ಕ್ರೈಮ್ ನ್ಯೂಸ್

ಪುತ್ತೂರು: ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ ➤ ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 13. ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ನಿರ್ವಾಹಕನ ಕಾಲು ಮುರಿತಕ್ಕೊಳಗಾದ ಘಟನೆ ಪುತ್ತೂರಿನ ಕೆಮ್ಮಾಯಿ ಜಂಕ್ಷನ್ ನಲ್ಲಿ ಶನಿವಾರದಂದು ನಡೆದಿದೆ. ರಸ್ತೆ ಕಾಮಗಾರಿಯ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿಯಲ್ಲಿದ್ದ ನಿರ್ವಾಹಕನ ಕಾಲು ಮುರಿತಗೊಂಡು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು: ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ ➤ ಓರ್ವನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ವಿಷ ಪದಾರ್ಥ ಸೇವಿಸಿ ಪತಿ-ಪತ್ನಿ ಅಸ್ವಸ್ಥ; ಪತ್ನಿ ಮೃತ್ಯು ➤ ವಿಷಯ ತಿಳಿಯುತ್ತಲೇ ಪತಿ ಆಸ್ಪತ್ರೆಯಿಂದ ಎಸ್ಕೇಪ್..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 13. ಕೆಲ ದಿನಗಳ ಹಿಂದೆ ವಿಷ ಸೇವನೆ ಮಾಡಿ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇಚ್ಲಂಪಾಡಿಯ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಇಚ್ಚಂಪಾಡಿ ಗ್ರಾಮದ ನಿಡ್ಯಡ್ಕ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಸೌಮ್ಯ (36) ಎಂದು ಗುರುತಿಸಲಾಗಿದೆ. ಗೋಳಿಯಡ್ಕದ ಬೀಜದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ, ನ. 09ರಂದು ಸಂಜೆ ಮನೆಯಲ್ಲಿ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು, ಇದರ ಬೆನ್ನಲ್ಲೇ ಆಕೆಯ ಪತಿ ವೆಂಕಟೇಶ್

ನೆಲ್ಯಾಡಿ: ವಿಷ ಪದಾರ್ಥ ಸೇವಿಸಿ ಪತಿ-ಪತ್ನಿ ಅಸ್ವಸ್ಥ; ಪತ್ನಿ ಮೃತ್ಯು ➤ ವಿಷಯ ತಿಳಿಯುತ್ತಲೇ ಪತಿ ಆಸ್ಪತ್ರೆಯಿಂದ ಎಸ್ಕೇಪ್..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮದುವೆಯ ವಿಷಯದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರು ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

  ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್ ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ Ph:9380973370 ಮದುವೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಬಹಳ ಮುಖ್ಯವಾದ ಘಟ್ಟ, ಸರಿಯಾದ ಸಮಯಕ್ಕೆ ಮದುವೆಯಾದರೆ ಸರಿ, ಒಂದು ವೇಳೆ ಸರಿಯಾದ ಸಮಯಕ್ಕೆ ಮದುವೆ ಕಾರ್ಯಗಳು ನಡೆಯದೆ ಹೋದರೆ

ಮದುವೆಯ ವಿಷಯದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರು ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ Read More »

ಅಡುಗೆ, ಅಂತರ್ರಾಷ್ಟ್ರೀಯ ನ್ಯೂಸ್, ಆರೋಗ್ಯ ಮಾಹಿತಿ, ಉದ್ಯೋಗ, ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು, ಸಿನಿಮಾ

ಕಡಬ: ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ಟ್ವಿಸ್ಟ್ ➤ ಅಲ್ಲಿ ನಡೆದಿದ್ದೇ ಬೇರೆ

(ನ್ಯೂಸ್ ಕಡಬ) newskadaba.com ಕಡಬ, ನ.10. ಮಂಗಳವಾರ ಸಂಜೆ ಕೋಡಿಂಬಾಳ-ಮಡ್ಯಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ್ದು ಇದನ್ನು ಗಮನಿಸಿದ ಶಾಲಾ ಬಾಲಕಿ ಓಡಿ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಇದರ ಅಸಲಿ ಸತ್ಯ ಇದೀಗ ಬಹಿರಂಗಗೊಂಡಿದೆ. ಕಡಬ ಪಟ್ಟಣ ಪಂಚಾಯತ್ ನಿಂದ ಈಗಾಗಲೇ ವಾರ್ಡ್ ವಿಂಗಡನೆಗೆ ಸಂಬಂಧಿಸಿ ಪಂಚಾಯತ್ ಸಿಬ್ಬಂದಿಗಳು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜಿ.ಪಿ.ಎಸ್ ಮಾಡುವ ಕೆಲಸವನ್ನು ಈಗಾಗಲೇ ಮಾಡುತ್ತಿದ್ದಾರೆ. ಅದರಂತೆ ಮಂಗಳವಾರದಂದು ಕೋಡಿಂಬಾಳ ಗ್ರಾಮದ ಉಂಡಿಲ ಕ್ರಾಸ್ ಬಳಿ

ಕಡಬ: ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ಟ್ವಿಸ್ಟ್ ➤ ಅಲ್ಲಿ ನಡೆದಿದ್ದೇ ಬೇರೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಣಿಯೂರು: ಅಡಿಕೆ ಅಂಗಡಿಗೆ ನುಗ್ಗಿದ ಜೀಪು ➤ ತಪ್ಪಿದ ಅಪಾಯ

