ನೀರಿನಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ಹೋದ ತಾಯಿ ನೀರುಪಾಲು..!

(ನ್ಯೂಸ್ ಕಡಬ) newskadaba.com ಕೊಡಗು, ನ. 02. ದನವನ್ನು ಮೇಯಿಸಲು ಹೋಗಿದ್ದ ಸಂದರ್ಭ ನೀರುಪಾಲಾಗುತ್ತಿದ್ದ ಮಗನನ್ನು ರಕ್ಷಿಸಲೆಂದು ಹೋದ ತಾಯಿಯೂ ನೀರುಪಾಲಾದ ಘಟನೆ ಜಿಲ್ಲೆಯ ಟ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

ನೀರುಪಾಲಾದವರನ್ನು ತಾಯಿ ರೇವತಿ ಹಾಗೂ ಪುತ್ರ ಕಾರ್ಯಪ್ಪ(12) ಎಂದು ಗುರುತಿಸಲಾಗಿದೆ. ದನ ಮೇಯಿಸಲು ತೆರಳಿದ ಮಗ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ತಾಯಿ ರಕ್ಷಣೆಗೆ ತೆರಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಅದಾಗಲೇ ಸ್ಥಳೀಯರು ರಕ್ಷಣೆಗೆ ಮುಂದಾದರಾದರೂ ತಾಯಿ ರೇವತಿ ಮೃತಪಟ್ಟಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ. ಆದರೆ ಪುತ್ರನ ಮೃತದೇಹ ಒಂದು ದಿನದ ಬಳಿಕ ಪತ್ತೆಯಾಗಿದೆ.

Scroll to Top