ಕ್ರೈಮ್ ನ್ಯೂಸ್

ಫಾಝಿಲ್ ಕೊಲೆ ಪ್ರಕರಣ ➤ 6 ಮಂದಿ ಸೆರೆ- ಕಮಿಷನರ್ ಶಶಿಕುಮಾರ್

(ನ್ಯೂಸ್ ಕಡಬ) newskadaba.com ಸುರತ್ಕಲ್, ಆ. 02. ಕಳೆದ ವಾರ ನಡೆದ ಫಾಝಿಲ್ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಕಮಿಷನರ್ ಶಶಿಕುಮಾರ್, ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆರೋಪಿಗಳು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಬಳಸಿದ್ದ ಕಾರಿನ ನೋಂದಣಿ ಸಂಖ್ಯೆ ಪತ್ತೆಹಚ್ಚಿ, ಅದರ ಮಾಲಕ ಅಜಿತ್ ಕ್ರಾಸ್ತಾ ಎಂಬವರನ್ನು ವಶಕ್ಕೆ ಪಡೆದು […]

ಫಾಝಿಲ್ ಕೊಲೆ ಪ್ರಕರಣ ➤ 6 ಮಂದಿ ಸೆರೆ- ಕಮಿಷನರ್ ಶಶಿಕುಮಾರ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಸೂದ್ ಹಾಗೂ ಫಾಝಿಲ್ ಮನೆಗೆ ಹೆಚ್ಡಿಕೆ ಭೇಟಿ- ಕುಟುಂಬಸ್ಥರಿಗೆ ಸಾಂತ್ವನ ➤ 5 ಲಕ್ಷ ರೂ. ಪರಿಹಾರ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 01. ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಮಸೂದ್ ಹಾಗೂ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಂತೆಯೇ ವೈಯಕ್ತಿಕವಾಗಿ 5 ಲಕ್ಷ ಪರಿಹಾರ ಧನ ವಿತರಣೆ ಮಾಡಿದರು. ಈ ಸಂದರ್ಭ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.  

ಮಸೂದ್ ಹಾಗೂ ಫಾಝಿಲ್ ಮನೆಗೆ ಹೆಚ್ಡಿಕೆ ಭೇಟಿ- ಕುಟುಂಬಸ್ಥರಿಗೆ ಸಾಂತ್ವನ ➤ 5 ಲಕ್ಷ ರೂ. ಪರಿಹಾರ ವಿತರಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಎರಡು ಗಂಟೆಯ ಭಾರೀ ಮಳೆಗೆ ಮುಳುಗಿದ ಕುಕ್ಕೇ ಸುಬ್ರಹ್ಮಣ್ಯ..!! ➤ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡದಂತೆ ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 01. ಭಾರೀ ಮಳೆಗೆ ರಾಜ್ಯದ ಪ್ರತಿಷ್ಠಿತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನೀರು ನುಗ್ಗಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸೇರಿ ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ನಾಳೆ ನಾಗರ ಪಂಚಮಿ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಉಳಿದಂತೆ ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಐನಕಿದು ಗ್ರಾಮಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು,

ಎರಡು ಗಂಟೆಯ ಭಾರೀ ಮಳೆಗೆ ಮುಳುಗಿದ ಕುಕ್ಕೇ ಸುಬ್ರಹ್ಮಣ್ಯ..!! ➤ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡದಂತೆ ಡಿಸಿ ಸೂಚನೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೀಚ್ ಗೆ ತೆರಳಿದ್ದ ವಿದ್ಯಾರ್ಥಿನಿಯ ಅತ್ಯಾಚಾರ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 01. ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನ ಎನ್ ಐಟಿಕೆ ಬೀಚ್ ಬಳಿ ನಡೆದಿದೆ. ಬಂಧಿತನನ್ನು ಮುನಾಝ್ ಅಹಮ್ಮದ್(30) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯು ಜುಲೈ 27 ರಂದು ಎನ್ ಐಟಿಕೆ ಬೀಚ್ ಗೆ ತನ್ನ ಸಹಪಾಠಿಯೊಂದಿಗೆ ಬಂದಿದ್ದು, ಇದನ್ನು ಕಂಡ ಮುನಾಝ್ ಅಹಮದ್ ವಿದ್ಯಾರ್ಥಿನಿಯ ಸಹಪಾಠಿಯನ್ನು ಹೆದರಿಸಿ ಓಡಿಸಿದ್ದಾನೆ. ಆ ಬಳಿಕ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಅತ್ಯಾಚಾರದ ವೀಡಿಯೋ ವನ್ನು ಮೊಬೈಲ್

