ಕ್ರೈಮ್ ನ್ಯೂಸ್

ಅಲೆಟ್ಟಿ: ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡು ➤ ಅಪಾರ ಕೃಷಿ ಬೆಳೆ ನಾಶ.!

(ನ್ಯೂಸ್ ಕಡಬ) newskadaba.com ಅಲೆಟ್ಟಿ, ಜು. 01. ಗ್ರಾಮದ ಮೈಂದೂರು ನಿವಾಸಿ ವಿಶ್ವನಾಥ ಗೌಡ ಎಂಬವರ ಕೃಷಿ ತೋಟಕ್ಕೆ ತಡರಾತ್ರಿಯಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ, ಅಪಾರ ಪ್ರಮಾಣದ ಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ. ಆನೆ ಹಿಂಡಿನ ದಾಳಿಯಿಂದಾಗಿ ಸುಮಾರು‌ 75 ತೆಂಗಿನ ಮರ, 50 ಬಾಳೆಗಿಡ ಹಾಗೂ ಹತ್ತು ಅಡಿಕೆ ಮರಗಳನ್ನು ನಾಶಪಡಿಸಿದಲ್ಲದೇ ತೋಟಕ್ಕೆ ಅಳವಡಿಸಲಾಗಿದ್ದ ನೀರಿನ ಪೈಪ್ ನ್ನು ಕೂಡಾ ಪುಡಿಗಟ್ಟಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಅಲೆಟ್ಟಿ: ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡು ➤ ಅಪಾರ ಕೃಷಿ ಬೆಳೆ ನಾಶ.! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ವಾಹನ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 01. ಯುವಕನೋರ್ವನನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಪರಿಣಾಮ ಯುವಕ ಗಾಯಗೊಂಡ ಘಟನೆ ಇಳಂತಿಲ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರು ರಾತ್ರಿ 10:30ರ ಹೊತ್ತಿಗೆ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಇಬ್ಬರು ಪರಿಚಯಸ್ಥ ವ್ಯಕ್ತಿಗಳು ಹಾಗೂ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ಬೈಕ್ ನ್ನು ಅಡ್ಡಗಟ್ಟಿ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ, ಬಳಿಕ ಮಂಜುನಾಥ್ ಅವರ ತಮ್ಮನಿಗೂ ಕರೆ ಮಾಡಿ ಸ್ಥಳಕ್ಕೆ ಕರೆಸಿ

ಉಪ್ಪಿನಂಗಡಿ: ವಾಹನ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ➤ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮದರಸ ವಿದ್ಯಾರ್ಥಿ ಮೇಲೆ ಹಲ್ಲೆ ➤ ಪ್ರಕರಣದ ಹಿನ್ನೆಲೆ ಬಹಿರಂಗ

(ನ್ಯೂಸ್ ಕಡಬ) newskadaba.com ಕೃಷ್ಣಾಪುರ, ಜೂ. 30. ಮದರಸ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು ಸಂತ್ರಸ್ತ ವಿದ್ಯಾರ್ಥಿಯೇ ಕೃತ್ಯವೆಸಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕಮಿಷನರ್ ಶಶಿಕುಮಾರ್, ಮದರಸ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ವಿದ್ಯಾರ್ಥಿಯ ಹೇಳಿಕೆ ಹಾಗೂ ಪೋಷಕರ ಹೇಳಿಕೆಯನ್ನು ದಾಖಲಿಸಿ ತನಿಖೆ ಕೈಗೊಂಡಾಗ 13 ವರ್ಷದ ಸಂತ್ರಸ್ತ ವಿದ್ಯಾರ್ಥಿಯೇ ವೈಯಕ್ತಿಕ ಸಮಸ್ಯೆಯಿಂದ ಈ ನಾಟಕವಾಡಿರುವುದು

