ಕ್ರೈಮ್ ನ್ಯೂಸ್

Theft, crime, Robbery

ವಿಟ್ಲ: ಹಾಡಹಗಲೇ ಮಹಿಳೆಯ ಸರ ಕಿತ್ತು ಪರಾರಿಯಾದ ಕಳ್ಳ…!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 13. ಮಹಿಳೆಯ ಸರ ಕಿತ್ತು ಪರಾರಿಯಾದ ಘಟನೆ ಇಡ್ಕಿದು ಗ್ರಾಮದ ಮಿತ್ತೂರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಮಹಿಳೆಯೊಬ್ಬರು ಮಿತ್ತೂರಿನಲ್ಲಿ ಬಸ್ಸಿನಿಂದು ಇಳಿದು ಕೋಲ್ಪೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಿನಿಂದ ಆಕ್ಟೀವಾದಲ್ಲಿ ಬಂದ ಕಂದು ಬಣ್ಣದ ಟೀ ಶರ್ಟ್‌ ಧರಿಸಿದ ಯುವಕನೋರ್ವ ಸರ ಎಳೆದುಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪರಾರಿಯಾಗಿದ್ದಾನೆ ಎಂದು ಮಹಿಳೆ ತಿಳಿಸಿರುವುದಾಗಿ ವರದಿಯಾಗಿದೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಹಾಡಹಗಲೇ ಮಹಿಳೆಯ ಸರ ಕಿತ್ತು ಪರಾರಿಯಾದ ಕಳ್ಳ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಲಾಡ್ಜ್ ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. ಪಂಪ್‌ವೆಲ್‌ನ ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಮಂಗಳವಾರದಂದು ವರದಿಯಾಗಿದೆ. ಮೃತರನ್ನು ಕಾಸರಗೋಡು ಮೂಲದ ಅಬ್ದುಲ್ ಕರೀಂ (56) ಎಂದು ಗುರುತಿಸಲಾಗಿದೆ. ಮೃತದೇಹದ ಪಕ್ಕದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ಈ ಹಿಂದೆ ಮಹಿಳೆಯೊಬ್ಬರು ಮೃತ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳೂರು: ಲಾಡ್ಜ್ ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸರ ದೋಚಿ ಪರಾರಿಯಾದ ಖರ್ತನಾಕ್ ಕಳ್ಳ!

(ನ್ಯೂಸ್‌ ಕಡಬ) newskadaba.com ಗಾಜಿಯಾಬಾದ್, ಡಿ. 13. ಹಾಡುಹಗಲೇ ಗನ್ ಪಾಯಿಂಟ್ ನಲ್ಲಿ ಮಹಿಳೆಯೊಬ್ಬರ ಸರ ದೋಚಿ ದುಷ್ಕರ್ಮಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ಗೋಕುಲ್ ದಾಮ್ ನಲ್ಲಿ ನಡೆದಿದೆ. ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೋರ್ವ ಗನ್ ಪಾಯಿಂಟ್ ನಲ್ಲಿ ಮಹಿಳೆಯನ್ನು ಬೆದರಿಸಿ ಸರವನ್ನು ಕಿತ್ತುಕೊಂಡಿದ್ದು, ದರೋಡೆಯ ದೃಶ್ಯವು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸರ ದೋಚಿ ಪರಾರಿಯಾದ ಖರ್ತನಾಕ್ ಕಳ್ಳ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Theft, crime, Robbery

ಮನೆ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 13. ಮನೆಯ ಹಿಂಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಉಡುಪಿಯ ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಬಳಿ ನಡೆದಿದೆ.   ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ರೂಮ್‌ ನಲ್ಲಿದ್ದ ಅಲ್ಮೇರಾದ ಬಾಗಿಲನ್ನು ಮುರಿದು ತೆಗೆದು, ಗೋದ್ರೇಜ್‌ ಲಾಕರ್‌ ನಲ್ಲಿದ್ದ ಡೈಮಂಡ್‌ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ

ಮನೆ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ರೌಡಿಗಳ ಪುಂಡಾಟ   

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 13.  ಬೆಂಗಳೂರಿನಲ್ಲಿ ರೌಡಿಗಳ ಸಾಮ್ರಾಜ್ಯ ಶುರುವಾಗಿದ್ದು, ರೌಡಿಗಳು ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ಸುತ್ತುತ್ತಿದ್ದಾರೆಂದು ವರದಿ ತಿಳಿಸಿದೆ. ಮಚ್ಚು ಹಿಡಿದುಕೊಂಡು ಕಿರಾತಕರಿಬ್ಬರು ಸುತ್ತುತ್ತಿದ್ದು, ಕೂಲಾಗಿದ್ದ ಏರಿಯಾದಲ್ಲಿ ಲಾಂಗ್ ಹಿಡಿದು ಜನರನ್ನು ಭಯಪಡಿಸುವ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. .  

ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ರೌಡಿಗಳ ಪುಂಡಾಟ    Read More »

ಕರ್ನಾಟಕ, ಕ್ರೈಮ್ ನ್ಯೂಸ್

ವೈದ್ಯರ ಅನುಪಸ್ಥಿತಿಯಲ್ಲಿ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ಸಿಬ್ಬಂದಿಗಳು ➤ ತಾಯಿ- ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಪಂಜಾಬ್, ಡಿ. 13.  ವೈದ್ಯರ ಅನುಪಸ್ಥಿತಿಯಲ್ಲಿ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ಪರಿಣಾಮ ಮಹಿಳೆ ಹಾಗೂ ಮಗು ಮೃತಪಟ್ಟ ಘಟನೆ ಇಲ್ಲಿನ ಜಾಚಾ ಬಚಾ ಆಸ್ಪತ್ರೆಯಲ್ಲಿ ನಡೆದಿದೆ.   ವೈದ್ಯರು ಇಲ್ಲದೇ ಆಸ್ಪತ್ರೆಯ ಸಿಬ್ಬಂದಿಗಳು ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ್ದು, ಇದರಿಂದಾಗಿ ತಾಯಿ-ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವವರೆಗೆ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ

ವೈದ್ಯರ ಅನುಪಸ್ಥಿತಿಯಲ್ಲಿ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ಸಿಬ್ಬಂದಿಗಳು ➤ ತಾಯಿ- ಮಗು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರಾಗೃಹದಲ್ಲಿ ಕೈದಿಯೋರ್ವ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಡಿ. 13. ಕೈದಿಯೋರ್ವ ಕಾರಾಗೃಹದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ.   ಮೃತಪಟ್ಟವರನ್ನು ಸೋಮಿನಕೊಪ್ಪ ನಿವಾಸಿ ಸೈಯದ್ ಅಬು ಸಲೇಹ್ (35) ಎಂದು ಗುರುತಿಸಲಾಗಿದೆ. ಕೇಂದ್ರ ಕಾರಾಗೃಹದಲ್ಲಿದ್ದ ಈತನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಆತ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.     .  

ಕಾರಾಗೃಹದಲ್ಲಿ ಕೈದಿಯೋರ್ವ ಹೃದಯಾಘಾತದಿಂದ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು      

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. ಫಿಶ್ ಮಿಲ್ ನ ತಲಾ 50 ಕೆ.ಜಿ ತೂಕದ 400 ಚೀಲಗಳು ಕಳವಾದ ಘಟನೆ ಬೈಕಂಪಾಡಿಯ ಗೋದಾಮಿನಲ್ಲಿ ಸಂಭವಿಸಿದೆ. ಗೋದಾಮಿನ ಮೇಲ್ವಿಚಾರಕ ಇರ್ಫಾನ್ ಈ ಫಿಶ್ ಮಿಲ್  ಚೀಲಗಳನ್ನು ಕದ್ದೊಯ್ದಿರುವುದಾಗಿ ಅದರ ವ್ಯವಸ್ಥಾಪಕ ಪಣಂಬೂರು ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ಉಳ್ಳಾಲದ ಕೋಟೆಪುರದ ಮಹಮ್ಮದ್ ಸಮೀರ್ ಎಂಬವರ ಮಾಲಕತ್ವದ “ಯುನೈಟೆಡ್ ಮೆರೈನ್ ಪ್ರಾಡಕ್ಟ್ಸ್” ಕಾರ್ಖಾನೆಯಲ್ಲಿ ಫಿಶ್ ಮಿಲ್ ಅನ್ನು ತಯಾರಿಸಿ 50 ಕೆ.ಜಿ. ತೂಕದ ಚೀಲಗಳಲ್ಲಿ ತುಂಬಿಸಿಡುತ್ತಿದ್ದು, ಗೋದಾಮಿಗೆ

20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು       Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪೊಲೀಸ್ ಠಾಣೆಗೆ ಬೆಂಕಿ ➤ ಕಾನ್ಸ್ಟೇಬಲ್ ಗೆ ಗಾಯ

(ನ್ಯೂಸ್ ಕಡಬ) newskadaba.com ಮುಂಬೈ ,ಡಿ,13: ಪೊಲೀಸ್ ಠಾಣೆಯ ರೆಕಾರ್ಡ್ ರೂಮ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸಿಬ್ಬಂದಿಯೊಬ್ಬರು ಗಾಯಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಗಾಯಾಳುವನ್ನು ಕಾನ್ಸ್ ಸ್ಟೆಬಲ್ ಅರವಿಂದ ಖೋಟ್ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಪ್ರಮುಖ ದಾಖಲೆಗಳು ಹಾನಿಗೀಡಾಗಿವೆ. ಖೋಟ್ ಅವರ ದೇಹ ಶೇ.95ರಷ್ಟು ಸುಟ್ಟುಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಗೆ ಬೆಂಕಿ ➤ ಕಾನ್ಸ್ಟೇಬಲ್ ಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದ್ಯುತ್ ತಂತಿ ತುಳಿದು ರೈತ ಮೃತ್ಯು

(ನ್ಯೂಸ್ ಕಡಬ) newskadaba.com ರಿಪ್ಪನ್ ಪೇಟೆ , ಡಿ.13. ರೈತರೋರ್ವರು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆ ಹೋಬಳಿಯ ನಂಜವಳ್ಳಿ ಗ್ರಾಮದಲ್ಲಿ ನಡೆದಿದೆ.   ಮೃತರನ್ನು ಗ್ರಾಮದ ವೆಡ್ಡಿನಬೈಲು ಶೇಷಗಿರಿ (45) ಎಂದು ಗುರುತಿಸಲಾಗಿದೆ. ಶೇಷಗಿರಿ ಅವರ ಮನೆಯ ಬೇಲಿಗೆ ವಿದ್ಯುತ್ ಸಂಪರ್ಕಿಸಲಾಗಿತ್ತು. ಅವರ ಪತ್ನಿ ಬೆಳಿಗ್ಗೆ ಬೇಲಿಯಲ್ಲಿದ್ದ ಹೂ ಕೀಳಲೆಂದು ಹೋದಾಗ ವಿದ್ಯುತ್ ತಂತಿ ತಗುಲಿದ್ದು, ಈ ವೇಳೆ ಅವರು ಕೂಗಿಕೊಂಡಾಗ ಬಂದ ಶೇಷಗಿರಿ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿದ್ಯುತ್ ತಂತಿ ತುಳಿದು ರೈತ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top