ಕ್ರೈಮ್ ನ್ಯೂಸ್

ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ…!                     

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ. 02. ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್ ನಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಮೃತ ಯುವಕನನ್ನು ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ (18) ಎಂದು ಗುರುತಿಸಲಾಗಿದೆ. ಲೈಟ್ ಹೌಸ್ ಬೀಚ್ ನಿಂದ 1.5 ಕಿ.ಮೀ ದೂರದಲ್ಲಿರುವ ರೇಡ್ ರಾಕ್ ಬೀಚ್ ನಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸತ್ಯಂ ಮತ್ತು ಆತನ ಸ್ನೇಹಿತ ಸಮುದ್ರದಲ್ಲಿ ಈಜಲು […]

ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ…!                      Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಲಿಸುತ್ತಿದ್ದ ಕಾರಿಗೆ ಬೆಂಕಿ ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 02.  ಚಲಿಸುತ್ತಿದ್ದ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಾರು ಸಂಪೂರ್ಣವಾಗಿ ಭಸ್ಮವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನ ಹಳ್ಳಿ- ಗೋಪಾಲಪುರ ಮಾರ್ಗದ ರಸ್ತೆಯೊಂದರಲ್ಲಿ ವರದಿಯಾಗಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಕೇರಳ ಮೂಲದ ವ್ಯಕ್ತಿಗಳು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಕಿದ್ದ ಹುರುಳಿ ಒಣ ಸೊಪ್ಪು ಕಾರಿನ ಇಂಜಿನ್ ಗೆ ತಾಗಿ ಬಿಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ

ಚಲಿಸುತ್ತಿದ್ದ ಕಾರಿಗೆ ಬೆಂಕಿ ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ  ➤ ಆತ್ಮಹತ್ಯೆಯಲ್ಲ, ಕೊಲೆಯೆಂದು ಪೋಷಕರಿಂದ ಆರೋಪ

(ನ್ಯೂಸ್ ಕಡಬ) newskadaba.com ಮಂಡ್ಯ, ಜ. 02. ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ಮೇಗಳಾಪುರ ಗ್ರಾಮದಲ್ಲಿ ಸಂಭವಿಸಿದೆ. ಮೃತ ಗೃಹಿಣಿಯನ್ನು ರಮ್ಯ(24) ಎಂದು ಗುರುತಿಸಲಾಗಿದೆ. ರಮ್ಯಾ ರವರು ಐದು ವರ್ಷಗಳ ಹಿಂದೆ ಮೇಗಳಾಪುರದ ಕುಮಾರ್ ಎಂಬವರೊಂದಿಗೆ ವಿವಾಹವಾಗಿದ್ದು, ಮದುವೆ ಸಂದರ್ಭ ಒಂದು ಲಕ್ಷ ರೂ. ನಗದು ಮತ್ತು 150 ಗ್ರಾಂ ಚಿನ್ನಾಭರಣ ವರದಕ್ಷಿಣೆ ಆಗಿ ಕುಮಾರ್ ಪಡೆದಿದ್ದು, ಹೆಚ್ಚಿನ ವರದಕ್ಷಿಣೆ ತರುವಂತೆ ರಮ್ಯಾಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೀಗ

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ  ➤ ಆತ್ಮಹತ್ಯೆಯಲ್ಲ, ಕೊಲೆಯೆಂದು ಪೋಷಕರಿಂದ ಆರೋಪ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕ ಮೃತ್ಯು..!           

