ಕ್ರೈಮ್ ನ್ಯೂಸ್

ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 27. ಬಿಜೆಪಿ ಮುಖಂಡನ ಮೇಲೆ ಬಜರಂಗದಳದ ಕಾರ್ಯಕರ್ತರು ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತರಾದ ನಿತಿನ್, ಪವನ್ ಹಾಗೂ ನಿಶಾಂತ್ ಎಂಬವರು ಬಿಜೆಪಿ ಅಮ್ಟಾಡಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೊಳ್ಳೂರು ಅವರ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಪ್ರಕಾಶ್ ಅವರ ತಾಯಿ ಮತ್ತು ಅಣ್ಣನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು […]

ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆ ➤ ಆರೋಪಿ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 26. ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ದೂರವಾಣಿ ಕರೆಯ ಮೂಲಕ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ದಿಲೀಪ್ ಮದ್ದಡ್ಕ ಎಂದು ಗುರುತಿಸಲಾಗಿದೆ. ಈತ ಒಂಭತ್ತನೇ ತರಗತಿಯ ಬಾಲಕಿಯನ್ನು ಪರಿಚಯ ಮಾಡಿ, ಆನ್ಲೈನ್ ತರಗತಿಗೆಂದು ಬಾಲಕಿಯ ಜೊತೆಗಿದ್ದ ಮೊಬೈಲ್ ನಂಬರ್ ಪಡೆದು, ಕಳೆದ ಕೆಲ ತಿಂಗಳುಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ವಾಟ್ಸಾಪ್ ಮೂಲಕ ಅಶ್ಲೀಲ ಚಿತ್ರಗಳು ಹಾಗೂ ಕೆಟ್ಟ ಮೆಸೇಜ್ ಗಳನ್ನು

ಬೆಳ್ತಂಗಡಿ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆ ➤ ಆರೋಪಿ ವಿರುದ್ದ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಬಳಿಕ ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಕಲಬುರಗಿ, ಅ. 26. ಇಬ್ಬರು ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಬಳಿಕ ತಾಯಿ ಕೂಡಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಪಂಚಶೀಲ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ತಾಯಿ ದೀಕ್ಷಾ (26) ಹಾಗೂ ಮಗಳು ಸಿಂಚನ (2) ಮೃತಪಟ್ಟರೆ, ಇನ್ನೋರ್ವ ಮಗ ಧನಂಜಯ (3) ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ. ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವಾಗ ಮಕ್ಕಳಿಬ್ಬರು ತಪ್ಪಿಸಿಕೊಳ್ಳಲು ಮುಂದಾಗಿದ್ದು, ಈ ವೇಳೆ

ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಬಳಿಕ ತಾಯಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೂರು ಅಂತಸ್ತಿನ ಕಟ್ಟಡದಲ್ಲಿ ಹೊತ್ತಿಕೊಂಡ ಬೆಂಕಿ ➤ ಒಂದೇ ಮನೆಯ ನಾಲ್ವರು ಉಸಿರುಗಟ್ಟಿ ಮೃತ್ಯು

(ನ್ಯೂಸ್ ಕಡಬ) Newskadaba.com ದೆಹಲಿ, ಅ. 26. ಮೂರಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತಪಟ್ಟ ಘಟನೆ ದೆಹಲಿಯ ಹಳೆ ಸೀಮಾಪುರಿ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಹೌರಿ ಲಾಲ್(59), ಪತ್ನಿ ರೀನಾ ಹಾಗೂ ಮಕ್ಕಳಾದ ಅಶು ಹಾಗೂ ರಾಧಿಕಾ ಎಂದು ಗುರುತಿಸಲಾಗಿದೆ. ಈ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಮುಂಜಾನೆ ವೇಳೆಗೆ ಬೆಂಕಿ‌ ಹೊತ್ತಿಕೊಂಡಿದ್ದು, ಪರಿಣಾಮ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೂರು ಅಂತಸ್ತಿನ ಕಟ್ಟಡದಲ್ಲಿ ಹೊತ್ತಿಕೊಂಡ ಬೆಂಕಿ ➤ ಒಂದೇ ಮನೆಯ ನಾಲ್ವರು ಉಸಿರುಗಟ್ಟಿ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವ್ಯಾಯಾಮದ ನೆಪದಲ್ಲಿ ಅಸಭ್ಯ ವರ್ತನೆ ಆರೋಪ ➤ ದೈಹಿಕ ಶಿಕ್ಷಣ ನಿರ್ದೇಶಕ ಅರೆಸ್ಟ್