ಮಂಗಳೂರು: ಮದರಸ ವಿದ್ಯಾರ್ಥಿ ಮೇಲೆ ಹಲ್ಲೆ ➤ ಪ್ರಕರಣದ ಹಿನ್ನೆಲೆ ಬಹಿರಂಗ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ರಿಕ್ಷಾ ಚಾಲಕನಿಗೆ ಹಲ್ಲೆ..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 30. ಮುಸ್ಲಿಂ ರಿಕ್ಷಾ ಚಾಲಕರೋರ್ವರಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಚಾಲಕನನ್ನು ಉಮರಬ್ಬ ಎಂದು ಗುರುತಿಸಲಾಗಿದೆ. ಇವರು ಸುರಿಯಾ ಜನಾರ್ಧನ ದೇವಸ್ಥಾನದ ಬಳಿ ಆಟೋ ರಿಕ್ಷಾ ನಿಲ್ಲಿಸಿದಕ್ಕೆ ಸುಮೋ ಚಾಲಕರೋರ್ವರು ತಗಾದೆ ತೆಗೆದಿದ್ದು, ಈ ಸಂದರ್ಭ ಇವರಿಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕೆ ಧಾವಿಸಿದ ಉಜಿರೆಯ ಇತರ ಆಟೋ ಚಾಲಕರು ಉಮರಬ್ಬ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇವರನ್ನು

ಬೆಳ್ತಂಗಡಿ: ರಿಕ್ಷಾ ಚಾಲಕನಿಗೆ ಹಲ್ಲೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರದ ಗೆಲ್ಲು ಹಾಗೂ ವಿದ್ಯುತ್ ಕಂಬ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 30. ಚಲಿಸುತ್ತಿದ್ದ ತ್ರಿಚಕ್ರ ಸ್ಕೂಟರ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಸವಾರ ಗಾಯಗೊಂಡ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಸ್.ವಿ.ಎಸ್ ಕಾಲೇಜು ಬಳಿ ನಡೆದಿದೆ. ಗಾಯಗೊಂಡವರನ್ನು ಗೋಳಿಪಡ್ಪು ನಿವಾಸಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರು ಎಸ್.ವಿ.ಎಸ್ ಕಾಲೇಜಿನ ಸಮೀಪದ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಮರದ ಗೆಲ್ಲು ವಿದ್ಯುತ್ ಕಂಬಕ್ಕೆ ಬಿದ್ದು ಬಳಿಕ ಗೆಲ್ಲು ಹಾಗೂ ವಿದ್ಯುತ್ ಕಂಬ ಎರಡೂ ಒಟ್ಟಿಗೆ ಸ್ಕೂಟರ್ ಮೇಲೆ ಉರುಳಿಬಿದ್ದಿದೆ. ಪರಿಣಾಮ

ಬಂಟ್ವಾಳ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರದ ಗೆಲ್ಲು ಹಾಗೂ ವಿದ್ಯುತ್ ಕಂಬ ➤ ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶಿಶಿಲ: ವ್ಯಕ್ತಿಗಳಿಬ್ಬರ ನಡುವೆ ಮಾರಾಮಾರಿ ➤ ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಶಿಶಿಲ, ಜೂ. 30. ಶಿಶಿಲದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಾಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅವರಿಬ್ಬರ ನಡುವೆ ಮತ್ತೆ ಗಲಾಟೆ ನಡೆದು ಮಚ್ಚು ಬೀಸಿರುವ ಘಟನೆ ಬುಧವಾರದಂದು ಸಂಜೆ ನಡೆದಿದೆ. ಗಾಯಾಗೊಂಡವರನ್ನು ಪುರುಷೋತ್ತಮ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಿರಣ ಎಂಬಾತ ಕಾದು ಕುಳಿತು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದಾಗಿ ಪುರುಷೋತ್ತಮರ ಕುತ್ತಿಗೆ ಹಾಗೂ ಕಿವಿಯ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಶಿಲ: ವ್ಯಕ್ತಿಗಳಿಬ್ಬರ ನಡುವೆ ಮಾರಾಮಾರಿ ➤ ಓರ್ವನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತಂಡದಿಂದ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ➤ ವ್ಯಾನ್ ನಿಂದ ಜಿಗಿದು ಬಾಲಕಿ ಪರಾರಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 30. ಆರನೇ ತರಗತಿಯ ಬಾಲಕಿಯೋರ್ವಳನ್ನು ತಂಡವೊಂದು ಅಪಹರಣಕ್ಕೆ ಯತ್ನಿಸಿದ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಯು ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ, ಓಮ್ನಿ ಕಾರಿನಲ್ಲಿ ಕಾದು ನಿಂತಿದ್ದ ಐದು ಮಂದಿಯ ತಂಡವೊಂದು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಅಂಗಡಿ ಪದವು ರಸ್ತೆಯಲ್ಲಿ ಪರಾರಿಯಾಗಿದ್ದಾರೆ. ಆದರೆ ಅದೃಷ್ಟವಶಾತ್ ಎದುರುಗಡೆಯಿಂದ ಟ್ರಕ್ ಬರುತ್ತಿದ್ದು, ಓಮ್ನಿಯ ವೇಗ ತಗ್ಗಿದಾಗ ಬಾಲಕಿ ಬಾಗಿಲು ತೆರೆದು ವ್ಯಾನ್‌ನಿಂದ ಜಿಗಿದಿದ್ದಾಳೆ. ಬಳಿಕ ಹೊಸಂಗಡಿಯಲ್ಲಿರುವ ತನ್ನ ಸಂಬಂಧಿಕರ