ಬೀಚ್ ಗೆ ತೆರಳಿದ್ದ ವಿದ್ಯಾರ್ಥಿನಿಯ ಅತ್ಯಾಚಾರ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮನೆಯಲ್ಲೇ ಗಾಂಜಾ ಗಿಡ ಬೆಳೆದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಅಂದರ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 01. ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಝ್ (22) ಎಂದು ಗುರುತಿಸಲಾಗಿದೆ. ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈತ ಸ್ವಂತ ಬಳಕೆಗೆ ಅಲ್ಲದೇ ಮಾರಾಟಕ್ಕಾಗಿಯೂ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಈತ ಅಲ್ಲಿಂದಲೇ ಗಾಂಜಾ ಗಿಡದ

ಮನೆಯಲ್ಲೇ ಗಾಂಜಾ ಗಿಡ ಬೆಳೆದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕತ್ತುಹಿಸುಕಿ ಕೊಲೆಗೈದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ..!!!

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 01. ಕಾರ್ಮಿಕನೋರ್ವ ನ ಮೃತದೇಹ ಕತ್ತು ಹಿಸುಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಕೆಲೋಟ್ ನಲ್ಲಿ ನಡೆದಿದೆ. ಮೃತರನ್ನು ಹೆಂಚಿನ ಕಾರ್ಮಿಕ ನೀಲಕಂಠನ್ (36) ಎಂದು ಗುರುತಿಸಲಾಗಿದೆ. ಅವರ ಮೃತದೇಹವು ಇಂದು ಬೆಳಗ್ಗೆ ಮನೆಯೊಳಗೆ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದು, ಬಳಿಕ ನೀಲಕಂಠನ್ ಜೊತೆಗಿದ್ದ ಗಣೇಶ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಕತ್ತುಹಿಸುಕಿ ಕೊಲೆಗೈದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ..!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಜ್ಯೂಸ್ ಅಂಗಡಿಯಲ್ಲಿ ಅಗ್ನಿ ಅವಘಡ ➤ ಪೊಲೀಸ್, ಗೃಹರಕ್ಷಕ ಸಿಬ್ಬಂದಿಯಿಂದ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 01. ಇಲ್ಲಿನ ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಜ್ಯೂಸ್ ಸೆಂಟರ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಪುತ್ತೂರು ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಜ್ಯೂಸ್ ಸೆಂಟರ್ ನೊಳಗೆ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಹೊಗೆ ಆವರಿಸಿತ್ತು. ಈ ವೇಳೆ ರಾತ್ರಿ ಬಸ್ ನಿಲ್ದಾಣದ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣಾ ಸಿಬ್ಬಂದಿ ಭೀಮ್ ಸೇನ್ ಮತ್ತು ಗೃಹರಕ್ಷಕದಳದ ಸಿಬ್ಬಂದಿ

ಪುತ್ತೂರು: ಜ್ಯೂಸ್ ಅಂಗಡಿಯಲ್ಲಿ ಅಗ್ನಿ ಅವಘಡ ➤ ಪೊಲೀಸ್, ಗೃಹರಕ್ಷಕ ಸಿಬ್ಬಂದಿಯಿಂದ ತಪ್ಪಿದ ಅನಾಹುತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಆಕ್ಷೇಪಾರ್ಹ ಪೋಸ್ಟ್ ರವಾನೆ ➤ 5 ಮಂದಿಯ ವಿರುದ್ಧ ಪ್ರಕರಣ ದಾಖಲು – ಸಾಮಾಜಿಕ ಜಾಲತಾಣದ ಮೇಲೆ ಪೊಲೀಸ್ ನಿಗಾ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮತ್ತು ಕಾಮೆಂಟ್‌ಗಳನ್ನು ಮಾಡಿರುವ ವ್ಯಕ್ತಿಗಳ ವಿರುದ್ಧ ಮಂಗಳೂರು ಸೆನ್ ಪೊಲೀಸರು 5 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯ ಗುಪ್ತಚರ ದಳ ಮಾಹಿತಿ ನೀಡಿದೆ ಎಂಬ ಸುಳ್ಳು ಸಂದೇಶ ರವಾನೆ, ಪ್ರವೀಣ್‌ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಕರೆ ನೀಡಿರುವ ಪೋಸ್ಟ್, ಸುರತ್ಕಲ್‌ನಲ್ಲಿ ನಡೆದಿರುವ ಫಾಝಿಲ್ ಕೊಲೆಗೆ

ಕರಾವಳಿಯಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಆಕ್ಷೇಪಾರ್ಹ ಪೋಸ್ಟ್ ರವಾನೆ ➤ 5 ಮಂದಿಯ ವಿರುದ್ಧ ಪ್ರಕರಣ ದಾಖಲು – ಸಾಮಾಜಿಕ ಜಾಲತಾಣದ ಮೇಲೆ ಪೊಲೀಸ್ ನಿಗಾ Read More »

ಕರಾವಳಿ, ಕ್ರೈಮ್ ನ್ಯೂಸ್

ಫಾಝಿಲ್ ಹತ್ಯೆಯಲ್ಲಿ ಬಳಸಲಾದ ಕಾರು ಕಾರ್ಕಳದಲ್ಲಿ ಪತ್ತೆ ➤ ಕಾರು ಮಾಲಕ ಸೇರಿದಂತೆ ಹಲವರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ನಗರದ ಹೊರವಲಯದ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯಲ್ಲಿ ಬಳಸಲಾದ ಕಾರನ್ನು ಪತ್ತೆ ಹಚ್ಚಿರುವ ಮಂಗಳೂರು ಪೊಲೀಸರು ಕಾರು ಮಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕಾರು ಮಾಲಕ ಅಜಿತ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರ ಮಾಹಿತಿಯನ್ನು ಕಲೆ‌ಹಾಕಿದ್ದಾರೆ. ಘಟನೆಗೆ ಸಂಬಂಧಿಸಿ ನಾಲ್ಕು ಮಂದಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಹತ್ಯೆಗೆ ಬಳಸಿದ ಕಾರು ಭಾನುವಾರದಂದು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ

ಫಾಝಿಲ್ ಹತ್ಯೆಯಲ್ಲಿ ಬಳಸಲಾದ ಕಾರು ಕಾರ್ಕಳದಲ್ಲಿ ಪತ್ತೆ ➤ ಕಾರು ಮಾಲಕ ಸೇರಿದಂತೆ ಹಲವರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಫಾಝಿಲ್ ಕೊಲೆ ಪ್ರಕರಣ ➤ ನಾಲ್ವರು ಭಜರಂಗದಳ ಕಾರ್ಯಕರ್ತರು ವಶಕ್ಕೆ…??

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 30. ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 4 ಮಂದಿ ಭಜರಂಗದಳ ಕಾರ್ಯಕರ್ತರನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.   ವಿಚಾರಣೆ ಹಿನ್ನಲೆ ನಾಲ್ವರನ್ನು ನಿನ್ನೆ ರಾತ್ರಿ ಬಂಧಿಸಲಾಗಿದ್ದು, ಈ ಕುರಿತು ಮನೆಯವರು ಮಾಹಿತಿ ನೀಡಿದ್ದು, ತಡ ರಾತ್ರಿ ಪೋಲೀಸರು ವಿಚಾರಣೆಗೆ ಎಂದು ಕರೆದುಕೊಂಡು ಹೋಗಿದ್ದಾರೆ ನಮ್ಮ ಮಕ್ಕಳು ಭಜರಂಗದಳದಲ್ಲಿ ಸಕ್ರೀಯರಾಗಿದ್ದಾರೆ, ಆದರೆ ಈ ಕೊಲೆ ನಮ್ಮ ಮಕ್ಕಳು ಮಾಡಿಲ್ಲ ಎಂದು ತಿಳಿಸಿದ್ದಾರೆ. ಈ ಹತ್ಯೆಯ ಹಿಂದೆ

ಫಾಝಿಲ್ ಕೊಲೆ ಪ್ರಕರಣ ➤ ನಾಲ್ವರು ಭಜರಂಗದಳ ಕಾರ್ಯಕರ್ತರು ವಶಕ್ಕೆ…?? Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top