ಕ್ರೈಮ್ ನ್ಯೂಸ್

ಮಂಗಳೂರು: ಡ್ರಗ್ಸ್ ಪ್ರಕರಣ, ಮತ್ತೇ 9 ಮಂದಿ ಅರೆಸ್ಟ್   ➤ ಬಂಧಿತರ ಸಂಖ್ಯೆ 24ಕ್ಕೆ ಏರಿಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ನಶೆಯಲ್ಲಿದ್ದ ವೈದ್ಯರ ಬೆನ್ನು ಹತ್ತಿದ್ದ ಪೊಲೀಸರು ಮತ್ತೆ 9 ಮಂದಿಯನ್ನು‌ ಬಂಧನ ಮಾಡಿದ್ದಾರೆ. ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸರ ಅತಿಥಿಗಳಾಗಿದ್ದು, ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ವೈದ್ಯರ ಗಾಂಜಾ ಘಾಟಿನ ನಶೆ ಇನ್ನೂ ಇಳಿಯುವ ಲಕ್ಷಣ ಕಾಣುತ್ತಿಲ್ಲ‌. ಪೊಲೀಸರು ಕೆದಕಿದಷ್ಟು ಹೆಚ್ಚು ಮಂದಿ ಈ ಪ್ರಕರಣದಲ್ಲಿ ಬಲೆಗೆ ಬೀಳುತ್ತಲೇ ಇದ್ದಾರೆ. ವೈದ್ಯರ ಗಾಂಜಾ ಘಾಟಿನ ಹಿಂದೆ‌ ಬಿದ್ದ ಪೊಲೀಸರು ಇದೀಗ ಮತ್ತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. […]

ಮಂಗಳೂರು: ಡ್ರಗ್ಸ್ ಪ್ರಕರಣ, ಮತ್ತೇ 9 ಮಂದಿ ಅರೆಸ್ಟ್   ➤ ಬಂಧಿತರ ಸಂಖ್ಯೆ 24ಕ್ಕೆ ಏರಿಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಲಂಚ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ➤ ಕರ್ನಾಟಕ ನ್ಯಾಯಾಲಯ

(ನ್ಯೂಸ್ ಕಡಬ)newskadaba.com ತುಮಕೂರು, ಜ.23. ಮಹತ್ವದ ತೀರ್ಪಿನಲ್ಲಿ, ಇಲ್ಲಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಭ್ರಷ್ಟಾಚಾರ ಪ್ರಕರಣದಲ್ಲಿ ಉಪ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಿಗರಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ, ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಮತ್ತು ಲೋಕಾಯುಕ್ತ ತನಿಖಾಧಿಕಾರಿ, ದೂರುದಾರನ ಮೇಲೂ ಪ್ರಕರಣ ದಾಖಲಿಸುವಂತೆ ಮುಖ್ಯ ಆಡಳಿತಾಧಿಕಾರಿ (ಸಿಎಒ) ಅವರಿಗೆ ಆದೇಶಿಸಿದೆ. ಭ್ರಷ್ಟಾಚಾರ ತಡೆ ಕಾಯಿದೆಗೆ (ಪಿಸಿಎ) ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯದ

ಲಂಚ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ➤ ಕರ್ನಾಟಕ ನ್ಯಾಯಾಲಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಂಧ್ರದಿಂದ ಖೋಟಾ ನೋಟು ತಂದು ಚಲಾವಣೆಗೆ ಯತ್ನ   ➤ ಮಹಿಳೆ ಸೇರಿ ಇಬ್ಬರ ಬಂಧನ, 40 ಲಕ್ಷ ರೂ. ನಕಲಿ ನೋಟು ಜಪ್ತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಆಂಧ್ರಪ್ರದೇಶದಿಂದ ಖೋಟಾ ನೋಟು ತಂದು ಚಲಾವಣೆಗೆ ಪ್ರಯತ್ನಿಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿ 40 ಲಕ್ಷ ರೂ. ನಕಲಿ ನೋಟು ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಿ.ಚರಣ್ ಸಿಂಗ್ (47) ಮತ್ತು ರಜಪುತ್ರ ರಜನಿ (38) ಬಂಧಿತರು ಎಂದು ಗುರುತಿಸಲಾಗಿದೆ. 500 ರೂ. ಮುಖ ಬೆಲೆಯ 40 ಲಕ್ಷ ರೂ. ಮೌಲ್ಯದ ಖೋಟಾ ನೋಟು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರದಿಂದ ಖೋಟಾ ನೋಟು ತಂದು ಚಲಾವಣೆಗೆ ಯತ್ನ   ➤ ಮಹಿಳೆ ಸೇರಿ ಇಬ್ಬರ ಬಂಧನ, 40 ಲಕ್ಷ ರೂ. ನಕಲಿ ನೋಟು ಜಪ್ತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ದಾಖಲೆಯಿಲ್ಲದೆ ವಿದ್ಯಾರ್ಥಿಯಿಂದ ಹಣ ಸಾಗಟ !!!     ➤ ಬರೋಬ್ಬರಿ 1.14 ಕೋಟಿ ರೂ. ವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ದಾಖಲೆಯಿಲ್ಲದೆ ಅಕ್ರಮವಾಗಿ ಖಾಸಗಿ ಬಸ್ ನಲ್ಲಿ ಹಣ ಸಾಗಿಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ರಿತಿಕ್ ಎಂಬ ವಿದ್ಯಾರ್ಥಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಈತ ವಿ.ಆರ್.ಎಲ್ ಬಸ್ ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಎನ್ನಲಾಗಿದ್ದು, ಎರಡು ಬ್ಯಾಗುಗಳಲ್ಲಿ ಬರೋಬ್ಬರಿ 1.14 ಕೋಟಿ ರೂಪಾಯಿಗಳನ್ನು ಸಾಗಿಸುತ್ತಿದ್ದ. ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ವಿದ್ಯಾರ್ಥಿ ರಿತಿಕ್, ಹುಬ್ಬಳ್ಳಿಯ ಕೇಶ್ವಾಪುರದ ಮಯೂರಿ ಎಸ್ಟೇಟ್ ನಿವಾಸಿ ಎನ್ನಲಾಗಿದ್ದು, ವಿಚಾರಣೆ ವೇಳೆ