ತಂಡದಿಂದ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ➤ ವ್ಯಾನ್ ನಿಂದ ಜಿಗಿದು ಬಾಲಕಿ ಪರಾರಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಮಳೆ ಅವಾಂತರ ➤ ನೀರಿನಲ್ಲಿ ಕೊಚ್ಚಿಹೋಗಿ ವ್ಯಕ್ತಿ ಮೃತ್ಯು…!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 30. ಮುಂಜಾನೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವ್ಯಕ್ತಿಯೋರ್ವ ತೋಡಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಘಟನೆ ಕೊಲ್ನಾಡು ಕೆಎಸ್ ರಾವ್ ನಗರದಲ್ಲಿ ನಡೆದಿದೆ.   ಮೃತಪಟ್ಟವರನ್ನು ಸುನಿಲ್ ಎಂದು ಗುರುತಿಸಲಾಗಿದೆ. ಘಟನೆಯು ಬುಧವಾರ ರಾತ್ರಿ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಮಂಗಳೂರು: ಮಳೆ ಅವಾಂತರ ➤ ನೀರಿನಲ್ಲಿ ಕೊಚ್ಚಿಹೋಗಿ ವ್ಯಕ್ತಿ ಮೃತ್ಯು…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ನಿಯಂತ್ರಣ ತಪ್ಪಿ ತೋಟಕ್ಕೆ ಮಗುಚಿಬಿದ್ದ ಕಾರು ➤ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 30. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತೋಟಕ್ಕೆ ಮಗುಚಿಬಿದ್ದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಅಲೆಟ್ಟಿ ಗ್ರಾಮದ ನಾರ್ಕೋಡಿನಲ್ಲಿ ಬುಧವಾರದಂದು ರಾತ್ರಿ ನಡೆದಿದೆ. ಹೈದರಾಬಾದ್ ಮೂಲದ ಪ್ರವಾಸಿಗರು ಕನ್ಯಾಕುಮಾರಿ ಯಾತ್ರೆ ಮುಗಿಸಿ ಸುಳ್ಯ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಕ್ಕದ ತೋಟಕ್ಕೆ ಉರುಳಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದು, ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸುಳ್ಯ: ನಿಯಂತ್ರಣ ತಪ್ಪಿ ತೋಟಕ್ಕೆ ಮಗುಚಿಬಿದ್ದ ಕಾರು ➤ ನಾಲ್ವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಟೆಂಪೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ..! ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 29. ಚಲಿಸುತ್ತಿದ್ದ ಟೆಂಪೋವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಮೃತಚಾಲಕನನ್ನು ಕೆಎಸ್.ರಾವ್ ನಗರ ವಿಜಯಪುರ ಕಾಲೊನಿ ನಿವಾಸಿ ಯಶವಂತರಾಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಭಗವಂತರಾಯ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸಕ್ಕೆಂದು ಟೆಂಪೋದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.

ಮಂಗಳೂರು: ಟೆಂಪೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ..! ➤ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top