ಕ್ರೈಮ್ ನ್ಯೂಸ್

ಹೆದ್ದಾರಿ ಬದಿ ಜೊತೆಯಾಗಿ ಸಿಕ್ಕಿಬಿದ್ದ ಮುಸ್ಲಿಂ ಯುವಕ – ಹಿಂದೂ ಯುವತಿ ➤ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಪರ ಸಂಘಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.05. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಬಂದು ಕಾಡಿನ ಬದಿಯಲ್ಲಿ ಜೊತೆಗಿರುವುದನ್ನು ಗಮನಿಸಿದ ಹಿಂದೂ ಪರ ಸಂಘಟನೆಯ ಸದಸ್ಯರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರದಂದು ಗುಂಡ್ಯದಲ್ಲಿ ನಡೆದಿದೆ. ವೇಣೂರು ಮೂಲದ ಹಿಂದೂ ಧರ್ಮಕ್ಕೆ ಸೇರಿದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಮಂಗಳವಾರದಂದು ರಿಕ್ಷಾದಲ್ಲಿ ಗುಂಡ್ಯಕ್ಕೆ ಆಗಮಿಸಿದ್ದು, ದೇರಣೆ ಕ್ರಾಸ್ ಸಮೀಪ ಕಾಡು ರಸ್ತೆಯಲ್ಲಿ ಜೊತೆಗಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಭಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ […]

ಹೆದ್ದಾರಿ ಬದಿ ಜೊತೆಯಾಗಿ ಸಿಕ್ಕಿಬಿದ್ದ ಮುಸ್ಲಿಂ ಯುವಕ – ಹಿಂದೂ ಯುವತಿ ➤ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಪರ ಸಂಘಟನೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಪಾಲೋಳಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.03. ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ. ಮೃತ ಬಾಲಕನನ್ನು ನರಿಮೊಗರು ಐಟಿಐ ನ ವಿದ್ಯಾರ್ಥಿ ಕಡಬ ಹೈಸ್ಕೂಲ್ ಬಳಿಯ ನಿವಾಸಿ ನಾವೂರ ಎಂಬವರ ಪುತ್ರ ನಿತೇಶ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತರೊಂದಿಗೆ ಪಾಲೋಳಿ ನದಿಯಲ್ಲಿ ನೀರಿಗಿಳಿದಿದ್ದ ವೇಳೆ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ಕಡಬ ಠಾಣೆಗೆ ಮಾಹಿತಿ ನೀಡಲಾಗಿದೆ.

ಕಡಬ: ಪಾಲೋಳಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಬೈಕ್ – ಕಾರು ನಡುವೆ ಢಿಕ್ಕಿ ➤ ನಿವೃತ್ತ ಎಎಸ್ಐ ಮೃತ್ಯು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ.04. ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ನಿವೃತ್ತ ಎಎಸ್ಐ ಓರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದ ಬಳಿ ಭಾನುವಾರದಂದು ಸಂಭವಿಸಿದೆ. ಮೃತರನ್ನು ಕುಲ್ಕುಂದ‌ ನಿವಾಸಿ ನಿವೃತ್ತ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಎ.ಪಿ.ಗೌಡ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕಾರು ನಡುವೆ ಢಿಕ್ಕಿ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.    

ಸುಬ್ರಹ್ಮಣ್ಯ: ಬೈಕ್ – ಕಾರು ನಡುವೆ ಢಿಕ್ಕಿ ➤ ನಿವೃತ್ತ ಎಎಸ್ಐ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸ್ನಾನಕ್ಕೆಂದು ನದಿಗಿಳಿದಿದ್ದ ವೇಳೆ ಆಯ ತಪ್ಪಿ ಮುಳುಗಡೆ ➤ ಪಿಯುಸಿ ವಿದ್ಯಾರ್ಥಿಗಳಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಸಿದ್ದಾಪುರ, ಮಾ.31. ಸ್ನಾನಕ್ಕೆಂದು ನೀರಿಗಿಳಿದ ವಿದ್ಯಾರ್ಥಿಗಳಿಬ್ಬರು ನೀರಲ್ಲಿ ಮೃತಪಟ್ಟ ಘಟನೆ ವಾರಾಹಿ ಹೊಳೆಯಲ್ಲಿ ಗುರುವಾರದಂದು ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಸಿದ್ಧಾಪುರ ತಾಲೂಕಿನ ಉಳ್ಳೂರು ಗ್ರಾಮದ ಮೋಹನ್‌ ಎಂಬವರ ಪುತ್ರ ಗಣೇಶ್(17) ಹಾಗೂ ಹಾಡಿ ದೇವಸ್ಥಾನದ ಮಂಜುನಾಥ ಮಡಿವಾಳ ಎಂಬವರ ಪುತ್ರ ಸುಮಂತ್‌ (17) ಎಂದು ಗುರುತಿಸಲಾಗಿದೆ. ಶಂಕರನಾರಾಯಣ ಸರಕಾರಿ ಪ್ರಥಮ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾಗಿದ್ದ ಮೃತರು, ಗುರುವಾರದಂದು ತನ್ನ ಸ್ನೇಹಿತರೊಂದಿಗೆ ವಾರಾಹಿ ಹೊಳೆಯ ಬಳಿ ಸ್ನಾನಕ್ಕೆ ಇಳಿಯುವಾಗ ಆಕಸ್ಮಿಕವಾಗಿ ನದಿಗೆ ಬಿದ್ದು