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 02. ನಡೆದುಕೊಂಡು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಚೆರ್ಕಳದಲ್ಲಿ ನಡೆದಿದೆ. ಮೃತ ಬಾಲಕನನ್ನು ಆಶಿಕ್ ಮತ್ತು ಝುಬೈದಾ ದಂಪತಿ ಪುತ್ರ ಅಬ್ದುಲ್ ವಾಹಿದ್ (3) ಎಂದು ಗುರುತಿಸಲಾಗಿದೆ. ಚೆರ್ಕಳ ಬಸ್ ನಿಲ್ದಾಣದಲ್ಲಿ ಬಸ್ ಹಿಂದಕ್ಕೆ ಚಲಿಸುವಾಗ ಈ ಘಟನೆ ಸಂಭವಿಸಿದೆನ್ನಲಾಗಿದೆ. ಬಸ್ ಡಿಕ್ಕಿಯಾದ ವೇಳೆ ಮಗುವಿನ ಜೊತೆಗಿದ್ದ ತಾಯಿಯು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕ ಮೃತ್ಯು..!            Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪಕ್ಕದ ಕಟ್ಟಡಕ್ಕೆ ಜಿಗಿಯುವಾಗ ಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 02. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಗೆಳೆಯನ ಮನೆಯಿಂದ ಬೇರೊಂದು ಕಟ್ಟಡಕ್ಕೆ ಜಿಗಿಯುವ ವೇಳೆ ಕೆಳಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯದಲ್ಲಿ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಚಂದ್ರಕಾಂತ್ ಪಾತ್ರಾ (37) ಎಂದು ಗುರುತಿಸಲಾಗಿದೆ. ಇವರು ಬ್ಯಾಗ್ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತನ್ನ ಸ್ನೇಹಿತರೊಂದಿಗೆ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ  ಪಾತ್ರಾ, ತನ್ನ ಸ್ನೇಹಿತರೊಂದಿಗೆ ಟೆರೇಸ್ ಮೇಲೆ ಹೊಸ ವರ್ಷಾಚರಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ

ಪಕ್ಕದ ಕಟ್ಟಡಕ್ಕೆ ಜಿಗಿಯುವಾಗ ಬಿದ್ದು ವ್ಯಕ್ತಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೊಸ ವರ್ಷಾಚರಣೆ ಪಾರ್ಟಿ ವೇಳೆ ಗೆಳೆಯನಿಗೆ ಚೂರಿ ಇರಿತ  ➤ ಆರೋಪಿ ಅರೆಸ್ಟ್                                    

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 02. ಹೊಸ ವರ್ಷಾಚರಣೆಯ ಪಾರ್ಟಿ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಸ್ನೇಹಿತನೊಬ್ಬ ತನ್ನ ಗೆಳೆಯನಿಗೆ ಚಾಕುವಿನಿಂದ ಇರಿದಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಗಾಯಾಳುವನ್ನು ಪೀಣ್ಯ 4ನೇ ಬ್ಲಾಕ್ ನಿವಾಸಿ ಪ್ರಶಾಂತ್ ಎ (30) ಎಂದು ಗುರುತಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ. ಚೂರಿಯಿಂದ ಇರಿದ ಪ್ರಶಾಂತ್ (31) ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಮದ್ಯ ಸೇವಿಸಿದ್ದು, ನಂತರ ಇಬ್ಬರ ನಡುವೆ ಮಾತಿನ ಚಕಮಕಿ

ಹೊಸ ವರ್ಷಾಚರಣೆ ಪಾರ್ಟಿ ವೇಳೆ ಗೆಳೆಯನಿಗೆ ಚೂರಿ ಇರಿತ  ➤ ಆರೋಪಿ ಅರೆಸ್ಟ್                                     Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಅಡಿಕೆ ಕಳ್ಳತನ- ಆರೋಪಿ ಅರೆಸ್ಟ್ ➤ ಆರೋಪಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 01. ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವುಗೈದ ಪ್ರಕರಣಕ್ಕೆ ಸೊತ್ತು‌ ಸಹಿತ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತನನ್ನು ಬಂಟ್ವಾಳ ಬಾಳ್ತಿಲ ಗ್ರಾಮದ ಕಸೆಕೋಡಿಯ ಮಂಜುನಾಥ ನಾಗರಾಜ್ ಭೋವಿ ಎಂದು ಗುರುತಿಸಲಾಗಿದೆ. ಈತ ಕಳವುಗೈದಿದ್ದ 105 ಕೆ.ಜಿ. ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ನಗದನ್ನು ವಶಪಡಿಸಲಾಗಿದೆ. ಐವನ್ ತೋರಸ್ ಎಂಬವರು ತಮ್ಮ ಅಡಿಕೆ ತೋಟದ ಮಧ್ಯದಲ್ಲಿನ ಅಂಗಳದಲ್ಲಿ ಅಡಿಕೆಯನ್ನು ಒಣಗಲು ಹಾಕಿದ್ದರು. ಆದರೆ