(ನ್ಯೂಸ್ ಕಡಬ) newskadaba.com ಕಡಬ, ನ. 10. ಅಡಿಕೆ ಅಂಗಡಿಯೊಂದಕ್ಕೆ ಜೀಪು ನುಗ್ಗಿದ ಘಟನೆ ತಾಲೂಕಿನ ಕಾಣಿಯೂರು ಎಂಬಲ್ಲಿ ಇಂದು ನಡೆದಿದೆ. ಕಾಣಿಯೂರಿನ ಅಡಿಕೆ ಅಂಗಡಿಯೊಂದಕ್ಕೆ ಜೀಪಿನಲ್ಲಿ ಅಡಿಕೆ ತರಲಾಗಿತ್ತು. ಬಳಿಕ ಜೀಪಿನಿಂದ ಅಡಿಕೆಯನ್ನು ಕೆಳಗಿಳಿಸಿ ಜೀಪನ್ನು ಹಿಂದಕ್ಕೆ ಚಲಾಯಿಸಿದಾಗ ನಿಯಂತ್ರಣ ತಪ್ಪಿ ಅಂಗಡಿಯ ಶಟರ್ ಗೆ ಗುದ್ದಿದೆ ಎನ್ನಲಾಗಿದೆ.

ಕಾಣಿಯೂರು: ಅಡಿಕೆ ಅಂಗಡಿಗೆ ನುಗ್ಗಿದ ಜೀಪು ➤ ತಪ್ಪಿದ ಅಪಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 10. ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಹಳೇಗೇಟು ಎಂಬಲ್ಲಿ ಇಂದು ನಡೆದಿದೆ. ಗಾಯಗೊಂಡವರನ್ನು ಕಾಣಿಯೂರು ಬೆಂಗಾಯ ನಿವಾಸಿ ಭುವನೇಶ್ ಎಂದು ಗುರುತಿಸಲಾಗಿದೆ. ಕಡಬ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ವಿರುದ್ದ ದಿಕ್ಕಿನಿಂದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮರ್ಮಾಂಗವನ್ನೇ ಕತ್ತರಿಸಿ ಶಿಕ್ಷಕನ ಭೀಕರ ಹತ್ಯೆ..!

(ನ್ಯೂಸ್ ಕಡಬ) newskadaba.com ಬೀದರ್, ನ. 10. ಶಿಕ್ಷಕರೋರ್ವರ ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ನ ಔರಾದ್ ಪಟ್ಟಣದಲ್ಲಿ ನಡೆದಿದೆ. ಹತ್ಯೆಯಾದವರನ್ನು ಬೀದರ್ ಜಿಲ್ಲೆಯ ಔರಾದ್ ನ ಲಿಡ್ಕರ್ ಕಾಲನಿ ನಿವಾಸಿ ವಿಜಯ್ ಕುಮಾರ್ ಟೀಳೆಕರ್(46) ಎಂದು ಗುರುತಿಸಲಾಗಿದೆ. ಇವರು ಔರಾದ್ ನ ಕರಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ನಿಖರ ಕಾರಣ ತನಿಖೆಯಿಂದಲೇ ತಿಳಿದು ಬರಬೇಕಿದೆ.

ಮರ್ಮಾಂಗವನ್ನೇ ಕತ್ತರಿಸಿ ಶಿಕ್ಷಕನ ಭೀಕರ ಹತ್ಯೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಸ್ಕೂಟರ್ – ಲಾರಿ ನಡುವೆ ಢಿಕ್ಕಿ ➤ ಗಾಯಗೊಂಡಿದ್ದ ಸಹಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ. 10. ಲಾರಿ ಮತ್ತು ಸ್ಕೂಟರ್ ನಡುವೆ ಮಂಗಳವಾರದಂದು ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ವಸಂತ ರೈ ಬಳ್ಳಮಜಲು ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಕುರಿಯ ನಿವಾಸಿ ನಾರಾಯಣ ಬಳ್ಳಮಜಲು ಎಂಬವರೊಂದಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಹಾಗೂ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನೂ ಪುತ್ತೂರಿನ ಆಸ್ಪತ್ರೆಗೆ

ಪುತ್ತೂರು: ಸ್ಕೂಟರ್ – ಲಾರಿ ನಡುವೆ ಢಿಕ್ಕಿ ➤ ಗಾಯಗೊಂಡಿದ್ದ ಸಹಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಮಕುಂಜ: ಮುಖ್ಯಶಿಕ್ಷಕರ ಕೊಠಡಿಯ ಬೀಗ ಮುರಿದ ಕಳ್ಳರು…!

(ನ್ಯೂಸ್ ಕಡಬ) newskadaba.com ರಾಮಕುಂಜ, ನ. 10. ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜದಲ್ಲಿ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮುಖ್ಯ ಶಿಕ್ಷಕರು ಶಾಲೆಗೆ ಬಂದು ಕೊಠಡಿಯ ಬೀಗ ತೆಗೆಯಲು ಮುಂದಾದಾಗ ಕಳ್ಳತನ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಾಮಕುಂಜ: ಮುಖ್ಯಶಿಕ್ಷಕರ ಕೊಠಡಿಯ ಬೀಗ ಮುರಿದ ಕಳ್ಳರು…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಕಳ್ಳರ ಕೈಚಳಕ ➤ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.10. ಇಲ್ಲಿನ ಪೇಟೆಯಲ್ಲಿರುವ ಹಲವು ಅಂಗಡಿಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಕಳ್ಳರು ನಗದು ಸಹಿತ ಕೆಲವು ವಸ್ತುಗಳನ್ನು ಕಳವುಗೈದಿದ್ದಾರೆ. ಪೇಟೆಯಲ್ಲಿರುವ ಫ್ಯಾನ್ಸಿ, ಮೆಡಿಕಲ್ ಸೇರಿದಂತೆ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿರುವ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.    

ನೆಲ್ಯಾಡಿ: ಕಳ್ಳರ ಕೈಚಳಕ ➤ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿದ ಕಳ್ಳರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top