ಮಂಗಳೂರು: ದಾಖಲೆಯಿಲ್ಲದೆ ವಿದ್ಯಾರ್ಥಿಯಿಂದ ಹಣ ಸಾಗಟ !!!     ➤ ಬರೋಬ್ಬರಿ 1.14 ಕೋಟಿ ರೂ. ವಶ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುರತ್ಕಲ್: ವಿವಾಹಿತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ!!!  

(ನ್ಯೂಸ್ ಕಡಬ)newskadaba.com ಸುರತ್ಕಲ್, ಜ.23. ವಿವಾಹಿತ ಯುವತಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದಲ್ಲಿ ನಡೆದಿದೆ. ಒಟ್ಟೆಕಾಯರ್ ಮನೆ ನಿವಾಸಿ ಹರೀಶ್ ಎಂಬವರ ಪತ್ನಿ ದಿವ್ಯಾ(26) ಮೃತರು. ದಿವ್ಯಾ ಒಂದೂವರೆ ವರ್ಷದ ಹಿಂದೆ ಹರೀಶ್ ರನ್ನು ಪ್ರೀತಿಸಿ ವಿವಾಹವಾಗಿದ್ದರು. ದಿವ್ಯಾ ಮನೆಯಲ್ಲಿ ಒಬ್ಬರೇ ಇರುವಾಗ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದೂರು ನೀಡಲಾಗಿದೆ. ಈ ಕುರಿತು ಸುರತ್ಕಲ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  

ಸುರತ್ಕಲ್: ವಿವಾಹಿತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ!!!   Read More »

ಕರಾವಳಿ, ಕ್ರೈಮ್ ನ್ಯೂಸ್

ಆಸ್ತಿಗಾಗಿ ಆಂಧ್ರದಲ್ಲಿ ಹತ್ಯೆ ಮಾಡಿ ಕರ್ನಾಟಕದಲ್ಲಿ ಮೃತದೇಹ ಎಸೆದ ಸಂಬಂಧಿಕರು…!!!

(ನ್ಯೂಸ್ ಕಡಬ)newskadaba.com ವಿಜಯಪುರ, ಜ.23. ಹೊಸವರ್ಷದಂದು ಕೊಲೆ ಮಾಡಿ ಮೃತದೇಹವನ್ನು ಬೆಂಗಳೂರಿನ ದೇವನಹಳ್ಳಿಯಲ್ಲಿ ಎಸೆದು ಹೋಗಿದ್ದರು. ಎಷ್ಟರ ಮಟ್ಟಿಗೆ ಇವರು ಕ್ರೂರತನ ತೋರಿಸಿದ್ದರು ಎಂದರೆ ಮುಖದ ಗುರುತೇ ಸಿಗಬಾರದು ಎಂದು ಮುಖವನ್ನು ಕೊಚ್ಚಿ ಹಾಕಿ ವಿರೂಪಗೊಳಿಸಿದ್ದರು. ಮೃತ ವ್ಯಕ್ತಿಯ ಬಗ್ಗೆ ಯಾರಿಗೂ ಮಾಹಿತಿ ಸಿಗಬಾರದು ಎಂದು ಆತನನ್ನು ಬೆತ್ತಲೆ ಮಾಡಿ ಶವವನ್ನು ದೇವನ ಹಳ್ಳಿಯಲ್ಲಿ ಎಸೆದು ಹೋಗಿದ್ದರು. ಆದರೆ ಈ ಪ್ರಕರಣವನ್ನು ಪೊಲೀಸರು 20 ದಿನಗಳ ಒಳಗಾಗಿ ಭೇದಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರದ ಅನಂತಪುರ ಮೂಲದ ಮುತ್ಯಾಲಪ್ಪ(40) ಎನ್ನುವಾತ

ಆಸ್ತಿಗಾಗಿ ಆಂಧ್ರದಲ್ಲಿ ಹತ್ಯೆ ಮಾಡಿ ಕರ್ನಾಟಕದಲ್ಲಿ ಮೃತದೇಹ ಎಸೆದ ಸಂಬಂಧಿಕರು…!!! Read More »