ಬಂಟ್ವಾಳ: ಅಡಿಕೆ ಕಳ್ಳತನ- ಆರೋಪಿ ಅರೆಸ್ಟ್ ➤ ಆರೋಪಿಗೆ ನ್ಯಾಯಾಂಗ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಸರಗೋಡಿನ ಕಾರು ಹಾವೇರಿಯಲ್ಲಿ ಅಪಘಾತ ಪ್ರಕರಣ ➤ ಮೃತರ ಸಂಖ್ಯೆ ನಾಲ್ಕಕ್ಕೇರಿಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 01. ಹಾವೇರಿಯಲ್ಲಿ ನಡೆದ ಕಾರು ಹಾಗೂ ಬಸ್ ನಡುವಿನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಮೃತ ಮಗುವನ್ನು ಕಾಸರಗೋಡು ತಲಂಗರೆ ನುಸ್ರತ್ ನಗರದ ಸಿಯಾದ್ -ನಿಷಾನ್ ದಂಪತಿ ಪುತ್ರಿ ಇಸಾ ಮರಿಯಂ (2) ಎಂದು ಗುರುತಿಸಲಾಗಿದೆ. ಸಿಯಾದ್ ನ ತಂದೆ ಮುಹಮ್ಮದ್ (65) ಹಾಗೂ ತಾಯಿ ಆಯಿಶಾ (62) ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಮಗು ಮುಹಮ್ಮದ್ ಕಳೆದ ದಿನ ಮೃತಪಟ್ಟಿದ್ದನು. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಇಸಾ

ಕಾಸರಗೋಡಿನ ಕಾರು ಹಾವೇರಿಯಲ್ಲಿ ಅಪಘಾತ ಪ್ರಕರಣ ➤ ಮೃತರ ಸಂಖ್ಯೆ ನಾಲ್ಕಕ್ಕೇರಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 01. ತೆಂಗಿನಕಾಯಿ ಕೀಳುವ ವೇಳೆ ವ್ಯಕ್ತಿಯೋರ್ವ ಆಯತಪ್ಪಿ ಮರದಿಂದ ಬಿದ್ದು ಮೃತಪಟ್ಟ ಘಟನೆ ನಾವೂರ ಎಂಬಲ್ಲಿ ನಡೆದಿದೆ. ನಾವೂರ ಸೂರ ನಿವಾಸಿ ಸುರೇಶ್ (40) ಎಂದು ಗುರುತಿಸಲಾಗಿದೆ. ಇವರು, ಕಳೆದ ಹಲವಾರು ವರ್ಷಗಳಿಂದ ತೆಂಗಿನಕಾಯಿ ಹಾಗೂ ಅಡಿಕೆ ಕೀಳುವ ಕಾಯಕ ಮಾಡುತ್ತಿದ್ದು, ಎಂದಿನಂತೆ ತೆಂಗಿನಕಾಯಿ ಕೀಳುವ ಕೆಲಸಕ್ಕೆಂದು ಹೋಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಹೃದಯಾಘಾತ- ಯೋಧ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 01. ರಜೆಯಲ್ಲಿ ಊರಿಗೆ ಬಂದಿದ್ದ ಬಿಎಸ್‌ಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತರನ್ನು ಕುಲಶೇಖರ ಉಮಿಕಾನ ನಿವಾಸಿ, ಬಿಎಸ್‌ಎಫ್ ಯೋಧ ಹರೀಶ್ ಕುಮಾರ್ (43) ಎಂದು ಗುರುತಿಸಲಾಗಿದೆ. ಕಳೆದ 21 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ರಜೆಯ ಮೇಲೆ ಊರಿಗೆ ಬಂದಿದ್ದರು. ಶನಿವಾರದಂದು ಇವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಜ.1ರಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು: ಹೃದಯಾಘಾತ- ಯೋಧ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top