ಸ್ನಾನಕ್ಕೆಂದು ನದಿಗಿಳಿದಿದ್ದ ವೇಳೆ ಆಯ ತಪ್ಪಿ ಮುಳುಗಡೆ ➤ ಪಿಯುಸಿ ವಿದ್ಯಾರ್ಥಿಗಳಿಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪಂಜರದ ಪಕ್ಷಿಗೆ ಕೊನೆಗೂ ಮುಕ್ತಿ ➤ ರಸ್ತೆಯಿಂದ ಕಾಡಿನತ್ತ ಸರಿದ ಅಪಾಯಕಾರಿ ಕ್ರೇನ್

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಹೆದ್ದಾರಿ ಮಧ್ಯೆ ಸುಮಾರು ಒಂದೂವರೆ ವರ್ಷದಿಂದ ಕೆಟ್ಟು ನಿಂತಿದ್ದ ಕ್ರೇನ್ ನ್ನು ಕೊನೆಗೂ ಪಕ್ಕಕ್ಕೆ ಸರಿಸಲಾಗಿದೆ. ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಭಕ್ತರಿಗೆ ಹಾಗೂ ಈ ರಸ್ತೆಯಲ್ಲಿ ಹಾದುಹೋಗುವ ವಾಹನ ಸವಾರರಿಗೆ ಈ ಕ್ರೇನ್ ರಸ್ತೆ ಅಂಚಿನಲ್ಲಿ ಕೆಟ್ಟುನಿಂತ ಪರಿಣಾಮ ಹಲವು ಸಮಸ್ಯೆ ಆಗುತಿತ್ತು. ಅಲ್ಲದೆ ಅದೆಷ್ಟೋ ಅಪಘಾತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿತ್ತು. ಕಳೆದ ಒಂದೂವರೆ

ಪಂಜರದ ಪಕ್ಷಿಗೆ ಕೊನೆಗೂ ಮುಕ್ತಿ ➤ ರಸ್ತೆಯಿಂದ ಕಾಡಿನತ್ತ ಸರಿದ ಅಪಾಯಕಾರಿ ಕ್ರೇನ್ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಪರ್ಸ್ ಎಗರಿಸಿದ ಅಪ್ರಾಪ್ತ ಬಾಲಕರು ➤ ಹಿಡಿದು ಪೋಲಿಸರಿಗೊಪ್ಪಿಸಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಇಲ್ಲಿನ ಕೇವಳ ಎಂಬಲ್ಲಿ ಅಟೋ ರಿಕ್ಷಾದಲ್ಲಿದ್ದ ವ್ಯಕ್ತಿಯೋರ್ವರ ಪರ್ಸನ್ನು ಅಪ್ರಾಪ್ತ ಬಾಲಕರಿಬ್ಬರು ಎಗರಿಸಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಅವರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಕಡಬದಲ್ಲಿ ನಡೆದಿದೆ. ಪರ್ಸ್ ಎಗರಿಸಿದ ಅಪ್ತಾಪ್ತ ಬಾಲಕರು ಕುಂತೂರು ಸಮೀಪದವರೆಂದು ತಿಳಿದು ಬಂದಿದ್ದು, ಈ ಬಾಲಕರು ಕಡಬ ಸಮೀಪದ ಕೇವಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲಿಯ ವ್ಯಕ್ತಿಯೋರ್ವರು ಅಟೋ ರಿಕ್ಷಾದಲ್ಲಿ ಬಂದಿದ್ದು ಅವರು ತಮ್ಮ ಸ್ನೇಹಿತರೋರ್ವರ ಜತೆ ಮಾತನಾಡುತ್ತಿದ್ದಾಗ ಆ

ಕಡಬ: ಪರ್ಸ್ ಎಗರಿಸಿದ ಅಪ್ರಾಪ್ತ ಬಾಲಕರು ➤ ಹಿಡಿದು ಪೋಲಿಸರಿಗೊಪ್ಪಿಸಿದ ಸ್ಥಳೀಯರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ಜೀಪ್ – ಸ್ಕೂಟರ್ ನಡುವೆ ಅಪಘಾತ ➤ 9ನೇ ತರಗತಿಯ ಓರ್ವ ವಿದ್ಯಾರ್ಥಿ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.23. ಜೀಪ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಸುಳ್ಯ ಸಮೀಪದ ಪೆರಾಜೆ ಎಂಬಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸುಳ್ಯದ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ವಿಶ್ವದೀಪ್ ಎಂದು ಗುರುತಿಸಲಾಗಿದೆ. ಇನ್ನೋರ್ವ ವಿದ್ಯಾರ್ಥಿ ದರ್ಶನ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.    

