿಸಲಾಗಿದೆ. ಈಕೆ ಭಾನುವಾರದಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದು, ತಕ್ಷಣವೇ ಮನೆಮಂದಿ ಎಲ್ಲಾ ಕಡೆ ಹುಡುಕಾಡಿದರಾದರೂ ಆಕೆ ಪತ್ತೆಯಾಗಿರಲಿಲ್ಲ. ಬಳಿಕ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಕೆ ಮನೆ ಸಮೀಪದಲ್ಲಿರುವ ನದಿ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಈ

ಮಂಗಳೂರು: ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಾನಸಿಕವಾಗಿ ನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 25. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜೆಪ್ಪು ಕುಡುಪಾಡಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಪ್ರಶಾಂತ್ ಪಾಯಲ್ ರವರ ಪುತ್ರ ಅನಿಶ್ ಪಿ. ಪಾಯಲ್ (16) ಎಂದು ಗುರುತಿಸಲಾಗಿದೆ. ತಂದೆ ಪ್ರಶಾಂತ್ ಪಾಯಲ್ ಮೂರು ವರ್ಷಗಳ ಹಿಂದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಆ ಬಳಿಕ ಈತ ಮಾನಸಿಕವಾಗಿ ನೊಂದುಕೊಂಡಿದ್ದ ಎನ್ನಲಾಗಿದೆ. ಇದರಿಂದಲೇ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ

ಮಾನಸಿಕವಾಗಿ ನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಾಲ್ವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆ..!

(ನ್ಯೂಸ್ ಕಡಬ) Newskadaba.com ಬೆಳಗಾವಿ, ಅ. 23. ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆಯು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಗಾವಿ ತಾಲೂಕಿನ ಬೋರಗಲ್​​ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹಾದಿಮನಿ (46) ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನ ಹಾದಿಮನಿ(8) ಎಂದು ಗುರುತಿಸಲಾಗಿದೆ. ಬ್ಲಾಕ್ ಫಂಗಸ್​ನಿಂದಾಗಿ ಇತ್ತೀಚೆಗೆ ಪತ್ನಿಯು ಮೃತಪಟ್ಟಿದ್ದರು. ಇದರಿಂದ ಮನನೊಂದ ಹಾದಿಮನಿ, ನಾಲ್ವರು ಮಕ್ಕಳಿಗೆ ವಿಷವುಣಿಸಿ ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಂಕೇಶ್ವರ

ನಾಲ್ವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ದೆವ್ವದ ವೇಷ ಧರಿಸಿ ಹೆದರಿಸಲು ಹೋದ ಯುವತಿಗೆ ಗುಂಡೇಟು..! ➤ ದಾರುಣ ಅಂತ್ಯ

(ನ್ಯೂಸ್ ಕಡಬ) Newskadaba.com ಮೆಕ್ಸಿಕೋ, ಅ. 23. ದೆವ್ವದ ವೇಷ ಧರಿಸಿ, ಸಾರ್ವಜನಿಕರನ್ನು ಹೆದರಿಸಲು ಹೋದ ಯುವತಿಯೋರ್ವಳು ಅನ್ಯಾಯವಾಗಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಮೆಕ್ಸಿಕೋದ ನೌಕಲ್ಪಾನ್ ಡಿ ಜುವಾರೆಜ್ ಎಂಬಲ್ಲಿ ನಡೆದಿದೆ. ರಾತ್ರಿಯಲ್ಲಿ ದೆವ್ವದಂತೆ ವೇಷ ಧರಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಇದನ್ನು ಕಂಡ ವ್ಯಕ್ತಿಯೋರ್ವ ಹೆದರಿ ಒಂದೇ ಸಮನೆ ನಾಲ್ಕೈದು ಗುಂಡು ಹಾರಿಸಿದ್ದು, ಪರಿಣಾಮ ಯುವತಿ ಮೃತಪಟ್ಟ ಘಟನೆ ನಡೆದಿದೆ. ಬಿಳಿ ಸೀರೆಯುಟ್ಟು ದೆವ್ವದಂತೆ ಮೇಕಪ್ ಮಾಡಿ ಯುವತಿಯು ರಸ್ತೆಯ ಬದಿಯಲ್ಲಿದ್ದು, ಈ

ದೆವ್ವದ ವೇಷ ಧರಿಸಿ ಹೆದರಿಸಲು ಹೋದ ಯುವತಿಗೆ ಗುಂಡೇಟು..! ➤ ದಾರುಣ ಅಂತ್ಯ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರೈಲು ಢಿಕ್ಕಿ- ಮಹಿಳೆ ಗಂಭೀರ

(ನ್ಯೂಸ್ ಕಡಬ) Newskadaba.com ಮುಲ್ಕಿ, ಅ. 23. ರೈಲು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಮುಲ್ಕಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಇಬ್ರಾಹೀಂ ಎಂಬವರ‌ ಮಗಳು ಸಕೀನಾ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮುಲ್ಕಿ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದ್ದು, ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಹಾಗೂ ಮುಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ

ರೈಲು ಢಿಕ್ಕಿ- ಮಹಿಳೆ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗದ್ದೆಯಲ್ಲಿ ಮೇಯುತ್ತಿದ್ದ ದನದ ಕಾಲು ಕಡಿದ ಮಹಿಳೆ..!

(ನ್ಯೂಸ್ ಕಡಬ) Newskadaba.com ಕಾರ್ಕಳ, ಅ. 23. ಗದ್ದೆಯಲ್ಲಿ ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಕಾರ್ಕಳದ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಎರ್ಲಪ್ಪಾಡಿ ಸಂತೋಷ್ ಹೆಗ್ಡೆ ಎಂಬವರ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿ ಮೇಯುತ್ತಿದ್ದು, ಇದರಿಂದ ಕೋಪಗೊಂಡ ಅಮಣ್ಣಿ ಹೆಗ್ಡೆ ದನದ ಕಾಲನ್ನು ಕಡಿದಿದ್ದಲ್ಲದೆ, ಇದೇ ವಿಚಾರವನ್ನು ನೆಪವಾಗಿರಿಸಿ, ಸಂತೋಷ್ ಕುಮಾರ್ ಹೆಗ್ಡೆಗೆ ಅಮಣ್ಣಿಯ ಮೂರು ಮಕ್ಕಳು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

ಗದ್ದೆಯಲ್ಲಿ ಮೇಯುತ್ತಿದ್ದ ದನದ ಕಾಲು ಕಡಿದ ಮಹಿಳೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಟೆಂಪೋಗಳ ನಡುವೆ ಢಿಕ್ಕಿ ➤ ಓರ್ವ ಗಂಭೀರ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 23. ಎರಡು ಟೆಂಪೋಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಚಾಲಕನೋರ್ವನ ಕಾಲು ಜಖಂಗೊಂಡ ಘಟನೆ ಬಿ.ಸಿ.ರೋಡ್ -ಪೊಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ನಡೆದಿದೆ. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಂ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಯಿತು ಎನ್ನಲಾಗಿದೆ.

ಬಂಟ್ವಾಳ: ಟೆಂಪೋಗಳ ನಡುವೆ ಢಿಕ್ಕಿ ➤ ಓರ್ವ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top