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 26. ವ್ಯಾಯಾಮದ ನೆಪದಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ, ಯುವತಿಯ ತಾಯಿಯು ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಎಂದು ಗುರುತಿಸಲಾಗಿದೆ. ಈತ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿದ್ದ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಅ.23ರಂದು ಲೈಂಗಿಕ

ವ್ಯಾಯಾಮದ ನೆಪದಲ್ಲಿ ಅಸಭ್ಯ ವರ್ತನೆ ಆರೋಪ ➤ ದೈಹಿಕ ಶಿಕ್ಷಣ ನಿರ್ದೇಶಕ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗಾಂಜಾ ಸೇವಿಸಿ ಶಾಲಾ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಸಿಗರೇಟು ಸೇದಿಸಿದ ಪುಂಡರು..! ➤ ಶಾಲಾ ಆವರಣದಲ್ಲೇ ದುಷ್ಕೃತ್ಯ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 25. ಗಾಂಜಾ ಸೇವಿಸಿದ ಅಮಲಿನಲ್ಲಿ ಯುವಕರ ಗುಂಪೊಂದು ಶಾಲಾ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿದ ಘಟನೆ ಬೆಂಗಳೂರಿನ ಕೆ ಆರ್ ಪುರಂನ ದೇವಸಂದ್ರ ವಾರ್ಡ್ ನಲ್ಲಿ ನಡೆದಿದೆ. ಸರ್ಕಾರಿ ಶಾಲಾ ಆವರಣದಲ್ಲಿ ಗಾಂಜಾ ಸೇವನೆ ಮಾಡಿದ ಯುವಕರು, ಮಕ್ಕಳನ್ನು ಮರಕ್ಕೆ ಕಟ್ಟಿ ಬಲವಂತದಿಂದ ಸಿಗರೇಟ್ ಸೇದಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯ ಪೋಷಕರೋರ್ವರು, ಗಾಂಜಾ ಸೇವನೆಯ ಯುವಕರ ಗುಂಪೊಂದು ನಮ್ಮ ಮಕ್ಕಳಿಗೆ ಕೆಟ್ಟ ಬುದ್ದಿಗಳನ್ನು ಕಲಿಸಿಕೊಡುತ್ತಿದೆ. ಅವರಿಗೆ ಮದ್ಯ ಹಾಗೂ

ಗಾಂಜಾ ಸೇವಿಸಿ ಶಾಲಾ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಸಿಗರೇಟು ಸೇದಿಸಿದ ಪುಂಡರು..! ➤ ಶಾಲಾ ಆವರಣದಲ್ಲೇ ದುಷ್ಕೃತ್ಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಮೃತ್ಯು..!

(ನ್ಯೂಸ್ ಕಡಬ) Newskadaba.com ಕೊಡಗು, ಅ. 25. ಗೆಳತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆಂದು ಬಂದಿದ್ದ ಐವರು ಗೆಳೆತಿಯರ ಪೈಕಿ ಓರ್ವ ಯುವತಿ ಹೋಂ ಸ್ಟೇನಲ್ಲಿ ಅನುಮಾನಸ್ಪಾದವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ವಿಘ್ನೇಶ್ವರಿ ಈಶ್ವರ್ (24) ಎಂದು ಗುರುತಿಸಲಾಗಿದೆ. ಮೂಲತಃ ಬಳ್ಳಾರಿಯ ಈಕೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದಳು. ಇತ್ತೀಚೆಗೆ ಗೆಳೆತಿಯರೊಂದಿಗೆ ರಾಜ್ಯಕ್ಕೆ ಬಂದಿದ್ದ ಈಶ್ವರಿ, 5 ದಿನದ ಪ್ರವಾಸಕ್ಕೆಂದು ಸ್ನೇಹಿತೆಯರೊಂದಿಗೆ ಮಡಿಕೇರಿಗೆ ತೆರಳಿದ್ದಳು. ಎರಡು ದಿನ ಸುತ್ತಾಡಿದ ಸ್ನೇಹಿತರು ಮಡಿಕೇರಿಯ ಹೋಂ ಸ್ಟೇನಲ್ಲಿ ತಂಗಿದ್ದು, ಮೂರನೇ ದಿನವಾದ ಭಾನುವಾರದಂದು

ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೈಲಿನಡಿಗೆ ಸಿಲುಕಿ 18 ಕುರಿಗಳ ಸಹಿತ ಕುರಿಗಾಹಿ ಮೃತ್ಯು

