ಕ್ರೈಮ್ ನ್ಯೂಸ್

ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಅರೆಸ್ಟ್

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ. 23. ನೇಪಾಳ ಮೂಲಕ ಭಾರತ ಗಡಿ ದಾಟಿ, ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಇಕ್ರಾ ಜೀವನಿ (19) ಎಂಬುವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ನಿವಾಸಿ ಇಕ್ರಾ, ಡೇಟಿಂಗ್ ಆ್ಯಪ್‌ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್‌ರನ್ನು ಪರಿಚಯಿಸಿಕೊಂಡು ವಿವಾಹವಾಗಿದ್ದರು. ಬಳಿಕ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ದರು. ಈ ಮಧ್ಯೆ ತಾಯಿಯನ್ನ ಸಂಪರ್ಕ ಮಾಡಲು ಇಕ್ರಾ ಜೀವನಿ ಯತ್ನಿಸಿದ್ದು, ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆ, […]

ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶ್ರದ್ದಾ ವಾಕರ್ ಹತ್ಯೆ ಪ್ರಕರಣ ➤ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧ

(ನ್ಯೂಸ್ ಕಡಬ)newskadaba.com ನವದೆಹಲಿ, ಜ.23. ದೆಹಲಿಯಲ್ಲಿ ತನ್ನ ಲಿವ್ ಇನ್ ಸಂಗಾತಿ ಶ್ರದ್ದಾ ವಾಕರ್ ಳನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ವಿರುದ್ದ ದೆಹಲಿ ಪೊಲೀಸರು 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ. ಫೋರೆನ್ಸಿಕ್ ಸಾಕ್ಷ್ಯಗಳು, 100ಕ್ಕೂ ಅಧಿಕ ಸಾಕ್ಷಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚಾರ್ಜ್‌ಶೀಟ್‌ನಲ್ಲಿದೆ. ಅಫ್ತಾಬ್ ತಪ್ಪೊಪ್ಪಿಗೆ, ನಾರ್ಕೋ ಪರೀಕ್ಷೆಯ ಫಲಿತಾಂಶ, ಫೊರೆನ್ಸಿಕ್ ವರದಿಯನ್ನೂ ಉಲ್ಲೇಖಿಸಲಾಗಿದೆ. ಕಾನೂನು ತಜ್ಞರು ಇದನ್ನು ಪರಿಶೀಲಿಸುತ್ತಿದ್ದಾರೆ. ಅಫ್ತಾಬ್ ಮತ್ತು ಶ್ರದ್ದಾ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಪೊಲೀಸರಿಗೆ

ಶ್ರದ್ದಾ ವಾಕರ್ ಹತ್ಯೆ ಪ್ರಕರಣ ➤ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.23. ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಕುಂಡಂಗುಯಿಯಲ್ಲಿ ಸಂಭವಿಸಿದೆ ಎನ್ನಲಾಗಿದೆ. ಕುಂಡಂಗುಯಿ ಚಂದ್ರ ಎಂಬವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12)ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ. ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾಳ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ..

ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುರತ್ಕಲ್ : ರೈಲ್ವೇ ಹಳಿ  ಮೇಲೆ ಯುವಕನೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಅಪರಿಚಿತ ಯುವಕನೊಬ್ಬನ ಮೃತದೇಹವು ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿರುವ ಘಟನೆ ಕುಳಾಯಿಗುಡ್ಡೆ ರೈಲ್ವೆ ಸೇತುವೆ ಬಳಿ ನಡೆದಿದೆ ಎಂದು ವರದಿ ತಿಳಿಸಿದೆ. 30 ವರ್ಷದ ಯುವಕನ ಛಿದ್ರವಾದ ಮೃತದೇಹ ಪತ್ತೆಯಾಗಿದ್ದು, ಈತ ರೈಲಿಗೆ ಸಿಲುಕಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯು ಕಪ್ಪು ನೈಟ್ ಪ್ಯಾಂಟ್, ಹಳದಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ಇದ್ದರೆ ಸುರತ್ಕಲ್ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.  

ಸುರತ್ಕಲ್ : ರೈಲ್ವೇ ಹಳಿ  ಮೇಲೆ ಯುವಕನೋರ್ವನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ    ➤ ಆರೋಪಿ ಅರೆಸ್ಟ್                  

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸಾರ್ವಜನಿಕರು ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಕಂಕನಾಡಿ ಬಳಿ ವರದಿಯಾಗಿದೆ. ಉಳ್ಳಾಲದ ನಿವಾಸಿ ನವಾಜ್‌ (35)ಗೆ ಥಳಿಸಲಾಗಿದೆ ಎನ್ನಲಾಗಿದೆ. ಬಾಲಕಿ ಗಿಡವೊಂದರಿಂದ ಹಣ್ಣು ಕೀಳುತ್ತಿದ್ದಾಗ ಅಲ್ಲಿಯೇ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ನವಾಜ್‌ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ಬಾಲಕಿ ಬೊಬ್ಬೆ ಹಾಕಿದ್ದಳು. ಇದನ್ನು ಕೇಳಿ ಅಲ್ಲಿದ್ದವರು ಬಂದು ನವಾಜ್ ಗೆ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ    ➤ ಆರೋಪಿ ಅರೆಸ್ಟ್                   Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್ ಕಂಟೈನರ್ ಲಾರಿ ಪಲ್ಟಿ