ಕ್ರೈಮ್ ನ್ಯೂಸ್

ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಬಿದ್ದು ನಾಲ್ವರು ಮೃತ್ಯು

(ನ್ಯೂಸ್ ಕಡಬ)newskadaba.com ಚೆನ್ನೈ, ಜ.23. ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಕೆಳಗೆ ಬಿದ್ದು ನಾಲ್ವರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ನಡೆದಿದೆ. ಕೆ.ಮುತ್ತುಕುಮಾರ್(39),ಎಸ್.ಭೂಪಾಲನ್ (40), ಮತ್ತು ಬಿ.ಜೋತಿಬಾಬು (17) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಜಾತ್ರೆಯ ಪ್ರಯುಕ್ತ ದೇವತೆಯ ವಿಗ್ರಹವನ್ನು ಕ್ರೇನ್‌ ಮೂಲಕ ಗ್ರಾಮದಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ದೇವರನ್ನು ಅಲಂಕರಿಸಲು ಎಂಟು ಜನ ಕ್ರೇನ್‌ ಮೇಲೆಯೇ ವಿಗ್ರಹದ ಪಕ್ಕದಲ್ಲಿದ್ದರು. ಈ ವೇಳೆ

ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಬಿದ್ದು ನಾಲ್ವರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪಾಪಿ ಪತಿ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಪತ್ನಿಯ ನಡತೆಯನ್ನು ಶಂಕಿಯ ಗರ್ಭಿಣಿಯಾಗಿದ್ದ ಆಕೆಯನ್ನು ಕೊಲೆ ಮಾಡಿ ದೆಹಲಿಗೆ ಪರಾರಿಯಾಗಿದ್ದ 30 ವರ್ಷದ ವ್ಯಕ್ತಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನಾಸೀರ್ ಹುಸೇನ್ ಎಂದು ಗುರುತಿಸಲಾಗಿದ್ದು, ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ತಮ್ಮ ನಿವಾಸದಲ್ಲಿ ಪತ್ನಿ ನಾಜ್ ಖಾನುಮ್ (22) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಖಾನುಮ್ ಅವರನ್ನು ಕತ್ತು ಹಿಸುಕಿ ಕೊಂದ ನಂತರ, ಹುಸೇನ್ ತನ್ನ ಸಹೋದರ ಅಯೂಬ್ ಖಾನ್‌ಗೆ ಸಂದೇಶ ಕಳುಹಿಸಿದ್ದು, ತಾನು ಖಾನುಮ್‌ನನ್ನು ಕೊಲೆ ಮಾಡಿರುವುದಾಗಿ

ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪಾಪಿ ಪತಿ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೈಸೂರಿನಲ್ಲಿ ಮುಂದುವರಿದ ಚಿರತೆ ಹಾವಳಿ ➤ 11 ವರ್ಷದ ಬಾಲಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ತಿ.ನರಸೀಪುರ, ಜ.23. ಮೈಸೂರಿನ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದು, ಚಿರತೆ ದಾಳಿಯ ಶಂಕೆ ವ್ಯಕ್ತವಾಗಿದೆ. ಮೃತನನ್ನು ಜಯಂತ್ ಎಂದು ಗುರುತಿಸಲಾಗಿದ್ದು, ಆತನ ಮೃತದೇಹ ಗ್ರಾಮದ ಹೊರವಲಯದಲ್ಲಿ 2 ಕಿ.ಮೀ ದೂರದಲ್ಲಿ ಗಿಡಗಂಟಿಗಳ ನಡುವೆ ಪತ್ತೆಯಾಗಿದೆ. ಕಳೆದ 48 ಗಂಟೆಗಳಲ್ಲಿ ಶಂಕಿತ ಚಿರತೆ ದಾಳಿಯಲ್ಲಿ ಇದು ಎರಡನೇ ಮತ್ತು ತಿ.ನರಸೀಪುರ ತಾಲೂಕಿನಲ್ಲಿ ನವೆಂಬರ್‌ ತಿಂಗಳಿನಿಂದ ನಾಲ್ಕನೇ ಸಾವಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರೂ, ರಾತ್ರಿಯೇ

ಮೈಸೂರಿನಲ್ಲಿ ಮುಂದುವರಿದ ಚಿರತೆ ಹಾವಳಿ ➤ 11 ವರ್ಷದ ಬಾಲಕನೋರ್ವ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ➤ ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಟ್ಟ ಘಟನೆ ಹಸಿರಾಗಿರುವಂತೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ ಬಿದ್ದಿದೆ. ಬೆಂಗಳೂರಿನ ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಮೆಟ್ರೊ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಿದ್ದ ಬ್ಯಾರಿಕೇಡ್‌ ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ದೊಡ್ಡನೆಕ್ಕುಂದಿಯಿಂದ ಮಹದೇವಪುರ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಇಬ್ಬರು ಸ್ಥಳೀಯ ನಿವಾಸಿಗಳು ತಮ್ಮ

ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ➤ ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ ! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top