(ನ್ಯೂಸ್ ಕಡಬ) Newskadaba.com ವಿಜಯನಗರ, ಅ. 25. ತಾನು ಮೇಯಿಸುತ್ತಿರುವ ಕುರಿಗಳ ಪ್ರಾಣ ಉಳಿಸಲು ಹೋಗಿ ಕುರಿಗಾಹಿಯೊಬ್ಬ ಜೀವ ಕಳೆದುಕೊಂಡ ದಾರುಣ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಮತ್ತಿಹಳ್ಳಿ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಹರಾಳು ಗ್ರಾಮದ ಚೌಟ್ಲಿ ಕೊಟ್ರೇಶ(23) ಎಂದು ಗುರುತಿಸಲಾಗಿದೆ. ಕುರಿಗಳ ಹಿಂಡು ರೈಲ್ವೇ ಹಳಿ ದಾಟುತ್ತಿದ್ದ ಸಂದರ್ಭ ಗೂಡ್ಸ್ ರೈಲು ಬಂದಿದ್ದು, ಕುರಿಗಳು ಸಾಯುವುದನ್ನು ತಪ್ಪಿಸಲು ಲಗುಬಗೆಯಿಂದ ಹಳಿಗಳ ಮೇಲೆ ಹೋಗಿ ಕುರಿಗಳನ್ನು ಓಡಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಬಂದ ರೈಲು ಕುರಿಗಾಹಿಯ ಮೇಲೂ ಹರಿದಿದೆ.

ರೈಲಿನಡಿಗೆ ಸಿಲುಕಿ 18 ಕುರಿಗಳ ಸಹಿತ ಕುರಿಗಾಹಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಟ್ಟೆಗಳಿಗೆ ನಕಲಿ ಬ್ರಾಂಡ್ ಬಳಸಿ ತಯಾರಿಸುತ್ತಿದ್ದ ಗೋಡೌನ್ ಗೆ ಪೊಲೀಸ್ ದಾಳಿ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 25. ನಕಲಿ ಬ್ರಾಂಡ್ ಲೋಗೋ ಬಳಸಿ ತಯಾರಿಸುವ ಬಟ್ಟೆಯ ಗೋಡೌನ್ ಮೇಲೆ ದಾಳಿ ನಡೆಸಿದ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸುರ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಹುಲ್ ಕುಮಾರ್(38) ಎಂದು ಗುರುತಿಸಲಾಗಿದೆ. ಈತ ಪೋಲೊ, ರಾಲ್ಫ್ ಲಾರೆನ್ ಮತ್ತು ಲಕೋಸ್ಟ್ ಉತ್ಪನ್ನಗಳ ಹೆಸರಲ್ಲಿರುವ ಬಟ್ಟೆಗಳ ಬ್ರ್ಯಾಂಡ್ ಹೆಸರು ಹಾಗೂ ಲೋಗೊ, ಡಿಸೈನ್‌ನ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದನು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಬಟ್ಟೆಗಳಿಗೆ ನಕಲಿ ಬ್ರಾಂಡ್ ಬಳಸಿ ತಯಾರಿಸುತ್ತಿದ್ದ ಗೋಡೌನ್ ಗೆ ಪೊಲೀಸ್ ದಾಳಿ ➤ ಓರ್ವ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೀರು ವೀಕ್ಷಣೆಯ ವೇಳೆ ಕಾಲು ಜಾರಿ ನೀರುಪಾಲಾದ‌ ವ್ಯಕ್ತಿ

(ನ್ಯೂಸ್ ಕಡಬ) Newskadaba.com ಮೈಸೂರು, ಅ. 25. ಮಳೆಯ ನೀರು ನೋಡುತ್ತಿದ್ದ ವ್ಯಕ್ತಿಯೋರ್ವರು ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ಹಪೊದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತರನ್ನು ಸಿದ್ದಾರ್ಥ ನಗರದ ವಿನಯ ಮಾರ್ಗದ ನಿವಾಸಿ ಎಂ.ಚಂದ್ರೇ ಗೌಡ(60) ಎಂದು‌ ಗುರುತಿಸಲಾಗಿದೆ. ಮನೆ ಪಕ್ಕದ ಮೋರಿಯಲ್ಲಿ ನಿಂತು ನೀರು ವೀಕ್ಷಿಸುತ್ತಿದ್ದ ವೇಳೆ ಕಾಲು ಜಾರಿ ಮೋರಿಗೆ ಬಿದ್ದು, ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾಗಿದ್ದಾರೆ.

ನೀರು ವೀಕ್ಷಣೆಯ ವೇಳೆ ಕಾಲು ಜಾರಿ ನೀರುಪಾಲಾದ‌ ವ್ಯಕ್ತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top