ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಮೃತ್ಯು, ಮೂವರಿಗೆ ಗಾಯ…!!!!



(ನ್ಯೂಸ್ ಕಡಬ) newskadaba.com ಉಡುಪಿ, ಮಾ. 03. ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಬೈಂದೂರು ತಾಲೂಕಿನ ಕಿರುಮಂಜೇಶ್ವರದಲ್ಲಿ ನಡೆದಿದೆ.








ಮೃತ ಯುವಕನನ್ನು ಬೆಂಗಳೂರು ಮೂಲದ ಅಕ್ಷಯ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ತೇಜಸ್, ಪವನ್ ಹಾಗೂ ಹರ್ಷ ಗಾಯಗೊಂಡಿದ್ದು, ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬೆಂಗಳೂರಿನಿಂದ ಕರಾವಳಿಗೆ ಪ್ರವಾಸಕ್ಕೆಂದು ಬಂದ ಪುನಃ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಉಡುಪಿಯ ಕಿರಿಮಂಜೇಶ್ವರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಅಕ್ಷಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top