(ನ್ಯೂಸ್ ಕಡಬ)newskadaba.com ಕುಂದಾಪುರ, ಜ.23. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಸಂಗಂ ಜಂಕ್ಷನ್ ನಲ್ಲಿ ಸಿಮೆಂಟ್ ತುಂಬಿದ ಕಂಟೈನರ್ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡು ಮೂರು ಗಂಟೆಗಿಂತಲೂ ಹೆಚ್ಚು ಸಂಚಾರ ವ್ಯತ್ಯಯಗೊಂಡ ಘಟನೆ ಕುಂದಾಪುರದಲ್ಲಿ ವರದಿಯಾಗಿದೆ. ಕೊಪ್ಪಳದಿಂದ ಸುಮಾರು 50 ಟನ್ ಗಿಂತಲೂ ಹೆಚ್ಚು ಸಿಮೆಂಟ್ ತುಂಬಿದ್ದ ಕಂಟೈನರ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಯಾರ್ಡ್ ಗೆ ಪ್ರಯಾಣಿಸುತ್ತಿತ್ತು. ಚಾಲಕ ರಾಹುಲ್ ಕುಡಿದು ಟೈಟಾಗಿ ವಾಹನ ಚಾಲನೆ ಮಾಡುತ್ತಿದ್ದ ಪರಿಣಾಮ ಸಂಗಂ ಜಂಕ್ಷನ್

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್ ಕಂಟೈನರ್ ಲಾರಿ ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ವಿವಾಹ ನಿಶ್ಚಯವಾಗಿದ್ದ ಯುವಕ‌ ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com  ಚಿಕ್ಕಮಗಳೂರು, ಜ.21. ಭೀಕರ ಅಪಘಾತದಲ್ಲಿ ವಿವಾಹ ನಿಶ್ಚಯಗೊಂಡ ಯುವಕ ಸೇರಿ ಇಬ್ಬರು ಮೃತಪಟ್ಟ ಘಟನೆ ಅಜ್ಜಂಪುರದ ಮಾಕನಹಳ್ಳಿಯಲ್ಲಿ ನಡೆದಿದೆ. ಚನ್ನರಾಯಪಟ್ಟಣ ಮೂಲದ ಕಿರಣ್(32) ಹಾಗೂ ಅಜ್ಜಂಪುರ ತಾಲೂಕಿನ ಶಿವನಿ ಮೂಲದ ನಾಗರಾಜ್ (40) ಮೃತ ದುರ್ದೈವಿಗಳು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಿರಣ್​ ಮೆಸ್ಕಾಂನಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದರು. ಕಿರಣ್​ಗೆ ಮದುವೆ ನಿಗದಿಯಾಗಿತ್ತು.ಇದೀಗ ಮದುವೆ ಮನೆಯಲ್ಲಿ ಶೋಕ ಮುಡುಗಟ್ಟಿದೆ.  

ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ವಿವಾಹ ನಿಶ್ಚಯವಾಗಿದ್ದ ಯುವಕ‌ ಸೇರಿ ಇಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಂದೆಯ ಸಾವಿನ ಸುದ್ದಿ ತಿಳಿದ ಬಳಿಕ ಬಾವಿಗೆ ಹಾರಿದ 11 ವರ್ಷದ ಬಾಲಕಿ

(ನ್ಯೂಸ್ ಕಡಬ)newskadaba.com  ಮಧ್ಯಪ್ರದೇಶ, ಜ.21. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ತಂದೆಯ ಸಾವಿನ ಸುದ್ದಿ ತಿಳಿದ 11 ವರ್ಷದ ಬಾಲಕಿ ಬಾವಿಗೆ ಹಾರಿ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಬರ್ಖೇಡಾ ಜಾಗೀರ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ದೇಹತ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಪಹಲ್ವಾನ್ ಚೌಹಾನ್ ಹೇಳಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅವರ

ತಂದೆಯ ಸಾವಿನ ಸುದ್ದಿ ತಿಳಿದ ಬಳಿಕ ಬಾವಿಗೆ ಹಾರಿದ 11 ವರ್ಷದ ಬಾಲಕಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಟೋ ಹತ್ತಿದ ಮಗಳನ್ನೇ ಪಟಾಯಿಸಿದ ➤ ಸೂಸೈಡ್​ ನಾಟಕ ಮಾಡಿದ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ಆಟೋ ಡ್ರೈವರ್ ಜೊತೆಗೆ ಪ್ರೀತಿಗೆ ಬಿದ್ದಿದ್ದ ಮಗಳಿಗೆ ಪೋಷಕರು ಬುದ್ಧಿಮಾತು ಹೇಳಲು ಮುಂದಾಗಿದ್ದರು. ಆದರೆ ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಹೆಚ್​​ಎಎಲ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಲಾವಣ್ಯ ಎಂದು ಗುರುತಿಸಲಾಗಿದ್ದು, ತನ್ನ ಪ್ರೀತಿಯನ್ನು ಸಾಬೀತು ಪಡಿಸಲು ಮುಂದಾಗಿ ವಿಷ ಸೇವನೆ ಮಾಡಿದ್ದ ಯುವತಿ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾಳೆ.  

ಆಟೋ ಹತ್ತಿದ ಮಗಳನ್ನೇ ಪಟಾಯಿಸಿದ ➤ ಸೂಸೈಡ್​ ನಾಟಕ ಮಾಡಿದ ಯುವತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ      

(ನ್ಯೂಸ್ ಕಡಬ)newskadaba.com  ವಿಜಯಪುರ, ಜ.21. ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಗಂಡ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ. ಇದೇ ಕಾರಣಕ್ಕೆ ಅವಳ ಪತಿ ದಾನಯ್ಯ ಗಣಚಾರಿ ಕೊಲೆ ಮಾಡಿದ್ದಾನೆ. ಈ ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು.

ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ       Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top