ಸುಳ್ಯ: ಜೀಪ್ – ಸ್ಕೂಟರ್ ನಡುವೆ ಅಪಘಾತ ➤ 9ನೇ ತರಗತಿಯ ಓರ್ವ ವಿದ್ಯಾರ್ಥಿ ಮೃತ್ಯು, ಮತ್ತೋರ್ವ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಢಿಕ್ಕಿ ➤ ಇಬ್ಬರು ದುರ್ಮರಣ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 18. ಆಕ್ಟಿವಾ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸಹೋದರರಿಬ್ಬರು ಮೃತಪಟ್ಟ ದರುಣ ಘಟನೆ ಗುರುವಾಯನಕೆರೆ- ಮೂಡಬಿದಿರೆ ಹೆದ್ದಾರಿಯ ಗರ್ಡಾಡಿ ಎಂಬಲ್ಲಿ ಶುಕ್ರವಾರದಂದು ಸಂಜೆ ನಡೆದಿದೆ. ಮೃತಪಟ್ಟವರನ್ನು ಉಪ್ಪಿನಂಗಡಿಯ ಹೀರೆಬಂಡಾಡಿ ನಿವಾಸಿ ರಝಾಕ್ ಮಾಸ್ಟರ್ ಎಂಬವರ ಮಕ್ಕಳಾದ ಸಾದಿಕ್(35) ಹಾಗೂ ಸಿರಾಜುದ್ದೀನ್(30) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಕಡೆ ಬರುತ್ತಿದ್ದ ಅಕ್ಟೀವಾ ಹಾಗೂ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬಸ್ ನಡುವೆ ಢಿಕ್ಕಿ ಸಂಭವಿಸಿದ್ದು, ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು,

ಉಪ್ಪಿನಂಗಡಿ: ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಢಿಕ್ಕಿ ➤ ಇಬ್ಬರು ದುರ್ಮರಣ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಹಿಳಾ ವೈದ್ಯೆಗೆ ಅವಮಾನ ➤ ಶಾಸಕ ಹಾಗೂ ಇತರರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 18. ಇಲ್ಲಿನ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯೆಯಾಗಿದ್ದ ಡಾ.ವೀಣಾ ನಾರಾಯಣ ಶಿಬರೂರು ಅವರನ್ನು ಅನವಶ್ಯಕವಾಗಿ ಅಂಕೋಲಾದ ಆಸ್ಪತ್ರೆಗೆ ವರ್ಗಾವಣೆ ಮಾಡಿದ ವಿಷಯಕ್ಕೆ ಸಂಬಂಧಿಸಿ ಬೈಂದೂರು ಶಾಸಕ ಬಿಎಂ.ಸುಕುಮಾರ್ ಶೆಟ್ಟಿ ಹಾಗೂ ಇತರ 12 ಮಂದಿ ವಿರುದ್ದ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಶಾಸಕ ಸುಕುಮಾರ್ ಶೆಟ್ಟಿ ಅವರು ಬೈಂದೂರಿನಲ್ಲಿ ದಂತ ವೈದ್ಯೆಯಾಗಿದ್ದ ಡಾ. ವೀಣಾ ಅವರನ್ನು ಅಂಕೋಲಾಗೆ ವರ್ಗಾಯಿಸಲು ಹಾಗೂ ಅಂಕೋಲಾದ ಡಾ.ವತ್ಸಲಾ ಗೋಣಿ ಅವರನ್ನು ಬೈಂದೂರಿಗೆ

ಮಹಿಳಾ ವೈದ್ಯೆಗೆ ಅವಮಾನ ➤ ಶಾಸಕ ಹಾಗೂ ಇತರರ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಮರದಿಂದ ಬಿದ್ದು ಬಾಲಕ ಮೃತ್ಯು..!!!

(ನ್ಯೂಸ್ ಕಡಬ) newskadaba.com ಕಡಬ, ಮಾ. 18. ಮರದಿಂದ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ದೋಳ್ಪಾಡಿ ಗ್ರಾಮದ ಮರಕ್ಕಡ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಮರಕ್ಕಡ ನಿವಾಸಿ ದಿವಾಕರ ಎಂಬವರ ಮಗ ಉಲ್ಲಾಸ್ (9) ಎಂದು ಗುರುತಿಸಲಾಗಿದೆ. 3ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಈತ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ಮನೆಯ ಹತ್ತಿರದ ವಠಾರದಲ್ಲಿದ್ದ ಪೇರಳೆ ಮರಕ್ಕೆ ಹತ್ತಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಗಂಭೀರ

ಕಡಬ: ಮರದಿಂದ ಬಿದ್ದು ಬಾಲಕ ಮೃತ್ಯು..!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top